• Home
  • »
  • News
  • »
  • state
  • »
  • ಕನ್ನಡದಲ್ಲಿ ದೇವರ ಪೂಜೆ ವಿಧಿವಿಧಾನ ಕುರಿತು ಕಾರ್ಯಾಗಾರ: ಚಾಮರಾಜನಗರ ಜಿಲ್ಲೆಯ ದೇವಸ್ಥಾನಗಳಲ್ಲಿ ಮೊಳಗಲಿದೆಯಾ ಕನ್ನಡ ಡಿಂಡಿಮ?

ಕನ್ನಡದಲ್ಲಿ ದೇವರ ಪೂಜೆ ವಿಧಿವಿಧಾನ ಕುರಿತು ಕಾರ್ಯಾಗಾರ: ಚಾಮರಾಜನಗರ ಜಿಲ್ಲೆಯ ದೇವಸ್ಥಾನಗಳಲ್ಲಿ ಮೊಳಗಲಿದೆಯಾ ಕನ್ನಡ ಡಿಂಡಿಮ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಜಿಲ್ಲೆಯ ಮುಜರಾಯಿ ದೇವಸ್ಥಾನಗಳ ಅರ್ಚಕರು ಹಾಗೂ ಪುರೋಹಿತರಿಗೆ   ಕನ್ನಡದಲ್ಲಿಯೇ ಮಂತ್ರೋಚ್ಛಾರಣೆ, ಅರ್ಚನೆ,  ಸಂಕಲ್ಪ, ಪೂಜಾ ವಿಧಿವಿಧಾನಗಳನ್ನು ಹೇಗೆ ನಡೆಸಬೇಕು ಎಂಬುದರ ಬಗ್ಗೆ ವಿಶೇಷ ತರಬೇತಿ ಕಾರ್ಯಾಗಾರ ನಡೆಸಲಾಗಿದೆ.

  • Share this:

ಚಾಮರಾಜನಗರ (ನ.30) ರಾಜ್ಯದಲ್ಲಿಯೇ ಮೊದಲ ಬಾರಿಗೆ  ಜಿಲ್ಲೆಯ ಮುಜರಾಯಿ ದೇವಸ್ಥಾನಗಳಲ್ಲಿ ಸಂಸ್ಕೃತ ಬದಲು ಕನ್ನಡ ಡಿಂಡಿಮ ಮೊಳಗಿಸಲು ಜಿಲ್ಲಾಡಳಿತ ಮುಂದಾಗಿದೆ.  ಜಿಲ್ಲಾಡಳಿತದಿಂದ ಕಳೆದ 8 ತಿಂಗಳ ಹಿಂದೆಯೇ ಈ ಕುರಿತು ಆದೇಶ ಹೊರಬಿದ್ದಿದ್ದರೂ ಕೊರೋನಾ ಹಿನ್ನಲೆಯಲ್ಲಿ  ನೆನಗುದಿಗೆ ಬಿದ್ದಿತ್ತು. ಇದೀಗ ಈ ಆದೇಶವನ್ನು ಅನುಷ್ಠಾನಗೊಳಿಸುವ ಹಿನ್ನಲೆಯಲ್ಲಿ ಜಿಲ್ಲೆಯ ಮುಜರಾಯಿ ದೇವಸ್ಥಾನಗಳ ಅರ್ಚಕರು ಹಾಗೂ ಪುರೋಹಿತರಿಗೆ   ಕನ್ನಡದಲ್ಲಿಯೇ ಮಂತ್ರೋಚ್ಛಾರಣೆ, ಅರ್ಚನೆ,  ಸಂಕಲ್ಪ, ಪೂಜಾ ವಿಧಿವಿಧಾನಗಳನ್ನು ಹೇಗೆ ನಡೆಸಬೇಕು ಎಂಬುದರ ಬಗ್ಗೆ ವಿಶೇಷ ತರಬೇತಿ ಕಾರ್ಯಾಗಾರ ನಡೆಸಲಾಗಿದೆ.  ಹರಟೆ ಖ್ಯಾತಿಯ ಹಿರೇಮಗಳೂರು ಕಣ್ಣನ್ ಅವರು ಕನ್ನಡದಲ್ಲಿ ಪೂಜೆ ವಿಧಿವಿಧಾನಗಳನ್ನು ನಡೆಸುವ ಬಗ್ಗೆ ಅರ್ಚಕರು ಹಾಗು ಪುರೋಹಿತರಿಗೆ ತರಬೇತಿ ನೀಡಿದರು. ಸಾಮಾನ್ಯವಾಗಿ ದೇವಸ್ಥಾನಗಳಲ್ಲಿ ಸಂಸ್ಕೃತದಲ್ಲೇ ಮಂತ್ರಪಠಣ, ಅರ್ಚನೆ, ಸಂಕಲ್ಪ, ವಿವಿಧ ಪೂಜಾಕೈಂಕರ್ಯಗಳನ್ನು ನಡೆಸಲಾಗುತ್ತದೆ. ಆದರೆ, ದೇವಸ್ಥಾನಕ್ಕೆ ಹೋಗುವ  ಶೇಕಡಾ 99  ರಷ್ಟು ಮಂಂದಿಗೆ ಸಂಸ್ಕೃತ ಬರುವುದಿಲ್ಲ. ಹಾಗಾಗಿ ಅರ್ಚಕರು ಹೇಳುವ ಮಂತ್ರವಾಗಲಿ, ಭಕ್ತರ ಪರವಾಗಿ  ಮಾಡುವ ಸಂಕಲ್ಪವಾಗಲಿ, ಅರ್ಚನೆಯಾಗಲಿ, ಶ್ಲೋಕಗಳ ಅರ್ಥವಾಗಲಿ ತಿಳಿಯುವುದಿಲ್ಲ. ಅವರು ಯಾವ ರೀತಿ ತಮ್ಮ ಪರ ದೇವರಿಗೆ ಸಂಕಲ್ಪ ,ಅರ್ಚನೆ ,ಪ್ರಾರ್ಥನೆ ಮಾಡುತ್ತಿದ್ದಾರೆ ಎಂಬುದು ಭಕ್ತರಿಗೂ ತಿಳಿಯುವಂತಾಗಬೇಕು ಎಂಬುದು ತಮ್ಮ  ಉದ್ದೇಶವಾಗಿದೆ ಎಂದು ಜಿಲ್ಲಾಧಿಕಾರಿ  ಡಾ.ಎಂ.ಆರ್.ರವಿ ತಿಳಿಸಿದ್ದಾರೆ.


ಹಿಂದೂ ಧಾರ್ಮಿಕ  ದತ್ತಿ ಇಲಾಖೆಯ ವ್ಯಾಪ್ತಿಗೊಳಪಡುವ  ಜಿಲ್ಲೆಯ  ಎಲ್ಲಾ ದೇವಾಲಯಗಳಲ್ಲಿ ಇನ್ನು ಮುಂದೆ ಕನ್ನಡ ಭಾಷೆಯಲ್ಲಿಯೇ ಮಂತ್ರೊಚ್ಛಾರಣೆ, ಪೂಜಾ ವಿಧಿ ವಿಧಾನ ಗಳನ್ನು ನಡೆಸುವಂತೆ 2020ರ ಮಾರ್ಚ್ 6 ರಂದೇ  ಜಿಲಾಧಿಕಾರಿ ಡಾ.ಎಂ.ಆರ್. ರವಿ ಆದೇಶ ಹೊರಡಿಸಿದ್ದರು. ಮಂತ್ರೋಚ್ಚಾರಣೆ  ಅರ್ಚನೆ, ಸಂಕಲ್ಪ ಇತ್ಯಾದಿ ಪೂಜಾ ಕೈಂಕರ್ಯಗಳನ್ನು ಚಾಲ್ತಿಯಲ್ಲಿರುವ ಸಂಪ್ರದಾಯ ಹಾಗು ಧಾರ್ಮಿಕ ಪದ್ದತಿಗಳಿಗೆ ಧಕ್ಕೆ ಬಾರದಂತೆ ಕನ್ನಡದಲ್ಲಿಯೇ ನೆರವೇರಿಸಬೇಕು ಎಂದು ಅವರು ಸೂಚಿಸಿದ್ದರು.


ಇದನ್ನು ಓದಿ: ಮಾಸ್ಕ್​ ಬಳಸಿದರೆ ಸಾಲದು, ಶುಚಿತ್ವದ ಅರಿವಿರುವುದು ಅವಶ್ಯ, ಇಲ್ಲದಿದ್ದರೆ ಸ್ಕೀನ್​ ಇನ್​ಫೆಕ್ಷನ್​ ಆದೀತು!


ಜಿಲ್ಲಾಧಿಕಾರಿಗಳ ಈ ಆದೇಶವನ್ನು ಸ್ವಾಗತಿಸಿದ್ದ  ಅರ್ಚಕರು ಕನ್ನಡ ಭಾಷೆಯಲ್ಲಿ ಮಂತ್ರ, ಶ್ಲೋಕ ಹಾಗು ಪೂಜಾ ವಿಧಿವಿಧಾನಗಳನ್ನು ಕನ್ನಡದಲ್ಲೇ ಮುದ್ರಿಸಿ ಪುಸ್ತಕ ರೂಪದಲ್ಲಿ ಕೊಡಬೇಕು ಹಾಗು ತರಬೇತಿ ನೀಡಬೇಕು ಎಂದು ಆಗ್ರಹಿಸಿದ್ದರು. ಆದರೆ ಕೊರೋನಾ ಹಿನ್ನಲೆಯಲ್ಲಿ ಯಾವುದೆ ತರಬೇತಿ ಆಯೋಜಿಸಲು ಸಾಧ್ಯವಾಗಿರಲಿಲ್ಲ. ಇದೀಗ ಆದೇಶ  ನೀಡಿದ ಎಂಟು ತಿಂಗಳ ಬಳಿಕ ಅರ್ಚಕರಿಗೆ ಹಿರೇಮಗಳೂರು ಕಣ್ಣನ್ ಅವರಿಂದ ವಿಶೇಷ ಕಾರ್ಯಾಗಾರ ಆಯೋಜಿಸಿ ತರಬೇತಿ ನೀಡಲಾಗಿದೆ.


ಜಿಲ್ಲೆಯ 200ಕ್ಕೂ ಹೆಚ್ಚು ಅರ್ಚಕರಿಗೆ ತರಬೇತಿ  ನೀಡಿದ ಹಿರೇಮಗಳೂರು ಕಣ್ಣನ್ ಅವರು ಚಾಮರಾಜನಗರ ಜಿಲ್ಲಾಡಳಿತದಂತೆಯೇ ಇತರ ಜಿಲ್ಲಾಡಳಿಗಳು ಇದೇ ರೀತಿಯ ಕ್ರಮಕೈಗೊಂಡಲ್ಲಿ, ಕನ್ನಡ ಭಾಷಾ ಬೆಳವಣಿಗೆಗೆ ಪೂರಕವಾಗಲಿದೆ ಎಂದು ತಿಳಿಸಿದರು, ಕೇವಲ ದೇವಸ್ಥಾನಗಳಲ್ಲಷ್ಟೇ ಅಲ್ಲ, ಪ್ರತಿಯೊಬ್ಬ ಕನ್ನಡಿಗರು ಕನ್ನಡದಲ್ಲೇ ದೇವತಾ ಪ್ರಾರ್ಥನೆ ಮಾಡುವುದನ್ನು ರೂಡಿಸಿಕೊಳ್ಳಬೇಕು ಎಂದು ಅವರು ಹೇಳಿದರು


ಜಿಲ್ಲೆಯಲ್ಲಿ ಮುಜರಾಯಿ ಇಲಾಖೆಗೆ  ಸೇರಿದ 281 ದೇವಸ್ಥಾನಗಳಿದ್ದು ಇವುಗಳಲ್ಲಿ 2 ಎ ಗ್ರೇಡ್,  2 ಬಿ ಗ್ರೇಡ್ ಹಾಗು  277 ಸಿ ಗ್ರೇಡ್ ದೇವಸ್ಥಾನಗಳಿವೆ. ಈ ದೇವಸ್ಥಾನಗಳಲ್ಲಿ ಇದುವೆರೆಗೆ ಸಂಸ್ಕೃತದಲ್ಲಿ ಮೊಳಗುತ್ತಿದ್ದ ಮಂತ್ರ ಘೋಷಗಳು ಜಿಲ್ಲಾಡಳಿತದ ಆದೇಶ ಹಾಗು ಅರ್ಚಕರಿಗೆ ಕಾರ್ಯಾಗಾರ ನಡೆದಿದ್ದು  ಹಿನ್ನಲೆಯಲ್ಲಿ ಇನ್ನು ಮುಂದೆ ಇಂಪಾದ ಕನ್ನಡದಲ್ಲಿ ಕೇಳಿ ಬರಲಿದೆಯಾ ಕಾದು ನೋಡಬೇಕಿದೆ


(ವರದಿ: ಎಸ್.ಎಂ.ನಂದೀಶ್​​ )

Published by:Seema R
First published: