Yadagiri: ಮೀನು ಉತ್ಪಾದನೆಯಲ್ಲಿ ಮೊದಲ ಸ್ಥಾನ ಪಡೆದ ಯಾದಗಿರಿ

ಯಾದಗಿರಿ (Yadagiri) ಜಿಲ್ಲೆಯು ರಾಜ್ಯದಲ್ಲಿಯೇ ಹಿಂದುಳಿದ ಹಣೆಪಟ್ಟಿ ಹೊತ್ತಿದೆ. ಆದರೆ ಮೀನು ಉತ್ಪಾದನೆ(Fish Production)ಯಲ್ಲಿ  ಯಾದಗಿರಿ ಜಿಲ್ಲೆಯು ಒಂದು ಹೆಜ್ಜೆ ಮುಂದೆ ಹೋಗಿ ರಾಜ್ಯದಲ್ಲಿಯೇ ನಂಬರ್ ಒನ್ ಸ್ಥಾನ ಗಿಟ್ಟಿಸಿಕೊಂಡಿದೆ.

ಮೀನುಗಾರಿಕೆ

ಮೀನುಗಾರಿಕೆ

  • Share this:
ಯಾದಗಿರಿ: ಜಿಲ್ಲೆಯಲ್ಲಿ ಉತ್ಪಾದನೆ ಮಾಡಿದ ಮತ್ಸ್ಯಕ್ಕೆ (Fish) ವಿದೇಶದಲ್ಲಿ ಭಾರೀ ಡಿಮ್ಯಾಂಡ್ ಇದ್ದು, ಮೀನುಗಳು ವಿದೇಶಕ್ಕೆ ರಫ್ತು (Export) ಮಾಡಲಾಗುತ್ತಿದೆ. ಯಾದಗಿರಿ (Yadagiri) ಜಿಲ್ಲೆಯು ರಾಜ್ಯದಲ್ಲಿಯೇ ಹಿಂದುಳಿದ ಹಣೆಪಟ್ಟಿ ಹೊತ್ತಿದೆ. ಆದರೆ ಮೀನು ಉತ್ಪಾದನೆ(Fish Production)ಯಲ್ಲಿ  ಯಾದಗಿರಿ ಜಿಲ್ಲೆಯು ಒಂದು ಹೆಜ್ಜೆ ಮುಂದೆ ಹೋಗಿ ರಾಜ್ಯದಲ್ಲಿಯೇ ನಂಬರ್ ಒನ್ ಸ್ಥಾನ ಗಿಟ್ಟಿಸಿಕೊಂಡಿದೆ. ಮೀನು ಉತ್ಪಾದನೆಗೆ ಜಿಲ್ಲೆಯಲ್ಲಿ ಹೆರಳ ಅವಕಾಶವಿದ್ದು, ರೈತರು ಭತ್ತ (Paddy) ಬೆಳೆಯುವದನ್ನು ಕೈಬಿಟ್ಟು ಮೀನು ಕೃಷಿಯತ್ತ (Fishery) ಒಲವು ತೋರಿ ಮೀನು  ಹೆಚ್ಚಿನ ಪ್ರಮಾಣದಲ್ಲಿ ಸಾಕಾಣಿಕೆ ಮಾಡುತ್ತಿದ್ದಾರೆ. ಒಳನಾಡು ಮೀನು ಉತ್ಪಾದನೆಯಲ್ಲಿ ಯಾದಗಿರಿ ಜಿಲ್ಲೆಯು ರಾಜ್ಯದಲ್ಲಿಯೇ ನಂಬರ್ ಒನ್ ಸ್ಥಾನ ಗಿಟ್ಟಿಸಿಕೊಂಡಿದೆ. ಸರಕಾರ ನೀಡಿದ್ದ ಟಾರ್ಗೆಟ್ ಗಿಂತ ಹೆಚ್ಚು ಮತ್ಸ್ಯ ಉತ್ಪಾದನೆ ಮಾಡಲಾಗಿದೆ.

ಡಿಸೆಂಬರ್ ಅಂತ್ಯಕ್ಕೆ 7,416 ಮೆಟ್ರಿಕ್ ಟನ್ ಮತ್ಸ್ಯ ಉತ್ಪಾದನೆ ಮಾಡಲಾಗಿದೆ. ಸರಕಾರ 6,904 ಮೆಟ್ರಿಕ್ ಟನ್ ಮೀನು ಉತ್ಪಾದನೆ ಟಾರ್ಗೆಟ್ ನೀಡಿತ್ತು. ಆದರೆ, ಟಾರ್ಗೆಟ್ ಮೀರಿ ಹೆಚ್ಚು ಮೀನು ಉತ್ಪಾದನೆ ಮಾಡಿ ಸಾಧನೆ ಮಾಡಿ ರಾಜ್ಯದಲ್ಲಿಯೇ ಯಾದಗಿರಿ ಜಿಲ್ಲೆಯು ಮಾದರಿಯಾಗಿದೆ. 2021-22 ನೇ ಸಾಲಿನಲ್ಲಿ 185 ಕೋಟಿ ವಹಿವಾಟು ಮಾಡಲಾಗಿದೆ.

ರೈತರ ಚಿತ್ತ ಮೀನುಗಾರಿಕೆಯತ್ತ

ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ಅಡಿವಪ್ಪ ಜಾಕಾ ಅವರು ಮಾತನಾಡಿ, ಯಾದಗಿರಿ ಜಿಲ್ಲೆಯಲ್ಲಿ ರೈತರು ಹೆಚ್ಚಿನ ಪ್ರಮಾಣದಲ್ಲಿ ಭತ್ತ ಬೆಳೆಯುತ್ತಿದ್ದರು ಆದರೆ, ಯಾದಗಿರಿ ಜಿಲ್ಲೆಯಲ್ಲಿ ಉತ್ಪಾದನೆ ಮಾಡಿದ ಮೀನುಗಳಿಗೆ ವಿದೇಶದಲ್ಲಿ ಕೂಡ ಬಾರೀ ಬೇಡಿಕೆ ಇದ್ದು,  ಈ ಹಿನ್ನೆಲೆ ರೈತರು ಭತ್ತ ಬೆಳೆಯುವದನ್ನು ಕಡಿಮೆ ಮಾಡಿ ಮೀನುಗಾರಿಕೆ ಕೃಷಿಯತ್ತ ಚಿತ್ತ ಹರಿಸಿ ಮೀನು ಸಾಕಾಣಿಕೆ ಮಾಡುತ್ತಿದ್ದಾರೆ.

ಮೀನು ಸಾಕಾಣಿಕೆಯಲ್ಲಿ ಹೆಚ್ಚಿನ ಲಾಭ ಪಡೆಯುತ್ತಿದ್ದಾರೆ. ಮೀನು ಉತ್ಪಾದನೆಯಲ್ಲಿ ಜಿಲ್ಲೆಯು ರಾಜ್ಯದಲ್ಲಿಯೇ ನಂಬರ್ ಒನ್ ಸ್ಥಾನ ಪಡೆದಿದ್ದು ಖುಷಿ ತಂದಿದೆ ಎಂದರು.

ಇದನ್ನೂ ಓದಿ:  CM Basavaraj Bommaiಗೆ ಇಂದು ಡಬಲ್ ಸಂಭ್ರಮ, ಹುಟ್ಟುಹಬ್ಬಕ್ಕೆ ಶುಭಕೋರಿದ ಗಣ್ಯರು

ವಿವಿಧ ತಳಿಯ ಮೀನು ಉತ್ಪಾದನೆ

ಮೀನು ಸಾಕಾಣಿಕೆ ಮಾಡಿ ಅನ್ನದಾತರು ಲಕ್ಷಾಂತರ ರೂಪಾಯಿ ಆದಾಯ ಸಂಪಾದನೆ ಮಾಡುತ್ತಿದ್ದಾರೆ. ಮೀನು ಸಾಕಾಣಿಕೆ ಮಾಡಲು ಹೇರಳ ಅವಕಾಶವಿದ್ದು, ಕೃಷ್ಣಾ ,ಭೀಮಾ ನದಿ,ಎರಡು ಜಲಾಶಯಗಳು, 324 ಕೆರೆಗಳು ಹಾಗೂ ನೀರಿನ ಸೌಲಭ್ಯ ಇರುವ ಹಿನ್ನೆಲೆ ಮೀನು ಕೃಷಿ ಕೊಳಗಳಲ್ಲಿ ರೈತರು ಮೀನು ಕೃಷಿಯತ್ತ ಹೆಚ್ಚಿನ ಚಿತ್ತ ಹರಿಸಿ ಮೀನು ಸಾಕಾಣಿಕೆ ಮಾಡುತ್ತಿದ್ದಾರೆ. ಸಿಗಡಿ,ಮುರೆಲ್, ಕಟ್ಲಾ, ಕಾಮನ್ ಕಾರ್ಪ್ ಸೇರಿ ಹಲವು ತಳಿ ಮೀನು ಉತ್ಪಾದನೆ ಮಾಡಿ ರಫ್ತು ಮಾಡಲಾಗುತ್ತಿದೆ.

ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ಮೀನುಗಾರಿಕೆ ಇಲಾಖೆ ಉಪನಿರ್ದೆಶಕ ಶ್ರೀನಿವಾಸ ಕುಲಕರ್ಣಿ ಮಾತನಾಡಿ, ಯಾದಗಿರಿ ಜಿಲ್ಲೆಯಲ್ಲಿ ಮೀನು ಉತ್ಪಾದನೆ ಮಾಡಲು ಅವಕಾಶವಿದೆ. ನೀರಿನ ಅನುಕೂಲವಿದೆ. ಎರಡು ನದಿ,ಎರಡು ಜಲಾಶಯ, 324 ಕೆರೆಗಳಿದ್ದು ಇದರಿಂದ ಮೀನು ಉತ್ಪಾದನೆಗೆ ಅನುಕೂಲವಾಗಿದೆ.

ರಾಜ್ಯ ಸರಕಾರ ನಿಗದಿ ಮಾಡಿದ ಟಾರ್ಗೆಟ್ ಕ್ಕಿಂತ ಹೆಚ್ಚು ಮೀನು ಉತ್ಪಾದನೆ ಮಾಡಲಾಗಿದೆ. ಈಗ ಮೀನು ಉತ್ಪಾದನೆಯಲ್ಲಿ ನಂಬರ್ ಒನ್ ಸ್ಥಾನ ಪಡೆಯಲಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:  ನಾವು ಕುಡಿದು ಬಿಟ್ಟ ನೀರನ್ನು ತಮಿಳುನಾಡಿನವರು ಕುಡೀತಾರೆ: ಹೊಗೇನಕಲ್ ಯೋಜನೆ ಬಗ್ಗೆ Minister Somanna ಹೇಳಿಕೆ

ಯಾದಗಿರಿ ಜಿಲ್ಲೆಯ ಮೀನುಗಳಿಗೆ ವಿದೇಶದಲ್ಲಿ ಭಾರಿ ಡಿಮ್ಯಾಂಡ್ ಹೆಚ್ಚಾಗಿದೆ. ಯಾದಗಿರಿ ಮೀನುಗಳು ಹೆಚ್ಚಿನ ಪ್ರಮಾಣದಲ್ಲಿ ವಿದೇಶಕ್ಕೆ ರಫ್ತು ಮಾಡಲಾಗುತ್ತಿದೆ‌. ಮೀನುಗಾರಿಕೆ ಇಲಾಖೆಯು ಸಮರ್ಪಕವಾಗಿ ಯೋಜನೆ ಅನುಷ್ಠಾನ ಮಾಡಿ ರಾಜ್ಯದಲ್ಲಿಯೇ ಮೀನು ಉತ್ಪಾದನೆಯಲ್ಲಿ ಜಿಲ್ಲೆಯು ನಂಬರ್ ಒನ್ ಸ್ಥಾನ ಗಿಟ್ಟಿಸಿ ಸಾಧನೆ ಮಾಡಿದೆ.

ಪ್ರಧಾನಿ ಮೋದಿ ಜೊತೆ ಚರ್ಚೆ

ಮೀನು ಉತ್ಪಾದನೆಯಲ್ಲಿ ನಂಬರ್ ಒನ್ ಸ್ಥಾನ ಗಿಟ್ಟಿಸಿದ್ದು ಖುದ್ದು ಜಿಲ್ಲಾಧಿಕಾರಿ ಡಾ.ರಾಗಾಪ್ರಿಯಾ ಅವರು ಪಿಎಂ ಮೋದಿ ಅವರಿಗೆ ವಿಡಿಯೋ ಸಂವಾದ ವೇಳೆ ಮೀನು ಸಾಕಾಣಿಕೆಯಲ್ಲಿ ಸಾಧನೆ ಮಾಡಿದ್ದು ವಿಷಯ ಚರ್ಚೆ ಮಾಡಿದ್ದು, ಈ ವೇಳೆ ಮೀನು ಉತ್ಪಾದನೆ ಹಾಗೂ ಹಲವು ಕ್ಷೇತ್ರದಲ್ಲಿ ಯಾದಗಿರಿ ಜಿಲ್ಲೆಯು ಅಭಿವೃದ್ಧಿಯಾಗುತ್ತಿರುವದಕ್ಕೆ ಪಿಎಂ ನರೇಂದ್ರ ಮೋದಿ ಅವರು ಮೆಚ್ಚುಗೆ ವ್ಯಕ್ತ ಪಡಿಸಿದ್ದು ಸ್ಮರಿಸಬಹುದಾಗಿದೆ.
Published by:Mahmadrafik K
First published: