ಮಂಗಳೂರು (ಮಾ. 25): ದಕ್ಷಿಣಕನ್ನಡ ಜಿಲ್ಲೆಯಲ್ಲಿನ ಪ್ರಸಿದ್ದ ನಾಗಕ್ಷೇತ್ರ ಕುಕ್ಕೆಸುಬ್ರಹ್ಮಣ್ಯದಲ್ಲಿನ ಪೂಜಾ ವಿವಾದ ಮತ್ತೆ ಮುನ್ನಲೆಗೆ ಬಂದಿದೆ. ದೇವಸ್ಥಾನದಲ್ಲಿ ಶಿವರಾತ್ರಿಯ ಆಚರಣೆ ಮಾಡುವ ವಿಚಾರದಲ್ಲಿ ನಡೆದಿದ್ದ ಜಟಾಪಟಿ ಇದೀಗ ದೇವಸ್ಥಾನದಲ್ಲಿ ನಡೆಯುವ ದೈನಂದಿನ ಪೂಜೆಯಲ್ಲೇ ನ್ಯೂನತೆಗಳಿದೆ ಎಂದು ಹೇಳುವಷ್ಟರ ಮಟ್ಟಿಗೆ ಬಂದು ತಲುಪಿದೆ. ಕುಕ್ಕೆ ಸುಬ್ರಹ್ಮಣ್ಯ ಶೈವಾಂಶ ದೇವಸ್ಥಾನವಾಗಿದ್ದರು ಸಹ ಇಲ್ಲಿ ಅರ್ಚಕರು ಅಂತರ್ಯಾಮಿ ಪೂಜೆ ಮೂಲಕ ವಿಷ್ಣುವನ್ನು ಆರಾಧನೆ ಮಾಡುತ್ತಿದ್ದಾರೆ ಎಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಹಿತರಕ್ಷಣಾ ವೇದಿಕೆ ಆರೋಪಿಸಿದೆ. ಮೂಲ ದೇವರಿಗೆ ಪೂಜೆ ಮಾಡದೆ ವಿಷ್ಣುವಿಗೆ ಪೂಜೆ ಮಾಡುತ್ತಾರೆ. ಅಷ್ಟಮಂಗಲದಲ್ಲಿಯೂ ಪೂಜೆಯಲ್ಲಿ ಆಗುತ್ತಿರುವ ಈ ನ್ಯೂನತೆಗಳು ಉಲ್ಲೇಖವಾಗಿದೆ ಎಂದು ಹೇಳಿದ್ದಾರೆ.
ಮುಜರಾಯಿ ಇಲಾಖೆಯ ವ್ಯಾಪ್ತಿಗೊಳಪಟ್ಟ ಸಾರ್ವಜನಿಕ ದೇವಸ್ಥಾನಗಳಲ್ಲಿ ಆಯಾಯ ದೇವರುಗಳಿಗೆ ಆಯಾಯ ರೀತಿಯಲ್ಲಿ ಪೂಜೆ ಸಲ್ಲಿಸಬೇಕು. ಅದೇ ರೀತಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ 1980ರಲ್ಲಿ ಆಗಿರುವ ದಿಟ್ಟಂ ಪ್ರಕಾರವೇ ಪೂಜೆ ನಡೆಯಬೇಕು ಎಂಬುದು ದೇವಸ್ಥಾನ ಹಿತರಕ್ಷಣಾ ವೇದಿಕೆಯ ಒತ್ತಾಯವಾಗಿದೆ. ಆದರೆ ಇಲ್ಲಿ ಅರ್ಚಕರು ದೇವತಾ ತಾರತಮ್ಯ ಮಾಡುತ್ತಿದ್ದಾರೆ. ಶಿವಲಿಂಗಕ್ಕೆ ವಿಷ್ಣು ಅಂತರ್ಯಾಮಿ ಎಂದು ಪೂಜೆ ಮಾಡುತ್ತಾರೆ ಎಂಬುದು ಆರೋಪ. ಈ ನಡುವೆ ಸುಬ್ರಹ್ಮಣ್ಯ ದೇವರ ಒಳಗಿರುವ ವಿಷ್ಣುವಿಗೆ ಪೂಜೆ ಮಾಡುತ್ತಾರೆ. ನೈವೇದ್ಯ ವಿಷ್ಣುವಿಗೆ ನೀಡುತ್ತಾರೆ. ಶಿವ ದೇವರ ನೈವೇದ್ಯ ಪ್ರಸಾದವನ್ನು ಸಹಿತ ಅರ್ಚಕರು ಸ್ವೀಕರಿಸುತ್ತಿಲ್ಲ ಎಂದು ಆರೋಪಿಸಲಾಗಿದೆ.
ಈ ವಿವಾದಗಳ ಬಗ್ಗೆ ಒಬ್ಬೊಬ್ಬರ ಒಂದೊಂದು ಹೇಳಿಕೆಗಳಿಂದ ಭಕ್ತರು ಗೊಂದಲ ಮತ್ತು ನೋವಿಗೆ ಒಳಗಾಗಿದ್ದಾರೆ. ಹೀಗಾಗಿ ಮುಜರಾಯಿ ಇಲಾಖೆ ಈ ಬಗ್ಗೆ ಶೀಘ್ರದಲ್ಲಿಯೇ ಅಧಿಕಾರಿಗಳು, ಭಕ್ತರು, ಅರ್ಚಕರು, ಧಾರ್ಮಿಕ ಪರಿಷತ್ನ ಜೊತೆ ಸಭೆ ನಡೆಸಿ ಈ ಎಲ್ಲಾ ಗೊಂದಲವನ್ನು ನಿವಾರಿಸಬೇಕಾಗಿದೆ. ದೇವರ ವಿಚಾರದಲ್ಲಿ ಯಾವುದೇ ಭೇದಗಳಿಲ್ಲ ಎಂಬುದನ್ನು ಲೋಕಕ್ಕೆ ಸ್ಪಷ್ಟಪಡಿಸಬೇಕಾಗಿದೆ.
ಇದನ್ನು ಓದಿ: ಮಹದೇಶ್ವರ ಬೆಟ್ಟದಲ್ಲಿ ಕಾಣೆಯಾಗಿದ್ದ ಚಿನ್ನದ ಕರಡಿಗೆ ಕಸದ ರಾಶಿಯಲ್ಲಿ ಪತ್ತೆ!
ರಾಜ್ಯದ ಪವಿತ್ರ ದೇವಾಲಯ , ಶ್ರೀಮಂತ ದೇವಾಲಯಗಳ ಪೈಕಿ ಒಂದಾದ ಕುಕ್ಕೆ ಸುಬ್ಯಹ್ಮಣ್ಯ ದೇವಾಲಯದಲ್ಲಿ ಪೂಜೆ ವಿವಾದ ಇನ್ನೂ ಕೂಡ ಬಗಹರಿವಂತೆ ಕಾಣುತ್ತಿಲ್ಲ. ನಿತ್ಯ ಮಾಡುವ ಪೂಜೆಯಲ್ಲಿ ನ್ಯೂನತೆ ಇಲ್ಲ ಎಂದು ಕುಕ್ಕೆ ಹಿತರಕ್ಷಣಾ ಸಮಿತಿ ಅರೋಪಿಸಿದೆ. ಕುಕ್ಕೆ ಶೈವಾಂಶ ದೇವಾಶ್ಥವಾಗಿದ್ದರು ಕೂಎ ಇಲ್ಲಿ ಅಚರ್ಕರು ಅಂತರ್ಯಾಮಿ ಪೂಜೆಯ ಮೂಲಕ ವಿಷ್ಣುವಿನ ಆರಾಧನೆ ಮಾಡುತ್ತಿದ್ದರೆ ಎಂದು ಹಿತರಕ್ಷಣಾ ಸಮಿತಿ ಆರೋಪಿಸಿದ್ದಾರೆ.
ಇನ್ನೂ ಶಿವರಾತ್ರಿಯ ಸಮಯದಲ್ಲಿ ಆರಂಭವಾದ ಶೈವ ಮತ್ತು ಮಧ್ವರ ನಡುವಿನ ಪೂಜಾ ವಿವಾದ ಮತ್ತೀಗಾ ಆರಂಭವಾಗಿದೆ . ಶಿವರಾತ್ರಿಯ ಸಮಯದಲ್ಲಿ ಶೈವ ಪರಂಪರೆಯ ಪ್ರಕಾರ ಕುಕ್ಕೆಯಲ್ಲಿ ಪೂಜೆ ಮಾಡಬೇಕು ಅಂತ ಹೇಳಿ ಸರ್ಕಾರಕ್ಕೆ ಕುಕ್ಕೆ ಹಿತರಕ್ಷಣಾ ಸಮಿತಿ ಮನವಿ ಮಾಡಿತ್ತು . ಇದನ್ನು ವಿರೋಧೀಸಿ ಮಧ್ವರು ಆಕ್ರೋಶಗೊಂಡಿದ್ದರು. ಮಧ್ವ ಸಂಪ್ರದಾಯಕ್ಕೆ ಶೈವ ಸಂಪ್ರದಾಯವನ್ನು ತರಬೇಡಿ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದರು. ಆ ಸಮಯದಲ್ಲಿ ವಿವಾದದ ಮಧ್ಯಸ್ಥಿಕ್ಕೆ ವಹಿಸಿ ಮಧ್ಯೆ ಬಂದ ಧಾರ್ಮಿಕ ಇಲಾಖೆ ಕುಕ್ಕೆಯಲ್ಲಿ ಸಭೆ ನಡೆಸಿ ಶೈವರದ್ದೆ ಮೇಲುಗೈ ಕೂಡ ಆಗಿತ್ತು ಅದು ಮುಗಿದ ಕೂಡಲೇ ಮತ್ತೊಂದು ಖ್ಯಾತೆಯನ್ನು ಕುಕ್ಕೆ ಹಿತರಕ್ಷಣಾ ಸಮಿತಿ ತೆಗಿದಿದೆ ದಿನನಿತ್ಯ ಪೂಜೆಯಲ್ಲಿ ನ್ಯೂನತೆ ಇದೆ ಎಂದು ಆರೋಪಿಸಿದೆ. ಕೂಡಲೇ ಸರಕಾರ ಮಧ್ಯೆ ಪ್ರವೇಶಿಸಿ ಪರಿಹರಿಸ ಬೇಕೆಂದು ಕುಕ್ಕೆ ಹಿತರಕ್ಷಣಾ ಸಮಿತಿ ಆಗ್ರಹಿಸಿದೆ. ಒಟ್ಟಿನಲ್ಲಿ ಈ ಹೆಳಿಕೆ ಬಗ್ಗೆ ಭಕ್ತರು ಗೊಂದಲಕ್ಕೆ ಒಳಗಾಗಿದ್ದಾರೆ . ತಕ್ಷಣ ಸರಕಾರ ಮಧ್ಯೆ ಪ್ರವೇಶಿಸಿ ಗೊಂದಲ ನಿವಾರಣೆ ಮಾಡಬೇಕಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ