• Home
  • »
  • News
  • »
  • state
  • »
  • Yadagiri: ಮಗು ಕಣ್ತೆರೆಯುವ ಮೊದಲೇ ಪೊದೆಯಲ್ಲಿ ಬಿಸಾಡಿದ ತಾಯಿ; ಯಾದಗಿರಿಯಲ್ಲಿ ಅಮಾನುಷ ಘಟನೆ

Yadagiri: ಮಗು ಕಣ್ತೆರೆಯುವ ಮೊದಲೇ ಪೊದೆಯಲ್ಲಿ ಬಿಸಾಡಿದ ತಾಯಿ; ಯಾದಗಿರಿಯಲ್ಲಿ ಅಮಾನುಷ ಘಟನೆ

ಯಾದಗಿರಿಯ ಪೊದೆಯಲ್ಲಿ ಸಿಕ್ಕ ನವಜಾತ ಶಿಶು

ಯಾದಗಿರಿಯ ಪೊದೆಯಲ್ಲಿ ಸಿಕ್ಕ ನವಜಾತ ಶಿಶು

ಮುಂಡರಗಿಯ ಜಾಲಿಕಂಟಿಯಲ್ಲಿ ಪತ್ತೆಯಾದ ನವಜಾತ ಗಂಡು ಶಿಶುವನ್ನು ರಕ್ಷಣೆ ಮಾಡಲಾಗಿದ್ದು, ಮಗುವು ಆರೋಗ್ಯವಾಗಿದೆ. ಆ ಮಗುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ

  • Share this:

ಯಾದಗಿರಿ (ಸೆ. 25): ಹೆತ್ತ ಮಗುವನ್ನು ಮಡಿಲಲ್ಲಿ ಇಟ್ಟುಕೊಂಡು ಜೋಪಾನವಾಗಿ ಪೋಷಣೆ ಮಾಡಬೇಕಾದ ಮಹಾತಾಯಿ ಜನ್ಮ ನೀಡಿದ ಕ್ಷಣದಲ್ಲೇ ತನ್ನ ಮಗುವನ್ನು ಅನಾಥವನ್ನಾಗಿ ಮಾಡಿದ್ದಾಳೆ. ಯಾದಗಿರಿ ತಾಲೂಕಿನ ಮುಂಡರಗಿ ಗ್ರಾಮದ ಹೊರಭಾಗದ ನಿರ್ಜನ ಪ್ರದೇಶದಲ್ಲಿ ನವಜಾತ ಗಂಡು  ಶಿಶು ಹೆತ್ತಮ್ಮನ ಮಡಿಲಲ್ಲಿ ಇರಲು ರೋದಿಸುತಿತ್ತು. ಹೆತ್ತಮ್ಮನ ಮಡಿಲಲ್ಲಿದ್ದು ಆರೈಕೆ ಕಾಣಬೇಕಾದ ಮಗು ಜಾಲಿ ಕಂಟಿಯಲ್ಲಿ ರೋಧಿಸುವುದನ್ನು ಸ್ಥಳೀಯರು ಕಂಡು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ನಂತರ ಆ ಮಗುವನ್ನು ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆ.


ಗಂಡು ಮಗುವಿಗೆ ಜನ್ಮ ನೀಡಿದ ತಾಯಿ ಮಗು ಕಣ್ತೆರೆಯುವ ಮುನ್ನವೇ ಮಗುವನ್ನು ನಿರ್ಜನ ಪ್ರದೇಶದಲ್ಲಿ ಇಟ್ಟು ಪರಾರಿಯಾಗಿದ್ದಾಳೆ‌. 2.5 ಕೆಜಿ ತೂಕವಿರುವ ಮಗು ಆರೋಗ್ಯವಾಗಿದ್ದು, ಪಾಪಿ ತಾಯಿ ಮಾತ್ರ ಮಗುವಿನ ರೋದನೆಗೆ ಮಮತೆ ತೋರದೆ ಪಾಪಿ ಕೃತ್ಯವೆಸಗಿದ್ದಾಳೆ. ಘಟನೆ ನಡೆದ ಸ್ಥಳಕ್ಕೆ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಪ್ರಭಾಕರ್, ಸಿಡಿಪಿಓ ರಾಧಾ ಮಣ್ಣೂರು, ಅಟೋ ಸಾಂಗ್ಲಿಯಾನ ತೆರಳಿ ಮಗುವನ್ನು ರಕ್ಷಣೆ ಮಾಡಿದ್ದಾರೆ. ರಕ್ಷಣೆ ಮಾಡಿದ ಮಗುವನ್ನು ಯಾದಗಿರಿ ಜಿಲ್ಲಾಸ್ಪತ್ರೆಯ ಮಕ್ಕಳ ವಿಶೇಷ ನಿಗಾ ಘಟಕದಲ್ಲಿ ದಾಖಲಿಸಿ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ.


ಇದನ್ನೂ ಓದಿ: Anushree: ಡ್ರಗ್ ಕೇಸ್; ಮಂಗಳೂರು ಸಿಸಿಬಿ ಪೊಲೀಸರಿಂದ ಇಂದು ನಿರೂಪಕಿ ಅನುಶ್ರೀ ವಿಚಾರಣೆ


ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಪ್ರಭಾಕರ್ ಅವರು ಮಾತನಾಡಿ, ಮುಂಡರಗಿಯ ಜಾಲಿಕಂಟಿಯಲ್ಲಿ ಪತ್ತೆಯಾದ ನವಜಾತ ಗಂಡು ಶಿಶುವನ್ನು ರಕ್ಷಣೆ ಮಾಡಿದ್ದು ಮಗುವು ಆರೋಗ್ಯವಾಗಿದೆ. ಆ ಮಗುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.


ಯಾರೇ ಪ್ರೀತಿ ಕೊಟ್ಟರೂ ತಾಯಿ ಪ್ರೀತಿ ಕೊಡಲು ಸಾಧ್ಯವಿಲ್ಲ. ಮಗುವನ್ನು ಅನಾಥವನ್ನಾಗಿ ಮಾಡಿದ ತಾಯಿಯ ಪತ್ತೆ ಕಾರ್ಯ ಮುಂದುವರೆದಿದೆ. ಈ ಬಗ್ಗೆ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಪತ್ತೆ ಹಚ್ಚಿ ಮಗುವನ್ನು ತಾಯಿ ಮಡಿಲಲ್ಲಿ ಸೇರುವಂತೆ ಮಾಡಿ, ತಪ್ಪಿತಸ್ಥ ಪಾಪಿ ತಾಯಿ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.

Published by:Sushma Chakre
First published: