ರಾಜಕೀಯದಲ್ಲಿ ಆಸಕ್ತಿ ಇಲ್ಲ - ಯದುವೀರ್ ಒಡೆಯರ್ ಸ್ಪಷ್ಟನೆ

news18
Updated:September 8, 2018, 4:49 PM IST
ರಾಜಕೀಯದಲ್ಲಿ ಆಸಕ್ತಿ ಇಲ್ಲ - ಯದುವೀರ್ ಒಡೆಯರ್ ಸ್ಪಷ್ಟನೆ
  • News18
  • Last Updated: September 8, 2018, 4:49 PM IST
  • Share this:
-ಡಿಎಂಜಿಹಳ್ಳಿ ಅಶೋಕ್, ನ್ಯೂಸ್ 18 ಕನ್ನಡ 

ಹಾಸನ ( ಸೆ.08) ; ಮೈಸೂರು ಮಹಾರಾಜರು ರಾಜಕೀಯ ಪ್ರವೇಶ ಮಾಡುತ್ತಾರೆ ಎಂಬ ಊಹಾ ಪೋಹಾಕ್ಕೆ ಸ್ವತಃ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತೆರೆ ಎಳೆದಿದ್ದಾರೆ. ಹಾಸನದಲ್ಲಿ ಮಾತನಾಡಿದ ಯದುವೀರ್, ರಾಜಕೀಯದ ಬಗ್ಗೆ ಸದ್ಯಕ್ಕೆ ನನಗೆ ಆಸಕ್ತಿಯಿಲ್ಲ.. ಹಿಂದಿನಿಂದಲೂ ಜನರೊಂದಿಗೆ ರಾಜಪರಂಪರೆಯ ನಂಟಿದೆ. ಸಂಬಂಧವನ್ನು ಮುಂದುವರಿಸಿಕೊಂಡು ಹೋಗೋದಷ್ಟೇ ನನ್ನ ಮುಂದಿರುವ ಜವಾಬ್ದಾರಿ ಎಂದಿದ್ದಾರೆ

ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆಯೋಜನೆ ಮಾಡಿದ್ದ ಪ್ರತಿಭಾ ಪುರಸ್ಕಾರ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಹಿನ್ನಲೆ ಮೈಸೂರು ಮಹಾ ಸಂಸ್ಥಾನದ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಸನಕ್ಕೆ ಇದೇ ಮೊದಲ ಬಾರಿಗೆ ಆಗಮಿಸಿದ್ದರು. ಈ ವೇಳೆ ಮಹಾರಾಜರನ್ನ ವೀರಗಾಸೆ ಕುಣಿತ, ಪೂರ್ಣಕುಂಭ ಸ್ವಾಗತ ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಯಿತು. ಈ ಸಮಯದಲ್ಲಿ ಹಾಸನ ಜನತೆ ರಾಜರನ್ನ ನೋಡಲು ಮುಗಿಬಿದ್ದರು.

ಮೈಸೂರು ಮಹಾರಾಜರು ರಾಜಕೀಯ ಪ್ರವೇಶ ಮಾಡುತ್ತಾರೆ ಎಂಬ ಊಹಾ ಪೋಹಾಕ್ಕೆ ಪ್ರತಿಕ್ರಿಯಿಸಿದ ಯದುವೀರ್, ರಾಜಕೀಯದ ಬಗ್ಗೆ ಸದ್ಯಕ್ಕೆ ನನಗೆ ಆಸಕ್ತಿಯಿಲ್ಲ.. ಹಿಂದಿನಿಂದಲೂ ಜನರೊಂದಿಗೆ ರಾಜಪರಂಪರೆಯ ನಂಟಿಗೆ. ಆ ಸಂಬಂಧವನ್ನು ಮುಂದುವರಿಸಿಕೊಂಡು ಹೋಗೋದಷ್ಟೇ ನನ್ನ ಮುಂದಿರುವ ಜವಾಬ್ದಾರಿ ಎಂದರು. ಇದಲ್ಲದೇ ಮಂಡ್ಯದಿಂದ ಲೋಕಸಭೆಗೆ ಸ್ಪರ್ಧೆ ಮಾಡೋ‌ ವಿಚಾರವನ್ನು ಸಾರಾಸಗಟಾಗಿ ಅಲ್ಲಗಳೆದ ಮೈಸೂರಿನ ಮಹಾರಾಜರು, ಸದ್ಯ ಅದೆಲ್ಲಾ ಬರೀ ಊಹಾಪೋಹ. ಅಂಥ ಯಾವುದೇ ಪ್ರಸ್ತಾಪ ನನ್ನ ಮುಂದೆ ಇಲ್ಲ ಎಂದರು. ಮೈಸೂರಿನ ಪಾರಂಪರಾಗತ ಪರಂಪರೆ ಉಳಿಸಿಕೊಳ್ಳೋದು. ತಾನು ಸಮಾಜ ಸೇವೆಯಲ್ಲಿ ಅಥವಾ ಕೆಲವು ಕ್ಷೇತ್ರದಲ್ಲಿ ತೊಡಗಿಸಿಕೊಂಡು‌ ಮುಂದುವರೆಯುದಾಗಿ ಹೇಳಿದರು. ಭವಿಷ್ಯದಲ್ಲಿ ಚುನಾವಣೆ ನಿಲ್ಲೋ ಬಗ್ಗೆ ಉತ್ತರ ನೀಡಲು ಯದುವೀರ್ ನಿರಾಕರಿಸಿದರು.

ನಾನು ವಿದೇಶದಲ್ಲಿ ಇದ್ದುದರಿಂದ ನೆರೆ ಹಾವಳಿಯಿಂದ ತತ್ತರಿಸಿ ಹೋಗಿರುವ ಕೊಡಗಿಗೆ ಭೇಟಿ ಕೊಡಲು ಸಾಧ್ಯವಿಲ್ಲ. ಆದಷ್ಟು ಶೀಘ್ರ ಮಡಿಕೇರಿಗೆ ಭೇಟಿ ನೀಡುವೆ ಎಂದ ಯದುವೀರ್, ಆಡಂಬರ ಅಥವಾ ಸರಳ ದಸರಾ ನಡೆಸುವುದು ಸರ್ಕಾರಕ್ಕೆ ಬಿಟ್ಟಿದ್ದು.. ಪಾರಂಪರಾಗತ ಪರಂಪರೆ ಸಂಪ್ರಾದಾಯದಂತೆ ಈ ಬಾರಿಯೂ ದಸರಾ ಹಬ್ಬ ನಡೆಯಲಿದೆ ಎಂದು ತಿಳಿಸಿದರು.

ಮೈಸೂರಿನ ಅರಸರಿಗೆ ರಾಜಧನ ನಿಷೇಧಿಸಬೇಕು ಎಂಬ ನಂಜರಾಜ್ ಅರಸ್ ಹೇಳಿಕೆಗೆ ಪ್ರತಿಕ್ರಿಯಿಸಿದ ಯದುವೀರ್, ಈ ಬಗ್ಗೆ ತನಗೆ ಹೆಚ್ಚಿನ ಮಾಹಿತಿಯಿಲ್ಲ. ಇದನ್ನೆಲ್ಲ ಅರಮನೆ ಆಡಳಿತ ಮಂಡಳಿ ನೋಡಿಕೊಳ್ಳಲಿದೆ ಎಂದರು. ಒಟ್ಟಾರೆ ಹಿಂದಿನ ಕಾಲದಲ್ಲಿ ಮಹಾರಾಜರಿಗೆ ಎಲ್ಲೆಡೆ ರಾಜಮರ್ಯಾದೆ ನೀಡುತ್ತಿದ್ದರು. ಅಂತೆಯೇ ಈಗಲೂ ಮಹಾರಾಜರನ್ನ ಕಂಡರೆ ರಾಜಮರ್ಯಾದೆ ನೀಡುತ್ತಿದ್ದು, ನಮ್ಮ ಸಂಸ್ಕ್ರತಿಯನ್ನ ಪರಂಪರೆಯನ್ನು ಮತ್ತಷ್ಟು ಉಳಿಸಿ ಬೆಳೆಸಬೇಕಿದೆ.
First published: September 8, 2018, 4:49 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading