ಸತತ ಕಾರ್ಯಾಚರಣೆ ಬಳಿಕ ಪತ್ತೆಯಾಯ್ತು ಭೀಮಾ ನದಿ ಪಾಲಾಗಿದ್ದ ನಾಲ್ವರು ಬಾಲಕರ ಶವ

ಇಂದು ಬೆಳಿಗ್ಗೆ 6.30 ಗಂಟೆಯಿಂದ ಎನ್ ಡಿಆರ್ ಎಫ್ ತಂಡ, ಅಗ್ನಿಶಾಮಕದಳ ಹಾಗೂ ಮೀನುಗಾರರು ಶವ ಶೋಧ ಕಾರ್ಯಾಚರಣೆ ನಡೆಸಿದರು. ನಾಲ್ಕು ಬೋಟ್ ಗಳ ಮೂಲಕ ಶೋಧ ನಡೆಸಿದರು. ಈ ವೇಳೆ ನಾಲ್ಕು ಬಾಲಕರ ಶವ ಪತ್ತೆ ಹಚ್ಚಲಾಗಿದೆ.

ಎನ್​ಡಿಆರ್​​ಎಫ್​ ಸಿಬ್ಬಂದಿ

ಎನ್​ಡಿಆರ್​​ಎಫ್​ ಸಿಬ್ಬಂದಿ

  • Share this:
ಯಾದಗಿರಿ(ಸೆ.07): ಎನ್​ಡಿಆರ್​ಎಫ್, ಅಗ್ನಿಶಾಮಕ ದಳ ಮತ್ತು ಮೀನುಗಾರರ ಸತತ ಶೋಧ ಕಾರ್ಯಾಚರಣೆಯ ಬಳಿಕ ಭೀಮಾನದಿಯಲ್ಲಿ ನೀರು ಪಾಲಾಗಿದ್ದ ನಾಲ್ವರು ಬಾಲಕರ ಶವಗಳು ಪತ್ತೆಯಾಗಿವೆ.ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸಣಗಿ ಗ್ರಾಮದ ಸಮೀಪದ ಭೀಮಾನದಿಯಲ್ಲಿ ನಿನ್ನೆ ಸಂಜೆ ನಾಲ್ವರು ಸ್ನೇಹಿತರು ಭೀಮಾನದಿಯಲ್ಲಿ ಈಜಾಡಲು ತೆರಳಿದ್ದರು. ಈ ವೇಳೆ ಅಮಾನ್, ಅಯಾನ್, ರೆಹಾನ್, ಇರ್ಫಾನ್ ನಾಲ್ವರು ಸ್ನೇಹಿತರು ನೀರು ಪಾಲಾಗಿದ್ದರು. ನಿನ್ನೆ ಕತ್ತಲಾದ ಹಿನ್ನೆಲೆ ಶೋಧ ಕಾರ್ಯಾಚರಣೆ ಸ್ಥಗೀತ ಮಾಡಲಾಗಿತ್ತು. ತಡರಾತ್ರಿ  ಹೈದರಾಬಾದ್​​ನಿಂದ ಎನ್ ಡಿಆರ್ ಎಫ್ ತಂಡವನ್ನು ಕರೆಸಲಾಗಿತ್ತು. ಇಂದು ಬೆಳಿಗ್ಗೆ 6.30 ಗಂಟೆಯಿಂದ ಎನ್ ಡಿಆರ್ ಎಫ್ ತಂಡ, ಅಗ್ನಿಶಾಮಕದಳ ಹಾಗೂ ಮೀನುಗಾರರು ಶವ ಶೋಧ ಕಾರ್ಯಾಚರಣೆ ನಡೆಸಿದರು. ನಾಲ್ಕು ಬೋಟ್ ಗಳ ಮೂಲಕ ಶೋಧ ನಡೆಸಿದರು. ಈ ವೇಳೆ ನಾಲ್ಕು ಬಾಲಕರ ಶವ ಪತ್ತೆ ಹಚ್ಚಲಾಗಿದೆ.

Mysuru Dasara 2020: ಈ ಬಾರಿಯ ದಸರೆಯಲ್ಲಿ ಅಭಿಮನ್ಯು ಹೆಗಲಿಗೆ ಅಂಬಾರಿ ಭಾಗ್ಯ?; ನಾಳೆ ಅಂತಿಮ ತೀರ್ಮಾನ

ಸ್ಥಳದಲ್ಲೇ ಜಿಲ್ಲಾಧಿಕಾರಿ ಡಾ.ರಾಗಾಪ್ರಿಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನವಣೆ, ಸಹಾಯಕ ಆಯುಕ್ತ ಶಂಕರಗೌಡ ಸೋಮನಾಳ, ತಹಶಿಲ್ದಾರ ಸುರೇಶ್ ಅಂಕಲಗಿ,ಜಿಲ್ಲಾಅಗ್ನಿಶಾಮಕ ಠಾಣೆ ಅಧಿಕಾರಿ ಹನುಮನಗೌಡ ಪೊಲೀಸ್ ಪಾಟೀಲ ಹಾಗೂ ಮೀನುಗಾರಿಕೆ ಇಲಾಖೆ ಅಧಿಕಾರಿ ಮಹೇಶ ಹಾಗೂ ಮೊದಲಾದ ಅಧಿಕಾರಿಗಳು ಠಿಕಾಣಿ ಇದ್ದರು. ನಂತರ ಜಿಲ್ಲಾಧಿಕಾರಿ ಡಾ.ರಾಗಾಪ್ರಿಯಾ ಅವರು ಗುರುಸಣಗಿ ಬ್ರಿಡ್ಜ್ ಕಂ ಬ್ಯಾರೇಜ್ ಪ್ರದೇಶ ಹಾಗೂ ಭೀಮಾನದಿಯನ್ನು ಪರಿಶೀಲನೆ ಮಾಡಿ, ತಡೆಗೋಡೆ ನಿರ್ಮಾಣ ಮಾಡುವ ಜೊತೆ ನದಿ ತೀರಕ್ಕೆ ಜನರು ತೆರಳದಂತೆ ಸಂಬಂಧ ಪಟ್ಟ ಅಧಿಕಾರಿಗಳು ಮುಂಜಾಗ್ರತೆ ಕ್ರಮ ವಹಿಸಬೇಕೆಂದು ಸೂಚನೆ ನೀಡಿದರು.

ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ಸಹಾಯಕ ಆಯುಕ್ತ ಶಂಕರಗೌಡ ಸೋಮನಾಳ ಮಾತನಾಡಿ,ಎನ್ ಡಿಆರ್ ಎಫ್ ,ಅಗ್ನಿಶಾಮಕದಳ, ಮೀನುಗಾರರ ಸಹಾಯದಿಂದ ನಾಲ್ವರು ಬಾಲಕರ ಶವ  ಪತ್ತೆ ಮಾಡಲಾಗಿದೆ. ಯಾರು ಕೂಡ ನದಿ ತೀರಕ್ಕೆ ತೆರಳದೆ ಎಚ್ಚರ ವಹಿಸಬೇಕೆಂದು ಹೇಳಿದರು. ಮೃತರ ಕುಟುಂಬಸ್ಥರ ಅಕ್ರಂದನ ಮುಗಿಲು‌ ಮುಟ್ಟಿದೆ. ಈ ಬಗ್ಗೆ ವಡಗೇರಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Published by:Latha CG
First published: