ಪ್ರಧಾನಿ ಭದ್ರತೆಯಲ್ಲಿ ಭಾಗಿಯಾಗಿದ್ದ ಕ್ಯಾಂಡಿ ಇನ್ನಿಲ್ಲ; Yadagiri ಪೊಲೀಸರಲ್ಲಿ ಮಡುಗಟ್ಟಿದ ಶೋಕ

9 ವರ್ಷಗಳ ಕಾಲ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ಕ್ಯಾಂಡಿ ಅನಾರೋಗ್ಯದಿಂದ ಇಂದು ಮೃತಪಟ್ಟಿದ್ದು, ಸಕಲ ಸರ್ಕಾರಿ ಗೌರವದಿಂದ ಅಂತ್ಯ ಸಂಸ್ಕಾರ ನಡೆಸಲಾಯಿತು. 

ಕ್ಯಾಂಡಿ

ಕ್ಯಾಂಡಿ

  • Share this:
ಯಾದಗಿರಿ (ಮಾ. 14): ಜಿಲ್ಲೆಯ ಪೊಲೀಸ್ (Yadagiri Police)​ ಸಿಬ್ಬಂದಿಗಳ ಅಚ್ಚು ಮೆಚ್ಚಿನ ಕ್ಯಾಂಡಿ ಇನ್ನಿಲ್ಲ. ಕ್ಯಾಂಡಿ (Candy) ಇನ್ನಿಲ್ಲ ಎಂಬ ಸುದ್ದಿ ಪೊಲೀಸ್​ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರಲ್ಲಿ ಕಣ್ಣೀರು ತರಿಸಿದೆ. ಪೊಲೀಸ್​ ಇಲಾಖೆ ಭಾಗವಾಗಿದ್ದ ಕ್ಯಾಂಡಿ ಕಳೆದುಕೊಂಡ ನೋವು ಎಲ್ಲರಲ್ಲೂ ಮಡುಗಟ್ಟಿದೆ. 9 ವರ್ಷಗಳ ಕಾಲ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ಕ್ಯಾಂಡಿ ಅನಾರೋಗ್ಯದಿಂದ ಇಂದು ಮೃತಪಟ್ಟಿದ್ದು, ಸಕಲ ಸರ್ಕಾರಿ ಗೌರವದಿಂದ ಅಂತ್ಯ ಸಂಸ್ಕಾರ ನಡೆಸಲಾಯಿತು. 

ಎಲ್ಲರ ಅಚ್ಚುಮೆಚ್ಚಿನ ಕ್ಯಾಂಡಿ 

2013ರಲ್ಲಿ ಜನಿಸಿದ ಕ್ಯಾಂಡಿ ಒಂದು ವರ್ಷದವನಿದ್ದಾಗಲೇ ಪೊಲೀಸ್​ ಇಲಾಖೆ ಸೇರಿದ್ದ. ಲ್ಯಾ ಬ್ರಾಡರ್ ರೆಟ್ರಿವರ್ ತಳಿಯ ಕ್ಯಾಂಡಿಯು ಅತ್ಯಂತ ಚುರುಕಾಗಿದ್ದ. ಯಾದಗಿರಿ ಪೊಲೀಸ್ಇ​​ ಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಈತ ಸ್ಪೋಟಕ ಪತ್ತೆ ಹಚ್ಚುವಲ್ಲಿ ನಿಪುಣನಾಗಿದ್ದ. ಆದರೆ ಅನಾರೋಗ್ಯಕ್ಕೆ ತುತ್ತಾಗಿದ್ದ ಕ್ಯಾಂಡಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದೆ,

ಪಿಎಂ ಮೋದಿ ಕಾರ್ಯಕ್ರಮಕ್ಕೆ ಕರ್ತವ್ಯ ನಿರ್ವಹಿಸಿದ ಕ್ಯಾಂಡಿ...!

ಕಳೆದ ಲೋಕಸಭಾ ಚುನಾವಣೆಯಲ್ಲಿ ಚುನಾವಣೆ ಪ್ರಚಾರಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬೆಳಗಾವಿ, ಹುಬ್ಬಳ್ಳಿ, ದಾವಣಗೆರೆ,ಕಲಬುರಗಿಗೆ ಆಗಮಿಸಿದ ವೇಳೆ ಬಂದೋಬಸ್ತ್ ಕರ್ತವ್ಯದ ವೇಳೆ ಕ್ಯಾಂಡಿ ಭಾಗಿಯಾಗಿದ್ದ. ಅಷ್ಟೇ ಅಲ್ಲದೇ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ರಾಜ್ಯಕ್ಕೆ ಆಗಮಿಸಿದಾಗ ಕೂಡ ಸ್ಪೋಟಕ ಪತ್ತೆ ಹಚ್ಚುವ ಕಾರ್ಯ ಮಾಡಿದ್ದ. ಯಾದಗಿರಿ ಜಿಲ್ಲೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಆಗಮಿಸಿದಾಗ ಭದ್ರತೆ ಕರ್ತವ್ಯ ಪಾಲಿಸಿ, ಇಲಾಖೆಯ ಮೆಚ್ಚಿನ ಶ್ವಾನ ಆಗಿತ್ತು.

ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯ ಕ್ರಿಯೆ


ಹಲವು ಜಿಲ್ಲೆಗಳಲ್ಲಿ ಕಾರ್ಯ

ಜಿಲ್ಲೆ ಮಾತ್ರವಲ್ಲದೇ ಕ್ಯಾಂಡಿ ಹಲವು ಜಿಲ್ಲೆಗಳಲ್ಲೂ ಕರ್ತವ್ಯ ನಿರ್ವಹಿಸಿ ಸೈ ಎನಿಸಿಕೊಂಡಿದ್ದ. ಮೈಸೂರು ದಸರಾ, ಹಂಪಿ ಉತ್ಸವ ಹಾಗೂ ಬೆಳಗಾವಿ ಅಧಿವೇಶನದಲ್ಲಿ ಈ ಕ್ಯಾಂಡಿ  ಸುಮಾರು 175 ವಿಐಪಿ ಬಂದೋಬಸ್ತ್ ಕರ್ತವ್ಯಗಳಲ್ಲಿ ಎ.ಎಸ್.ಸಿ. ತಂಡದೊಂದಿಗೆ ಭಾಗಿ ಆಗಿತ್ತು. ರಾಷ್ಟ್ರೀಯ ಹಬ್ಬಗಳ ಸಂದರ್ಭದಲ್ಲಿ ಯಾದಗಿರಿ ನಗರದ ಜನನಿವಿಡ ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಣೆ ಮಾಡಿದೆ. ಅಂತಹ ಶ್ವಾನ ಇಂದಿಲ್ಲ ಎಂಬ ನೋವು ಇದೀಗ ಎಲ್ಲರಲ್ಲೂ ಮಡುಗಟ್ಟಿದೆ.

ಇದನ್ನು ಓದಿ: ಬಡವರ ಊಟಕ್ಕೆ ಕಲ್ಲು ಹಾಕ್ತಾ ಬೊಮ್ಮಾಯಿ ಸರ್ಕಾರ?; ದಿನೇಶ್ ಗುಂಡೂರಾವ್ ಆಕ್ರೋಶ

ಚಿಕಿತ್ಸೆ ಫಲಕಾರಿಯಾಗದೆ ಸಾವು...!

ಕ್ಯಾಂಡಿಗೆ ಕೆಲವು ದಿನಗಳಿಂದ ಆರೋಗ್ಯ ಸಮಸ್ಯೆ ಕಾಡಿತ್ತು.  ಅನಾರೋಗ್ಯ ಹಿನ್ನೆಲೆ ಜಿಲ್ಲಾ ಪಶು ಆಸ್ಪತ್ರೆಯಲ್ಲಿ ಅಗತ್ಯ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಕ್ಯಾಂಡಿ ಇಂದು ಮೃತಪಟ್ಟಿದೆ.

ಕ್ಯಾಂಡಿ ಸಾವಿಗೆ ಕಣ್ಣೀರು...! 
ಕ್ಯಾಂಡಿ ಶ್ವಾನದ ಹ್ಯಾಂಡ್ಲರ್ ಆದ ಹೆಡ್ ಕಾನ್ಸಟೆಬಲ್ ಸೋಮಣ್ಣಗೌಡ ಕಣ್ಣೀರು ಹಾಕಿದರು. ಶ್ವಾನದ ಜೊತೆ ಸದಾ ಒಡನಾಟ ಹೊಂದಿದ್ದ ಸೋಮಣ್ಣಗೌಡ ಕಣ್ಣೀರು  ಕುಟುಂಬ ಸದಸ್ಯನ ಇನ್ನಿಲ್ಲದಂತೆ ಆಗಿದೆ ಎಂದು ಕಣ್ಣೀರಾಕಿದ ದೃಶ್ಯ ಮನಕಲುಕುವಂತೆ ಇತ್ತು.

ಇದನ್ನು ಓದಿ: ಗಗನಸಖಿ ಕೆಲಸ ತೊರೆದು ಪೊಲೀಸ್ ಆದ ನೇಹಾ ಪಚ್ಚಿಸಿಯಾ; ಈಕೆಯ ಪಯಣ ಅದ್ಭುತ

ಕ್ಯಾಂಡಿ ಸಾವಿಗೆ ಸಂತಾಪ ಸೂಚಿಸಿದ ಎಸ್ಪಿ ಡಾ. ಸಿ. ಬಿ. ವೇದಮೂರ್ತಿ, ಇಲಾಖೆಯ  ಯಾವುದೇ  ಸ್ಪೋಟ ಪತ್ತೆ ಕಾರ್ಯದಲ್ಲಿ ಕ್ಯಾಂಡಿ ಮೊದಲಿರುತ್ತಿದ್ದ. ಆತ 175 ವಿಐಪಿಗಳ ಭದ್ರತೆ ಕಾರ್ಯದಲ್ಲಿ ಕಾರ್ಯ ನಿರ್ವಹಿಸಿದ್ದ. ಆತನ ಸಾವು ಇಲಾಖೆಗೆ ಭರಿಸಲಾಗದ ನಷ್ಟ. ಚಿಕಿತ್ಸೆ ಫಲಿಸದೇ ಅಗಲಿದ ಕ್ಯಾಂಡಿಗೆ ಸಕಲ ಸರಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ಮಾಡಲಾಗಿದೆ ಎಂದು ತಿಳಿಸಿದರು

ಕ್ಯಾಂಡಿ ಅಂತಿಮ ದರ್ಶನಕ್ಕೆ  ಪೊಲೀಸ್​​ ಕವಾಯತು ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಪೊಲೀಸ್​​ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಆಗಮಿಸಿ ನೆಚ್ಚಿನ ಕ್ಯಾಂಡಿಯ ಅಂತಿಮ ದರ್ಶನ ಪಡೆದರು. ಸಕಲ ಸರಕಾರಿ ಗೌರವದೊಂದಿಗೆ ಅಂತ್ಯ ಸಂಸ್ಕಾರ ಮಾಡಲಾಯಿತು. ಈ ವೇಳೆ ಎಸ್ಪಿ ಡಾ.ಸಿ.ಬಿ.ವೇದಮೂರ್ತೀ ,ಡಿವೈಎಸ್ಪಿ ವಿರೇಶ,ಆರ್ ಪಿಐ ರಾಚಪ್ಪ ಅವರು ಅಂತ್ಯಕ್ರಿಯೆ ಕಾರ್ಯದಲ್ಲಿ ಭಾಗಿಯಾದರು.
Published by:Seema R
First published: