ಚಾಕ್ಲೇಟ್ ಬಾರ್ ನಲ್ಲಿ (Chocolate Bar) ಹುಳುಗಳು (Warm) ಕಂಡು ಬಂದ ಹಿನ್ನೆಲೆ ತಯಾರಕ ಕಂಪನಿ ವಿರುದ್ಧ ಬೆಂಗಳೂರು (Bengaluru) ಮೂಲದ ವ್ಯಕ್ತಿಯೊಬ್ಬರು ನ್ಯಾಯಲಯದಲ್ಲಿ (Court) ಮೊಕದೊಮ್ಮೆ ಹೂಡಿದ್ದಾರೆ. ಮೊಕದೊಮ್ಮೆ ಹೂಡಿರುವ ವ್ಯಕ್ತಿ 20 ರಿಂದ 50 ಲಕ್ಷ ರೂ. ಪರಿಹಾರ ಕೋರಿದ್ದಾರೆ. ಪರಿಹಾರವಾಗಿ (Relief) ಕೇಳಿದ ಮೊತ್ತ ಹೆಚ್ಚಳವಾಗಿರೋದರಿಂದ ರಾಜ್ಯ ಗ್ರಾಹಕ ನ್ಯಾಯಲಯ ಸಂಪರ್ಕಿಸುವಂತೆ ಬೆಂಗಳೂರು ನಗರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಸೂಚನೆ ನೀಡಲಾಗಿದೆ. ಅಕ್ಟೋಬರ್ 8, 2016 ರಂದು, ಹೆಚ್ಎಸ್ಆರ್ ಲೇಔಟ್ (HSR Layout) ನಿವಾಸಿಯಾಗಿರುವ ಮುಖೇಶ್ ಕುಮಾರ್ ಎಂಬವರು ತಮ್ಮ ಏರಿಯಾದ 17ನೇ ಕ್ರಾಸ್ ನಲ್ಲಿರುವ ಎಂ.ಕೆ.ರಿಟೇಲ್ ಸೂಪರ್ ಮಾರ್ಕೆಟ್ ತೆರಳಿದ್ದರು.
ಅಂದು ಮುಖೇಶ್ ಕುಮಾರ್ 7 ಸಾವಿರ ರೂ. ಮೌಲ್ಯದ ವಸ್ತುಗಳನ್ನು ಖರೀದಿಸಿದ್ದರು. ಇದರಲ್ಲಿ ತಮ್ಮ ಸಂಬಂಧಿಗಾಗಿ ಎರಡು ಕ್ಯಾಡ್ಬರ್ರಿ ಚಾಕ್ಲೇಟ್ ಖರೀದಿ ಮಾಡಿದ್ದರು.
ಸಾಕ್ಷಿಯಾಗಿ ಫೋಟೋ ಕಳುಹಿಸಿದ್ದ ಮುಖೇಶ್ ಕುಮಾರ್
ಕೆಲವು ದಿನಗಳ ನಂತರ ಚಾಕ್ಲೇಟ್ ನಲ್ಲಿ ಹುಳುಗಳು ಕಂಡು ಬಂದಿದ್ದವು. ಹುಳುಗಳು ಕಾಣಿಸುತ್ತಿದ್ದಂತೆ ಚಾಕ್ಲೇಟ್ ತಯಾರಿಕ ಕಂಪನಿಯ ಗ್ರಾಹಕರ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿದ ಮುಖೇಶ್ ಕುಮಾರ್, ವಿಷಯ ತಿಳಿಸಿದ್ದಾರೆ. ಸಹಾಯವಾಣಿ ಸಿಬ್ಬಂದಿ ಚಾಕ್ಲೇಟ್ ಹಸ್ತಾಂತರಿಸುವಂತೆ ಕೇಳಿದ್ದಾರೆ. ಆದರೆ ಮುಖೇಶ್ ಕುಮಾರ್, ಸಾಕ್ಷಿಯಾಗಿ ಚಾಕ್ಲೇಟ್ ನಲ್ಲಿರುವ ಹುಳುವಿನ ಫೋಟೋ ತೆಗೆದು ಕಳುಹಿಸಿದ್ದಾರೆ.
ಇದನ್ನೂ ಓದಿ: Consumer Rights: ಗ್ರಾಹಕರ ಹಕ್ಕುಗಳ ಬಗ್ಗೆ ನೀವು ತಿಳಿದಿರಲೇಬೇಕಾದ ಮಾಹಿತಿ ಇಲ್ಲಿದೆ
ಕರೆ ಮಾಡಿದ ಬಳಿಕ ಸಿಬ್ಬಂದಿಯ ಸಮರ್ಪಕ ಉತ್ತರ ಸಿಗದಿದ್ದಾಗ, ಮುಖೇಶ್ ಕುಮಾರ್ ಅವರು ಅಕ್ಟೋಬರ್ 26, 2016 ರಂದು ಶಾಂತಿನಗರದಲ್ಲಿ ಬೆಂಗಳೂರು ನಗರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವನ್ನು ಸಂಪರ್ಕಿಸಿದ್ದಾರೆ.
ಕಂಪನಿ ಪರ ವಕೀಲರ ವಾದ ಏನಾಗಿತ್ತು?
ಕ್ಯಾಡ್ಬರಿ ಚಾಕ್ಲೇಟ್ ಗಳ ತಯಾರಕರಾದ ಮೊಂಡೆಲೆಜ್ ಇಂಡಿಯಾ ಫುಡ್ಸ್ ಪ್ರೈವೇಟ್ ಲಿಮಿಟೆಡ್ನ ಗುಣಮಟ್ಟದ ವಿಭಾಗದ ಮುಖ್ಯಸ್ಥರ ವಿರುದ್ಧ ಸೇವಾ ಕೊರತೆ ದೂರನ್ನು ಸಲ್ಲಿಸಿದರು. ದೂರಿನಲ್ಲಿ ಎಲ್ಲ ವಿವರಗಳನ್ನು ಮುಖೇಶ್ ಕುಮಾರ್ ವಿವರಿಸಿದ್ದರು. ಮೊಂಡೆಲೆಜ್ ಪರ ವಾದ ಮಂಡಿಸಿದ ವಕೀಲರು, ಈ ದೂರು ಕ್ಷುಲ್ಲಕವಾಗಿದೆ. 89 ರೂ ಮೌಲ್ಯದ ಚಾಕ್ಲೇಟ್ ಗೆ 20 ಲಕ್ಷ ರೂ ಪರಿಹಾರ ಕೇಳುವುದು ಅತಿಯಾದ ಹಣ ಗಳಿಸುವ ದುರಾಸೆಯಾಗಿದೆ ಎಂದು ವಾದಿಸಿದ್ದರು.
ನ್ಯಾಯಾಲಯದ ತೀರ್ಪಿನಲ್ಲಿ ಏನಿದೆ?
ವಾದ ಮತ್ತು ಪ್ರತಿವಾದಗಳ ನಂತರ, ನ್ಯಾಯಾಧೀಶರು ದೂರುದಾರರು ಖರೀದಿಸಿದ ಚಾಕೊಲೇಟ್ನಲ್ಲಿ ಹುಳುಗಳನ್ನು ಹೊಂದಿದ್ದಾರೆ ಎಂಬ ಅಂಶವನ್ನು ಒಪ್ಪಿಕೊಂಡಿದ್ದಾರೆ. ಹುಳುಗಳು ಇರೋದರ ಬಗ್ಗೆ ನೀಡಿರುವ ಫೋಟೋಗಳನ್ನು ಸಹ ನ್ಯಾಯಾಲಯ ಒಪ್ಪಿಕೊಂಡಿದೆ. ಆದ್ರೆ ದೂರದಾರ 20 ರಿಂದ 50 ಲಕ್ಷ ರೂ. ಕೇಳಿದ್ದಾರೆ. ಆದ್ರೆ ನಗರ ಗ್ರಾಹಕರ ವೇದಿಕೆ ಹಣಕಾಸಿನ ಮಿತಿ 5 ಲಕ್ಷ ರೂ.ವರೆಗೆ ಮಾತ್ರ ಇದೆ. ಏಪ್ರಿಲ್ 8, 2022 ರಂದು ನೀಡಿದ ತೀರ್ಪಿನಲ್ಲಿ ದೂರುದಾರರು ಬೆಂಗಳೂರಿನ ರಾಜ್ಯ ಗ್ರಾಹಕರ ವೇದಿಕೆಯ ಮುಂದೆ ಪ್ರಕರಣವನ್ನು ಪ್ರಸ್ತುತಪಡಿಸಲು ಸೂಚಿಸಲಾಯಿತು.
ಜಾಮೂನ್ ಬಟ್ಟಲಿನಲ್ಲಿ ಸತ್ತ ಜಿರಳೆ: ಬೆಂಗಳೂರಿನ ವ್ಯಕ್ತಿಗೆ 55 ಸಾವಿರ ಪರಿಹಾರ ನೀಡಲು ಹೋಟೆಲ್ಗೆ ಆದೇಶಿಸಿದ ಕೋರ್ಟ್
ಬೆಂಗಳೂರಿನ ವಕೀಲರೊಬ್ಬರು ಹೋಟೆಲ್ಗೆ ಹೋದಾಗ ತಾನು ಆರ್ಡರ್ ಮಾಡಿದ್ದ ಜಾಮೂನ್ ಬಟ್ಟಲಿನಲ್ಲಿ ಸತ್ತ ಜಿರಳೆ ಪತ್ತೆಯಾಗಿತ್ತು. ನಂತರ, ಆ ವಕೀಲರು ಕಲಬೆರಕೆ ಆಹಾರ ನೀಡಿದ್ದಕ್ಕಾಗಿ ನಗರದ ಗ್ರಾಹಕರ ನ್ಯಾಯಾಲಯದಲ್ಲಿ ಆ ಹೋಟೆಲ್ ವಿರುದ್ಧ ಕೇಸ್ ಹಾಕಿ 55,000 ರೂಪಾಯಿ ಪರಿಹಾರ ಪಡೆದಿದ್ದಾರೆ.
ಇದನ್ನೂ ಓದಿ: Court Order: ಅಧಿಕ ರಕ್ತದೊತ್ತಡ, ಮಧುಮೇಹ ಸಮಸ್ಯೆ ಹಿನ್ನೆಲೆ ಪಾಲಿಸಿದಾರರಿಗೆ ಹಣ ಪಾವತಿಸದ ಖಾಸಗಿ ವಿಮೆ ಕಂಪನಿಗೆ ದಂಡ ವಿಧಿಸಿದ ನ್ಯಾಯಾಲಯ
ತೀರ್ಪಿನ ವಿರುದ್ಧ ಉಪಾಹಾರ ಗೃಹದ ಮಾಲೀಕರು ಮೇಲ್ಮನವಿ ಸಲ್ಲಿಸಿದರೂ ಸಹ ರಾಜ್ಯ ಗ್ರಾಹಕರ ವೇದಿಕೆಯು ಬೆಂಗಳೂರಿನ ಗ್ರಾಹಕರ ನ್ಯಾಯಾಲಯ ನೀಡಿದ್ದ ಆದೇಶವನ್ನು ಎತ್ತಿಹಿಡಿಯಿತು. ಹೋಟೆಲ್ ತನ್ನ ಲೋಪಗಳಿಗೆ ಗ್ರಾಹಕರಿಗೆ ಪಾವತಿಸಲೇಬೇಕೆಂದು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ