HOME » NEWS » State » YADAGIRI POLICE OFFICER TO FACEBOOK ACCOUNT HACKED SESR NMPG

ಯಾದಗಿರಿ ಪೊಲೀಸ್​​ ಅಧಿಕಾರಿ ಫೇಸ್​ಬುಕ್​ ಖಾತೆಗೆ ಕನ್ನ; ಹಣ ಸಹಾಯ ಮಾಡುವಂತೆ ಸ್ನೇಹಿತರಿಗೆ ವಂಚನೆ

ಸಿಪಿಐ ಹೊಸಕೆರೆಪ್ಪ ಅವರ ಫೇಸ್ ಬುಕ್ ಅಕೌಂಟ್ ನ್ನು ಹ್ಯಾಕ್ ಮಾಡಿದ ವಂಚಕರು ಪೊಲೀಸ್ ಅಧಿಕಾರಿ ಹೆಸರಿನಲ್ಲಿ ಹಣ ಸಂದಾಯ ಮಾಡಿ ಸಹಾಯ ಮಾಡಬೇಕೆಂದು  ಅವರ ಸ್ನೇಹಿತರಿಗೆ ಸಂದೇಶ ಕಳುಹಿಸಿದ್ದಾರೆ

news18-kannada
Updated:November 12, 2020, 2:56 PM IST
ಯಾದಗಿರಿ ಪೊಲೀಸ್​​ ಅಧಿಕಾರಿ ಫೇಸ್​ಬುಕ್​ ಖಾತೆಗೆ ಕನ್ನ; ಹಣ ಸಹಾಯ ಮಾಡುವಂತೆ ಸ್ನೇಹಿತರಿಗೆ ವಂಚನೆ
ಸಿಪಿಐ ಹೊಸಕೆರೆಪ್ಪ
  • Share this:
ಯಾದಗಿರಿ (ನ.12): ಪೊಲೀಸ್​ ಅಧಿಕಾರಿಗಳ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿ ಸಾಮಾನ್ಯ ಜನರಿಂದ ಹಣವಸೂಲಿ ಮಾಡುತ್ತಿರುವ ಪ್ರಕರಣ ಇತ್ತೀಚೆಗೆ ಮಂಡ್ಯದಲ್ಲಿ ಕಂಡು ಬಂದಿತ್ತು. ಈ ಘಟನೆ ಮಾಸುವ ಮುನ್ನವೇ ಜಿಲ್ಲೆಯಲ್ಲಿ ಕೂಡ ಅದೇ ರೀತಿ ವಂಚಕರ ಜಾಲವೊಂದು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು, ಇಲ್ಲಿನ ಅಧಿಕಾರಿಗಳ ಹೆಸರಿನಲ್ಲಿ ಅಮಾಯಕರು ಮತ್ತು ಅವರ ಸ್ನೇಹಿತರನ್ನು ಮೋಸ ಮಾಡಿ ಹಣ ವಸೂಲಿ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಜಿಲ್ಲೆಯ ಮಹಿಳಾ ಪೊಲೀಸ್​ ಠಾಣಾ ಸಿಪಿಐ ಹೊಸಕೆರಪ್ಪ ಅವರ ಫೇಸ್​ಬುಕ್​ ಖಾತೆ ಹ್ಯಾಕ್​ ಮಾಡಿ ಹಣ ಕೇಳುತ್ತಿರುವ ದೂರು ದಾಖಲಾಗಿದೆ. ಈ ರೀತಿ ದೂರು ಬರುತ್ತಿದ್ದಂತೆ ಎಚ್ಚೆತ್ತ ಅಧಿಕಾರಿ ಈ ಕುರಿತು ಸ್ಪಷ್ಟಣೆ ನೀಡಿದ್ದಾರೆ. ವ್ಯವಸ್ಥಿತ ತಂಡವೊಂದು ಈ ರೀತಿ ಕೃತ್ಯಕ್ಕೆ ಮುಂದಾಗಿದ್ದು, ಅವರನ್ನು ಪತ್ತೆ ಹಚ್ಚಿ ಶೀಘ್ರದಲ್ಲಿ ಬಂಧಿಸಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ. ಸಿಪಿಐ ಹೊಸಕೆರೆಪ್ಪ ಅವರ ಫೇಸ್ ಬುಕ್ ಅಕೌಂಟ್ ನ್ನು ಹ್ಯಾಕ್ ಮಾಡಿದ ವಂಚಕರು ಪೊಲೀಸ್ ಅಧಿಕಾರಿ ಹೆಸರಿನಲ್ಲಿ ಹಣ ಸಂದಾಯ ಮಾಡಿ ಸಹಾಯ ಮಾಡಬೇಕೆಂದು  ಅವರ ಸ್ನೇಹಿತರಿಗೆ ಸಂದೇಶ ಕಳುಹಿಸಿದ್ದಾರೆ.  ತಕ್ಷಣಕ್ಕೆ ಹಣದ  ಅವಶ್ಯಕತೆ ಇದ್ದು ಗೂಗಲ್  ಪೇ ಮೂಲಕ ಹಣ ಸಂದಾಯ ಮಾಡುವಂತೆ ವಿನಯರೆಡ್ಡಿ ಹೆಸರಿನಲ್ಲಿ ಫೋನ್ ನಂಬರ್ ನೀಡಿದ್ದಾರೆ. ಇದರಿಂದ ಪೊಲೀಸ್ ಅಧಿಕಾರಿಯ ಸ್ನೇಹಿತರು ಶಾಕ್ ಆಗಿದ್ದಾರೆ. ಒಬ್ಬ ಅಧಿಕಾರಿಯಾಗಿಯಾಗಿ ಅವರು ಹೇಗೆ ಹಣ ಕೇಳುತ್ತಾರೆ ಎಂದು ಅನುಮಾನ ವ್ಯಕ್ತವಾಗಿದೆ.

ಇದನ್ನು ಓದಿ: ಮಗುವೇ ನನ್ನ ಶಕ್ತಿ ಎಂದ ಮೇಘನಾ ರಾಜ್: ಚಿರು ಮಗನಿಗಾಗಿ ಗದಗದಿಂದ ಬಂತು ವಿಶೇಷ ತೊಟ್ಟಿಲು

ನಂತರ ಅಧಿಕಾರಿ ಹೊಸಕೆರೆಪ್ಪ ಅವರಿಗೆ ಕಾಲ್ ಮಾಡಿ 50 ಕ್ಕೂ ಹೆಚ್ಚು ಗೆಳೆಯರು ವಿಚಾರಿಸಿದಾಗ ವಂಚಕರ ನಿಜ ಬಣ್ಣ ಬೆಳಕಿಗೆ ಬಂದಿದೆ. ಈ ವಿಷಯ ತಿಳಿಯುತ್ತಿದ್ದಂತೆ ಪೊಲೀಸ್​ ಅಧಿಕಾರಿ ಕೂಡ ಆಘಾತಗೊಂಡಿದ್ದಾರೆ. ನಂತರ ಸ್ನೇಹಿತರು ಹಾಗೂ ಸಾರ್ವಜನಿಕರಿಗೆ ಸಮಾಜಿಕ ಜಾಲತಾಣದ ಮೂಲಕ ನನ್ನ ಫೇಸ್ ಬುಕ್ ಯಾರೋ ದುಷ್ಕರ್ಮಿಗಳು ಹ್ಯಾಕ್ ಮಾಡಿದ್ದು ನನ್ನ ಹೆಸರಿನಲ್ಲಿ ಹಣ ಕೇಳುತಿದ್ದು ದಯವಿಟ್ಟು ಯಾರು  ಯಾವುದೇ ಅಕೌಂಟ್ ಗೆ ಹಣ ಸಂದಾಯ ಮಾಡಬಾರದೆಂದು ವಿನಂತಿಸಿಕೊಂಡಿದ್ದಾರೆ.

ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ಸಿಪಿಐ ಹೊಸಕೆರೆಪ್ಪ ಮಾತನಾಡಿ  ನನ್ನ ಫೇಸ್ ಬುಕ್ ಹ್ಯಾಕ್ ಮಾಡಿ ದುಷ್ಕರ್ಮಿಗಳು ಹಣ ಕೇಳುತ್ತಿದ್ದು, ಅನೇಕ ಸ್ನೇಹಿತರು ನನಗೆ ಕಾಲ್ ಮಾಡಿದಾಗ ಗಮನಕ್ಕೆ ಬಂದಿದೆ ಯಾರು ಕೂಡ ಹಣ ಸಂದಾಯ ಮಾಡಬಾರದು ಈ ಬಗ್ಗೆ ದೂರು ನೀಡುತ್ತೆನೆಂದರು.

ಈಗಾಗಲೇ ಈ ಘಟನೆಯನ್ನು ಸೈಬರ್ ಪೊಲೀಸರ ಗಮನಕ್ಕೆ ತರಲಾಗಿದೆ. ವಂಚಕರ ಜಾಡು ಪತ್ತೆ ಹಚ್ಚುವಂತೆ ಸೂಚಿಸಲಾಗಿದೆ. ಸಿಪಿಐ ಹೊಸಕೇರಪ್ಪ ಅವರು ದೂರು ನೀಡಲು ಮುಂದಾಗಿದ್ದಾರೆ. ಆದರೆ, ಇಂತಹ ವಂಚಕರ ಬಗ್ಗೆ ಎಚ್ಚರ ವಹಿಸಬೇಕಾಗಿದೆ.(ವರದಿ: ನಾಗಪ್ಪ ಮಲಿಪಾಟೀಲ್​)
Published by: Seema R
First published: November 12, 2020, 2:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories