ಯಾದಗಿರಿ ಜನರಲ್ಲಿ ಭೀತಿ ಮೂಡಿಸಿದ ಬ್ಯಾಗ್​ಗಳು; ಆತಂಕ ಪಡುವ ಅಗತ್ಯವಿಲ್ಲ ಎಂದ ಪೊಲೀಸರು

ಸುದ್ದಿ ತಿಳಿದಾಕ್ಷಣ ಸ್ಥಳಕ್ಕೆ ಆಗಮಿಸಿದ ಬಾಂಬ್ ನಿಷ್ಕ್ರಿಯ ತಂಡದೊಂದಿಗೆ ಆಗಮಿಸಿದ ಡಿವೈಎಸ್ಪಿ ಶರಣಪ್ಪ ಬ್ಯಾಗ್​ ಪರಿಶೀಲನೆ ನಡೆಸಿದರು. ಈ ವೇಳೆ ಪಶ್ಚಿಮ ಬಂಗಾಳ ಮೂಲದ ಗೌರ ಎಂಬ ವ್ಯಕ್ತಿಯ ಹೆಸರಿನ ಆಧಾರ ಕಾರ್ಡ್, ಬ್ಯಾಗ್ ನಲ್ಲಿ ಬಟ್ಟೆ, 5 ಸಾವಿರ ರೂ ನಗದು ಹಣ, ಹಾಗೂ ಇನ್ನಿತರ ವಸ್ತುಗಳು ಪತ್ತೆಯಾಗಿದೆ. 

news18-kannada
Updated:January 21, 2020, 5:59 PM IST
ಯಾದಗಿರಿ ಜನರಲ್ಲಿ ಭೀತಿ ಮೂಡಿಸಿದ ಬ್ಯಾಗ್​ಗಳು; ಆತಂಕ ಪಡುವ ಅಗತ್ಯವಿಲ್ಲ ಎಂದ ಪೊಲೀಸರು
ಆಂತಕ ಮೂಡಿಸಿದ ಬ್ಯಾಗ್​
  • Share this:
ಯಾದಗಿರಿ (ಜ.21): ಮಂಗಳೂರು ಬಾಂಬ್​ ಪತ್ತೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇದೇ ರೀತಿ ಅನುಮಾನಸ್ಪದ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ನಗರದಲ್ಲಿ ಒಂದೇ ದಿನ ಮೂರು ಅನಾಮಧೇಯ ಬ್ಯಾಗ್​ ಪತ್ತೆಯಾಗಿದ್ದು, ಜನರಲ್ಲಿ ಭಯದ ವಾತಾವರಣ ಸೃಷ್ಟಿಸಿದೆ.

ನಗರದ ಕೇಂದ್ರ ಬಸ್​ ನಿಲ್ದಾಣದಲ್ಲಿ ಅನಾಥವಾಗಿ ಕಂಡು ಬಂದ ಬ್ಯಾಗ್​ ಜನರಲ್ಲಿ ಆತಂಕ ಮೂಡಿಸಿತು. ಮುಂಜಾನೆ ಬಸ್​ ನಿಲ್ದಾಣದಲ್ಲಿ ಕಂಡು ಬಂದ ಈ ಬ್ಯಾಗ್​ ಮಾಲೀಕರಿಲ್ಲದ ಕಾರಣ ಜನರು ಆತಂಕಕ್ಕೆ ಒಳಗಾದರು. ಗಂಟೆಗಳ ಕಾಲ ಬ್ಯಾಗ್​ ಮಾಲೀಕರು ಪತ್ತೆಯಾಗದ ಹಿನ್ನೆಲೆ ಜನರು ಈ ಕುರಿತು ಪೊಲೀಸರಿಗೆ ಸುದ್ದಿ ಮುಟ್ಟಿಸಿದರು.

ಸುದ್ದಿ ತಿಳಿದಾಕ್ಷಣ ಸ್ಥಳಕ್ಕೆ ಆಗಮಿಸಿದ ಬಾಂಬ್ ನಿಷ್ಕ್ರಿಯ ತಂಡದೊಂದಿಗೆ ಆಗಮಿಸಿದ ಡಿವೈಎಸ್ಪಿ ಶರಣಪ್ಪ ಬ್ಯಾಗ್​ ಪರಿಶೀಲನೆ ನಡೆಸಿದರು. ಈ ವೇಳೆ ಪಶ್ಚಿಮ ಬಂಗಾಳ ಮೂಲದ ಗೌರ ಎಂಬ ವ್ಯಕ್ತಿಯ ಹೆಸರಿನ ಆಧಾರ ಕಾರ್ಡ್, ಬ್ಯಾಗ್ ನಲ್ಲಿ ಬಟ್ಟೆ, 5 ಸಾವಿರ ರೂ ನಗದು ಹಣ, ಹಾಗೂ ಇನ್ನಿತರ ವಸ್ತುಗಳು ಪತ್ತೆಯಾಗಿದೆ.

ಇದಾದ ಬಳಿಕ ನಗರದಲ್ಲಿ ಮತ್ತೊಂದು ಅನುಮಾನಸ್ಪದ ಬ್ಯಾಗ್​ ಪತ್ತೆಯಾಗಿರುವ ಕುರಿತು ಕೂಡ ಪೊಲೀಸರಿಗೆ ಕರೆ ಬಂದಿದೆ. ನಗರದ ಅಜೀಜ್ ಕಾಲೋನಿಯ ಸನಾ ಮಸೀದಿ ಪಕ್ಕದಲ್ಲಿರುವ ಕಾರ್ ಪಾರ್ಕಿಂಗ್ ಸ್ಥಳದಲ್ಲಿ ಮತ್ತೊಂದು ಬ್ಯಾಗ್ ಪತ್ತೆಯಾಗಿತ್ತು.ನಂತರ ಪೊಲೀಸರ ತಂಡ ಭೇಟಿ ನೀಡಿ ಭೇಟಿ ನೀಡಿದಾಗ ಶಾಲೆ ವಿದ್ಯಾರ್ಥಿ ಶೇಕ್ ಇಮ್ರಾನ್ ಹೆಸರಿನಲ್ಲಿ ಐಡಿ ಕಾರ್ಡ್ ಪತ್ತೆಯಾಗಿದ್ದು,ಅದೆ ರೀತಿ ಬ್ಯಾಗ್ ನಲ್ಲಿ ಪುಸ್ತಕ,ಬಟ್ಟೆ,ಶೂ ಹಾಗೂ ಇನ್ನಿತರ ವಸ್ತುಗಳು ಪತ್ತೆಯಾಗಿವೆ.

ಬಳಿಕ ನಗರದ ರೈಲ್ವೆ ನಿಲ್ದಾಣದಲ್ಲಿ ಶಂಕಾಸ್ಪದ ಬ್ಯಾಗ್ ಪತ್ತೆಯಾಗಿದೆ. ಆದರೆ, ಅಗತ್ಯ ವಸ್ತುಗಳು ಮಾತ್ರ ಪತ್ತೆಯಾಗಿವೆ.

ಮಂಗಳೂರು ಬಾಂಬ್​ ಪತ್ತೆಯಾಗುತ್ತಿದ್ದಂತೆ ಜನರು ಆಂತಕಕ್ಕೆ ಒಳಗಾಗುವುದು ಸಹಜ. ಈ ಹಿನ್ನೆಲೆಯಲ್ಲಿಯೇ ಅನುಮಾನಸ್ಪದ ಬ್ಯಾಗ್​ ಕಂಡು ಬರುತ್ತಿದ್ದಂತೆ ಜನರು ಪೊಲೀಸರಿಗೆ ಮಾಹಿತಿ ನೀಡುತ್ತಾರೆ. ಕೆಲವೊಮ್ಮೆ ಇವು ಹುಸಿಯೂ ಆಗುವ ಸಾಧ್ಯತೆ ಇದೆ. ಆದರೆ, ನಮ್ಮ ಕರ್ತವ್ಯ ನಾವು ಪಾಲನೆ ಮಾಡುತ್ತೇವೆ. ನಗರದಲ್ಲಿ ಯಾವುದೇ ರೀತಿಯ ಅನುಮಾನಸ್ಪದ ಘಟನೆ ಬಂದರೂ ನಾಗರಿಕರು ಪೊಲೀಸರಿಗೆ ಮಾಹಿತಿ ರವಾನಿಸಬೇಕು ಎಂದು ಎಸ್​ಪಿ ಋಷಿಕೇಶ ಭಗವಾನ್ ಸೋನವಣೆ ತಿಳಿಸಿದ್ದಾರೆ.

ಇದನ್ನು ಓದಿ: ಮಂಗಳೂರು ಬಾಂಬ್ ಪತ್ತೆ, ಸ್ಪೋಟ ಒಂದು ಅಣಕು ಪ್ರದರ್ಶನ; ಇದು RSS​ ಸರ್ಕಾರವಲ್ಲ ಜನರ ಸರ್ಕಾರ; ಎಚ್ಡಿಕೆಇನ್ನು ಇದೇ ವೇಳೆ ನಗರದ ಆಯಕಟ್ಟಿನ ಜಾಗದಲ್ಲಿಯೂ ಎಚ್ಚರಿಕೆ ವಹಿಸಲಾಗಿದೆ.  ತಾಲೂಕಿನ ನಾರಾಯಣಪುರ ಗ್ರಾಮದ ಬಸವಸಾಗರ ಜಲಾಶಯಕ್ಕೆ ಕೂಡ ಹೆಚ್ಚಿನ ಭದ್ರತೆ ಕೊಡಲಾಗಿದೆ ಎಂದರು.

(ವರದಿ: ನಾಗಪ್ಪ ಮಾಲಿಪಾಟೀಲ)
First published: January 21, 2020, 5:59 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading