ಯಾದಗಿರಿ(ಜೂ.25): ಆ ಆಸ್ಪತ್ರೆಗೆ (Hospital) ನಿತ್ಯ ನೂರಾರು ಜನ ರೋಗಿಗಳು ಬರ್ತಾರೆ. ಆದ್ರೆ ಆಸ್ಪತ್ರೆಯಲ್ಲಿ ರೋಗಿಗಳಿಗೆ (Patient) ಚಿಕಿತ್ಸೆ ನೀಡೋಕೆ ವೈದ್ಯರೇ ಇರೋದಿಲ್ಲ. ವೈದ್ಯರು ಇಲ್ಲದ ಕಾರಣಕ್ಕೆ ಬಾಣಂತಿ ನರಳಾಡಿದ್ದಾಳೆ. ವೈದ್ಯರಿಲ್ಲದ ಕಾರಣಕ್ಕೆ ಸಂಬಂಧಿಕರು ಬಾಣಂತಿಯನ್ನ ಖಾಸಗಿ ಆಸ್ಪತ್ರೆಗೆ (Private Hospital) ಕಳುಹಿಸಿದ್ದಾರೆ. ವೈದ್ಯೋ ನಾರಯಣೋ ಹರಿ ಎನ್ನುತ್ತಾರೆ ಆದರೆ, ಈ ಆಸ್ಪತ್ರೆಯಲ್ಲಿ ಕಳೆದ ಐದು ತಿಂಗಳಿನಿಂದ ವೈದ್ಯರಿಲ್ಲದೇ ಆಸ್ಪತ್ರೆ ನಡೆಸಲಾಗುತ್ತಿದೆ.ಬಡ ರೋಗಿಗಳ ಜೀವ ಉಳಿಸಲು ಸರಕಾರ ಪ್ರಾಥಮಿಕ ಆರೋಗ್ಯ ಕೇಂದ್ರ ಮಾಡಿ ಕಳೆದುಕೊಂಡಿದೆ. ಆದರೆ, ಬಡ ರೋಗಿಗಳ ಆರೋಗ್ಯದ ಕಾಳಜಿ ತೊರಬೇಕಾದ ಆರೋಗ್ಯ ಇಲಾಖೆ ಸಂಪೂರ್ಣ ನಿರ್ಲಕ್ಷ್ಯ (Negligence) ವಹಿಸಿದ್ದು ಅಕ್ರೋಶಕ್ಕೆ ಕಾರಣವಾಗಿದೆ.
ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಚಾಮನಾಳ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲದೇ ಹೆಚ್ಚಿನ ಚಿಕಿತ್ಸೆ ಸಿಗದೇ ಹೆರಿಗೆ ನಂತರ ನರಳಾಡಿದ್ದಾರೆ.
ಚಾಮನಾಳ ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸುತ್ತಲಿನ ಹಳ್ಳಿಗಳಿಂದ ರೋಗಿಗಳು ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ಬಂದರೆ ಪರದಾಡುವಂತಾಗಿದೆ.ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡೋಕೆ ವೈದ್ಯರು ಮಾತ್ರ ಈ ಆಸ್ಪತ್ರೆಯಲ್ಲಿ ಹುಡುಕಿದ್ರು ಸಿಗೋದಿಲ್ಲ. ಬಂದ ರೋಗಿಗಳಿಗೆ ನರ್ಸ್ ಸಿಬ್ಬಂದಿ ವರ್ಗದವರು ಚಿಕಿತ್ಸೆ ನೀಡುತ್ತಾರೆ.
ಇದೆ ಆಸ್ಪತ್ರೆಯಲ್ಲಿ ವೈದ್ಯರಿಲ್ಲದ ಕಾರಣಕ್ಕೆ ಬಾಣಂತಿ ಪರದಾಡುವಂತಾಗಿದೆ. ಚಾಮನಾಳ ತಾಂಡದ ಮನ್ನಿಬಾಯಿ ಗುರುವಾರ ಮಧ್ಯಾಹ್ನ ಹೆರಿಗೆ ನೋವು ಅಂತ ಆಸ್ಪತ್ರೆಗೆ ಬಂದಿದ್ದಾಳೆ. ಆದ್ರೆ ಆಸ್ಪತ್ರೆಯಲ್ಲಿ ವೈದ್ಯರಿಲ್ಲ ಪುಣ್ಯ ಹೇಗೋ ನರ್ಸ್ ಗಳೇ ಈ ಮನ್ನಿಬಾಯಿಯ ಹೆರಿಗೆ ಮಾಡಿಸಿದ್ದಾರೆ.
ವೈದ್ಯರಿಂದ ನೋ ರೆಸ್ಪಾನ್ಸ್
ಇದೆ ಕಾರಣಕ್ಕೆ ಸಂಬಂಧಿಕರು ಸಿಕ್ಕ ಸಿಕ್ಕವರ ಕೈಯಿಂದ ವೈದ್ಯರಿಗೆ ಕರೆ ಮಾಡುವ ಪ್ರಯತ್ನ ಮಾಡಿದ್ದಾರೆ. ಆದ್ರೆ, ವೈದ್ಯರು ಮಾತ್ರ ಯಾರ ಸಂಪರ್ಕಕ್ಕೆ ಸಿಕ್ಕಿಲ್ಲ. ಬಳಿಕ ಇದೆ ಚಾಮನಾಳ ಗ್ರಾಮ ಪಂಚಾಯತಿಯ ಅಧ್ಯಕ್ಷ ವಿಜಯಕುಮಾರ ರಾಠೋಡ ಶಹಾಪುರ ಟಿಎಚ್‌ಒ ಕರೆ ಮಾಡಿ ಆಗಿರುವ ಸಮಸ್ಯೆ ಬಗ್ಗೆ ಹೇಳಿದ್ದಾರೆ.
ಟಿಎಚ್‌ಒ ಫೋನ್ ಸ್ವಿಚ್ ಆಫ್
ಟಿಎಚ್‌ಒ ಸಾಹೇಬ್ರು ತಕ್ಷಣ ವೈದ್ಯರನ್ನ ಕಳುಹಿಸುದಾಗಿ ಹೇಳಿದ್ದಾರೆ. ಆದ್ರೆ ಕೆಲ ಹೊತ್ತಿನ ಬಳಿಕ ಟಿಎಚ್‌ಒ ಗೆ ಕರೆ ಮಾಡಿದ್ರೆ ಫೋನ್ ಸ್ವಿಚ್ ಆಪ್ ಬಂದಿದೆ. ಹೀಗಾಗಿ ಅನಿವಾರ್ಯವಾಗಿ ಖಾಸಗಿ ವಾಹನದಲ್ಲಿ ಶಹಾಪುರದ ಖಾಸಗಿ ಆಸ್ಪತ್ರೆಗೆ ಮನ್ನಿಬಾಯಿಗೆ ಸಾಗಿಸಿದ್ದಾರೆ.
ಇದನ್ನೂ ಓದಿ: Hubballi: ಆಟೋ ಕಿಂಗ್ ಕೊಲೆ; ತಂಗಿಯನ್ನ ಚುಡಾಯಿಸಿದ್ದಕ್ಕೆ ಎತ್ತಿ ಬಿಟ್ಟಿವಿ ಅಂತ ಅಂದ್ರು ಸೋದರರು
ಖಾಸಗಿ ವಾಹನದಲ್ಲಿ ರವಾನೆ..!
ಲೋ ಬಿಪಿ ಹಾಗೂ ಉಸಿರಾಟ ಸಮಸ್ಯೆದಿಂದ ಬಾಣಂತಿ ಹೆಚ್ಚಿನ ಚಿಕಿತ್ಸೆ ಸಿಗದೆ ನರಳಾಡಿದ್ದಾಳೆ. 108 ಗೆ ಕರೆ ಮಾಡಿದರು ಕನೆಕ್ಟ್ ಆಗಿಲ್ಲ.ಮನ್ನಿಬಾಯಿ ಕುಟುಂಬಸ್ಥರು ಆ ಕ್ಷಣದಲ್ಲಿ ಕಣ್ಣೀರಲ್ಲಿ ಕೈತೊಳೆಯುವಂತಾಗುತ್ತು. ನಂತರ ಚಾಮನಾಳ ಗ್ರಾಮ ಪಂಚಾಯತ ಅಧ್ಯಕ್ಷ ವಿಜಯಕುಮಾರ ರಾಠೋಡ, ಚಂದ್ರಕಾಂತ ರಾಠೋಡ ಸೇರಿ ಖಾಸಗಿ ವಾಹನ ತರಿಸಿ ಖಾಸಗಿ ವಾಹನದಲ್ಲಿ ಬಾಣಂತಿಗೆ ಹೆಚ್ಚಿನ ಚಿಕಿತ್ಸೆಗಾಗಿ ಶಹಾಪುರಗೆ ರವಾನಿಸಿದ್ದಾರೆ.ಶಹಾಪುರ ಖಾಸಗಿ ಆಸ್ಪತ್ರೆಗೆ ದಾಖಲಾದ ನಂತರ ಬಾಣಂತಿ ಆರೋಗ್ಯದಲ್ಲಿ ಸುಧಾರಣೆ ಕಂಡಿದೆ.
ಡಿಸಿಗೆ ಕೈಮುಗಿದ ಅಧ್ಯಕ್ಷ...!
ಈ ಬಗ್ಗೆ ಗ್ರಾಮ ಪಂಚಾಯತ್ ಅಧ್ಯಕ್ಷ ವಿಜಯಕುಮಾರ ರಾಠೋಡ ಮಾತನಾಡಿ, ಕಳೆದ ಐದು ತಿಂಗಳಿನಿಂದ ಚಾಮನಾಳ ಆಸ್ಪತ್ರೆಗೆ ವೈದ್ಯರಿಲ್ಲ.ವೈದ್ಯರು ಇಲ್ಲದೆ ಇಲ್ಲದೇ ಇದ್ದರೆ ಆಸ್ಪತ್ರೆ ಯಾಕೆ ಇರಬೇಕು, ಆಸ್ಪತ್ರೆ ತೆಗೆದು ಹಾಕಿ.ಶ್ರೀಮಂತರು ಖಾಸಗಿ ಆಸ್ಪತ್ರೆಗೆ ಹೋಗುತ್ತಾರೆ. ಬಡವರು ಎಲ್ಲಿಗೆ ಹೋಗಬೇಕು. ಎನಾದರು ಬಾಣಂತಿಗೆ ಜೀವಕ್ಕೆ ಅಪಾಯವಾದರೆ ರಸ್ತೆ ಬಂದ್ ಮಾಡಿ ಹೋರಾಟ ಮಾಡುತ್ತೆವೆ.ಡಿಸಿ ಅವರೇ ನಮ್ಮ ಆಸ್ಪತ್ರೆಗೆ ವೈದ್ಯರು ನೀಡಿ ಎಂದು ವಿಜಯಕುಮಾರ ರಾಠೋಡ ಡಿಸಿಗೆ ಕೈಮುಗಿದು ಮನವಿ ಮಾಡಿದ್ದಾರೆ.
ಇದನ್ನೂ ಓದಿ: Kodagu: 2018ರ ಅದೇ ಭೂಕಂಪ ಅನುಭವ, ಈ ಬಾರಿಯೂ ಪ್ರಾಕೃತಿಕ ವಿಕೋಪ ಎದುರಿಸುತ್ತಾ ಕೊಡಗು?
ರೋಗಿಗಳ ಪಾಲಿಗೆ ಸಂಜೀವಿನಿಯಾಗಬೇಕಾದ ಆಸ್ಪತ್ರೆಯು ಈಗ ಆಸ್ಪತ್ರೆಗೆ ದಾಖಲಾದ ರೋಗಿಗಳು ವೈದ್ಯರಿಲ್ಲದೇ ನರಕಯಾತನೆ ಅನುಭವಿಸಿದ್ದು ದುರಂತವೇ ಸರಿ.ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ವೈದ್ಯರನ್ನು ನಿಯೋಜನೆ ಮಾಡಿ ಹಾಗೂ ಅಗತ್ಯ ಸೌಲಭ್ಯ ನೀಡಿ ರೋಗಿಗಳ ಜೀವ ಉಳಿಸುವ ಕಾರ್ಯ ಮಾಡಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ