HOME » NEWS » State » WORM IN FEEDING GRAINS IN HD KOTE GOVT SCHOOL BISIYUTA

ಕಳಪೆ ಆಹಾರ ಪೂರೈಕೆ: ಹುಳು ಬಿದ್ದ ಬೇಳೆಯಲ್ಲಿಯೆ ಬಿಸಿಯೂಟ ತಯಾರಿ

ಸರ್ಕಾರದಿಂದ ಕಳಪೆ ಆಹಾರ ಪೂರೈಕೆಯಾಗುತ್ತಿದ್ದು, ಅಕ್ಕಿ, ಬೇಳೆಗಳಲ್ಲಿ ಹುಳುಗಳು ಓಡಾಡುತ್ತಿರುತ್ತವೆ. ಇವನ್ನು ಎಷ್ಟು ಶುಚಿ ಮಾಡಿದರೂ ಕೂಡ ಹುಳುಗಳನ್ನು ತೆಗೆಯಲು ಸಾಧ್ಯವಾಗುತ್ತಿಲ್ಲ. ಯಾವುದೇ ಪೋಷಕಾಂಶವನ್ನು ಹೊಂದಿರದ ಈ ಆಹಾರವನ್ನು ಮಕ್ಕಳು ತಿನ್ನಲು ಆಗದೇ ಬಿಸಾಡುವ ಪರಿಸ್ಥಿತಿ ಬಂದಿದೆ.

Seema.R | news18
Updated:January 31, 2019, 1:03 PM IST
ಕಳಪೆ ಆಹಾರ ಪೂರೈಕೆ: ಹುಳು ಬಿದ್ದ ಬೇಳೆಯಲ್ಲಿಯೆ ಬಿಸಿಯೂಟ ತಯಾರಿ
ಹುಳು ತುಂಬಿದ ಆಹಾರ ಧಾನ್ಯ
  • News18
  • Last Updated: January 31, 2019, 1:03 PM IST
  • Share this:
ಪುಟ್ಟಪ್ಪ, 

ಮೈಸೂರು (ಜ.31): ಅಕ್ಷರ ದಾಸೋಹದ ಯೋಜನೆ ಅಡಿ ಮಕ್ಕಳಿಗೆ ಹುಳು ತುಂಬಿದ ಕಳಪೆ ಆಹಾರವನ್ನು ಸರಬರಾಜು ಮಾಡಲಾಗುತ್ತಿದ್ದು, ಅದನ್ನೇ ತಿನ್ನುವಂತಹ ಪರಿಸ್ಥಿತಿ ಬಂದಿದೆ ಎಂದು ಜಿಲ್ಲೆಯ ಎಚ್​ಡಿ ಕೋಟೆಯ ಸರ್ಕಾರಿ ಶಾಲೆಯ ಮಕ್ಕಳು ಆರೋಪಿಸಿದ್ದಾರೆ

ಸರ್ಕಾರದಿಂದ ಕಳಪೆ ಆಹಾರ ಪೂರೈಕೆಯಾಗುತ್ತಿದ್ದು, ಅಕ್ಕಿ, ಬೇಳೆಗಳಲ್ಲಿ ಹುಳುಗಳು ಓಡಾಡುತ್ತಿರುತ್ತವೆ. ಇವನ್ನು ಎಷ್ಟು ಶುಚಿ ಮಾಡಿದರೂ ಕೂಡ ಹುಳುಗಳನ್ನು ತೆಗೆಯಲು ಸಾಧ್ಯವಾಗುತ್ತಿಲ್ಲ. ಯಾವುದೇ ಪೋಷಕಾಂಶವನ್ನು ಹೊಂದಿರದ ಈ ಆಹಾರವನ್ನು ಮಕ್ಕಳು ತಿನ್ನಲು ಆಗದೇ ಬಿಸಾಡುವ ಪರಿಸ್ಥಿತಿ ಬಂದಿದೆ.

ಇನ್ನು ಈ ಬಗ್ಗೆ ಅಕ್ಷರ ದಾಸೋಹದ ಅಧಿಕಾರಿಗಳ ಗಮನಕ್ಕೆ ತಂರಲಾಗಿದೆ.  ಆಹಾರ ಇಲಾಖೆಯಿಂದ ಪೂರೈಕೆಯಾಗುತ್ತಿರುವ ಆಹಾರವೇ ಇದಾಗಿದ್ದು, ನಾವೇನು ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹಾರಿಕೆ ಉತ್ತರ ನೀಡುತ್ತಾರೆ. ಇನ್ನು ಸಿಬ್ಬಂದಿ ವಿಧಿಇಲ್ಲ ಎಂಬಂತೆ ಇದೇ ಆಹಾರವನ್ನು ಮಧ್ಯಾಹ್ನ ಅಡುಗೆ ಮಾಡಿ ಮಕ್ಕಳಿಗೆ ನೀಡುವಂತೆ ಆಗಿದೆ. ಹಸಿದು ಬಂದ ಬಡ ಮಕ್ಕಳು ಕೂಡ ತಟ್ಟೆಯಲ್ಲಿ ಹುಳ ಕಂಡರೂ ಕಣ್ಮುಚ್ಚಿಕೊಂಡು ತಿನ್ನುತ್ತಾರೆ.

ಕೇವಲ ಆಹಾರ ಮಾತ್ರವಲ್ಲ ತೂಕದಲ್ಲಿ ಕೂಡ ಭಾರೀ ಮೋಸ ಆಗುತ್ತಿದೆ. ಆಹಾರ ಶಾಲೆಗೆ ಬರುವಾಗಲೇ ಅಕ್ಕಿ, ಬೇಳೆ ಮೂಟೆಗಳ ಮೇಲೆ ಹುಳು ಓಡಾಡುತ್ತಿರುತ್ತವೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಇಲ್ಲಿನ ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಇದೇ ರೀತಿ ಪರಿಸ್ಥಿತಿ ಉಂಟಾಗಿದೆ ಎನ್ನುತ್ತಾರೆ ಶಾಲೆ ಸಿಬ್ಬಂದಿ.

ಇದನ್ನು ಓದಿ: ಬರ ಪರಿಹಾರ ಅನುದಾನ ಬಿಡುಗಡೆಯಲ್ಲಿ ಕೇಂದ್ರ ಸರ್ಕಾರದಿಂದ ತಾರತಮ್ಯ; ಸಿಎಂ ಆರೋಪ

ಇನ್ನು ಈ ಕುರಿತು ಪ್ರತಿಕ್ರಿಯೆ ನೀಡಿದ ಇಲ್ಲಿನ ವಿದ್ಯಾರ್ಥಿ ಭೂಮಿಕಾ. ಶಾಲೆಯಲ್ಲಿನ ಅಡುಗೆ ಸಿಬ್ಬಂದಿಗಳು ನಮಗೆ ಸರಿಯಾಗಿ ಆಹಾರ ನೀಡುತ್ತಾರೆ. ಆದರೆ, ಸರ್ಕಾರದಿಂದಲೇ ಈ ರೀತಿ ಕಳಪೆ ಆಹಾರ ಸರಬರಾಜು ಆಗುತ್ತಿದೆ ಎಂದು ದೂರಿದರು.ಮತ್ತೊಬ್ಬ ವಿದ್ಯಾರ್ಥಿ ಮಾತನಾಡಿ, ನಮ್ಮ ಮನೆಯಲ್ಲಿ ಬಡತನ  ಇರುವುದರಿಂದ ಬೆಳಗ್ಗೆ ಊಟ ಮಾಡಿ ಬರುವುದಿಲ್ಲ. ಇಲ್ಲಿ ಬಂದರೆ ಈ ರೀತಿ ಊಟ ಕೊಡುತ್ತಾರೆ. ತಿನ್ನಲೂ ಆಗದೆ, ಬಿಡಲೂ ಆಗದ ಪರಿಸ್ಥಿತಿ ನಮ್ಮದಾಗಿದೆ. ಇನ್ನಾದರೂ ನಮ್ಮ ಕಷ್ಟ ಅರ್ಥಮಾಡಿಕೊಂಡು ಸರ್ಕಾರ ಉತ್ತಮ ಆಹಾರ ಧಾನ್ಯ ಪೂರೈಕೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

First published: January 31, 2019, 11:08 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories