HOME » NEWS » State » YADAGIRI MLA VENKATAREDDY HELPED FAMILY WHO LOST THEIR HOME BECAUSE OF HEAVY RAIN GNR

ಯಾದಗಿರಿ: ಮಳೆಗೆ ಮನೆ ಕಳೆದುಕೊಂದು ಬೀದಿಗೆ ಬಿದ್ದ ಕುಟುಂಬಕ್ಕೆ ನೆರವಾದ ಶಾಸಕ ವೆಂಕಟರೆಡ್ಡಿ ಮುದ್ನಾಳ

ಇನ್ನು, ಅಧಿಕಾರಿಗಳಿಗೆ ಕೂಡ ಸರ್ಕಾರದಿಂದ ಸಿಗುವ ಪರಿಹಾರ ಕಲ್ಪಿಸಲು ಸೂಚನೆ ನೀಡಿದ್ದೇನೆ. ಮುಂದಿನ ದಿನಗಳಲ್ಲಿ ಸರ್ಕಾರದಿಂದ ಸತಿ ಮನೆ ಕಲ್ಪಿಸಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ.

news18-kannada
Updated:August 1, 2020, 4:02 PM IST
ಯಾದಗಿರಿ: ಮಳೆಗೆ ಮನೆ ಕಳೆದುಕೊಂದು ಬೀದಿಗೆ ಬಿದ್ದ ಕುಟುಂಬಕ್ಕೆ ನೆರವಾದ ಶಾಸಕ ವೆಂಕಟರೆಡ್ಡಿ ಮುದ್ನಾಳ
ಶಾಸಕ ವೆಂಕಟರೆಡ್ಡಿ ಮದ್ನಾಳ
  • Share this:
ಯಾದಗಿರಿ(ಆ.01): ಜೋರು ಸುರಿದ ಮಳೆಗೆ ಮನೆ ಕುಸಿದ ಕಾರಣ ಇರಲು ನೆಲೆಯಿಲ್ಲದೇ ಬಾಣಂತಿ ಮತ್ತಾಕೆ ಮಗು ಸೇರಿದಂತೆ 7 ಜನ ಬೀದಿಯಲ್ಲಿ ಬದುಕು ಸಾಗಿಸುತ್ತಿದ್ದರು. ಈ ಸಂಬಂಧ ನ್ಯೂಸ್​​​-18 ಕನ್ನಡವೂ ‘ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ ಕಸಿದುಕೊಂಡ ಮಳೆರಾಯ, ಬೀದಿಯಲ್ಲಿ ಬದುಕು ಸಾಗಿಸುತ್ತಿರುವ ಬಾಣಂತಿ'  ಎಂಬ ಶಿರ್ಷಿಕೆಯಡಿ ಸುದ್ದಿ  ಪ್ರಕಟ ಮಾಡಿತ್ತು.

ಈ ಸುದ್ದಿಯನ್ನು ನ್ಯೂಸ್​​​-18 ಕನ್ನಡ ಪ್ರಕಟಿಸಿದ ಬೆನ್ನಲ್ಲೇ ಎಚ್ಚೆತ್ತ ಯಾದಗಿರಿ ಶಾಸಕ ವೆಂಕಟರೆಡ್ಡಿ ಮುದ್ನಾಳ, ಬೀದಿಯಲ್ಲಿ ಬದುಕು ಸಾಗಿಸುತ್ತಿರುವ ಬಡ ಕುಟುಂಬಕ್ಕೆ ನೆರವಾಗಿದ್ದಾರೆ. ತಮ್ಮ ಪುತ್ರ ಮಹೇಶರೆಡ್ಡಿಗೌಡ ಮುದ್ನಾಳ ಮೂಲಕ ನೆರವು ನೀಡಿ ಮಾನವೀಯತೆ ಮೆರೆದಿದ್ಧಾರೆ.

ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ನಾಯ್ಕಲ್ ಗ್ರಾಮದಲ್ಲಿ ಭಾರೀ ಮಳೆಯಿಂದ ಮನೆ ಕುಸಿದು ಗಾಳೆಪ್ಪ ಸೇರಿ 7 ಜನ ಅಪಾಯದಿಂದ ಪಾರಾಗಿದ್ದರು. ಆದರೆ, ಮನೆ ಬಿದ್ದ ಕಾರಣ ವಾಸಕ್ಕೆ ನೆಲೆಯಿಲ್ಲದೇ ಕುಟುಂಬವೂ ಕಣ್ಣೀರಲ್ಲಿ ಕೈ ತೊಳೆಯುವಂತಾಗಿತ್ತು.

ಕಳೆದ 9 ದಿನಗಳಿಂದ ಬೀದಿಯಲ್ಲಿ ಬದುಕು ಸಾಗಿಸುತ್ತಿದ್ದರು. ಈ ಸಂಬಂಧ ನ್ಯೂಸ್-18 ಕನ್ನಡ ಸುದ್ದಿ ಮಾಡಿತ್ತು. ಈ ಬೆನ್ನಲ್ಲೇ ಯಾದಗಿರಿ ಶಾಸಕ ವೆಂಕಟರೆಡ್ಡಿ ಮುದ್ನಾಳ, ಕುಟುಂಬಕ್ಕೆ ಸಹಾಯ ಮಾಡಿದ್ದಾರೆ. ಶಾಸಕ ವೆಂಕಟರೆಡ್ಡಿ ಮುದ್ನಾಳ, ಬಡ ಕುಟುಂಬಕ್ಕೆ ಪಡಿತರ ಧಾನ್ಯ ಹಾಗೂ 5 ಸಾವಿರ ರೂ. ವೈಯಕ್ತಿಕ ಆರ್ಥಿಕ ಸಹಾಯ ಮಾಡಿದ್ದಾರೆ.

ಈ ಬಗ್ಗೆ ನ್ಯೂಸ್-18 ಕನ್ನಡಕ್ಕೆ ಪ್ರತಿಕ್ರಿಯಿಸಿದ ಶಾಸಕ ವೆಂಕಟರೆಡ್ಡಿ ಮುದ್ನಾಳ, ನನಗೆ ನಿಮ್ಮ ಸುದ್ದಿವಾಹಿನಿ ಮೂಲಕ ವಿಷಯ ಗೊತ್ತಾಯಿತು. ಬಡವರು ಯಾರೆ ಇರಲಿ ಸಮಸ್ಯೆ ಎದುರಿಸಬಾರದು. ಹಲವರಿಗೆ ನಾನು ವೈಯಕ್ತಿಕ ಸಹಾಯ ಮಾಡಿದ್ದೇನೆ. ಈಗ ಇವರಿಗೂ ನನ್ನ ಪುತ್ರನ ಮುಖಾಂತರ ನೆರವು ನೀಡಿದ್ದೇನೆ ಎಂದರು.

ಇನ್ನು, ಅಧಿಕಾರಿಗಳಿಗೆ ಕೂಡ ಸರ್ಕಾರದಿಂದ ಸಿಗುವ  ಪರಿಹಾರ ಕಲ್ಪಿಸಲು ಸೂಚನೆ ನೀಡಿದ್ದೇನೆ. ಮುಂದಿನ ದಿನಗಳಲ್ಲಿ ಸರ್ಕಾರದಿಂದ  ಸತಿ ಮನೆ ಕಲ್ಪಿಸಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ವಿಶಾಖಪಟ್ಟಣದ ಹಡಗುದಾಣದಲ್ಲಿ ಕುಸಿದುಬಿದ್ದ ಕ್ರೇನ್; 11 ಮಂದಿ ಸಾವು

ನೋವಿನಲ್ಲಿ ಬದುಕು ಸಾಗಿಸುತ್ತಿರುವ ಕುಟುಂಬಕ್ಕೆ  ಶಾಸಕರು ಸಹಾಯ ಮಾಡಿದ್ದಾರೆ. ಸರಕಾರ ಕೂಡ ಮುಂದಿನ ದಿನಗಳಲ್ಲಿ ಸೂಕ್ತ ಪರಿಹಾರ ಕಲ್ಪಿಸಿ ಈ ಕುಟುಂಬಕ್ಕೆ ಮನೆ ಸೌಲಭ್ಯ ನೀಡಿ ಆಶ್ರಯವಾಗಬೇಕಿದೆ.
Published by: Ganesh Nachikethu
First published: August 1, 2020, 3:58 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading