Emirates A380: ಬೆಂಗಳೂರಿಗೆ ಬರಲಿದೆ ವಿಶ್ವದ ಅತಿದೊಡ್ಡ ವಿಮಾನ! ಇದು ಹಾರುವ ಸ್ವರ್ಗ!

ವಿಶ್ವದ ಅತಿ ದೊಡ್ಡ ವಿಮಾನ ಎಂದೇ ಖ್ಯಾತಿ ಪಡೆದ ದುಬೈ ಮೂಲದ ಏರ್‌ಲೈನ್‌ ಎಮಿರೇಟ್ಸ್ A380 ಇನ್ನೇನು ಅಕ್ಟೋಬರ್‌ 30 ರಂದು ಬೆಂಗಳೂರಿನ ಕೆಂಪೆಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದೆ. ಈ ಮೂಲಕ ಇನ್ನು ದುಬೈ-ಬೆಂಗಳೂರು ವಿಮಾನ ಸೇವೆ ಸಹ ಅರಂಭವಾಗಲಿದೆ. ಈ ಎಮಿರೇಟ್ಸ್‌ A380 ವಿಮಾನವು ಜಗತ್ತಿನ ಅದ್ಭುತ ಎಂದು ಕರೆಯುವುದು ಸೂಕ್ತವೆನಿಸುತ್ತದೆ.

ಎಮಿರೇಟ್ಸ್ A380

ಎಮಿರೇಟ್ಸ್ A380

  • Share this:
ವಿಶ್ವದ ಅತಿ ದೊಡ್ಡ ವಿಮಾನ ಎಂದೇ ಖ್ಯಾತಿ ಪಡೆದ ದುಬೈ ಮೂಲದ ಏರ್‌ಲೈನ್‌ ಎಮಿರೇಟ್ಸ್ A380 ಇನ್ನೇನು ಅಕ್ಟೋಬರ್‌ 30 ರಂದು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (Kempegowda International Airport) ಬಂದಿಳಿಯಲಿದೆ. ಈ ಮೂಲಕ ಇನ್ನು ದುಬೈ-ಬೆಂಗಳೂರು ವಿಮಾನ ಸೇವೆ ಸಹ ಅರಂಭವಾಗಲಿದೆ. ಈ ಎಮಿರೇಟ್ಸ್‌ A380 (Emirates A380) ವಿಮಾನವು ಜಗತ್ತಿನ ಅದ್ಭುತ ಎಂದು ಕರೆಯುವುದು ಸೂಕ್ತವೆನಿಸುತ್ತದೆ. ಏಕೆಂದರೆ ಇದು ವಿಶ್ವದ ಅತಿ ದೊಡ್ಡ ವಿಮಾನವಾಗಿರುವುದರಿಂದ, ಇದರಲ್ಲಿ ಎಲ್ಲಾ ಐಷಾರಾಮಿ ಸೌಲಭ್ಯಗಳು (Luxury Facility) ಮತ್ತು ಸೌಕರ್ಯಗಳಿರುತ್ತವೆ. ದುಬೈ ಮೂಲದ ಏರ್‌ಲೈನ್‌ ಕಂಪನಿಯಾದ ಎಮಿರೇಟ್ಸ್ ತನ್ನ ಏರ್‌ಲೈನ್ಸ್ ಅನ್ನು ದುಬೈ-ಬೆಂಗಳೂರು (Dubai- Bengaluru) ಮಾರ್ಗದಲ್ಲಿ ಅಕ್ಟೋಬರ್ 30, 2022 ರಿಂದ ಆರಂಭಿಸಲಿದೆ ಎಂದು ಹೇಳಿಕೆ ಬಿಡುಗಡೆ ಮಾಡಿದೆ.

ಇಲ್ಲಿಯವರೆಗೆ ಎಮಿರೇಟ್ಸ್ ಏರ್‌ಲೈನ್ಸ್ ಬೋಯಿಂಗ್ 777 ವಿಮಾನದ ಮೂಲಕ ದುಬೈ- ಬೆಂಗಳೂರು ನಡುವೆ ಸಂಪರ್ಕ ನಡೆಯುತ್ತಿತ್ತು. ಆದ್ದರಿಂದ, A380 ಬೆಂಗಳೂರಿನಲ್ಲಿ ಭೂಸ್ಪರ್ಶ ಮಾಡುತ್ತಿರುವ ಮೊದಲ ವಿಶ್ವದ ಅತಿ ದೊಡ್ಡ ಪ್ರಯಾಣಿಕ ವಿಮಾನವಾಗಿದೆ. ಇದರಿಂದ ದಕ್ಷಿಣ ಭಾರತದಲ್ಲಿ ಭೂಸ್ಪರ್ಶ ಮಾಡುತ್ತಿರುವ ಮೊಟ್ಟ ಮೊದಲ ಅತಿ ದೊಡ್ಡ ವಿಮಾನ ಇದಾಗಿದೆ. ಇದು ಇಡೀ ದಕ್ಷಿಣ ಭಾರತಕ್ಕೆ ಒಂದು ಮೈಲಿಗಲ್ಲು ಎಂದು ಹೇಳಬಹುದು.

ಹಾಗಿದ್ರೆ ಈ ವಿಶ್ವದ ಅತಿ ದೊಡ್ಡ ವಿಮಾನ ಹೇಗಿರುತ್ತೆ? ಅದರ ಒಳಗಡೆ ಏನೆಲ್ಲ ವ್ಯವಸ್ಥೆಗಳಿವೆ? ಇದಕ್ಕೆ ಏಕೆ ವಿಶ್ವದ ಅತಿ ದೊಡ್ಡ ವಿಮಾನ ಎಂದು ಕರೆಯುತ್ತಾರೆ? ಈ ವಿಮಾನದ ವಿಶೇಷತೆ ಏನು? ಇನ್ನು ಹತ್ತು ಹಲವಾರು ಪ್ರಶ್ನೆಗಳಿಗೆ ಈ ಲೇಖನದಲ್ಲಿ ಇಂದು ಉತ್ತರವನ್ನು ಪಡೆಯೋಣ. ಮತ್ತಷ್ಟು ಮಾಹಿತಿಗಾಗಿ ಮುಂದೆ ಓದಿ.

ಎಮಿರೇಟ್ಸ್‌ A380 ವಿಮಾನದ ಗಾತ್ರವೆಷ್ಟು?
ವಿಶ್ದ ಅತಿ ದೊಡ್ಡ ವಿಮಾನ ಎಂದರೆ ಕೇಳಬೇಕೆ. ದೊಡ್ಡ ಗಾತ್ರದಲ್ಲಿಯೇ ಈ ವಿಮಾನ ತಯಾರಾಗಿರುತ್ತದೆ. ಈ ವಿಮಾನವು 510 ರಿಂದ 575 ಟನ್‌ಗಳಷ್ಟು ತೂಕವನ್ನು ಹೊಂದಿದೆ. ಇದರ ಉದ್ದ 72.7 ಮೀಟರ್ ಮತ್ತು ಎತ್ತರ 24.1 ಮೀಟರ್ ಆಗಿದೆ. A380 ವಿಮಾನವು ಬೋಯಿಂಗ್ 777 ವಿಮಾನಕ್ಕಿಂತ 45 % ರಷ್ಟು ಹೆಚ್ಚು ಆಸನಗಳ ಸಾಮರ್ಥ್ಯವನ್ನು ಹೊಂದಿದೆ.

ಇದನ್ನೂ ಓದಿ:  Aviation Disaster: 37,000 ಅಡಿ ಎತ್ತರದಲ್ಲಿ ವಿಮಾನ ಹಾರುವಾಗಲೇ ನಿದ್ರಿಸಿದ ಪೈಲಟ್​ಗಳು!

ಈ ವಿಮಾನದಲ್ಲಿ ಒಂದು ಬಾರಿ ಗರಿಷ್ಠ ಎಂದರೆ 853 ಮಂದಿ ಪ್ರಯಾಣಿಸಬಹುದಾಗಿದೆ. ಒಂದು ಬಾರಿಗೆ 3 ಸಾವಿರ ಸೂಟ್‌ಕೇಸ್‌ಗಳನ್ನು ತೆಗದುಕೊಂಡು ಹೋಗುವ ಸಾಮರ್ಥ್ಯವನ್ನು ಹೊಂದಿದೆ. ಈ ಕುರಿತು ಯುಎಇ ವಿಮಾನಯಾನ ಸಂಸ್ಥೆ ಎಮಿರೇಟ್ಸ್‌ ಹೇಳಿಕೆ ಬಿಡುಗಡೆ ಮಾಡಿದೆ.

ಇದರ ಹಾರಾಟದ ಸಾಮರ್ಥ್ಯ?
ವಿಶ್ವದ ಅತಿ ದೊಡ್ಡ ವಿಮಾನವಾದ ಎಮಿರೇಟ್ಸ್ A380 ನಲ್ಲಿ ಒಟ್ಟು 118 ಯೂನಿಟ್‌ಗಳಿವೆ. ಈ ವಿಮಾನವು ಈಗಾಗಲೇ ಒಂದು ಮಿಲಿಯನ್‌ ಕೋಟಿ ಕಿ.ಮೀ. ಗಿಂತ ಹೆಚ್ಚು ಹಾರಾಟ ನಡೆಸಿದೆ. 2018 ರಿಂದ ಇಲ್ಲಿಯವರೆಗೆ ಈ ವಿಮಾನದಲ್ಲಿ ಪ್ರಯಾಣಿಸಿದವರ ಸಂಖ್ಯೆ 105 ಮಿಲಿಯನ್‌ ಪ್ರಯಾಣಿಕರು ಎಂದರೆ ನಿಜಕ್ಕೂ ಅಚ್ಚರಿ ಎನಿಸುತ್ತದೆ.

ಇದನ್ನೂ ಓದಿ: Viral Video: ಒಟ್ಟಿಗೆ ಆಕಾಶದಲ್ಲಿ ಹಾರಿದ ತಾಯಿ ಮಗಳು! ಇಲ್ಲಿದೆ ನೋಡಿ ಪೈಲೆಟ್ ಅಮ್ಮ ಮಗಳ ರೋಮಾಂಚಕ ಕಥೆ

ಈ ವಿಮಾನದ ಅತಿ ಕಡಿಮೆ ದೂರದ ಹಾರಾಟ ಎಂದರೆ ದುಬೈ ಮತ್ತು ಸೌದಿ ಅರೇಬಿಯಾದ ಜೆಡ್ಡಾ ನಡುವೆ 1,700 ಕಿ.ಮೀ ಹಾರಾಟ ನಡೆಸಿದರೆ, ಅತಿ ಹೆಚ್ಚು ದೂರದ ಹಾರಾಟ ಎಂದರೆ ಅದು ದುಬೈ ಮತ್ತು ನ್ಯೂಜಿಲೆಂಡ್‌ನ ಆಕ್ಲೆಂಡ್‌ ನಡುವೆ 14,193 ಕಿ.ಮೀ. ದೂರದ ಹಾರಾಟ ನಡೆಸಿದೆ. ಈ ವಿಮಾನವು ಭೂಭಾಗದಿಂದ 43,100 ಅಡಿ ಎತ್ತರದಲ್ಲಿ ಹಾರುತ್ತದೆ.

ಈ ವಿಮಾನದಲ್ಲಿರುವ ಸೌಕರ್ಯಗಳೇನು?
ವಿಮಾನದ ಫಸ್ಟ್‌ ಕ್ಲಾಸಿನಲ್ಲಿ ಖಾಸಗಿ ಕೊಠಡಿಗಳು ಮತ್ತು ಶವರ್ ಸ್ಪಾಗಳಿಂದ ಹಿಡಿದು ಬಿಸಿನೆಸ್ ಕ್ಲಾಸ್‌ನಲ್ಲಿ ಫ್ಲಾಟ್-ಬೆಡ್ ಸೀಟ್‌ಗಳು ಇವೆ. ಈ ವಿಮಾನದಲ್ಲಿ ವೈರ್‌ಲೆಸ್ ಬ್ಲೂಟೂತ್ ಸಂಪರ್ಕ ಮತ್ತು ಎಕಾನಮಿ ಕ್ಲಾಸ್‌ನಲ್ಲಿ ಉತ್ತಮ ಬೆಳಕಿನ ವಿನ್ಯಾಸವನ್ನು ಈ ಎಮಿರೇಟ್ಸ್ A380 ವಿಮಾನ ಹೊಂದಿದೆ. ಇದು ಪ್ರಯಾಣದ ಉದ್ದಕ್ಕೂ ವೈ-ಫೈ ಸೌಕರ್ಯವನ್ನು ಪ್ರಯಾಣಿಕರಿಗೆ ನೀಡುತ್ತದೆ. ಇದರಲ್ಲಿ ವೈಯಕ್ತಿಕ ಮಿನಿ ಬಾರ್‌, ಖಾಸಗಿ ಸಿನಿಮಾ ಥೇಯಟರ್‌ ಹೀಗೆ ಹತ್ತು ಹಲವು ಹೈ-ಫೈ ಸೌಕರ್ಯಗಳನ್ನು ಹೊಂದಿದೆ.
Published by:Ashwini Prabhu
First published: