ಮನೆ ಕಳೆದುಕೊಂಡು ನಾಲ್ಕು ತಿಂಗಳಾದ್ರು ಪರಿಹಾರದ ಹಣ ಮರೀಚಿಕೆ...!

ಯಾದಗಿರಿ ಜಿಲ್ಲಾಡಳಿತ ಈಗಾಗಲೇ 2973 ಮನೆಗಳು ಹಾನಿಯಾದ ಬಗ್ಗೆ ರಾಜೀವ್ ಗಾಂಧಿ ವಸತಿ ನಿಗಮಕ್ಕೆ ವರದಿ ನೀಡಿದೆ. ಆದರೆ, ನಾಲ್ಕು ತಿಂಗಳು ಆದರೂ ಪರಿಹಾರದ ಹಣ ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಆಗಿಲ್ಲ

ಯಾದಗಿರಿ ಜಿಲ್ಲಾಡಳಿತ ಈಗಾಗಲೇ 2973 ಮನೆಗಳು ಹಾನಿಯಾದ ಬಗ್ಗೆ ರಾಜೀವ್ ಗಾಂಧಿ ವಸತಿ ನಿಗಮಕ್ಕೆ ವರದಿ ನೀಡಿದೆ. ಆದರೆ, ನಾಲ್ಕು ತಿಂಗಳು ಆದರೂ ಪರಿಹಾರದ ಹಣ ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಆಗಿಲ್ಲ

ಯಾದಗಿರಿ ಜಿಲ್ಲಾಡಳಿತ ಈಗಾಗಲೇ 2973 ಮನೆಗಳು ಹಾನಿಯಾದ ಬಗ್ಗೆ ರಾಜೀವ್ ಗಾಂಧಿ ವಸತಿ ನಿಗಮಕ್ಕೆ ವರದಿ ನೀಡಿದೆ. ಆದರೆ, ನಾಲ್ಕು ತಿಂಗಳು ಆದರೂ ಪರಿಹಾರದ ಹಣ ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಆಗಿಲ್ಲ

  • Share this:
ಯಾದಗಿರಿ (ಫೆ. 13) :ಕಳೆದ ನಾಲ್ಕು ತಿಂಗಳ ಹಿಂದೆ ಮಳೆ ಅಬ್ಬರಕ್ಕೆ ಜಿಲ್ಲೆಯಲ್ಲಿ ಸಾವಿರಾರು ಮನೆಗಳು ನೆಲಸಮವಾಗಿವೆ.ಮನೆ ಕಳೆದುಕೊಂಡು ನೂರಾರು ಕುಟುಂಬಗಳು ಈಗ ಬಿದಿ ಪಾಲಾಗಿವೆ.ಆದರೆ, ಮನೆ ಹಾನಿಗೊಳಗಾದ ಫಲಾನುಭವಿಗಳಿಗೆ ಸರಕಾರ ಒಂದು ರೂಪಾಯಿ ಪರಿಹಾರದ ಹಣ ಇನ್ನೂ ಪಾವತಿ ಮಾಡಿಲ್ಲ.ಪ ರಿಣಾಮ ಮನೆ ಕಳೆದುಕೊಂಡವರು ಸರಕಾರದ ಹಣಕ್ಕಾಗಿ ಈಗ ನಿತ್ಯವೂ ಅಲೆದಾಡುತ್ತಿದ್ದಾರೆ.ಕಳೆದ ವರ್ಷದ ಮಳೆ ಅಬ್ಬರಕ್ಕೆ ಜಿಲ್ಲೆಯ ರೈತರು ಹಾಗೂ ಅನೇಕ ಗ್ರಾಮಸ್ಥರು ಹಾನಿಗೊಳಗಾಗಿದ್ದಾರೆ.ಬೆಳೆ ಹಾನಿ ಜೊತೆ ಆಸ್ತಿ ಪಾಸ್ತಿ ಹಾನಿಯಾಗಿದೆ. ಯಾದಗಿರಿ,ಸುರಪುರ,ಶಹಾಪುರ,ಹುಣಸಗಿ,ವಡಗೇರಾ ಹಾಗೂ ಗುರುಮಠಕಲ್ ತಾಲೂಕಿನ ಹಳ್ಳಿಯಲ್ಲಿ ಅನೇಕ ಮನೆಗಳು ಮಳೆ ಅಬ್ಬರಕ್ಕೆ ಕುಸಿದು ಬಿದ್ದಿದ್ದಾವೆ. ಕಳೆದ ವರ್ಷದ ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಲ್ಲಿ ಜಿಲ್ಲೆಯಲ್ಲಿ 2973 ಮನೆಗಳು ಹಾನಿಯಾಗಿವೆ. ಭಾಗಶಃ ಹಾಗೂ ಸಂಪೂರ್ಣ ಮನೆ ಹಾನಿ ಸೇರಿ ಒಟ್ಟು 2973 ಮನೆಗಳು ಹಾನಿಯಾಗಿವೆ.ಭಾಗಶಃ ಮನೆ ಹಾನಿಯಾದರೆ ಸರಕಾರ 3 ಲಕ್ಷ ರೂ ಪರಿಹಾರದ ಹಣ ಹಾಗೂ ಸಂಪೂರ್ಣ ಮನೆ ಹಾನಿಯಾದರೆ 5 ಲಕ್ಷ ರೂ ಪರಿಹಾರದ ಹಣ ನೀಡುವುದಾಗಿ ಹೇಳಲಾಗಿತ್ತು. ಆದರೆ, ಇಲ್ಲಿವರೆಗೂ ಯಾವುದೇ ಹಣ ಬಿಡುಗಡೆಯಾಗಿಲ್ಲ. 

ಯಾದಗಿರಿ ಜಿಲ್ಲಾಡಳಿತ ಈಗಾಗಲೇ 2973 ಮನೆಗಳು ಹಾನಿಯಾದ ಬಗ್ಗೆ ರಾಜೀವ್ ಗಾಂಧಿ ವಸತಿ ನಿಗಮಕ್ಕೆ ವರದಿ ನೀಡಿದೆ. ಆದರೆ, ನಾಲ್ಕು ತಿಂಗಳು ಆದರೂ ಪರಿಹಾರದ ಹಣ ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಆಗಿಲ್ಲ.

ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ಕಾಂಗ್ರೆಸ್ ಮುಖಂಡ ಮಾಣೀಕರೆಡ್ಡಿ ಕುರಕುಂದಿ ಮಾತನಾಡಿ,ಕಳೆದ ವರ್ಷದ ಮಳೆಗಾಲ ಸಮಯದಲ್ಲಿ ಭಾರಿ ಮಳೆಯಿಂದ ಹಾನಿಗೊಳಗಾದ ಫಲಾನುಭವಿಗಳಿಗೆ ಸರಕಾರ ಯಾವುದೇ ಪರಿಹಾರದ ಹಣ ಬಿಡುಗಡೆ ಮಾಡಿಲ್ಲ‌.ಮನೆ  ಕಳೆದುಕೊಂಡವರು ಈಗ ಬಿದಿ ಪಾಲಾಗಿದ್ದಾರೆ.ಸಿಎಂ ಬಿ.ಎಸ್ ಯಡಿಯೂರಪ್ಪ ಅವರ ಸರಕಾರದಲ್ಲಿ ಬಡಜನರಿಗೆ ನೀಡುವ ಪರಿಹಾರದ ಹಣದಲ್ಲಿ ಕೂಡ ವಿಳಂಬ ಮಾಡಲಾಗುತ್ತಿದೆ.ಸರಕಾರದಲ್ಲಿ ಹಣಕಾಸಿನ ಕೊರತೆ ಕಾಡುತ್ತಿದ್ದೆನಾ ಸರಕಾರ‌ ಕೂಡಲೇ ಪರಿಹಾರದ ಹಣ ಬಿಡುಗಡೆ ಮಾಡಿ ಬಡಜನರಿಗೆ ಆಶ್ರಯ ಕಲ್ಪಿಸುವ ಕಾರ್ಯ ಮಾಡಬೇಕಿದೆ.

ಇದನ್ನು ಓದಿ: ದಾಸರಹಳ್ಳಿ ಸ್ಲಂ ಗಲಾಟೆ; 3ನೇ ದಿನಕ್ಕೆ ಕಾಲಿಟ್ಟ ಸಂತ್ರಸ್ತರ ಧರಣಿ; ಫೆ. 16ಕ್ಕೆ ಕೋರ್ಟ್ ತೀರ್ಪು

ಗುಡಿಸಲಿನಲ್ಲಿಯೇ ವಾಸ...!

ಬಹುತೇಕ ಮನೆ ಕಳೆದುಕೊಂಡವರು ಮನೆ ಕಟ್ಟಿಕೊಳ್ಳಲು ಕೈಯಲ್ಲಿ ಹಣವಿಲ್ಲದೇ ಅತ್ತ ಸರಕಾರದಿಂದ ಪರಿಹಾರದ ಹಣ ಬಿಡುಗಡೆಯಾಗದ ಹಿನ್ನೆಲೆ ಕಣ್ಣೀರಲ್ಲಿ ಕೈತೊಳೆಯುಂತಾಗಿದೆ.ಬಡವರು ಗುಡಿಸಲಿನಲ್ಲಿಯೇ ವಾಸ ಮಾಡುತ್ತಿದ್ದಾರೆ.
ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ವಡಗೇರಾದ ಮಲ್ಲಪ್ಪ ಮಾತನಾಡಿ, ಸರ್ ನಮ್ಮ ಮನೆ ಸಂಪೂರ್ಣ ಕುಸಿದು ಬಿದ್ದು ನಾಲ್ಕು ತಿಂಗಳು ಆಗಿವೆ.ಅಧಿಕಾರಿಗಳ ಹತ್ತಿರ ಹೋಗಿದರೆ ಯಾವುದೇ ಮಾಹಿತಿ ಕೊಡುತ್ತಿಲ್ಲ.ನಾವು ಬಡವರು ಎಲ್ಲಿ ಇರಬೇಕು ,ಸರಕಾರವಾದರು ನಮಗೆ ಕರುಣೆ ತೋರಿ ಹಣ ನೀಡಿದರೆ ನಾವು ಮನೆ ಕಟ್ಟಿಕೊಂಡು ಕೂಲಿ‌ನಾಲಿ ಮಾಡಿ ಜೀವನ ನಡೆಸ್ತಿವಿ ಎಂದರು.

ಕೇವಲ ಯಾದಗಿರಿ ಅಷ್ಟೆ ಅಲ್ಲ ರಾಜ್ಯಾದ್ಯಂತ ಯಾವುದೇ ಜಿಲ್ಲೆಯಲ್ಲಿ ಕೂಡ ಸರಕಾರ ಪರಿಹಾರದ ಹಣ ಬಿಡುಗಡೆ ಮಾಡಿಲ್ಲವಂತೆ .ಕಾರಣ ಸರಕಾರ ಸೂರು ಕಳೆದುಕೊಂಡ ಫಲಾನುಭವಿಗಳಿಗೆ ಪರಿಹಾರಷ ಹಣ ನೀಡಿ ವಾಸಕ್ಕೆ ಆಶ್ರಯವಾಗಬೇಕಿದೆ.
Published by:Seema R
First published: