MIT v/s IISc Bengaluru: ವಿಶ್ವದ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳ ನಡುವಿನ ವ್ಯತ್ಯಾಸ ಏನು? ಇಲ್ಲಿದೆ ವಿವರ

ಬೆಂಗಳೂರಿನಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISc) ಭಾರತದ ಅತ್ಯುತ್ತಮ ಉನ್ನತ ಶಿಕ್ಷಣ ಸಂಸ್ಥೆಯಾಗಿ ಹೊರಹೊಮ್ಮಿದೆ. ಇತ್ತೀಚಿನ ಅಸ್ಕರ್ ಕ್ಯೂಎಸ್ ವರ್ಲ್ಡ್ ಯೂನಿವರ್ಸಿಟಿ ಶ್ರೇಯಾಂಕದಲ್ಲಿ 155ನೇ ಸ್ಥಾನವನ್ನು ಪಡೆದುಕೊಂಡು ಭಾರತದ ಅಗ್ರ ಶಿಕ್ಷಣ ಸಂಸ್ಥೆಯಾಗಿದೆ.

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಬೆಂಗಳೂರು

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಬೆಂಗಳೂರು

  • Share this:
ಬೆಂಗಳೂರಿನಲ್ಲಿರುವ (Bengaluru) ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISc) ಭಾರತದ (India) ಅತ್ಯುತ್ತಮ ಉನ್ನತ ಶಿಕ್ಷಣ ಸಂಸ್ಥೆಯಾಗಿ ಹೊರಹೊಮ್ಮಿದೆ. ಇತ್ತೀಚಿನ ಅಸ್ಕರ್ ಕ್ಯೂಎಸ್ ವರ್ಲ್ಡ್ ಯೂನಿವರ್ಸಿಟಿ ಶ್ರೇಯಾಂಕದಲ್ಲಿ 155ನೇ ಸ್ಥಾನವನ್ನು ಪಡೆದುಕೊಂಡು ಭಾರತದ ಅಗ್ರ ಶಿಕ್ಷಣ ಸಂಸ್ಥೆಯಾಗಿದೆ. ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್, ಬೆಂಗಳೂರು 200 ವಿಶ್ವವಿದ್ಯಾನಿಲಯಗಳಲ್ಲಿ ವೇಗವಾಗಿ ಬೆಳೆಯುತ್ತಿರುವ ದಕ್ಷಿಣ ಏಷ್ಯಾದ ವಿಶ್ವವಿದ್ಯಾಲಯವಾಗಿದ್ದು (University), ಟಾಪ್ 150ಕ್ಕೆ ಹತ್ತಿರದಲ್ಲಿದೆ. ಈ ವರ್ಷ 31 ಸ್ಥಾನಗಳನ್ನು ಹೆಚ್ಚಿಸಿಕೊಂಡು 155 ಸ್ಥಾನಕ್ಕೆ ತಲುಪಿದೆ. ಈ ಪಟ್ಟಿಯಲ್ಲಿ ಎಂಐಟಿ, ಕೇಂಬ್ರಿಡ್ಜ್, ಸ್ಟ್ಯಾನ್ಫೋರ್ಡ್, ಆಕ್ಸ್ಫರ್ಡ್ ಮತ್ತು ಹಾರ್ವರ್ಡ್ ವಿಶ್ವವಿದ್ಯಾಲಯ ಕ್ರಮವಾಗಿ ಮೊದಲೈದು ಸ್ಥಾನ ಪಡೆದುಕೊಂಡಿದ್ದವು.

155ನೇ ಸ್ಥಾನದಲ್ಲಿರುವ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್
ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸತತ 11ನೇ ವರ್ಷವೂ ಸಹ ವಿಶ್ವದ ನಂಬರ್ ಒನ್ ಯುನಿವರ್ಸಿಟಿಯಾಗಿ ದಾಖಲೆ ಬರೆದಿದೆ. ಮತ್ತು ದಿ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯವು ಎರಡನೇ ಸ್ಥಾನದಲ್ಲಿದ್ದರೆ, ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯ ಮೂರನೇ ಸ್ಥಾನದಲ್ಲಿದೆ. IISc ಬೆಂಗಳೂರು ಸೇರಿ ಭಾರತದ 8 ಶಿಕ್ಷಣ ಸಂಸ್ಥೆಗಳು ಪಟ್ಟಿಯಲ್ಲಿವೆ. IISc ಬೆಂಗಳೂರು, ಐಐಟಿ ಬಾಂಬೆ, ಐಐಟಿ ದೆಹಲಿ, ಐಐಟಿ ಕಾನ್ಪುರ, ಐಐಟಿ ಮದ್ರಾಸ್, ಬೆಂಗಳೂರಿನ ನಂತರ ಭಾರತದ ಅಗ್ರ ಶಿಕ್ಷಣ ಸಂಸ್ಥೆಗಳಾಗಿವೆ.

ಹಾಗಾದರೆ ಅಸ್ಕರ್ ಕ್ಯೂಎಸ್ ವರ್ಲ್ಡ್ ಯೂನಿವರ್ಸಿಟಿ ಶ್ರೇಯಾಂಕದಲ್ಲಿ ಮೊದಲ ಸ್ಥಾನದಲ್ಲಿರುವ ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು 155ನೇ ಸ್ಥಾನದಲ್ಲಿರುವ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ನಡುವೆ ಇರುವ ಹೋಲಿಕೆಗಳೇನು? IIScಗಿಂತ ಮ್ಯಾಸಚೂಸೆಟ್ಸ್ ಹೇಗೆ ಉತ್ತಮವಾಗಿದೆ ಎಂಬುದನ್ನು ಕೆಲವು ದತ್ತಾಂಶಗಳಿಂದ ತಿಳಿದುಕೊಳ್ಳೋಣ. ಅದಕ್ಕೂ ಮುನ್ನ ಇನ್ಸ್ಟಿಟ್ಯೂಟ್ನ ಹಿನ್ನೆಲೆ ಬಗ್ಗೆ ಕಣ್ಣಾಡಿಸೋಣ.

ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ
ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯು ಒಂದು ಖಾಸಗಿ ಸಂಶೋಧನಾ ವಿಶ್ವವಿದ್ಯಾಲಯವಾಗಿದ್ದು ಮ್ಯಾಸಚೂಸೆಟ್ಸ್ನ ಕೇಂಬ್ರಿಜ್ನಲ್ಲಿ ಇದೆ. 1861ರಲ್ಲಿ ಪ್ರಾರಂಭವಾದಾಗಿನಿಂದ MITಯು ಶೈಕ್ಷಣಿಕ ಕೇಂದ್ರವಾಗಿ ವಿಕಸನಗೊಂಡಿದೆ. ಐದು ಶಾಲೆಗಳು ಹಾಗೂ ಒಂದು ಕಾಲೇಜನ್ನು ಹೊಂದಿದ್ದು, ಅವು ಒಟ್ಟಾರೆಯಾಗಿ 32 ಶೈಕ್ಷಣಿಕ ವಿಭಾಗಗಳನ್ನು ಹೊಂದಿವೆ.

ಇದನ್ನೂ ಓದಿ: Special Gift: ನವವಧುವಿಗೆ ವಿಶೇಷ ಗಿಫ್ಟ್ ಕೊಟ್ಟ ಬಿಜೆಪಿ ಸಂಸದ! ಮದುಮಗಳು ಖುಷ್

ವೈಜ್ಞಾನಿಕ ಮತ್ತು ತಂತ್ರಜ್ಞಾನದ ಸಂಶೋಧನೆಗೆ ಬಲವಾದ ಒತ್ತು ನೀಡುವುದು ಇವುಗಳ ಉದ್ದೇಶ. ಇದು ಸುಮಾರು 1000 ಅಧ್ಯಾಪಕ ಸದಸ್ಯರನ್ನು ಮತ್ತು 11,000ಕ್ಕೂ ಹೆಚ್ಚು ಪದವೀಧರರನ್ನು ಹೊಂದಿದೆ. ಮತ್ತು 12 ವಸ್ತುಸಂಗ್ರಾಹಲಯಗಳು ಕ್ಯಾಂಪಸ್ ನಲ್ಲಿವೆ. ಈ ವಸ್ತುಸಂಗ್ರಹಾಲಯಕ್ಕೆ ಪ್ರತಿ ವರ್ಷ ಸುಮಾರು 1,25,000 ಸಂದರ್ಶಕರು ಭೇಟಿ ನೀಡುತ್ತಾರೆ. MIT ಹಳೆಯ ವಿದ್ಯಾರ್ಥಿಗಳು 30,000ಕ್ಕೂ ಹೆಚ್ಚು ಕಂಪನಿಗಳನ್ನು ಪ್ರಾರಂಭಿಸಿದ್ದಾರೆ, 4.6 ಮಿಲಿಯನ್ ಉದ್ಯೋಗಗಳನ್ನು ಸೃಷ್ಟಿಸಿದ್ದಾರೆ ಮತ್ತು ವಾರ್ಷಿಕ ಆದಾಯವಾಗಿ ಸುಮಾರು $1.9 ಟ್ರಿಲಿಯನ್ ಅನ್ನು ಸಂಪಾದಿಸುತ್ತಿದ್ದಾರೆ.

ಎಂಐಟಿ ಮತ್ತು ಐಐಎಸ್ಸಿ ಎರಡೂ ಯಾವ ವಿಭಾಗದಲ್ಲಿ ಎಷ್ಟೆಷ್ಟು ಪ್ರಗತಿಯಲ್ಲಿದೆ ಎಂಬುವುದನ್ನು ನೋಡುವುದಾದರೆ,

ವಿಭಾಗ ಎಂಐಟಿ ಐಐಎಸ್ಸಿ

  1. ಶೈಕ್ಷಣಿಕ ಖ್ಯಾತಿ 100%- 37.6%

  2. ಉದ್ಯೋಗ ದರ 100%- 22.9%

  3. ಅಧ್ಯಾಪಕ ವಿದ್ಯಾರ್ಥಿ 100%- 56.3%

  4. ಅಧ್ಯಾಪಕರು 100%- 100%


ಈ ಮೇಲಿನ ವಿಭಾಗಗಳಲ್ಲಿ ಭಾಗಶಃ ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಎಲ್ಲದರಲ್ಲೂ ಉತ್ತಮವಾಗಿದ್ದು, ಬೆಂಗಳೂರು ಶಿಕ್ಷಣ ಸಂಸ್ಥೆ ಅಜಗಜಾಂತರ ವ್ಯತ್ಯಾಸವನ್ನು ಬರೆದಿದೆ. ಎಂಐಟಿ ಎಲ್ಲದರಲ್ಲೂ ಪ್ರತಿಶತ ನೂರಕ್ಕೆ ನೂರು ಪ್ರಗತಿ ಸಾಧಿಸಿದ್ದು, ಐಐಎಸ್ಸಿ ಪ್ರಮಾಣ ಕೊಂಚ ಇಳಿಮುಖವಾಗಿದೆ.

ಇದನ್ನೂ ಓದಿ: SSLC ಪೂರಕ ಪರೀಕ್ಷೆ ವೇಳಾಪಟ್ಟಿ ಪ್ರಕಟ; ಜೂನ್ 27 ರಿಂದ ಜುಲೈ 4ರವರೆಗೆ ಎಕ್ಸಾಂ

ಅಂತರಾಷ್ಟ್ರೀಯ ಅಧ್ಯಾಪಕರ ಅನುಪಾತ- ಇದರಲ್ಲಿ ಎಂಐಟಿಯ ಪಾಲು 11.7% ಇದ್ದರೆ, ಐಐಎಸ್ಸಿ 100 ಪ್ರತಿಶತ ತಲುಪಿದೆ. ಮತ್ತು ಅಂತರರಾಷ್ಟ್ರೀಯ ವಿದ್ಯಾರ್ಥಿ ಅನುಪಾತದ ವಿಭಾಗದಲ್ಲಿ ಎಂಐಟಿ 1.9 ಇದ್ದರೆ ಕ್ರಮವಾಗಿ , ಐಐಎಸ್ಸಿ 90 ಪ್ರತಿಶತ ಇದೆ. ಇನ್ನೂ ಅಂತಾರಾಷ್ಟ್ರೀಯ ಸಂಶೋಧನಾ ಜಾಲ ವಿಭಾಗದಲ್ಲಿ ಎರಡೂ ಸಂಸ್ಥೆಗಳು ಕ್ರಮವಾಗಿ 46 ಮತ್ತು 96.1% ಇದೆ. ಉದ್ಯೋಗದ ಫಲಿತಾಂಶಗಳನ್ನು ನೋಡುವುದಾದರೆ ಎಂಐಟಿ 14.8 ಇದ್ದರೆ ಐಐಎಸ್ಸಿ 100% ಇದೆ.
Published by:Ashwini Prabhu
First published: