ಸಾಹಿತಿ ಗೀತಾ ನಾಗಭೂಷಣರಿಂದ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ, ಪ್ರಚಾರದ ಸಿಡಿ ಬಿಡುಗಡೆ

ಗುಲ್ಬರ್ಗಾ ವಿಶ್ವವಿದ್ಯಾಲಯ ಆವರಣದಲ್ಲಿ ಫೆಬ್ರವರಿ 5, 6 ಮತ್ತು 7 ರಂದು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ. ಸಮ್ಮೇಳನಕ್ಕೆ ಭರದ ಸಿದ್ಧತೆಗಳು ನಡೆಯುತ್ತಿವೆ.

ನುಡಿತೇರು ಹಾಡಿನ ಸಿಡಿಯನ್ನು ಗೀತಾ ನಾಗಭೂಷಣ ಹಾಗೂ ಜಿಲ್ಲಾಧಿಕಾರಿ ಶರತ್ ಬಿ. ಬಿಡುಗಡೆ ಮಾಡಿದರು

ನುಡಿತೇರು ಹಾಡಿನ ಸಿಡಿಯನ್ನು ಗೀತಾ ನಾಗಭೂಷಣ ಹಾಗೂ ಜಿಲ್ಲಾಧಿಕಾರಿ ಶರತ್ ಬಿ. ಬಿಡುಗಡೆ ಮಾಡಿದರು

  • Share this:
ಕಲಬುರ್ಗಿ (ಜ.27) : ಇದೇ ಫೆಬ್ರವರಿ ತಿಂಗಳಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಿದ್ಧತೆಗಳು ಭರದಿಂದ ಸಾಗಿವೆ. ಕನ್ನಡ ಭವನದಲ್ಲಿ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಮತ್ತು ಪ್ರಚಾರ ರಥದ ಸಿಡಿಯನ್ನು ನಾಡೋಜ, ಹಿರಿಯ ಸಾಹಿತಿ ಗೀತಾ ನಾಗಭೂಷಣ ಬಿಡುಗಡೆ ಮಾಡಿದರು.

ಗುಲ್ಬರ್ಗಾ ವಿಶ್ವವಿದ್ಯಾಲಯ ಆವರಣದಲ್ಲಿ ಫೆಬ್ರವರಿ 5, 6 ಮತ್ತು 7 ರಂದು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ. ಸಮ್ಮೇಳನಕ್ಕೆ ಭರದ ಸಿದ್ಧತೆಗಳು ನಡೆಯುತ್ತಿವೆ.

ನಂತರ ಮಾತನಾಡಿದ ಅವರು, ಟಿವಿ ಧಾರಾವಾಹಿಗಳು ಕನ್ನಡವನ್ನು ಕೊಲ್ಲುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು. ಟಿ.ಆರ್.ಪಿ. ಗಾಗಿ ಮಹಿಳೆಯರ ಕಡೆಯಿಂದ ಕಣ್ಣೀರು ಹಾಕಿಸಲಾಗುತ್ತಿದೆ. ಮಹಿಳೆಯರನ್ನೇ ಮಹಿಳೆಯರ ವಿರುದ್ಧ ವಿಲನ್ ರೀತಿಯಲ್ಲಿ ತೋರಿಸಲಾಗುತ್ತೆ. ಇಂತಹ ಪರಿಪಾಠ ನಿಲ್ಲಬೇಕು.ಸಮ್ಮೇಳನದಲ್ಲಿ ಬರ ಮತ್ತು ಗುಳೆ ಕುರಿತ ಗೋಷ್ಠಿ ಇಡಬೇಕಿತ್ತು. ಕೃಷಿ ಗೋಷ್ಠಿಯಲ್ಲಾದರೂ ಬರ ಮತ್ತು ಗುಳೇ ಬಗ್ಗೆ ಚರ್ಚೆಯಾಗಲಿ ಎಂದರು.

ಹೊರಗಿನವಳಾಗಿದ್ದರೂ ನಾನು ಇಷ್ಟು ಉತ್ಸಾಹದಿಂದ ಕೆಲಸ ಮಾಡುತ್ತಿದ್ದೇನೆ. ನೀವೂ ಸಹ ಸಮ್ಮೇಳನ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿ ಕೆಲಸ ಮಾಡುವಂತೆ ನೊಂದು ನುಡಿದಿದ್ದಾರೆ. ಆ ಮೂಲಕ ನಮ್ಮೆಲ್ಲರನ್ನು ನಿದ್ರೆಯಿಂದ ಎಬ್ಬಿಸುವ ಕೆಲಸ ಮಾಡಿದ್ದಾರೆ. ನಾವೆಲ್ಲರೂ ನಮ್ಮ ಮನೆಯಲ್ಲಿ ನಡೆಯುತ್ತಿರುವ ಹಬ್ಬ ಎನ್ನುವ ರೀತಿಯಲ್ಲಿ ಸಂಭ್ರಮದಿಂದ ಕೆಲಸ ಮಾಡಬೇಕೆಂದು ಗೀತಾ ನಾಗಭೂಷಣ ಕರೆ ನೀಡಿದರು.

ಶಿವರಾಮ ಅಸುಂಡಿ ಸಿಡಿ ಬಿಡುಗಡೆ

ಇದೇ ವೇಳೆ ಶಿವರಾಮ ಅಸುಂಡಿ ಅವರ ರೂಪಿಸಿದ ನುಡಿತೇರ ಹಾಡಿನ ಸಿಡಿಯನ್ನು ಗೀತಾ ನಾಗಭೂಷಣ ಹಾಗೂ ಜಿಲ್ಲಾಧಿಕಾರಿ ಶರತ್ ಬಿ. ಬಿಡುಗಡೆ ಮಾಡಿದರು. ನಂತರ ಅಸುಂಡಿಯನ್ನು ಸನ್ನಾನಿಸಿ ಗೌರವಿಸಲಾಯಿತು. ನುಡಿತೇರ ಹಾಡನ್ನು ಜಿಲ್ಲೆಯ ವಿವಿಧೆಡೆ ಪ್ರಚಾರ ರಥಗಳ ಮೂಲಕ ಪ್ರಚಾರ ಕೈಗೊಳ್ಳಲು ಬಳಕೆ ಮಾಡಿಕೊಳ್ಳಲಾಗುತ್ತಿದೆ.

ಇದನ್ನೂ ಓದಿ : ಮರಾಠಿಗರ ಓಲೈಕೆ ಜೊತೆಗೆ ಸರ್ಕಾರದ ಅನುದಾನವನ್ನು ಸ್ವಂತ ಜೇಬಿಂದ ಕೊಟ್ಟಿದ್ದೆಂದು ಬಿಂಬಿಸಿಕೊಂಡ ಲಕ್ಷ್ಮೀ ಹೆಬ್ಬಾಳ್ಕರ್
First published: