Yadagiri: ಕೊರೋನಾಗೆ ಬ್ರೇಕ್ ಹಾಕಲು ಯಾದಗಿರಿ ಪ್ರವೇಶಿಸುವವರ ಮೇಲೆ ಹದ್ದಿನ ಕಣ್ಣು; ಚೆಕ್​ಪೋಸ್ಟ್​ನಲ್ಲಿ ತಪಾಸಣೆ

ಮಹಾರಾಷ್ಟ್ರ ಹಾಗೂ ನೆರೆಯ ಕಲಬುರಗಿ ಜಿಲ್ಲೆಯಿಂದ ಯಾದಗಿರಿ ಜಿಲ್ಲೆಗೆ ಎಂಟ್ರಿ ಕೊಡುವ ಪ್ರಯಾಣಿಕರ ಮೇಲೆ ಈಗ ಚೆಕ್ ಪೋಸ್ಟ್ ನಲ್ಲಿ ಹದ್ದಿನ ಕಣ್ಣಿಡಲಾಗಿದೆ. ಜಿಲ್ಲಾಡಳಿತ ಜಿಲ್ಲೆಯ ಮೂರು ಕಡೆ ಚೆಕ್ ಪೋಸ್ಟ್ ತೆರೆದು ಮಹಾರಾಷ್ಟ್ರ ಹಾಗೂ ನೆರೆಯ ಜಿಲ್ಲೆಯ ಪ್ರಯಾಣಿಕರ ಮೇಲೆ ನಿಗಾ ವಹಿಸಿದೆ.

ಯಾದಗಿರಿಯ ಚೆಕ್​ಪೋಸ್ಟ್

ಯಾದಗಿರಿಯ ಚೆಕ್​ಪೋಸ್ಟ್

  • Share this:
ಯಾದಗಿರಿ: ಮಹಾರಾಷ್ಟ್ರದಿಂದ ಜಿಲ್ಲೆಗೆ ವಲಸೆ ಬರುವರಲ್ಲಿ ಈಗ ಕೊರೊನಾ ಪ್ರಕರಣಗಳು ಹೆಚ್ಚಿನ ಪ್ರಮಾಣದಲ್ಲಿ ಬೆಳಕಿಗೆ ಬರುತ್ತಿದ್ದು ಅದೇ ರೀತಿ ಪಕ್ಕದ ಜಿಲ್ಲೆಯ ಕಲಬುರಗಿಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಿನ ಪ್ರಮಾಣದಲ್ಲಿ ಪತ್ತೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಹಾಗೂ ನೆರೆಯ ಕಲಬುರಗಿ ಜಿಲ್ಲೆಯಿಂದ ಯಾದಗಿರಿ ಜಿಲ್ಲೆಗೆ ಎಂಟ್ರಿ ಕೊಡುವ ಪ್ರಯಾಣಿಕರ ಮೇಲೆ ಈಗ ಚೆಕ್ ಪೋಸ್ಟ್ ನಲ್ಲಿ ಹದ್ದಿನ ಕಣ್ಣಿಡಲಾಗಿದೆ. ಯಾದಗಿರಿ ಜಿಲ್ಲೆಯಲ್ಲಿ ಈಗಾಗಲೇ ‌ಮಾರ್ಚ್ ತಿಂಗಳಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಿನ ಪ್ರಮಾಣದಲ್ಲಿ ದಿನೇದಿನೇ ಬೆಳಕಿಗೆ ಬರುತ್ತಿವೆ. ಇದರಿಂದ ಜಿಲ್ಲೆಯ ಜನರು ಕೂಡ ಆತಂಕಗೊಂಡಿದ್ದಾರೆ. ಜಿಲ್ಲಾಡಳಿತ ಜಿಲ್ಲೆಯ ಮೂರು ಕಡೆ ಚೆಕ್ ಪೋಸ್ಟ್ ತೆರೆದು ಮಹಾರಾಷ್ಟ್ರ ಹಾಗೂ ನೆರೆಯ ಜಿಲ್ಲೆಯ ಪ್ರಯಾಣಿಕರ ಮೇಲೆ ನಿಗಾ ವಹಿಸಿದೆ.

ಸೌಕರ್ಯ ವಂಚಿತ ಚೆಕ್​ಪೋಸ್ಟ್:
ಬಿಸಿಲ ನಡುವೆಯು ಸಿಬ್ಬಂದಿಗಳು ಪ್ರಯಾಣಿಕರ ಬಗ್ಗೆ ಮಾಹಿತಿ ಪಡೆದು ನಂತರ ಕೊವೀಡ್ ಟೆಸ್ಟ್ ಮಾಡುತ್ತಿದ್ದಾರೆ. ಯಾದಗಿರಿ ತಾಲೂಕಿನ ಯರಗೋಳ ಗ್ರಾಮದ ಹೊರಭಾಗದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಕಾಟಾಚಾರಕ್ಕೆ ಚೆಕ್ ಪೋಸ್ಟ್ ಆರಂಭ ಮಾಡಿದಂತಾಗಿದೆ. ತಾತ್ಕಾಲಿಕ ನೆರಳಿನ ಅನುಕೂಲ ಮಾಡಿ ಚೆಕ್ ಪೋಸ್ಟ್ ತೆರೆದಿದ್ದು ಆದರೆ, ಬಿರುಗಾಳಿ ಬೀಸಿದರೆ ಚೆಕ್ ಪೋಸ್ಟ್ ಗಾಳಿಗೆ ಹಾರಿ ಹೋಗಲಿದೆ. ಅದೇ ರೀತಿ ಚೆಕ್ ಪೋಸ್ಟ್ ನಲ್ಲಿ ಯಾವುದೇ ಸೌಕರ್ಯ ಕಲ್ಪಿಸಿಲ್ಲ. ಕುಡಿಯುವ ನೀರಿನ ಸೌಕರ್ಯ ಕೂಡ ಜಿಲ್ಲಾಡಳಿತ ಕಲ್ಪಿಸಿಲ್ಲ. ಇದರಿಂದ ಸಿಬ್ಬಂದಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಚೆಕ್ ಪೋಸ್ಟ್ ನಲ್ಲಿ ಪ್ರಯಾಣಿಕರಿಗೆ ಟೆಸ್ಟ್ ಮಾಡಲಾಗುತ್ತಿದೆ. ಪ್ರಮುಖವಾಗಿ  ಮಹಾರಾಷ್ಟ್ರ, ಅನ್ಯ ರಾಜ್ಯ ಹಾಗೂ ನೆರೆಯ ಜಿಲ್ಲೆಯ ಪ್ರಯಾಣಿಕರ ಟ್ರಾವೆಲ್ ಹಿಸ್ಟರಿ ಮಾಹಿತಿ ಪಡೆದು ಟೆಸ್ಟ್ ಮಾಡಲಾಗುತ್ತಿದೆ .

ಇದನ್ನೂ ಓದಿ: Vijayapura: ಗುಮ್ಮಟ ನಗರಿ ವಿಜಯಪುರದಲ್ಲಿ BSNL ಕಚೇರಿ ಮೇಲೆ ಸಿಬಿಐ ದಾಳಿ

ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಇಂದುಮತಿ ಪಾಟೀಲ ಮಾತನಾಡಿ, ಮಹಾರಾಷ್ಟ್ರದಲ್ಲಿ ಕೊರೊನಾ ಎರಡನೇ ಅಲೆ ಸುರುವಾಗಿದ್ದು ಈಗ ವ್ಯಾಪಕ ಕಟ್ಟೆಚ್ಚೆರ ವಹಿಸುವ ಜೊತೆ ಮಹಾರಾಷ್ಟ್ರ ದಿಂದ ಬರುವ ಪ್ರಯಾಣಿಕರಿಗೆ ಕೊವೀಡ್ ಟೆಸ್ಟ್ ಮಾಡಲಾಗುತ್ತಿದೆ. ಜನರು ಕೂಡ ಎಚ್ಚರವಹಿಸಬೇಕೆಂದು ತಿಳಿಸಿದ್ದಾರೆ.

ಯಾದಗಿರಿ ನಗರದ ಗಾಂಧಿ ವೃತ್ತ,ಶಾಸ್ತ್ರೀ ವೃತ್ತ,ಗಂಜ್ ಪ್ರದೇಶ,ಕೇಂದ್ರ ಬಸ್ ನಿಲ್ದಾಣ ಮೊದಲಾದ ಕಡೆ ಯಾದಗಿರಿ ನಗರಸಭೆ ಪೌರಾಯುಕ್ತ ಬಿ.ಟಿ. ನಾಯಕ ಖುದ್ದು ಅವರೇ ಫೀಲ್ಡ್ ಗೆ ಇಳಿದಿದ್ದಾರೆ. ವಾಹನಗಳನ್ನು ತಡೆದು ದಂಡ ಹಾಕುವ ಜೊತೆ ಉಚಿತವಾಗಿ ಮಾಸ್ಕ್ ನೀಡಿ ಮಾಸ್ಕ್ ಧರಿಸುವ ಜೊತೆ ಕೊವೀಡ್ ಮುಂಜಾಗ್ರತೆ ವಹಿಸುವ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ.

ಇಷ್ಟು ದಿವಸ ಕೊವೀಡ್ ಬಗ್ಗೆ ಜನರು ಮರೆತು ಮಾಸ್ಕ್ ಹಾಕದೇ ಹಾಗೂ ಸಮಾಜಿಕ ಅಂತರ ಕಾಪಾಡದೇ ದಿವ್ಯನಿರ್ಲಕ್ಷ್ಯ ತೋರಿದ್ದಾರೆ. ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಈ ಬಗ್ಗೆ ಜಾಗೃತಿ ಕಾರ್ಯಕ್ರಮ ಮಾಡಿ ಜನರಿಗೆ ಕೊವೀಡ್ ನಿಯಮ ಪಾಲನೆ ಮಾಡಬೇಕೆಂದು ಜಾಗೃತಿ ಮೂಡಿಸಿದರು. ಜನರು ಮಾತ್ರ ನಿರ್ಲಕ್ಷ್ಯ ತೋರುತ್ತಿದ್ದಾರೆ. ಈಗಾಗಲೇ ಮತ್ತೆ ಎರಡನೇ ಕೊರೊನಾ ಅಲೆ ಆತಂಕ ಕಾಡುತ್ತಿದ್ದು ಜನರು ಕೋವಿಡ್ ನಿಯಮ ಪಾಲಿಸಬೇಕಿದೆ.
Published by:Sushma Chakre
First published: