Mylaralingeshwara Temple: ದೇವರ ದರ್ಶನ ಭಾಗ್ಯ ಪಡೆಯಲು ಬಂದ ಭಕ್ತರಿಗೆ ಸಿಕ್ಕಿತು ಲಾಠಿ ರುಚಿ ಭಾಗ್ಯ...!

ಜಾತ್ರೆ ರದ್ದು ಮಾಡಿದರು ಬೆಳಿಗ್ಗೆಯಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತ ಸಾಗರ ಹರಿದು ಬಂದಿತು. ಈ ವೇಳೆ ಜನರ ನಿಯಂತ್ರಣಕ್ಕೆ ಮುಂದಾದ ಪೊಲೀಸರು ಲಾಠ ಪ್ರಹಾರ ನಡೆಸಿದರು

ದೇಗುಲಕ್ಕೆ ಬಂದ ಭಕ್ತರನ್ನು ಕಳುಹಿಸುತ್ತಿರುವ ಪೊಲೀಸರು

ದೇಗುಲಕ್ಕೆ ಬಂದ ಭಕ್ತರನ್ನು ಕಳುಹಿಸುತ್ತಿರುವ ಪೊಲೀಸರು

  • Share this:
ಯಾದಗಿರಿ (ಜ. 14): ಕೊವೀಡ್ (Covid) ಕಡಿವಾಣ ಜಿಲ್ಲಾಡಳಿತ ಮೈಲಾಪುರ ಗ್ರಾಮದ ಮೈಲಾರಲಿಂಗೇಶ್ವರ ಜಾತ್ರೆ ರದ್ದು (Mylaralingeshwara Temple) ಮಾಡಿ ಕಠಿಣ ಕ್ರಮಕೈಗೊಂಡರು ಭಕ್ತರು ಮಾತ್ರ ಜಿಲ್ಲಾಡಳಿತದ ಆದೇಶಕ್ಕೆ ಡೋಂಟ್ ಕೇರ್ ಎಂದು ಸಾವಿರಾರು ಸಂಖ್ಯೆಯಲ್ಲಿ ಮೈಲಾಪುರಕ್ಕೆ (Mailapur) ಆಗಮಿಸುತ್ತಿದ್ದಾರೆ. ಕೋವಿಡ್​ ಆತಂಕ ಮರೆತ ಜನರು ಮಾಸ್ಕ್ ಹಾಕದೆ ಹಾಗೂ ಸಮಾಜಿಕ ಅಂತರ ಕಾಪಾಡದೇ ಪೊಲೀಸರ ಕಣ್ಣು ತಪ್ಪಿಸಿ ಮೈಲಾಪುರ ಗ್ರಾಮಕ್ಕೆ ಭಕ್ತರು ಬರುತ್ತಿದ್ದರು.  ಮಕರ ಸಂಕ್ರಮಣ ಹಿನ್ನೆಲೆ ಇಂದು ಮೈಲಾಪುರ ಗ್ರಾಮದ ಮೈಲಾರಲಿಂಗೇಶ್ವರ ಗ್ರಾಮದಲ್ಲಿ ಅದ್ದೂರಿ ಜಾತ್ರೆ ನಡೆಯಬೇಕಾಗಿತ್ತು. ಆದರೆ, ಸೋಂಕಿನ ಹಿನ್ನಲೆ ಜಾತ್ರೆಗೆ ಜಿಲ್ಲಾಡಳಿತ ಬ್ರೇಕ್ ಹಾಕಿದೆ. ಇಂದು ಬೆಳಿಗ್ಗೆ ಮೈಲಾರಲಿಂಗೇಶ್ವರ ಗುಡಿಯಲ್ಲಿ ಸರಳವಾಗಿ ಪೂಜೆ ಮಾಡಲಾಯಿತು.

ಕೊವೀಡ್ ನಿಯಮ ಪಾಲನೆಯೊಂದಿಗೆ ಧಾರ್ಮಿಕ ಕಾರ್ಯಕ್ರಮ ನಡೆಸಿದರು.ನಂ ತರ ಸರಪಳಿ ತುಂಡರಿಸಲಾಯಿತು. ಪ್ರತಿ ವರ್ಷ ಮಲ್ಲಯ್ಯ ಹೊನ್ನಕೆರೆಗೆ ಗಂಗಾಸ್ನಾನಕ್ಕೆ ತೆರಳುವಾಗ ಮಲ್ಲಯ್ಯನ ಪಲ್ಲಕ್ಕಿ ಮೇಲೆ ಭಕ್ತರು ಕುರಿಗಳನ್ನು ಎಸೆದು ಹರಕೆ ತಿರಿಸುತ್ತಿದ್ದರು .ಆದರೆ, ಈ ಬಾರಿ ಜಾತ್ರೆ ರದ್ದು ಮಾಡಿ ಮಲ್ಲಯ್ಯನು ಗಂಗಾ ಸ್ನಾನಕ್ಕೆ ತೆರಳುವ ಪಲ್ಲಕ್ಕಿ ಉತ್ಸವಕ್ಕೆ ಬ್ರೆಕ್ ಹಾಕಲಾಗಿದೆ.ಈ ಹಿನ್ನೆಲೆ ಗುಡಿಯಲ್ಲಿ ಗಂಗಾಸ್ನಾನ ಮಾಡಿಸಲಾಯಿತು.

ದೇವರಿಗೆ ಮಾತ್ರ  ದಿಗ್ಬಂಧನ...! 

ಜಾತ್ರೆ ರದ್ದು ಮಾಡಿದರು ಬೆಳಿಗ್ಗೆಯಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತ ಸಾಗರ ಹರಿದು ಬಂದಿತು ಕೊವೀಡ್ ಹಿನ್ನೆಲೆ ಜಿಲ್ಲಾಡಳಿತ ಜಾತ್ರೆ ರದ್ದು ಮಾಡಿ ದೇವರಿಗೆ ಮಾತ್ರ ದಿಗ್ಭಂಧನ ಹಾಕಿದಂತಾಗಿತ್ತು. ಆದರೆ, ದೇವರು ಹೊರತು ಪಡಿಸಿದರೆ ಮೈಲಾಪುರ ಗ್ರಾಮದ ಸುತ್ತಲೂ ಭಕ್ತ ಸಾಗರ ಸೇರಿತ್ತು. ಜಿಲ್ಲಾಧಿಕಾರಿ ಡಾ. ಆರ್. ರಾಗಾ ಪ್ರಿಯಾ ಹಾಗೂ ಎಸ್ಪಿ ಡಾ. ಸಿ. ಬಿ. ವೇದಮೂರ್ತಿ ಅವರು ಮೈಲಾಪುರ ಜಾತ್ರೆ ರದ್ದು ಮಾಡುವ ಜೊತೆ ಕೊವೀಡ್ ತಡೆಯಲು ಭಕ್ತರು ಜಿಲ್ಲಾಡಳಿತ ಆದೇಶ ಪಾಲನೆ ಮಾಡಬೇಕೆಂದು ವಿನಂತಿ ಮಾಡಿಕೊಂಡರು ಕೂಡ ಭಕ್ತರು ಮಾತ್ರ ಕೊವೀಡ್ ಗೆ ಭಯಗೊಳ್ಳದೇ ಕೊವೀಡ್ ನಿಯಮ ಉಲ್ಲಂಘನೆ ಮಾಡಿ ಮೈಲಾಪುರ ಗ್ರಾಮಕ್ಕೆ ಪ್ರವೇಶ ಮಾಡಿದರು. ಐದು ಚೆಕ್ ಪೋಸ್ಟ್ ಆರಂಭ ಮಾಡಿದರು ಕೂಡ ಚೆಕ್ ಪೋಸ್ಟ್ ‌ಹೊರತು ಪಡಿಸಿ ಬೆಟ್ಟ ಗುಡ್ಡದ ಮಾರ್ಗ ,ಹೊಲದಲ್ಲಿನ ಬೇಲಿ ಹಾರಿ ಕಳ್ಳ ಮಾರ್ಗದ ಮೂಲಕ ಭಕ್ತರು ಮೈಲಾಪುರ ಗ್ರಾಮಕ್ಕೆ ಬಂದರು.ದೂರದಿಂದಲೇ ಕಾಯಿ ಕರ್ಪೂರ ಅರ್ಪಿಸಿದರು.

ಇದನ್ನು ಓದಿ: ಗವಿ ಗಂಗಾಧರೇಶ್ವರನಿಗೆ ಸೂರ್ಯಾಭಿಷೇಕ; ದೇಗುಲದಲ್ಲಿ ಮೊಳಗಿದ ಗಂಟಾಘೋಷ

ಭಕ್ತರಿಗೆ ಲಾಠಿ ರುಚಿ...!
ಪೊಲೀಸರ ಸಂಖ್ಯೆ ಕಡಿಮೆಯಾಗಿತ್ತು ಆದರೆ,ಭಕ್ತರ ಸಂಖ್ಯೆ ಹೆಚ್ಚಾದ ಹಿನ್ನೆಲೆ ಭಕ್ತರನ್ನು ತಡೆಯುವಲ್ಲಿ ಪೊಲೀಸರು ಹರಸಾಹಸ ಪಟ್ಟರು. ಈ ವೇಳೆ ಭಕ್ತರಿಗೆ ಲಾಠಿ ರುಚಿ ತೊರಿಸಿ ಭಕ್ತರನ್ನು ವಾಪಸ್ ಕಳುಹಿಸುವದು ಕಂಡುಬಂತು.

ಇದನ್ನು ಓದಿ: Sabrimalaಯಲ್ಲಿ ಮಕರ ಜ್ಯೋತಿ ದರ್ಶನ; ಬೆಳಕು ಕಂಡು ಪುನೀತರಾದ ಭಕ್ತರು

ಕೈಯಲ್ಲಿ ಲಾಠಿ ಹೀಡಿದ ಎಸ್ಪಿ...!

ಮೈಲಾಪುರನಲ್ಲಿ ಸಾವಿರಾರು ಸಂಖ್ಯೆ ಭಕ್ತರು ಬರುವದನ್ನು ಅರಿತ ಎಸ್ಪಿ ಕೈಯಲ್ಲಿ ಲಾಠಿ ಹೀಡಿದು ‌ಭಕ್ತರಿಗೆ ಖಡಕ್ ಎಚ್ಚರಿಕೆ ನೀಡಿ ಓಡಿಸುವ ಕಾರ್ಯ ಮಾಡಿದರು. ಎಸ್ಪಿ ಅವರ ಖಡಕ್ ಎಚ್ಚರಿಕೆಯಿಂದ ಜನರು ಕಾಲ್ಕಿತ್ತು ಓಡಿದರು. ಅಲ್ಲಲ್ಲಿ ಜೀಲಾಬಿ, ಸಿಹಿ ಅಂಗಡಿಗಳು  ಸೇರಿದಂತೆ ವಿವಿಧ ಅಂಗಡಿಗಳಲ್ಲಿ ಕದ್ದು ಮುಚ್ಚಿ ವ್ಯಾಪಾರ ಮಾಡುತ್ತಿದ್ದರು.  ಈ ವೇಳೆ ಎಸ್ಪಿ ಅಂಗಡಿಯೊಳಗೆ ನುಗ್ಗಿ ಎಚ್ಚರಿಕೆ ನೀಡಿದರು.

ಕುರಿಗಳ ಜಪ್ತಿ...!
ಜಾತ್ರೆ ರದ್ದಾದರು ಭಕ್ತರು ಮಲ್ಲಯ್ಯ ನ ಪಲ್ಲಕ್ಕಿ ಮೇಲೆ ಎಸೆಯಲು ಎಂದ ತಂದ 170 ಕುರಿಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
Published by:Seema R
First published: