ಬೆಂಗಳೂರು: ಕರ್ನಾಟಕದ ಯದುಗಿರಿ ಯತಿರಾಜ ಮಠ (Sri Yadugiri Yatiraja Matha) ಮತ್ತು ಅಲ್ಲಿನ ಪೀಠಾಧಿಪತಿಗೆ ಕಿಡಿಗೇಡಿಗಳು ಜೀವ ಬೆದರಿಕೆ ಹಾಕಿರುವ ಘಟನೆ ನಡೆದ ಬೆನ್ನಲ್ಲೇ ಅವರ ಪ್ರಾಣಕ್ಕೆ ಅಪಾಯ ಉಂಟಾಗದಂತೆ ತಡೆಯಲು ಕೇಂದ್ರ ಗೃಹ ಸಚಿವಾಲಯ ಭದ್ರತೆ ನೀಡಲು ನಿರ್ಧರಿಸಿದೆ. ಮಠದ ಪೀಠಾಧಿಪತಿಗಳಾದ ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಸ್ವಾಮಿ (Yatiraja Narayana Ramanuja Swami) ಅವರಿಗೆ ಕಿಡಿಗೇಡಿಗಳು ಇಂಟರ್‌ನೆಟ್ ಕಾಲ್ (Internet Call) ಮೂಲಕ ಬೆದರಿಕೆ ಹಾಕಿದ್ದು ಹೀಗಾಗಿ ಕೇಂದ್ರ ಗೃಹ ಸಚಿವಾಲಯ (MHA) ಅವರಿಗೆ ವೈ ಕೆಟಗರಿಯ ರಕ್ಷಣೆ ನೀಡಲು ಮುಂದಾಗಿದೆ. ಈ ಬಗ್ಗೆ ಮಠದ ಮೂಲಗಳು ಮಾಹಿತಿ ನೀಡಿವೆ.
ಇತ್ತ ಮಲ್ಲೇಶ್ವರಂ ಸಂಪಿಗೆ ರಸ್ತೆಯಲ್ಲಿರುವ ಮಠಕ್ಕೆ ಕೂಡ ಪೊಲೀಸರು ಭದ್ರತೆ ಒದಗಿಸಿದ್ದು, ಮಠಕ್ಕೆ ಸ್ಥಳೀಯ ಪೊಲೀಸರು ಭೇಟಿ ನೀಡಿ ರಕ್ಷಣೆ ಒದಗಿಸಿದ್ದಾರೆ. ಬೆದರಿಕೆ ಕರೆ ಕುರಿತು ಗುಪ್ತಚರ ಇಲಾಖೆ ನೀಡಿದ ವರದಿಯ ಆಧಾರದ ಮೇಲೆ ಭದ್ರತೆ ನೀಡುವ ನಿರ್ಧಾರ ಮಾಡಲಾಗಿದ್ದು, ಯಾರು ಬೆದರಿಕೆ ಹಾಕಿದ್ದಾರೆ ಅನ್ನೋದು ತನಿಖೆಯ ಬಳಿಕವಷ್ಟೇ ಬರಬೇಕಿದೆ. ಪ್ರಾಥಮಿಕ ಶಂಕೆಯ ಪ್ರಕಾರ ಮೂಲಭೂತವಾದಿ ಗುಂಪಿನ ಕಿಡಿಗೇಡಿಗಳು ಬೆದರಿಕೆ ಹಾಕಿರುವ ಸಾಧ್ಯತೆ ಇದೆ ಎನ್ನಲಾಗ್ತಿದೆ.
ಇದನ್ನೂ ಓದಿ: Bomb Threat Mail: ಬೆಂಗಳೂರು ಖಾಸಗಿ ಶಾಲೆಗೆ ಬಾಂಬ್ ಬೆದರಿಕೆ; ಸ್ಥಳಕ್ಕೆ ದೌಡಾಯಿಸಿದ ಬಾಂಬ್ ನಿಷ್ಕ್ರಿಯ ಮತ್ತು ಶ್ವಾನ ದಳ
ರಾಮಾನುಜಾಚಾರ್ಯ ಪ್ರತಿಮೆ ಸ್ಥಾಪನೆ ಬಳಿಕ ಹೆಚ್ಚಿದ ಬೆದರಿಕೆ
ಕರ್ನಾಟಕ, ತೆಲಂಗಾಣ ಮತ್ತು ಆಂಧ್ರಪ್ರದೇಶ ಸೇರಿದಂತೆ ಇತರ ರಾಜ್ಯಗಳಲ್ಲೂ ಮಠಗಳಿದ್ದು, ಪೀಠಾಧಿಪತಿಗಳಾದ ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಸ್ವಾಮಿ ಆಗಾಗ ಬೇರೆ ರಾಜ್ಯಗಳಿಗೆ ಪ್ರವಾಸ ಮಾಡುತ್ತಿರುತ್ತಾರೆ. ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ರಾಮಾನುಜಾಚಾರ್ಯ ಅವರ ಪ್ರತಿಮೆ ನಿರ್ಮಾಣ ಮಾಡಿದ ನಂತರ ಈ ರೀತಿ ಬೆಳವಣಿಗೆ ನಡೆಯುತ್ತಿದ್ದು, ಮಠಕ್ಕೆ ಸಂಬಂಧಪಟ್ಟ ಮೊಬೈಲ್‌ಗೆ ಅಪರಿಚಿತರು ಕರೆ ಮಾಡಿ ಬೆದರಿಕೆ ಹಾಕುತ್ತಿದ್ದರು. ಈ ಸಂಬಂಧ ಮಲೇಶ್ವರಂ ಪೊಲೀಸರು ಮಠಕ್ಕೆ ಬಂದು ಮಾಹಿತಿ ತೆಗೆದುಕೊಂಡು ಹೋಗಿದ್ದಾರೆ.
ಆಂಧ್ರ, ತಮಿಳುನಾಡಲ್ಲೂ ಭದ್ರತೆ
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಠದ ಭಕ್ತ ರಘುನಂದನ್, ಸ್ವಾಮಿಜಿ ಎಲ್ಲಾ ಕಡೆ ಸಂಚಾರ ಮಾಡ್ತಿರ್ತಾರೆ. ಅವರಿಗೆ ನಿರಂತರ ಬೆದರಿಕೆ ಬರ್ತಾ ಇತ್ತು. ಗೃಹ ಇಲಾಖೆಗೆ ನಾವು ರಕ್ಷಣೆ ನೀಡುವಂತೆ ಮನವಿ ಮಾಡಿದ್ದೆವು. ಇಂದು ಗೃಹ ಇಲಾಖೆ ವೈ ಕೆಟಗರಿ ಭದ್ರತೆಗೆ ಆದೇಶ ಮಾಡಿದೆ. ಸ್ವಾಮೀಜಿ ಅಯೋದ್ಯೆ, ಶ್ರೀನಗರ, ತಮಿಳುನಾಡು ಬೆಂಗಳೂರಿನ ಮಠಗಳಿಗೆ ಭೇಟಿ ನೀಡ್ತಾರೆ. ಹೀಗಾಗಿ ಅವರಿಗೆ ಭದ್ರತೆ ಅವಶ್ಯಕತೆ ಇತ್ತು ಎಂದು ಹೇಳಿದ್ದಾರೆ.
1 ವಾರದಿಂದ ಬೆದರಿಕೆ
ಇನ್ನು ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಸ್ವಾಮಿ ಅವರಿಗೆ ಭದ್ರತೆ ಒದಗಿಸುವ ತಂಡದಲ್ಲಿ ಹತ್ತು ಮಂದಿ ಭದ್ರತಾ ಸಿಬ್ಬಂದಿಗಳು ಇರಲಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಠದ ಟ್ರಸ್ಟಿ ಸುಜೇಂದ್ರ, ಸ್ಚಾಮೀಜಿಗೆ ವೈ ಕ್ಯಾಟಗರಿ ಭದ್ರತೆ ನೀಡಲಾಗುತ್ತೆ. ಸ್ವಾಮೀಜಿಗೆ ಥ್ರೆಟ್ ಇತ್ತು, ಹೀಗಾಗಿ ನಾವು ಕೇಂದ್ರ ಸರ್ಕಾರಕ್ಕೆ ಪತ್ರದ ಮೂಲಕ ಮನವಿ ಮಾಡಿದ್ದೆವು. ಈ ಹಿನ್ನೆಲೆ ಕೇಂದ್ರ ಸರ್ಕಾರದಿಂದ ವೈ ಶ್ರೇಣಿ ಭದ್ರತೆ ನೀಡಲಾಗುತ್ತೆ. ಶ್ರೀನಗರದಲ್ಲಿ ರಾಮಾನುಜ ಪ್ರತಿಮೆ ಸ್ಥಾಪನೆ ಮಾಡಿದ ನಂತರ ಅಪರಿಚಿತ ನಂಬರ್‌ನಿಂದ ಮಠಕ್ಕೆ ಸಂಬಂಧಪಟ್ಟ ಮೊಬೈಲ್‌ಗೆ 1 ವಾರದಿಂದ ಕರೆ ಬರುತ್ತಿತ್ತು ಎಂದು ಹೇಳಿದ್ದಾರೆ.
ಇದನ್ನೂ ಓದಿ:Mother of the Year: ಸ್ವಂತ ಮಗಳಿಗೆ ಸೈಬರ್ ಬೆದರಿಕೆ ಹಾಕಿದ್ದ ಮಹಾತಾಯಿ! ಕೊನೆಗೆ ಸಿಕ್ಕಿದ್ದು ಹೇಗೆ?
ಮಲ್ಲೇಶ್ವರಂನ ಯದುಗಿರಿ ಯತಿರಾಜ ಮಠಕ್ಕೆ ಇಂದು ಅಥವಾ ನಾಳೆ ಕೇಂದ್ರದಿಂದ ವೈ ಕೆಟಗರಿಯ ಭದ್ರತೆ ಸಿಗಲಿದ್ದು, ಈ ಹಿನ್ನೆಲೆ ಸದ್ಯ ಐದಾರು ಮಂದಿ ಮಲ್ಲೇಶ್ವರಂ ಪೊಲೀಸರನ್ನು ಮಠದ ಬಳಿ ಭದ್ರತೆಗೆ ನಿಯೋಜಿಸಲಾಗಿದೆ. ಮಠಕ್ಕೆ ಬರೋ ಭಕ್ತಾಧಿಗಳಿಗೆ ಯಾವುದೇ ತೊಂದರೆ ಆಗದಂತೆ ಭದ್ರತೆ ನೀಡಲಾಗಿದೆ.
Y ಕೆಟಗರಿಯ ಭದ್ರತೆ ಹೇಗಿರುತ್ತೆ ಗೊತ್ತಾ?
ಇನ್ನು ವೈ ಕೆಟಗರಿ ಭದ್ರತೆಯಲ್ಲಿ 28 ಮಂದಿ ಪೊಲೀಸ್ ಸಿಬ್ಬಂದಿ ಇರಲಿದ್ದು, ಅದರಲ್ಲಿ ಇಬ್ಬರು ಕಮಾಂಡರ್‌ಗಳು ಇರಲಿದ್ದಾರೆ. ಉಳಿದಂತೆ ಸ್ಥಳೀಯ ಪೊಲೀಸರನ್ನೇ ಭದ್ರತೆಗೆ ನಿಯೋಜನೆ ಮಾಡಲಿದ್ದು, ಅವರಿಗೆ ವಾಹನದ ವ್ಯವಸ್ಥೆಯನ್ನು ಸಹ ಸರ್ಕಾರವೇ ಮಾಡುತ್ತೆ. 2 ಕಮಾಂಡರ್ ಎರಡು ಶಿಫ್ಟ್ ಕೆಲಸ ಮಾಡಲಿದ್ದು, ಅವರು ಸ್ಟೆನ್ ಗನ್ ಬಳಕೆ ಮಾಡ್ತಾರೆ. ಇನ್ನು 9 ಜನ ಪೊಲೀಸ್ ಸಿಬ್ಬಂದಿ 9 MM ಪಿಸ್ತೂಲ್ ಬಳಕೆ ಮಾಡ್ತಾರೆ. ಸಾರ್ವಜನಿಕ ಸಭೆಗಳಿಗೆ ಹೋದ್ರೆ ಬಾಂಬ್ ಡಿಟೆಕ್ಟರ್ ತಗೊಂಡು ಹೋಗಲಿದ್ದು, ಸ್ವಾಮೀಜಿ ಜೊತೆಗೆ ಒಬ್ಬ ಪರ್ಸನಲ್ ಸೆಕ್ಯುರಿಟಿ ಆಫೀಸರ್ ಕೂಡ ಇರಲಿದ್ದಾರೆ.
ಸದ್ಯ ಕರ್ನಾಟಕ ಮಾತ್ರವಲ್ಲದೇ, ತೆಲಂಗಾಣ, ತಮಿಳುನಾಡು ಹಾಗೂ ಆಂಧ್ರದಲ್ಲೂ ಯತಿರಾಜ ಮಠಕ್ಕೆ ಸಂಬಂಧಿಸಿದ ಮೂರು ರಾಜ್ಯಗಳಲ್ಲಿ ಭದ್ರತೆ ಒದಗಿಸಲಾಗಿದೆ. ಎಂದು ತಿಳಿದು ಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ