ಸಕಲ ಸರ್ಕಾರಿ ಗೌರವಗಳೊಂದಿಗೆ ನಾಳೆ ಚಿದಾನಂದಮೂರ್ತಿ ಅಂತ್ಯಕ್ರಿಯೆ; ಸಿಎಂ ಯಡಿಯೂರಪ್ಪ

ಚಿಮೂ ಅವರ ಆಸೆಗಳಿಗೆ ಧಕ್ಕೆಯಾಗಬಾರದೆಂದು ಪಾರ್ಥಿವ ಶರೀರಕ್ಕೆ ಯಾವುದೇ ಪೂಜೆ-ಪುನಸ್ಕಾರ ಮಾಡುವುದಿಲ್ಲ. ಅದಕ್ಕೆ ನೀವು ಕೂಡ ಸಹಕರಿಸಿ ಎಂದು ಚಿಮೂ ಮಗ ವಿನಯ್​ಕುಮಾರ್ ಕುಟುಂಬಸ್ಥರಿಗೆ ಹಾಗೂ ಅನುಯಾಯಿಗಳಿಗೆ ಮನವಿ ಮಾಡಿದ್ದಾರೆ.

news18-kannada
Updated:January 11, 2020, 10:08 AM IST
ಸಕಲ ಸರ್ಕಾರಿ ಗೌರವಗಳೊಂದಿಗೆ ನಾಳೆ ಚಿದಾನಂದಮೂರ್ತಿ ಅಂತ್ಯಕ್ರಿಯೆ; ಸಿಎಂ ಯಡಿಯೂರಪ್ಪ
ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ
  • Share this:
ಬೆಂಗಳೂರು(ಜ.11): ಸಾಹಿತಿ ಡಾ.ಎಂ. ಚಿದಾನಂದಮೂರ್ತಿ ಇಂದು ಮುಂಜಾನೆ ಕೊನೆಯುಸಿರೆಳೆದಿದ್ದಾರೆ. ಸಿಎಂ ಬಿಎಸ್​ವೈ ಸೇರಿದಂತೆ ಅನೇಕ ಗಣ್ಯರು ಚಿಮೂ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಇಂದು ಬೆಳಗ್ಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಚಿದಾನಂದಮೂರ್ತಿ ಅವರ ಪಾರ್ಥಿವ ಶರೀರವನ್ನು ಮನೆಗೆ ಸ್ಥಳಾಂತರಿಸಲಾಗಿದೆ. ಅನೇಕ ಗಣ್ಯರು, ಸಂಬಂಧಿಕರು, ಗೆಳೆಯರು ಚಿಮೂ ಮನೆಗೆ ಆಗಮಿಸಿ ಅಂತಿಮ ದರ್ಶನ ಪಡೆಯುತ್ತಿದ್ದಾರೆ. 

ವಿದೇಶದಿಂದ ಸಂಬಂಧಿಕರು ಹಾಗೂ ಸ್ನೇಹಿತರು ಆಗಮಿಸುವ ಹಿನ್ನೆಲೆ,  ಚಿದಾನಂದಮೂರ್ತಿಯವರ ಅಂತ್ಯಸಂಸ್ಕಾರವನ್ನು ನಾಳೆ ನಡೆಸುವುದಾಗಿ ಅವರ ಕುಟುಂಬಸ್ಥರು ನಿರ್ಧರಿಸಿದ್ದಾರೆ. ಜೊತೆಗೆ ಚಿಮೂ ಅವರ ಆಸೆಗಳಿಗೆ ಧಕ್ಕೆಯಾಗಬಾರದೆಂದು ಪಾರ್ಥಿವ ಶರೀರಕ್ಕೆ ಯಾವುದೇ ಪೂಜೆ-ಪುನಸ್ಕಾರ ಮಾಡುವುದಿಲ್ಲ. ಅದಕ್ಕೆ ನೀವು ಕೂಡ ಸಹಕರಿಸಿ ಎಂದು ಚಿಮೂ ಮಗ ವಿನಯ್​ಕುಮಾರ್ ಕುಟುಂಬಸ್ಥರಿಗೆ ಹಾಗೂ ಅನುಯಾಯಿಗಳಿಗೆ ಮನವಿ ಮಾಡಿದ್ದಾರೆ.

ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ ನಿಧನ; ಸಿಎಂ ಸೇರಿದಂತೆ ಅನೇಕ ಗಣ್ಯರಿಂದ ಸಂತಾಪ

ಚಿಮೂ ಪತ್ನಿ ವಿಶಾಲಾಕ್ಷಿ, ಮಗ ವಿನಯಕುಮಾರ್, ಮಗಳು ಶೋಭಾ ಹಾಗೂ ಅಪಾರ ಬಳಗವನ್ನು ಅಗಲಿದ್ದಾರೆ. ಇತಿಹಾಸಜ್ಞ ಕೂಡಾ ಆಗಿದ್ದ ಚಿಮೂಗೆ ಹಂಪಿಯ ಜೊತೆ ವಿಶಿಷ್ಟ ನಂಟು ಇತ್ತು. ತನ್ನ ಕೊನೆಯ ಪಯಣ ಹಂಪಿಯಲ್ಲೇ ಆಗಲಿ ಎಂದು ಚಿಮೂ ಬಯಕೆ ವ್ಯಕ್ತಪಡಿಸಿದ್ದರು.  ಹಾಗಾಗಿ ಹಂಪಿ ವಿವಿಯಲ್ಲಿ ಅನುಮತಿ ಸಿಕ್ಕರೆ ಅಲ್ಲೇ ಅಂತ್ಯಸಂಸ್ಕಾರ-ಸಮಾಧಿ ಮಾಡಲು ಚಿಂತನೆ ನಡೆಸುತ್ತಿದ್ದಾರೆ. ಇಲ್ಲದಿದ್ದರೆ ಚಾಮರಾಜಪೇಟೆಯಲ್ಲೇ ಅಂತ್ಯಸಂಸ್ಕಾರ ನೇರವೇರಿಸುತ್ತಾರೆ. ಚಿಮೂ ಕುಟುಂಬಸ್ಥರು ಈ ಕುರಿತು ಸರ್ಕಾರದ ಜೊತೆ ಮಾತುಕತೆ ನಡೆಸುತ್ತಿದ್ದಾರೆ.

ಇನ್ನೊಂದೆಡೆ,  ನಾಳೆ ಸುತ್ತೂರು ಮಠದ ಶಿವರಾತ್ರಿ ದೇಶಿ ಕೇಂದ್ರ ಸ್ವಾಮೀಜಿಗಳು ಅಂತಿಮ ದರ್ಶನಕ್ಕೆ ಬರುವ ಹಿನ್ನೆಲೆ, ಬೆಳಿಗ್ಗೆ 11 ಗಂಟೆಗೆ ಅಂತಿಮ ವಿಧಿ ವಿಧಾನ ಮಾಡಲು ತೀರ್ಮಾನ ಮಾಡಲಾಗಿದೆ. ವೀರಶೈವ ಸಂಪ್ರದಾಯದಂತೆ ಅಂತಿಮ ವಿಧಿವಿಧಾನಗಳನ್ನು ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದಾರೆ. ಸುಮನಹಳ್ಳಿಯ ಹಿಂದೂ ರುದ್ರ ಭೂಮಿಯಲ್ಲಿ ಅಂತಿಮ ವಿಧಿ ವಿಧಾನ ನಡೆಸುವ ಸಾದ್ಯತೆ ಇದೆ ಎನ್ನಲಾಗುತ್ತಿದೆ.

ಸರ್ಕಾರಿ ಗೌರವಗಳೊಂದಿಗೆ ನಾಳೆ ಅಂತ್ಯಕ್ರಿಯೆ ನೆರವೇರಿಸುತ್ತೇವೆ ಎಂದು  ಸಿಎಂ ಬಿಎಸ್​ಯಡಿಯೂರಪ್ಪ ಹೇಳಿದ್ದಾರೆ. "ಚಿದಾನಂದಮೂರ್ತಿಯವರ ಸಾವು ನೋವುಂಟು ಮಾಡಿದೆ‌. ಕನ್ನಡ ನಾಡು, ನುಡಿ ಅಸ್ಮಿತೆಗಾಗಿ ಹೋರಾಟ ಮಾಡುತ್ತಿದ್ದವರು. ಅವರ ನಿಧನದಿಂದ ಕನ್ನಡ ಸ್ವಾರಸ್ವತಲೋಕಕ್ಕೆ ತುಂಬಾ ನಷ್ಟವಾಗಿದೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ," ಎಂದಿದ್ದಾರೆ.

"ನಾನು ಹಿಂದೆ ಸಿಎಂ ಆಗಿದ್ದಾಗಲೇ ಚಿದಾಮೂರ್ತಿಯವರಿಗೆ ವಿಧಾನಪರಿಷತ್ ಸದಸ್ಯರಾಗಿ ಅಂತ ಕೇಳಿಕೊಂಡಿದ್ದೆ. ನನಗೆ ವಯಸ್ಸಾಗಿದೆ ಬೇರೆಯವರಿಗೆ ಮಾಡಿ ಅಂತ ಚಿ.ಮೂ ಹೇಳಿದ್ದರು," ಎಂದು ಸಿಎಂ ಬಿಎಸ್​ವೈ ಚಿದಾನಂದಮೂರ್ತಿಯವರ ಜೊತೆಗಿನ ನೆನಪು ಬಿಚ್ವಿಟ್ಟರು.M Chidananda Murthy Passed Away: ಹಿರಿಯ ಸಾಹಿತಿ, ಸಂಶೋಧಕ ಡಾ.ಎಂ. ಚಿದಾನಂದಮೂರ್ತಿ ಇನ್ನಿಲ್ಲ


Published by: Latha CG
First published: January 11, 2020, 9:33 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading