ರಾಜ್ಯದಲ್ಲಿ ಮೊದಲ ಬಾರಿಗೆ ಚಾಮರಾಜನಗರ ಜಿಲ್ಲೆಯ ದೇವಸ್ಥಾನಗಳಲ್ಲಿ ಮೊಳಗಲಿದೆ ಕನ್ನಡ ಡಿಂಡಿಮ

ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೊಳಪಡುವ ಚಾಮರಾಜನಗರ ಜಿಲ್ಲೆಯ ಎಲ್ಲಾ ದೇವಾಲಯಗಳಲ್ಲಿ ಇನ್ನು ಮುಂದೆ ಕನ್ನಡ ಭಾಷೆಯಲ್ಲಿಯೇ ಮಂತ್ರೊಚ್ಛಾರಣೆ, ಪೂಜಾ ವಿಧಿ ವಿಧಾನ ಗಳನ್ನು ನಡೆಸುವಂತೆ ಜಿಲಾಧಿಕಾರಿ ಡಾ.ಎಂ.ಆರ್. ರವಿ ಸೂಚಿಸಿದ್ದಾರೆ

G Hareeshkumar | news18-kannada
Updated:March 9, 2020, 3:48 PM IST
ರಾಜ್ಯದಲ್ಲಿ ಮೊದಲ ಬಾರಿಗೆ ಚಾಮರಾಜನಗರ ಜಿಲ್ಲೆಯ ದೇವಸ್ಥಾನಗಳಲ್ಲಿ ಮೊಳಗಲಿದೆ ಕನ್ನಡ ಡಿಂಡಿಮ
ದೇವಸ್ಥಾನ
  • Share this:
ಚಾಮರಾಜನಗರ(ಮಾ.09) : ರಾಜ್ಯದಲ್ಲಿಯೆ ಮೊದಲ ಬಾರಿಗೆ ಚಾಮರಾಜನಗರ ಜಿಲ್ಲೆಯ ಮುಜರಾಯಿ ದೇವಸ್ಥಾನಗಳಲ್ಲಿ ಸಂಸ್ಕೃತ ಬದಲು ಕನ್ನಡ ಡಿಂಡಿಮ ಮೊಳಗಲಿದೆ. ಜಿಲ್ಲಾಡಳಿತದಿಂದ ಹೀಗೊಂದು ಆದೇಶ ಹೊರಬಿದ್ದಿದ್ದು, ಇನ್ನು ಮುಂದೆ ಕನ್ನಡದಲ್ಲಿಯೇ ಮಂತ್ರೋಚ್ಛಾರಣೆ, ಅರ್ಚನೆ, ಸಂಕಲ್ಪ, ಪೂಜಾ ವಿಧಿವಿಧಾನಗಳು ನಡೆಸಲು ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.

ಸಾಮಾನ್ಯವಾಗಿ ದೇವಸ್ಥಾನಗಳಲ್ಲಿ ಸಂಸ್ಕೃತದಲ್ಲೇ ಮಂತ್ರಪಠಣ, ಅರ್ಚನೆ, ಸಂಕಲ್ಪ, ವಿವಿಧ ಪೂಜಾಕೈಂಕರ್ಯಗಳು ನಡೆಯುತ್ತವೆ. ದೇವಸ್ಥಾನಕ್ಕೆ ಹೋಗುವ ಶೇಕಡಾ 99 ರಷ್ಟು ಮಂದಿಗೆ ಸಂಸ್ಕೃತ ಬರುವುದಿಲ್ಲ. ಹಾಗಾಗಿ ಅರ್ಚಕರು ಹೇಳುವ ಮಂತ್ರವಾಗಲಿ, ಭಕ್ತರ ಪರವಾಗಿ ಮಾಡುವ ಸಂಕಲ್ಪವಾಗಲಿ, ಅರ್ಚನೆಯಾಗಲಿ, ಶ್ಲೋಕಗಳ ಅರ್ಥವಾಗಲಿ ತಿಳಿಯುವುದಿಲ್ಲ . ಅವರು ಯಾವ ರೀತಿ ತಮ್ಮ ಪರ ದೇವರಿಗೆ ಸಂಕಲ್ಪ , ಅರ್ಚನೆ , ಪ್ರಾರ್ಥನೆ ಮಾಡುತ್ತಿದ್ದಾರೆ ಎಂಬುದು ಭಕ್ತರಿಗೂ ತಿಳಿಯುವಂತಾಗಬೇಕು ಎಂಬ ಉದ್ದೇಶದಿಂದ ಚಾಮರಾಜನಗರ ಜಿಲ್ಲಾಡಳಿತ ಈ ಆದೇಶ ಹೊರಡಿಸಿದೆ.

ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೊಳಪಡುವ ಚಾಮರಾಜನಗರ ಜಿಲ್ಲೆಯ ಎಲ್ಲಾ ದೇವಾಲಯಗಳಲ್ಲಿ ಇನ್ನು ಮುಂದೆ ಕನ್ನಡ ಭಾಷೆಯಲ್ಲಿಯೇ ಮಂತ್ರೊಚ್ಛಾರಣೆ, ಪೂಜಾ ವಿಧಿ ವಿಧಾನ ಗಳನ್ನು ನಡೆಸುವಂತೆ ಜಿಲಾಧಿಕಾರಿ ಡಾ.ಎಂ.ಆರ್. ರವಿ ಸೂಚಿಸಿದ್ದಾರೆ. ಮಂತ್ರೋಚ್ಚಾರಣೆ ಅರ್ಚನೆ, ಸಂಕಲ್ಪ ಇತ್ಯಾದಿ ಪೂಜಾ ಕೈಂಕರ್ಯಗಳನ್ನು ಚಾಲ್ತಿಯಲ್ಲಿರುವ ಸಂಪ್ರದಾಯ ಹಾಗೂ ಧಾರ್ಮಿಕ ಪದ್ದತಿಗಳಿಗೆ ಧಕ್ಕೆ ಬಾರದಂತೆ ಕನ್ನಡದಲ್ಲಿಯೇ ನೆರವೇರಿಸಬೇಕು ಎಂದು ಅವರು ಸೂಚಿಸಿದ್ದಾರೆ.

ಜಿಲ್ಲಾಧಿಕಾರಿ ಹೊರಡಿಸಿದ ಆದೇಶದ ಪ್ರತಿ


ಇದಕ್ಕಾಗಿ ಕನ್ನಡ ಪಂಡಿತರಿಂದ ಅರ್ಚಕರಿಗೆ ವಿಶೇಷ ಕಾರ್ಯಾಗಾರವೊಂದನ್ನು ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಹೇಳುತ್ತಾರೆ.

ಕನ್ನಡದಲ್ಲೇ ಪೂಜಾ ಕೈಂಕರ್ಯಗಳನ್ನು ಕೈಗೊಳ್ಳಬೇಕೆಂಬ ಜಿಲ್ಲಾಧಿಕಾರಿಗಳ ಆದೇಶ ಭಕ್ತರ ಪ್ರಶಂಸೆಗೆ ಪಾತ್ರವಾಗಿದೆ. ಜೊತೆಗೆ ಅರ್ಚಕರು ಸಹ ಸ್ವಾಗತಿಸಿದ್ದು, ಕನ್ನಡ ಭಾಷೆಯಲ್ಲಿ ಮಂತ್ರ, ಶ್ಲೋಕಗಳನ್ನು ಕನ್ನಡದಲ್ಲೇ ಮುದ್ರಿಸಿ ಪುಸ್ತಕ ರೂಪದಲ್ಲಿ ಕೊಡಬೇಕು ಹಾಗು ಸೂಕ್ತ ತರಬೇತಿ ನೀಡಬೇಕು ಎಂದು  ಜನಾರ್ಧನ ಸ್ವಾಮಿ ದೇವಾಲಯದ ಅರ್ಚಕ ಅನಂತ ಪ್ರಸಾದ್ ಹೇಳುತ್ತಾರೆ.

ಇದನ್ನೂ ಓದಿ  :  ಕೊರೋನಾ ಭೀತಿ: ಮಕ್ಕಳಿಗೆ ಆಟ, ಶಿಕ್ಷಕರಿಗೆ ಪ್ರಾಣ ಸಂಕಟ; ರಜೆಗಾಗಿ ನಾಟಕವಾಡಿದ ವಿದ್ಯಾರ್ಥಿಗಳುಜಿಲ್ಲೆಯಲ್ಲಿ ಮುಜರಾಯಿ ಇಲಾಖೆಗೆ ಸೇರಿದ 281 ದೇವಸ್ಥಾನಗಳಿದ್ದು ಇವುಗಳಲ್ಲಿ ಎರಡು ಎ ಗ್ರೇಡ್, ಎರಡು ಬಿ ಗ್ರೇಡ್ ಹಾಗೂ 277 ಸಿ ಗ್ರೇಡ್ ದೇವಸ್ಥಾನಗಳಿವೆ. ಈ ದೇವಸ್ಥಾನಗಳಲ್ಲಿ ಇದುವೆರೆಗೆ ಸಂಸ್ಕೃತದಲ್ಲಿ ಮೊಳಗುತ್ತಿದ್ದ ಮಂತ್ರ ಘೋಷಗಳು ಜಿಲ್ಲಾಡಳಿತದ ಆದೇಶದ ಹಿನ್ನೆಲೆಯಲ್ಲಿ ಇನ್ನು ಮುಂದೆ ಇಂಪಾದ ಕನ್ನಡದಲ್ಲಿ ಕೇಳಿ ಬರಲಿದೆ.

(ವರದಿ : ಎಸ್​. ಎಂ. ನಂದೀಶ್)

First published: March 9, 2020, 3:42 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading