Droupadi Murmu: ವಿಡಿಯೋ ನೋಡಿ; ಯಕ್ಷಗಾನ ಶೈಲಿಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಅಭಿನಂದನೆ

President Of India: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮಾಳ್ಕೋಡ್ ನಿವಾಸಿ ಚಿಂತನಾ ಹೆಗಡೆ ಯಕ್ಷ ಗಾಯನದ ಮೂಲಕ ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸಲ್ಲಿಸಿದ ಅಭಿನಂದನೆಯ ವಿಡಿಯೋ ಇಲ್ಲಿದೆ!

ದ್ರೌಪದಿ ಮುರ್ಮು ಮತ್ತು ಚಿಂತನಾ ಹೆಗಡೆ

ದ್ರೌಪದಿ ಮುರ್ಮು ಮತ್ತು ಚಿಂತನಾ ಹೆಗಡೆ

 • Share this:
  ಉತ್ತರ ಕನ್ನಡ: ಭಾರತದ ಹೊಸ ರಾಷ್ಟ್ರಪತಿಯಾಗಿ ಬುಡಕಟ್ಟು ಸಮುದಾಯದ ದ್ರೌಪದಿ ಮುರ್ಮು (President Of India Droupadi Murmu ಅವರು ಇಂದು (ಜುಲೈ 25) ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ನಿಟ್ಟಿನಲ್ಲಿ ದ್ರೌಪದಿ ಮುರ್ಮು ಅವರಿಗೆ ಯಕ್ಷಗಾನದ (Yakshagana) ಪದ್ಯದ ಮೂಲಕ ಅಭಿನಂದನೆ ಸಲ್ಲಿಸಿದ ವಿಡಿಯೋ ಒಂದು ಭಅರೀ ಮೆಚ್ಉಗೆ ಗಳಿಸುತ್ತಿದೆ. ಈ ವಿಡಿಯೋ ಸದ್ಯ ಭಾರೀ ಒಂದು ವೈರಲ್ (Viral Video) ಆಗುತ್ತಿದೆ. ಭಾರತ ಮಹಾಭಾರತವಾಗಲಿ..ಧರ್ಮರಾಯನ ನ್ಯಾಯಾಂಗ ಸಂವಿಧಾನವಿಹುದು..ಭೀಮ ಬಲದ ಸೇನಾಬಲವಿಹುದು ಎಂದು ಬಡಗುತಿಟ್ಟು ಶೈಲಿಯಲ್ಲಿ ಚಿಂತನಾ ಹೆಗಡೆ ಭಾಗವತಿಕೆ ಮಾಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆ ಗಳಿಸುತ್ತಿದೆ. ಆ ವಿಡಿಯೋ ಇಲ್ಲಿದೆ ನೋಡಿ.  ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮಾಳ್ಕೋಡ್ ನಿವಾಸಿ ಚಿಂತನಾ ಹೆಗಡೆ ಅವರೇ ದೇಶದ ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಯಕ್ಷ ಗಾಯನದ ಮೂಲಕ ಅಭಿನಂದನೆ ಸಲ್ಲಿಸಿದವರು. ಕಳೆದ 5 ವರ್ಷಗಳಿಂದ ಭಾಗವತಿಕೆ ಮಾಡುತ್ತ ಬಂದಿರುವ ಚಿಂತನಾ ಹೆಗಡೆ ಸಾಹಿತಿ ಅರವಿಂದ ಚಿಪೂಣ್ಯರ್ ಸಾಹಿತ್ಯಕ್ಕೆ ಧ್ವನಿಯಾಗಿದ್ದಾರೆ.

  ಪ್ರಮಾಣ ವಚನ ಸ್ವೀಕಾರ
  ಸುಪ್ರೀಂ ಕೋರ್ಟ್  ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ  ದ್ರೌಪದಿ ಮುರ್ಮು ಅವರಿಗೆ ಇಂದು ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಮಾಣ ವಚನ ಬೋಧಿಸಿದರು. ನಿರ್ಗಮಿತ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರ ಸಚಿವರು, ಸಂಸದರು ಮತ್ತು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು.

  ಇದನ್ನೂ ಓದಿ: President of India: 15ನೇ ರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸಿದ ದ್ರೌಪದಿ ಮುರ್ಮು

  ಜನರ ಆಶೀರ್ವಾದದಿಂದ ಇಲ್ಲಿವರೆಗೆ ಪ್ರಯಾಣ
  ಇದೇ ವೇಳೆ ದೇಶದ ಜನರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಧನ್ಯವಾದ ಅರ್ಪಿಸಿದ್ದಾರೆ. ದೇಶದ ಜನರ ಆಶೀರ್ವಾದದಿಂದ ಇಲ್ಲಿವರೆಗೆ ಪ್ರಯಾಣ ನಡೆಯುತ್ತಿದೆ. ನನ್ನ ಪ್ರಯಾಣ ದೇಶದ ಕೋಟ್ಯಾಂತರ ಮಹಿಳೆಯರು ಮತ್ತು ಯುವತಿಯರ ಕನಸಿನ ಶಕ್ತಿ ನನ್ನ ಜೊತೆ ಇದೆ. ಶತಮಾನಗಳಿಂದ ವಂಚಿತರಾದವರು, ಅಭಿವೃದ್ಧಿಯ ಲಾಭದಿಂದ ದೂರವಿರುವವರು, ಬಡವರು, ದಲಿತರು, ಹಿಂದುಳಿದವರು ಮತ್ತು ಬುಡಕಟ್ಟು ಜನಾಂಗದವರು ನನ್ನಲ್ಲಿ ತಮ್ಮ ಪ್ರತಿಬಿಂಬವನ್ನು ಕಾಣುತ್ತಿರುವುದು ನನಗೆ ತುಂಬಾ ತೃಪ್ತಿ ತಂದಿದೆ ಅಂತ ಹೇಳಿದ್ದಾರೆ.

  ದ್ರೌಪದಿ ಮುರ್ಮು ಯಾರು?
  ದ್ರೌಪದಿ ಮುರ್ಮು ಅವರು ಓಡಿಶಾ ಮೂಲದವರು. 1958, ಜೂನ್ 20ರಂದು ಬುಡಕಟ್ಟು ಸಮುದಾಯದ ಕುಟುಂಬದಲ್ಲಿ ಜನಿಸಿದವರು. ಇವರ ಪತಿ ಶ್ಯಾಮ್ ಚರಣ್ ಮುರ್ಮು. ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದು, ದುರದೃಷ್ಟವಶಾತ್ ಇಬ್ಬರೂ ಮೃತಪಟ್ಟಿದ್ದಾರೆ. ಬಳಿಕ ಪತಿಯನ್ನೂ ಕಳೆದುಕೊಂಡ ಇವರು. ಇದೀಗ ಪುತ್ರಿ ಜೊತೆ ವಾಸಿಸುತ್ತಿದ್ದಾರೆ.

  ಇದನ್ನೂ ಓದಿ: Draupadi Murmu: ದ್ರೌಪದಿ ಮುರ್ಮು ಯಾರು? ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿ ಹಿನ್ನೆಲೆ ಇಲ್ಲಿದೆ

  ಕೌನ್ಸಿಲರ್ ಆಗಿ ವೃತ್ತಿ ಜೀವನ ಆರಂಭ
  ದ್ರೌಪದಿ ಮುರ್ಮು ಅವರು ಕೌನ್ಸಿಲರ್ ಆಗಿ ತಮ್ಮ ರಾಜಕೀಯ ವೃತ್ತಿಜೀವನ ಆರಂಭಿಸಿದರು. ನಂತರ ರಾಯ್ರಂಗಪುರ ರಾಷ್ಟ್ರೀಯ ಸಲಹಾ ಮಂಡಳಿ ಅಥವಾ NAC ನ ಉಪಾಧ್ಯಕ್ಷರಾದರು. 2013ರಲ್ಲಿ ಅವರು ಬಿಜೆಪಿ ಪಕ್ಷದ ಎಸ್‌ಟಿ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆಯ ಸ್ಥಾನಕ್ಕೆ ಏರಿದ್ದರು. ಭುವನೇಶ್ವರದ ರಮಾ ದೇವಿ ಮಹಿಳಾ ಕಾಲೇಜಿನಲ್ಲಿ ಕಲಾ ಪದವಿ ಪಡೆದ ಅವರು ರಾಜಕೀಯ ಮತ್ತು ಸಮಾಜ ಸೇವೆಯಲ್ಲಿ ಸುಮಾರು ಎರಡು ದಶಕಗಳನ್ನು ಕಳೆದಿದ್ದಾರೆ.
  Published by:guruganesh bhat
  First published: