Hijab Row: ಹಿಜಾಬ್​ ಮುಖ್ಯ; ಪರೀಕ್ಷೆ, ತರಗತಿ ಬಹಿಷ್ಕರಿಸಿದ ವಿದ್ಯಾರ್ಥಿನಿಯರು

ನಮಗೆ ಶಿಕ್ಷಣ ಹಾಗೂ ಹಿಜಾಬ್ ಕೂಡ ಮುಖ್ಯ. ನಾವು ಹಿಜಾಬ್ ತೆಗೆಯಲ್ಲ. ಹಿಜಾಬ್ ಧರಿಸಿ ಪೂರಕ ಪರೀಕ್ಷೆ ಬರೆಯುತ್ತೆವೆ. ಹಿಜಾಬ್ ತೆಗೆದು ಪರೀಕ್ಷೆ ಬರೆಯಬೇಕೆಂದರೆ ನಾವು ಪರೀಕ್ಷೆ ಬರೆಯಲ್ಲ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಬೆಂಗಳೂರು (ಮಾ. 15): ದೇಶಾದ್ಯಂತ ಸಂಚಲನ ಮೂಡಿಸಿದ್ದ ಹಿಜಾಬ್​ ಪ್ರಕರಣ ಕುರಿತು ಇಂದು ಹೈ ಕೋರ್ಟ್ (Karnataka High Court)​​ ಮಹತ್ವದ ತೀರ್ಪು ನೀಡಿದೆ. ಶಾಲಾ-ಕಾಲೇಜುಗಳಲ್ಲಿ ಹಿಜಾಬ್​ಗೆ (Hijab) ಅವಕಾಶವಿಲ್ಲ. ಹಿಜಾಬ್​ ಇಸ್ಲಾಂನ ಅತ್ಯಗತ್ಯ ಭಾಗವಲ್ಲ. ಸರ್ಕಾರದ ವಸ್ತ್ರ ಸಂಹಿತೆಯನ್ನು ಪ್ರಶ್ನೆ ಮಾಡುವಂತಿಲ್ಲ ಎಂಬ ಆದೇಶ ನೀಡಿದೆ. ಈ ಆದೇಶವನ್ನು ಕೆಲ ಮುಸ್ಲಿಂ ವಿದ್ಯಾರ್ಥಿಗಳು ವಿರೋಧಿಸಿದ್ದಾರೆ. ಯಾದಗಿರಿ(Yadagiri)ಯಲ್ಲಿ ಶಾಲೆ ಪರೀಕ್ಷೆಗೆ ಹಾಜರಾಗಬೇಕಿದ್ದ ವಿದ್ಯಾರ್ಥಿಗಳು ಹಿಜಾಬ್​ ಕುರಿತು ಹೈ ಕೋರಟ್​ ತೀರ್ಪು ನೀಡಿದಾಕ್ಷಣ ತಮಗೆ ಶಾಲೆಗಿಂತ ಹಿಜಾಬ್​ ಮುಖ್ಯ ಎಂದು ಪರೀಕ್ಷೆ ಬಿಟ್ಟು ತೆರಳಿರುವ ಘಟನೆ ನಡೆದಿದೆ.

    ಯಾದಗಿರಿಯ ಸುರಪುರ ತಾಲೂಕಿನ ಕೆಂಬಾವಿ ಪದವಿ ಪೂರ್ವ ಕಾಲೇಜಿನ ಎಂಟು ವಿದ್ಯಾರ್ಥಿಗಳು, ಪರೀಕ್ಷೆ ತೊರೆದು ಹೊರ ನಡೆದಿದ್ದಾರೆ. ಯಾದಗಿರಿ ನಗರದ ಜ್ಯೂನಿಯರ್ ಪಿಯು ಕಾಲೇಜು ವಿದ್ಯಾರ್ಥಿನಿ ಅಸ್ರಾ ಮಾತನಾಡಿ, ಹೈಕೋರ್ಟ್ ಆದೇಶ ಬಂದರು ನಾವು ಹಿಜಾಬ್ ಧರಿಸುತ್ತೆವೆ, ನಮಗೆ ಶಿಕ್ಷಣ ಹಾಗೂ ಹಿಜಾಬ್ ಕೂಡ ಮುಖ್ಯ. ನಾವು ಹಿಜಾಬ್ ತೆಗೆಯಲ್ಲ. ಹಿಜಾಬ್ ಧರಿಸಿ ಪೂರಕ ಪರೀಕ್ಷೆ ಬರೆಯುತ್ತೆವೆ. ಹಿಜಾಬ್ ತೆಗೆದು ಪರೀಕ್ಷೆ ಬರೆಬೇಕೆಂದರೆ ನಾವು ಪರೀಕ್ಷೆ ಬರೆಯಲ್ಲ. ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡಬೇಕೆಂದು ಕೇಳಿದರು.

    ಇದನ್ನು ಓದಿ: ತ್ರಿಸದಸ್ಯ ಪೀಠದಿಂದ 129 ಪುಟಗಳ ತೀರ್ಪು: ತೀರ್ಪಿನಲ್ಲಿ ನಾಲ್ಕು ಪ್ರಶ್ನೆಗಳನ್ನ ಗಂಭೀರವಾಗಿ ಪರಿಗಣನೆ

    ತರಗತಿ ಬಹಿಷ್ಕರಿಸಿದ ವಿದ್ಯಾರ್ಥಿನಿಯರು

    ಇನ್ನು ಹಾಸನ(Hassan)ದಲ್ಲೂ ಕೂಡ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಹೊರ ನಡೆದಿರುವ ಘಟನೆ ನಡೆದಿದೆ. ಹೈಕೋರ್ಟ್ ತೀರ್ಪುನ್ನು ಒಪ್ಪುವುದಿಲ್ಲ ನಮಗೆ ಹಿಜಾಬ್ ಬೇಕೇ ಬೇಕು. ಹಿಜಾಬ್ ಇಲ್ಲದೆ ನಾವು ಪಾಠ ಕೇಳುವುದಿಲ್ಲ. ನಾವು ತರಗತಿಗೆ ಹೋಗುತ್ತೇವೆ ಆದರೆ ಹಿಜಾಬ್ ಬೇಕು. ಮೊದಲಿನಿಂದಲೂ ನಾವು ಹಿಜಾಬ್ ಹಾಕುತ್ತಿದ್ದೇವೆ, ಈಗಲೂ ಹಾಕುತ್ತೇವೆ. ಹಿಜಾಬ್ ಬೇಡ ಅನ್ನಲು ಆಗಲ್ಲ. ನಮಗೆ ಹಿಜಾಬ್ ಬೇಕೆ ಬೇಕು. ನಮಗೆ ಶಿಕ್ಷಣವೂ ಬೇಕು. ಹಿಜಾಬ್​ ಬೇಕು.

    ಇದನ್ನು ಓದಿ: ಎಲ್ಲರೂ ಸಹಕಾರ ಕೊಟ್ಟು ಶಾಂತಿ ಸೌಹಾರ್ದತೆ ಕಾಪಾಡಬೇಕು: ಹೈಕೋರ್ಟ್ ಆದೇಶ ಪಾಲಿಸುವಂತೆ ಸಿಎಂ ಮನವಿ

    ಕೇಸರಿ ಶಾಲು ಈಗ ಬಂದಿರದು, ಮೊದಲಿನಿಂದ ಕೇಸರಿ ಶಾಲು ಇರಲಿಲ್ಲ. ಇಷ್ಟು ದಿನ ಹಿಜಾಬ್ ಹಾಕಿಕೊಂಡು ಪಾಠ ಕೇಳುತ್ತಿದ್ದವು, ಈಗಲೂ ಹಿಜಾಬ್ ಹಾಕಂಡು ಪಾಠ ಕೇಳುತ್ತೇವೆ. ಈಗ ಬೇಡ ಅಂದರೆ ಹೇಗೆ ಹಿಜಾಬ್ ತೆಗೆದು ಹೋಗಕೆ ಆಗುತ್ತದೆ. ಒಂದು ತಿಂಗಳಿನಿಂದ ತರಗತಿಗೆ ಸೇರಿಸಿಲ್ಲ. ಸಮವಸ್ತ್ರ ಧರಿಸಿಕೊಂಡೇ ಬರುತ್ತೇವೆ, ಅದರ ಮೇಲೆ ಬ್ಲ್ಯಾಕ್ ವೇಲ್ ಹಾಕೊಂಡು ಬರುತ್ತೇವೆ. ನಮಗೆ ಹಿಜಾಬ್ ಬೇಕೇ ಬೇಕು ಎಂದು ಆಗ್ರಹಿಸಿದರು.

    ತಂದೆ ಬೇಕಾ, ತಾಯಿ ಬೇಕಾ ಎಂದ್ರೆ ಏನು ಹೇಳೋದು

    ಬಾಗಲಕೋಟೆ(Bagalakote)ಯಲ್ಲಿ ಪಿ ಯು ಕಾಲೇಜ್ ವಿದ್ಯಾರ್ಥಿನಿ ತಸ್ಮಿಯಾ ಮಾತನಾಡಿ, ನಿಮಗೆ ಶಿಕ್ಷಣ ಮುಖ್ಯನಾ ಹಿಜಾಬ್ ಮುಖ್ಯನಾ ಅಂತ ಕೇಳ್ತಾರೆ. ತಂದೆ-ತಾಯಿ ಡೈವೋರ್ಸ್ ಆದಾಗ, ತಂದೆ ಬೇಕಾ? ತಾಯಿ ಬೇಕಾ ಅಂತ ಕೇಳಿದ್ರೆ ನಾವು ಏನು ಹೇಳಬೇಕು. ನಮಗೆ ಅದೇ ತರಾ ಶಿಕ್ಷಣ ಮತ್ತು ಹಿಜಾಬ್ ಒಂದೇ. ನಮಗೆ ಶಿಕ್ಷಣ ಮತ್ತು ಹಿಜಾಬ್ ಎರಡು ಬೇಕು ಅಷ್ಟೇ. ನಾವು ಹಿಜಾಬ್ ಹಾಕಿ ಕೂತ್ಕೋತೀವಿ ಅಷ್ಟೇ. ಇನ್ನು ಮುಂದೆ ತಲೆ ಮೇಲು ಹಾಕಿಕೊಂಡು ಕುಳಿತು ಕೊಳ್ಳುತ್ತೇವೆ. ನಾವು ಹೇಳೋದನ್ನ ಕೋರ್ಟ್ ಗೆ ತಲುಪಿಸಿ ಎಂದು ಮನವಿ ಮಾಡಿದರು.

    ತರಗತಿ ಬಹಿಷ್ಕಾರ ಮಾಡದಂತೆ ಮನವಿ

    ಇನ್ನು ತೀರ್ಪಿನ ಕುರಿತು ಪ್ರತಿಕ್ರಿಯಿಸಿದ ಸಿಎಂ ಬಸವರಾಜ ಬೊಮ್ಮಾಯಿ, ಸಮವಸ್ತ್ರದ ಕುರಿತು ನ್ಯಾಯಾಲಯ ಒಳ್ಳೆಯ ತೀರ್ಪು ನೀಡಿದೆ. ಇದು ಮಕ್ಕಳ ಭವಿಷ್ಯ ಶಿಕ್ಷಣದ ಪ್ರಶ್ನೆಯಾಗಿದೆ. ಮಕ್ಕಳಿಗೆ ವಿದ್ಯೆಗಿಂತ ಮತ್ತೊಂದು ಇಲ್ಲ. ನ್ಯಾಯಾಲಯದ ಆದೇಶವನ್ನು ಎಲ್ಲರು ಪಾಲಿಸಬೇಕು. ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಈ ತೀರ್ಪನ್ನು ಒಪ್ಪಿಕೊಳ್ಳಬೇಕು. ತೀರ್ಪಿನ ಅನ್ವಯ ಶಿಕ್ಷಣ ಕೊಡಲು ಎಲ್ಲರು ಸಹಕಾರ ಕೊಡಬೇಕು. ಎಲ್ಲ ವಿದ್ಯಾರ್ಥಿಗಳು ಹೈಕೋರ್ಟ್ ಆದೇಶ ಪಾಲನೆ ಮಾಡಬೇಕು. ತರಗತಿ ಬಹಿಷ್ಕಾರ ಮಾಡದೇ, ಪರೀಕ್ಷೆಗೆ ಹಾಜರಾಗಬೇಕು ಎಂದು ಮನವಿ ಮಾಡಿದರು.
    Published by:Seema R
    First published: