• Home
  • »
  • News
  • »
  • state
  • »
  • Tippu Express: ಟಿಪ್ಪು ಎಕ್ಸ್‌ಪ್ರೆಸ್ ಮರು ನಾಮಕರಣ; ಯದುವೀರ್ ಒಡೆಯರ್ ಮೊದಲ ಪ್ರತಿಕ್ರಿಯೆ

Tippu Express: ಟಿಪ್ಪು ಎಕ್ಸ್‌ಪ್ರೆಸ್ ಮರು ನಾಮಕರಣ; ಯದುವೀರ್ ಒಡೆಯರ್ ಮೊದಲ ಪ್ರತಿಕ್ರಿಯೆ

ಒಡೆಯರ್ ಎಕ್ಸ್​ಪ್ರೆಸ್​

ಒಡೆಯರ್ ಎಕ್ಸ್​ಪ್ರೆಸ್​

ನಿನ್ನೆಯೇ ರೈಲುಗಳ ಮೇಲಿದ್ದ ಟಿಪ್ಪು ಎಕ್ಸ್​ಪ್ರೆಸ್​ ಹೆಸರು ಇರೋ ಫಲಕ ತೆಗೆದು ಒಡೆಯರ್ ಎಕ್ಸ್​​ಪ್ರೆಸ್​ ಎಂದು ಹಾಕಲಾಗಿದೆ.ಈ ಫೋಟೋಗಳನ್ನು ಸಂಸದ ಪ್ರತಾಪ್ ಸಿಂಹ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

  • Share this:

ಬೆಂಗಳೂರು-ಮೈಸೂರು ನಡುವಿನ ಟಿಪ್ಪು ಎಕ್ಸ್​​ಪ್ರೆಸ್​ (Tipu Express) ಹೆಸರು ಈಗ ಒಡೆಯರ್ ಎಂದು ಮರುನಾಮಕರಣ ಮಾಡಲಾಗಿದೆ. ಈ ಬಗ್ಗೆ ರಾಜಕೀಯ ವಲಯದಲ್ಲಿ ಬೇಕಿತ್ತು ಮತ್ತು ಬೇಡ ಎಂಬುದರ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಟಿಪ್ಪು ಎಕ್ಸ್​​ಪ್ರೆಸ್ ಮರುನಾಮಕರಣದ ಕುರಿತು ರಾಜವಂಶಸ್ಥ ಯದುವೀರ್ ಒಡೆಯರ್ (Yaduveer Krishnadatta Chamaraja Wadiyar) ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಇಂದು ಚಾಮುಂಡಿ ಬೆಟ್ಟದಲ್ಲಿ (Chamundi hill) ಮಹಾರಥೋತ್ಸವ ನಡೆಯುತ್ತಿದ್ದ ವೇಳೆ ಯದುವೀರ್ ಒಡೆಯರ್ ಭಾಗಿಯಾಗಿದ್ದರು. ಸಾವಿರಾರು ಭಕ್ತರು ಸಮ್ಮುಖದಲ್ಲಿ ರಥೋತ್ಸವ ಜರುಗಿತು. ಬೆಳಗ್ಗೆ 7.50 ರಿಂದ 8.10ರೊಳಗೆ ಸಲ್ಲುವ ಶುಭ ಲಗ್ನದಲ್ಲಿ ಚಾಮುಂಡಿ ತಾಯಿಗೆ (Goddess Chamundeshwari) ವಿಶೇಷ ಪೂಜೆ ಸಲ್ಲಿಕೆ ಮಾಡಲಾಯ್ತು. ನಂತರ ರಥಕ್ಕೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಚಾಲನೆ ನೀಡಿದರು.


ನವರಾತ್ರಿ ಮುಗಿದ ಮೊದಲ ಹುಣ್ಣಿಮೆಯಲ್ಲಿ ಚಾಮುಂಡಿ ತಾಯಿಯ ರಥೋತ್ಸವ ನಡೆಯುತ್ತದೆ. ನವರಾತ್ರಿಗಾಗಿ ಮೈಸೂರಿಗೆ ಭಕ್ತರಿಗೆ ಶ್ರೀ ತಾಯಿಯ ದರ್ಶನ ಸಿಗಲೆಂದು ರಾಜವಂಶಸ್ಥರು ಈ ಜಾತ್ರೆಯನ್ನು ಆರಂಭಿಸಿದ್ದರು.


ಸರ್ಕಾರದ ನಿರ್ಧಾರ ಸ್ವಾಗತಿಸಿದ ಯದುವೀರ್


ರಥೋತ್ಸವದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಯದುವೀರ್ ಒಡೆಯರ್, ಟಿಪ್ಪು ಎಕ್ಸ್‌ಪ್ರೆಸ್ ಮರು ನಾಮಕರಣದ ಕುರಿತು ಮಾತನಾಡಿದರು. ಹತ್ತನೇ ಚಾಮರಾಜ ಒಡೆಯರ್ ಕಾಲದಿಂದಲೂ ರೈಲ್ವೆ ಅಭಿವೃದ್ಧಿಯಾಗಿದೆ. ಒಡೆಯರ್ ಎಕ್ಸ್ ಪ್ರೆಸ್ ಎಂದು ನಾಮಕರಣ ಮಾಡಿರುವುದು ಸಂತೋಷದ ವಿಷಯ ಎಂದು ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದರು.


ನಿನ್ನೆಯೇ ರೈಲುಗಳ ಮೇಲಿದ್ದ ಟಿಪ್ಪು ಎಕ್ಸ್​ಪ್ರೆಸ್​ ಹೆಸರು ಇರೋ ಫಲಕ ತೆಗೆದು ಒಡೆಯರ್ ಎಕ್ಸ್​​ಪ್ರೆಸ್​ ಎಂದು ಹಾಕಲಾಗಿದೆ.ಈ ಫೋಟೋಗಳನ್ನು ಸಂಸದ ಪ್ರತಾಪ್ ಸಿಂಹ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.


Yaduveer wadiyar first reaction on Tipu Express renamed as Wodeyar Express mrq
ಒಡೆಯರ್ ಎಕ್ಸ್​ಪ್ರೆಸ್​


ರೈಲ್ವೆ ಇಲಾಖೆ ಅಧಿಕೃತ ಘೋಷಣೆ


ಮೈಸೂರು-ಬೆಂಗಳೂರು ನಡುವಿನ ಟಿಪ್ಪು ಎಕ್ಸ್​ಪ್ರೆಸ್​ (Tippu Express Railway) ರೈಲಿನ ಹೆಸರನ್ನು ಬದಲಾವಣೆ ಮಾಡಲಾಗಿದ್ದು, ಒಡೆಯರ್​ ಎಕ್ಸ್​ಪ್ರೆಸ್​ (Wodeyar Express) ಎಂದು ಮರುನಾಮಕರಣ ಮಾಡಲಾಗಿದೆ. ಇನ್ನು ತಾಳಗುಪ್ಪ ಎಕ್ಸ್​ಪ್ರೆಸ್​ ರೈಲಿನ ಹೆಸರನ್ನು ಕುವೆಂಪು ಎಕ್ಸ್​ಪ್ರೆಸ್ (Kuvempu Express)​ ಎಂದು ನಾಮಕರಣ ಮಾಡಿ ರೈಲ್ವೆ ಇಲಾಖೆ ಅಧಿಕೃತವಾಗಿ ಘೋಷಣೆ ಮಾಡಿದೆ.


ಇದನ್ನೂ ಓದಿ:  Telugu Cinema Shooting: ಮೇಲುಕೋಟೆ ಶೂಟಿಂಗ್​ನಲ್ಲಿ ಅವಾಂತರ; ತೆಲುಗು ಚಿತ್ರತಂಡದ ವಿರುದ್ಧ ಸ್ಥಳೀಯರ ಆಕ್ರೋಶ


ಜುಲೈ 25ರಂದು ಪತ್ರ ಬರೆದಿದ್ದ ಪ್ರತಾಪ್ ಸಿಂಹ


ಮೈಸೂರು-ಬೆಂಗಳೂರು ನಡುವಿನ ಟಿಪ್ಪು ಎಕ್ಸ್‌ಪ್ರೆಸ್‌ ರೈಲಿಗೆ ಮರುನಾಮಕರಣ ಮಾಡಿದ್ದಕ್ಕೆ ಮೈಸೂರು ಕೊಡಗು ಸಂಸದ ಪ್ರತಾಪ್​ ಸಿಂಹ (MP Prarap Simha) ಸಂತಸ ವ್ಯಕ್ತಪಡಿಸಿದ್ದಾರೆ. ಮೈಸೂರು-ಬೆಂಗಳೂರು ನಡುವೆ ಸಂಚರಿಸುವ ರೈಲನ್ನು ಒಡೆಯರ್​ ರೈಲು ಎಂದು ಹಾಗು ಮೈಸೂರು-ತಾಳಗುಪ್ಪ ಎಕ್ಸ್‌ಪ್ರೆಸ್ ಹೆಸರನ್ನು ಕುವೆಂಪು ಎಕ್ಸ್‌ಪ್ರೆಸ್ ಎಂದು ಮರು ನಾಮಕರಣ ಮಾಡಲಾಗಿದೆ.


Yaduveer wadiyar first reaction on Tipu Express renamed as Wodeyar Express mrq
ಒಡೆಯರ್ ಎಕ್ಸ್​ಪ್ರೆಸ್​


ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಜುಲೈ 25ರಂದು ಸಂಸದ ಪ್ರತಾಪ್ ಸಿಂಹ ಪತ್ರ ಬರೆದಿದ್ದರು. ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್​ರಿಗೆ (Union Minister Ashwini Vaishnav) ಮನವಿ ಮಾಡಲಾಗಿತ್ತು.


ಮರುನಾಮಕರಣಕ್ಕೆ ಸಿದ್ದರಾಮಯ್ಯ ಹೇಳಿದ್ದೇನು?


ಟಿಪ್ಪು ಎಕ್ಸ್ ಪ್ರೆಸ್ ಹೆಸರನ್ನ ಒಡೆಯರ್ ಎಕ್ಸ್ ಪ್ರೆಸ್ ಎಂದು ಹೆಸರು ಬದಲಾಯಿಸಿದ ಸರ್ಕಾರದ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ (Former CM Siddaramaiah) ಕಿಡಿಕಾರಿದ್ದಾರೆ.


ಇದನ್ನೂ ಓದಿ:   Tippu Express ಇನ್ಮುಂದೆ ಒಡೆಯರ್ ಎಕ್ಸ್​ಪ್ರೆಸ್; ಹೆಸರು ಬದಲಾವಣೆಗೆ ಯಾರು, ಏನು ಹೇಳಿದ್ರು?


Yaduveer wadiyar first reaction on Tipu Express renamed as Wodeyar Express mrq ಒಡೆಯರ್ ಎಕ್ಸ್​ಪ್ರೆಸ್​


ಬಿಜೆಪಿ ಸರ್ಕಾರ ಬಿಜೆಪಿಯವರು ಬರಿ ಧರ್ಮ ರಾಜಕೀಯ ಮಾಡ್ತಾರೆ. ಒಡೆಯರ್ ಹೆಸರು ಇಡಲಿ ಪರ್ವಾಗಿಲ್ಲ ಆದ್ರೆ ಬೇರೆ ರೈಲುಗಳು ಇರ್ಲೇ ಇಲ್ವಾ. ಯಾವಾಗ್ಲು ಜಾತಿ ಜಾತಿಗಳ ನಡುವೆ ಧರ್ಮಗಳ ನಡುವೆ ಬೆಂಕಿ ಹಚ್ಚೊ ಕೆಲಸ ಮಾಡ್ತಾರೆ. ಬರಿ ದ್ವೇಷ ಹುಟ್ಟಾಕುವ ಕೆಲಸ ಮಾಡ್ತಾರೆ ಎಂದಿದ್ದಾರೆ.

Published by:Mahmadrafik K
First published: