• Home
  • »
  • News
  • »
  • state
  • »
  • Yadgir: ಸಾರಿಗೆ ಅಧಿಕಾರಿಗಳ ನಿಷ್ಕಾಳಜಿಗೆ ಸಾಬಮ್ಮ ಕಣ್ಣೀರು, ಪರಿಹಾರದ ಹಣಕ್ಕಾಗಿ ಅಲೆದಾಟ!

Yadgir: ಸಾರಿಗೆ ಅಧಿಕಾರಿಗಳ ನಿಷ್ಕಾಳಜಿಗೆ ಸಾಬಮ್ಮ ಕಣ್ಣೀರು, ಪರಿಹಾರದ ಹಣಕ್ಕಾಗಿ ಅಲೆದಾಟ!

ತನ್ನ ಮಕ್ಕಳೊಂದಿಗೆ ಸಾಬಮ್ಮ

ತನ್ನ ಮಕ್ಕಳೊಂದಿಗೆ ಸಾಬಮ್ಮ

ಅಪಘಾತದಲ್ಲಿ ಮೃತಪಟ್ಟ  ಮಗಳ ಪರಿಹಾರದ ಹಣ ಸಿಗದೆ  ಹೆತ್ತ ತಾಯಿ ಸಾಬಮ್ಮ ತನ್ನ ಮೂವರು ಮಕ್ಕಳೊಂದಿಗೆ ಪರಿಹಾರದ ಹಣಕ್ಕಾಗಿ ಅಲೆದಾಡುತ್ತಿದ್ದಾಳೆ.

  • News18 Kannada
  • Last Updated :
  • Yadgir, India
  • Share this:

ಯಾದಗಿರಿ(ನ.10): ಸಾರಿಗೆ ಸಂಸ್ಥೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಆ ಕುಟುಂಬ ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ. ಅಪಘಾತದಲ್ಲಿ ಮೃತಪಟ್ಟ  ಮಗಳ ಪರಿಹಾರದ ಹಣ ಸಿಗದೆ  ಹೆತ್ತ ತಾಯಿ ಸಾಬಮ್ಮ ತನ್ನ ಮೂವರು ಮಕ್ಕಳೊಂದಿಗೆ ಪರಿಹಾರದ ಹಣಕ್ಕಾಗಿ ಅಲೆದಾಡುತ್ತಿದ್ದಾಳೆ. ಯಾದಗಿರಿ ತಾಲೂಕಿನ ಆಶನಾಳ ಗ್ರಾಮದಲ್ಲಿ ಸಾಬಮ್ಮ ವಾಸವಾಗಿದ್ದಾಳೆ. ಗ್ರಾಮದ ಸರಕಾರಿ ಶಾಲೆಯಲ್ಲಿ ಅಡುಗೆ ಸಹಾಯಕಿಯಾಗಿ ಸಾಬಮ್ಮ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾಳೆ. ತನ್ನ ಮೂವರು ಮಕ್ಕಳೊಂದಿಗೆ ಬಂದ ವೇತನದಲ್ಲಿ ಸಂಕಷ್ಟದ ಜೀವನ ನಡೆಸುತ್ತಿದ್ದಾಳೆ. ಮೂವರು ಮಕ್ಕಳಲ್ಲಿ ಇಬ್ಬರು ಮಕ್ಕಳು ಮೂಕರಾಗಿದ್ದಾರೆ.


6 ವರ್ಷದ ಹಿಂದೆ ಸಾಬಮ್ಮಳ ಪತಿರಾಯ ಅಂಜನೇಯ ಅನಾರೋಗ್ಯದಿಂದ ಮೃತಪಟ್ಟಿದ್ದಾನೆ. ಗಂಡನ ಊರಾದ ರಾಮಸಮುದ್ರ ಗ್ರಾಮ ಬಿಟ್ಟು ತನ್ನ ತವರು ಊರಾದ ಆಶನಾಳ ಗ್ರಾಮದಲ್ಲಿ 5 ವರ್ಷದಿಂದ ವಾಸವಾಗಿದ್ದಾಳೆ. ಚಿಕ್ಕದಾದ ಮನೆಯಲ್ಲಿ ಆಶ್ರಯ ಪಡೆದುಕೊಂಡು ತನ್ನ ನಾಲ್ಕು ಮಕ್ಕಳೊಂದಿಗೆ ವಾಸವಾಗಿದ್ದಳು ಸಾಬಮ್ಮ.


ಇದನ್ನೂ ಓದಿ:  Tumakuru: ಜಿಲ್ಲಾಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷಕ್ಕೆ ಅವಳಿ ಶಿಶು, ಬಾಣಂತಿ ಸಾವು; ಡಾಕ್ಟರ್​, ನರ್ಸ್​ ಸಸ್ಪೆಂಡ್​


ಯಮಸ್ವರೂಪಿ ಬಸ್​ನಿಂದ ಮಗಳ ಸಾವು...!


ಕೂಲಿ ನಾಲಿ ಮಾಡಿ ಜೀವನ ನಡೆಸುವುದು ಕಷ್ಟವಾದ ಹಿನ್ನಲೆ ಸಾಬಮ್ಮ ತನ್ನ ನಾಲ್ಕು ಮಕ್ಕಳೊಂದಿಗೆ ಬೆಂಗಳೂರಿಗೆ ವಲಸೆ ಹೋಗಲು ನಿರ್ಧರಿಸಿ ಕಳೆದ 2020 ರ ಡಿಸೆಂಬರ್ 6 ರಂದು ಯಾದಗಿರಿಯಿಂದ ಬೆಂಗಳೂರಿಗೆ ತೆರಳುತ್ತಿದ್ದಳು. ಯಾದಗಿರಿ ವಿಭಾಗದ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ ಮೂಲಕ ನಾಲ್ಕು ಮಕ್ಕಳೊಂದಿಗೆ ಪ್ರಯಾಣ ಬೆಳೆಸುತ್ತಿದ್ದಳು. ಈ ವೇಳೆ 2020 ಡಿಸೆಂಬರ್ 6 ರಂದು ಚಿತ್ರದುರ್ಗ ಜಿಲ್ಲೆಯ ಹಿರಿಯೂರ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿದ್ದ ಬಸ್ ಪಲ್ಟಿಯಾಗಿದೆ. ಈ ವೇಳೆ ಬಸ್ ಪಲ್ಟಿಯಾಗಿ ಘಟನೆಯಲ್ಲಿ ಸಾಬಮ್ಮಳ ಹಿರಿಯ ಪುತ್ರಿ ಐಶ್ವರ್ಯ ಸ್ಥಳದಲ್ಲಿ ಮೃತಪಟ್ಟಿದ್ದಾಳೆ.


ಮೃತ ಬಾಲಕಿಯ ಪರಿಹಾರದ ಹಣ ಇನ್ನೂ ಸಿಕ್ಕಿಲ್ಲ


ಈ ಬಗ್ಗೆ ಹಿರಿಯೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ. ಘಟನೆ ನಡೆದು ಎರಡು ವರ್ಷ ಕಳೆಯುತ್ತಾ ಬಂದರು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನಿಗಮದ ಅಧಿಕಾರಿಗಳು ಮೃತ ಬಾಲಕಿಯ ಪರಿಹಾರದ ಹಣ ನೀಡುವ ಕೆಲಸ ಮಾಡಿಲ್ಲ. ಸಾಬಮ್ಮ ತನ್ನ ಪುತ್ರಿಯ ಪರಿಹಾರದ ಹಣಕ್ಕಾಗಿ ಎರಡು ವರ್ಷದಿಂದ ಅಲೆದಾಡುತ್ತಿದ್ದಾಳೆ. ಆದರೆ ಯಾದಗಿರಿ ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಪಿ.ಶ್ರೀಹರಿಬಾಬು ಸೇರಿ ಎಲ್ಲಾ ಅಧಿಕಾರಿಗಳು ಪರಿಹಾರದ ಹಣ ವಿತರಣೆ ಮಾಡದೇ ನಿಷ್ಕಾಳಜಿ ತೋರುತ್ತಿದ್ದಾರೆ.


ಮೂವರು ಮಕ್ಕಳೊಂದಿಗೆ ಅಲೆದಾಡುತ್ತಿರುವ ಸಾಬಮ್ಮ


ಈ ಬಗ್ಗೆ ಸಾಬಮ್ಮ ತನ್ನ ಮೂವರು ಮಕ್ಕಳೊಂದಿಗೆ ಸಾಕಷ್ಟು ಬಾರಿ ಯಾದಗಿರಿ ವಿಭಾಗೀಯ ನಿಯಂತ್ರಣಾಧಿಕಾರಿ ಕಚೇರಿಗೆ ಅಲೆದಾಡಿದರು ಅಧಿಕಾರಿಗಳು ಹಾರಿಕೆ ಉತ್ತರ ನೀಡುವ ಕೆಲಸ ಮಾಡಿದ್ದಾರೆ. ಪರಿಹಾರದ ಹಣ ಬಂದರೆ ಆರ್ಥಿಕ ಸಹಾಯವಾಗಲಿದೆ. ಈ ಬಗ್ಗೆ ವಿಭಾಗೀಯ ನಿಯಂತ್ರಣಾಧಿಕಾರಿ ಎಂ. ಪಿ. ಶ್ರೀಹರಿಬಾಬು ಮಾತನಾಡಲು ನಿರಾಕರಣೆ ಮಾಡಿದ್ದಾರೆ.


ಇದನ್ನೂ ಓದಿ: Murugha Swamy Case: ಚಾರ್ಜ್​​ಶೀಟ್​ ಸಲ್ಲಿಕೆ, ಔಷಧಿ ಬೆರೆಸಿದ ಸೇಬು ನೀಡಿ ದೌರ್ಜನ್ಯ; ಮಕ್ಕಳಿಗೆ ಕೊಲೆ ಬೆದರಿಕೆ


ನಿಷ್ಕಾಳಜಿ ವಹಿಸಿದವರ ಮೇಲೆ ಕ್ರಮಕೈಗೊಳ್ಳಬೇಕೆಂದು ಒತ್ತಾಯ


ಈ ಬಗ್ಗೆ ಗ್ರಾಮಸ್ಥ ಜಗದೀಶ ಪಾಟೀಲ ಮಾತನಾಡಿ, ಪರಿಹಾರದ ಹಣಕ್ಕಾಗಿ ಎರಡು ವರ್ಷದಿಂದ ಅಲೆದಾಡುತ್ತಿದ್ದು ಇನ್ನೂ ಪರಿಹಾರದ ಹಣ ನೀಡಿಲ್ಲ. ಕೂಡಲೇ ಹೆಚ್ಚಿನ ಪರಿಹಾರದ ಹಣ ವಿತರಣೆ ಮಾಡಬೇಕು ಅದೆ ರೀತಿ ನಿಷ್ಕಾಳಜಿ ವಹಿಸಿದವರ ಮೇಲೆ ಕ್ರಮಕೈಗೊಳ್ಳಬೇಕೆಂದು ಒತ್ತಾಯ ಮಾಡಿದ್ದಾರೆ. ಇನ್ನೂ ಮುಂದಾದರು ಅಧಿಕಾರಿಗಳು ಪರಿಹಾರದ ಹಣ ನೀಡಿ ಅನುಕೂಲ ಮಾಡಬೇಕಿದೆ.

Published by:Precilla Olivia Dias
First published: