ಗಬ್ಬು ನಾರುತ್ತಿದ್ದ ಕೆರೆಯೀಗ ಹೇಗಾಗಿದೆ ಗೊತ್ತಾ?; ಸಿಲಿಕಾನ್ ಸಿಟಿಯ ಈ ಟೆಕ್ಕಿಯ ಕೆಲಸ ಎಲ್ಲರಿಗೂ ಮಾದರಿ
ತಮ್ಮ ಮನೆಯ ಬಳಿ ಇರುವ ಮಾರಗೊಂಡನಹಳ್ಳಿ ಕೆರೆಯ ದುಸ್ಥಿತಿಯನ್ನು ನೋಡಿ ಅದನ್ನು ಸ್ವಚ್ಛಗೊಳಿಸಲು ತಮ್ಮ ವಾರಾಂತ್ಯದ 2 ದಿನಗಳನ್ನು ಮೀಸಲಿಟ್ಟರು ಸಾಫ್ಟ್ವೇರ್ ಇಂಜಿನಿಯರ್ ವೇಣುಗೋಪಾಲ್ ಕೊಂಪಳ್ಳಿ.

ವೇಣುಗೋಪಾಲ್ ಕೊಂಪಳ್ಳಿ
- News18
- Last Updated: March 23, 2019, 4:59 PM IST
ಬೆಂಗಳೂರು (ಮಾ. 23): ಬೆಂಗಳೂರಿನಲ್ಲಿ ಮಾಲಿನ್ಯದ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ನಗರದಲ್ಲಿ ಈ ಮೊದಲು 51ಕ್ಕೂ ಹೆಚ್ಚು ದೊಡ್ಡ ಕೆರೆಗಳಿದ್ದವು. ಆದರೀಗ ಒತ್ತುವರಿಯ ಕಾರಣದಿಂದ ಬಹುತೇಕ ಕೆರೆಗಳ ಜಾಗದಲ್ಲಿ ಬೃಹತ್ ಕಟ್ಟಡಗಳು ತಲೆಯೆತ್ತಿವೆ. ಉಳಿದ ಕೆರೆಗಳು ಕೂಡ ಸಂಪೂರ್ಣ ಕಲುಷಿತಗೊಂಡು ಅಲ್ಲಿನ ನೀರನ್ನು ಬಳಸಲಾರದಂತಹ ಸ್ಥಿತಿ ನಿರ್ಮಾಣವಾಗಿದೆ.
ಮಳೆಗಾಲದಲ್ಲಿ ಸುರಿಯುವ ನೀರು ಸೀದಾ ಕೆರೆಗೆ ಹರಿಯುವುದರಿಂದ ಸ್ವಚ್ಛವಾದ ನೀರು ಕೂಡ ಕಲುಷಿತಗೊಳ್ಳುತ್ತಿದೆ. ಈ ಬಗ್ಗೆ ಬೆಂಗಳೂರಿಗರು ಗಮನವನ್ನೇ ಹರಿಸುತ್ತಿಲ್ಲ. ಆದರೆ, ಮನಸ್ಸಿದ್ದರೆ ಮಾರ್ಗ ಎಂಬಂತೆ ಸಾಫ್ಟ್ವೇರ್ ಉದ್ಯೋಗಿಯಾಗಿ ತಿಂಗಳಿಗೆ ಲಕ್ಷ ಲಕ್ಷ ಎಣಿಸುವ ವೇಣುಗೋಪಾಲ್ ಕೊಂಪಳ್ಳಿ ಎಂಬ ಟೆಕ್ಕಿಯೊಬ್ಬರು ವಾರಾಂತ್ಯದಲ್ಲಿ ಕೆರೆಯ ಸ್ವಚ್ಛತೆಗೆ ಪಣ ತೊಟ್ಟಿದ್ದಾರೆ. ಪರೀಕ್ಷೆಯಲ್ಲಿ ಉತ್ತರ ಗೊತ್ತಿಲ್ದೆ ಪಬ್ಜಿ ಆಡುವುದು ಹೇಗೆ ಎಂಬುದನ್ನು ವಿವರಿಸಿದ ವಿದ್ಯಾರ್ಥಿ

ಸಾಮಾನ್ಯವಾಗಿ ವಾರಪೂರ್ತಿ ಬಿಡುವಿಲ್ಲದಂತೆ ದುಡಿದ ಟೆಕ್ಕಿಗಳು ಶನಿವಾರ- ಭಾನುವಾರ ಬಂತೆಂದರೆ ವಿಶ್ರಾಂತಿಗೆಂದು ಬೆಂಗಳೂರಿಂದ ಹೊರವಲಯಕ್ಕೋ ಅಥವಾ ಮನೆಯಿಂದ ಹೊರಬರದೆ ಗೃಹಬಂಧನಕ್ಕೋ ಒಳಗಾಗಿಬಿಡುತ್ತಾರೆ. ಆದರೆ, ವೇಣುಗೋಪಾಲ್ ಕೊಂಪಳ್ಳಿ ಶನಿವಾರ ಮತ್ತು ಭಾನುವಾರ ಒಂದೊಳ್ಳೆ ಕೆಲಸ ಮಾಡಲು ಮನೆಯಿಂದ ಹೊರಡುತ್ತಾರೆ.

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ನಿವಾಸಿಯಾಗಿರುವ ವೇಣುಗೋಪಾಲ್ ಬೆಳ್ಳಂದೂರು ಕೆರೆಯ ಮಾರ್ಗದಲ್ಲಿಯೇ ದಿನವೂ ಆಫೀಸಿಗೆ ಹೋಗುತ್ತಾರೆ. ಆ ಕೆರೆಯ ಅವಸ್ಥೆಯನ್ನು ದಿನವೂ ನೋಡುತ್ತಿದ್ದ ಅವರು ಅದೇ ರೀತಿಯ ಸಮಸ್ಯೆಯನ್ನು ಎದುರಿಸುತ್ತಿದ್ದ ತಮ್ಮ ಮನೆಯ ಸಮೀಪದಲ್ಲಿರುವ ಮಾರಗೊಂಡನಹಳ್ಳಿ ಕೆರೆಯನ್ನು ಹೇಗಾದರೂ ಮಾಡಿ ಸ್ವಚ್ಛಗೊಳಿಸಬೇಕೆಂದು ನಿರ್ಧರಿಸಿದರು. 2017ರ ಜುಲೈ ತಿಂಗಳಲ್ಲಿ ಮಾರಗೊಂಡನಹಳ್ಳಿ ಕೆರೆಯ ಸ್ವಚ್ಛತೆಗೆ ತಮ್ಮ ವಾರಾಂತ್ಯವನ್ನು ಮೀಸಲಿಡಲು ಆರಂಭಿಸಿದ ವೇಣುಗೋಪಾಲ್ ಅದಕ್ಕಾಗಿ ಹುಲಿಮಂಗಲ ಪಂಚಾಯತ್ನಿಂದ ಅನುಮತಿ ಪಡೆದರು.ಆಕ್ಸ್ಫರ್ಡ್ ಡಿಕ್ಷನರಿಯಲ್ಲಿ 'ಚಡ್ಡಿ'ಗೂ ಸಿಕ್ತು ಸ್ಥಾನ..!

'ವಿಪರ್ಯಾಸವೆಂದರೆ ಯಾರಾದರೂ ಕೆರೆಯಲ್ಲಿ ಕಸಗಳನ್ನು ಬಿಸಾಡಿ, ಮನೆಯ ಗಲೀಜು ನೀರನ್ನು ನದಿಗೆ ಬಿಟ್ಟು, ಕೆರೆಯಲ್ಲೇ ಶೌಚವನ್ನು ಮಾಡಿದರೂ ಯಾರೂ ತುಟಿ ಪಿಟಿಕ್ ಎನ್ನುವುದಿಲ್ಲ. ಅದೇ ಯಾರೋ ಒಬ್ಬರು ಒಳ್ಳೆಯ ಉದ್ದೇಶದಿಂದ ಕೆರೆಯ ಸ್ವಚ್ಛತೆ ಮಾಡುತ್ತೇನೆ ಎಂದು ಮುಂದಾದರೆ ನೂರು ಜನ ನೂರು ರೀತಿಯ ಪ್ರಶ್ನೆ ಕೇಳುತ್ತಾರೆ. ಅದಕ್ಕಾಗಿ ನಾನು ಸಾಕಷ್ಟು ಸಂಶೋಧನೆಗಳನ್ನು ಮಾಡಿಕೊಂಡು ಅವರಿಗೆಲ್ಲ ಸ್ವಚ್ಛತೆಯ ಅರಿವು ಮೂಡಿಸಲು ನಿರ್ಧರಿಸಿದೆ' ಎಂದು ಬೆಟರ್ ಇಂಡಿಯಾಗೆ ನೀಡಿರುವ ಸಂದರ್ಶನದಲ್ಲಿ ವೇಣುಗೋಪಾಲ್ ಹೇಳಿದ್ದಾರೆ.

ಕೆರೆಯ ಸ್ವಚ್ಛತೆಗೆ ಬೇಕಾದ ಸುಮಾರು 14 ಸಾವಿರ ರೂ. ಮೌಲ್ಯದ ಉಪಕರಣಗಳನ್ನು ಖರೀದಿಸಿ ಕೆಲಸ ಆರಂಭಿಸಿದ ವೇಣುಗೋಪಾಲ್ ಅದನ್ನು ಸವಾಲಾಗಿ ಸ್ವೀಕರಿಸಿದರು. ಕೆರೆಯ ಸಂರಕ್ಷಣೆ ಬಗ್ಗೆ ಆಸಕ್ತಿ ಇರುವವರನ್ನು ಸೇರಿಸಿಕೊಂಡು ಫೇಸ್ಬುಕ್ ಗ್ರೂಪ್ ಕ್ರಿಯೇಟ್ ಮಾಡಿ ಅದರಲ್ಲಿ ಜಾಗೃತಿ ಮೂಡಿಸಲಾರಂಭಿಸಿದರು. ನಂತರ ಇನ್ನೂ ಕೆಲವು ಆಸಕ್ತ ಯುವಕರು ವೇಣುಗೋಪಾಲ್ ಅವರಿಗೆ ಕೈಜೋಡಿಸಿದರು. ಕೆರೆಗಳಲ್ಲಿ ಬೆಳೆದಿದ್ದ ಕಾಡು ಗಿಡಗಳನ್ನು ಕತ್ತರಿಸಿ, ಹೂಳನ್ನು ತೆಗೆದು, ಅದರಲ್ಲಿದ್ದ ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯವನ್ನು ಹೊರತೆಗೆದ ವೇಣುಗೋಪಾಲ್ ಅವರ ಪರಿಶ್ರಮದಿಂದ 2 ವರ್ಷಗಳ ನಂತರ ಇದೀಗ ಕೆರೆ ಮಾಲಿನ್ಯಮುಕ್ತವಾಗಿದೆ.

ವೈರಲ್: ಭವಿಷ್ಯದ ಇ-ಪಾಸ್ಪೋರ್ಟ್ ಹೇಗಿದೆ ಗೊತ್ತಾ..?
ವೇಣುಗೋಪಾಲ್ ಅವರ ಕಾಳಜಿಯನ್ನು ಅರಿತ ಸುತ್ತಮುತ್ತಲಿನ ಮನೆಯವರು ವಾರಾಂತ್ಯದಲ್ಲಿ ತಮ್ಮ ಮಕ್ಕಳನ್ನೂ ಕರೆದುಕೊಂಡು ಕೆರೆಯ ಸ್ವಚ್ಛತೆಗೆ ಕೈಜೋಡಿಸಿದರು. ಕೆರೆಯ ಸುತ್ತಲೂ ಗಿಡಗಳನ್ನು ನೆಟ್ಟು ನೀರೆರೆಯತೊಡಗಿದರು. ಹೀಗೆ ಸುಮಾರು 17 ಎಕರೆಯಷ್ಟಿರುವ ಕೆರೆಯ 14 ಎಕರೆ ಜಾಗ ಸ್ವಚ್ಛವಾಯಿತು. ಇಲ್ಲಿ ಈಗ 200ಕ್ಕೂ ಹೆಚ್ಚು ಗಿಡಗಳು ಸಣ್ಣ ಮರಗಳಾಗಿ ಬೆಳೆದುನಿಂತಿವೆ. ಹೂಳು ತುಂಬಿದ್ದ ಜಾಗದಲ್ಲಿ ಈಗ ನೀರು ತುಂಬಿ ಕೆರೆಗೆ ಜೀವಕಳೆ ಬಂದಿದೆ ಎಂದು ಬೆಟರ್ ಇಂಡಿಯಾ ವರದಿ ಮಾಡಿದೆ.

ಗ್ರಾಮಸ್ಥರಿಂದಲೇ ಕೆರೆಯ ಪುನರುಜ್ಜೀವನ ಕಾರ್ಯ
ಜನರು ಹತ್ತಿರ ಹೋಗಲೂ ಹಿಂದೇಟು ಹಾಕುತ್ತಿದ್ದ ದಟ್ಟ ಪೊದೆ, ಗಬ್ಬು ನಾರುವ ತ್ಯಾಜ್ಯಗಳಿಂದ ತುಂಬಿದ್ದ ಮಾರಗೊಂಡನಹಳ್ಳಿ ಕೆರೆಗೆ ಈಗ ನೀವೇನಾದರೂ ಭೇಟಿ ನೀಡಿದರೆ ಸಂಜೆಯ ವೇಳೆ ಕೆರೆಯ ಸುತ್ತಲೂ ವಾಕಿಂಗ್ ಮಾಡುವವರನ್ನು ಕಾಣಬಹುದು. ಬೆಳಗ್ಗೆ ಕೆರೆಯ ಬಳಿ ಜಾಗಿಂಗ್ ಮಾಡುವವರನ್ನು ಕಾಣಬಹುದು. ಈ ಬದಲಾವಣೆಯ ಹಿಂದಿನ ರೂವಾರಿ ಟೆಕ್ಕಿ ವೇಣುಗೋಪಾಲ್. ಅಂತೂಇಂತೂ ಅವರ ಕನಸು ಸಾಕಾರಗೊಂಡಿದೆ. ಈ ರೀತಿಯ ಮುಂದಾಳತ್ವವನ್ನು ಪ್ರತಿ ಪ್ರದೇಶದಲ್ಲಿ ಒಬ್ಬರು ವಹಿಸಿಕೊಂಡರೂ ಉಳಿದವರು ಕೈಜೋಡಿಸುತ್ತಾರೆ. ಆಗ ಕೆರೆಗಳೂ ಉಳಿಯುತ್ತದೆ, ಉಸಿರಾಡಲು ಶುದ್ಧವಾದ ಗಾಳಿ, ದಿನಬಳಕೆಗೆ ಸ್ವಚ್ಛವಾದ ನೀರೂ ಸಿಗುತ್ತದೆ.
ಮಳೆಗಾಲದಲ್ಲಿ ಸುರಿಯುವ ನೀರು ಸೀದಾ ಕೆರೆಗೆ ಹರಿಯುವುದರಿಂದ ಸ್ವಚ್ಛವಾದ ನೀರು ಕೂಡ ಕಲುಷಿತಗೊಳ್ಳುತ್ತಿದೆ. ಈ ಬಗ್ಗೆ ಬೆಂಗಳೂರಿಗರು ಗಮನವನ್ನೇ ಹರಿಸುತ್ತಿಲ್ಲ. ಆದರೆ, ಮನಸ್ಸಿದ್ದರೆ ಮಾರ್ಗ ಎಂಬಂತೆ ಸಾಫ್ಟ್ವೇರ್ ಉದ್ಯೋಗಿಯಾಗಿ ತಿಂಗಳಿಗೆ ಲಕ್ಷ ಲಕ್ಷ ಎಣಿಸುವ ವೇಣುಗೋಪಾಲ್ ಕೊಂಪಳ್ಳಿ ಎಂಬ ಟೆಕ್ಕಿಯೊಬ್ಬರು ವಾರಾಂತ್ಯದಲ್ಲಿ ಕೆರೆಯ ಸ್ವಚ್ಛತೆಗೆ ಪಣ ತೊಟ್ಟಿದ್ದಾರೆ.

ಸ್ವಚ್ಛಗೊಂಡಿರೋ ಕೆರೆಯ ದಡದ ಸೂರ್ಯಾಸ್ತ
ಸಾಮಾನ್ಯವಾಗಿ ವಾರಪೂರ್ತಿ ಬಿಡುವಿಲ್ಲದಂತೆ ದುಡಿದ ಟೆಕ್ಕಿಗಳು ಶನಿವಾರ- ಭಾನುವಾರ ಬಂತೆಂದರೆ ವಿಶ್ರಾಂತಿಗೆಂದು ಬೆಂಗಳೂರಿಂದ ಹೊರವಲಯಕ್ಕೋ ಅಥವಾ ಮನೆಯಿಂದ ಹೊರಬರದೆ ಗೃಹಬಂಧನಕ್ಕೋ ಒಳಗಾಗಿಬಿಡುತ್ತಾರೆ. ಆದರೆ, ವೇಣುಗೋಪಾಲ್ ಕೊಂಪಳ್ಳಿ ಶನಿವಾರ ಮತ್ತು ಭಾನುವಾರ ಒಂದೊಳ್ಳೆ ಕೆಲಸ ಮಾಡಲು ಮನೆಯಿಂದ ಹೊರಡುತ್ತಾರೆ.

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ನಿವಾಸಿಯಾಗಿರುವ ವೇಣುಗೋಪಾಲ್ ಬೆಳ್ಳಂದೂರು ಕೆರೆಯ ಮಾರ್ಗದಲ್ಲಿಯೇ ದಿನವೂ ಆಫೀಸಿಗೆ ಹೋಗುತ್ತಾರೆ. ಆ ಕೆರೆಯ ಅವಸ್ಥೆಯನ್ನು ದಿನವೂ ನೋಡುತ್ತಿದ್ದ ಅವರು ಅದೇ ರೀತಿಯ ಸಮಸ್ಯೆಯನ್ನು ಎದುರಿಸುತ್ತಿದ್ದ ತಮ್ಮ ಮನೆಯ ಸಮೀಪದಲ್ಲಿರುವ ಮಾರಗೊಂಡನಹಳ್ಳಿ ಕೆರೆಯನ್ನು ಹೇಗಾದರೂ ಮಾಡಿ ಸ್ವಚ್ಛಗೊಳಿಸಬೇಕೆಂದು ನಿರ್ಧರಿಸಿದರು. 2017ರ ಜುಲೈ ತಿಂಗಳಲ್ಲಿ ಮಾರಗೊಂಡನಹಳ್ಳಿ ಕೆರೆಯ ಸ್ವಚ್ಛತೆಗೆ ತಮ್ಮ ವಾರಾಂತ್ಯವನ್ನು ಮೀಸಲಿಡಲು ಆರಂಭಿಸಿದ ವೇಣುಗೋಪಾಲ್ ಅದಕ್ಕಾಗಿ ಹುಲಿಮಂಗಲ ಪಂಚಾಯತ್ನಿಂದ ಅನುಮತಿ ಪಡೆದರು.ಆಕ್ಸ್ಫರ್ಡ್ ಡಿಕ್ಷನರಿಯಲ್ಲಿ 'ಚಡ್ಡಿ'ಗೂ ಸಿಕ್ತು ಸ್ಥಾನ..!

'ವಿಪರ್ಯಾಸವೆಂದರೆ ಯಾರಾದರೂ ಕೆರೆಯಲ್ಲಿ ಕಸಗಳನ್ನು ಬಿಸಾಡಿ, ಮನೆಯ ಗಲೀಜು ನೀರನ್ನು ನದಿಗೆ ಬಿಟ್ಟು, ಕೆರೆಯಲ್ಲೇ ಶೌಚವನ್ನು ಮಾಡಿದರೂ ಯಾರೂ ತುಟಿ ಪಿಟಿಕ್ ಎನ್ನುವುದಿಲ್ಲ. ಅದೇ ಯಾರೋ ಒಬ್ಬರು ಒಳ್ಳೆಯ ಉದ್ದೇಶದಿಂದ ಕೆರೆಯ ಸ್ವಚ್ಛತೆ ಮಾಡುತ್ತೇನೆ ಎಂದು ಮುಂದಾದರೆ ನೂರು ಜನ ನೂರು ರೀತಿಯ ಪ್ರಶ್ನೆ ಕೇಳುತ್ತಾರೆ. ಅದಕ್ಕಾಗಿ ನಾನು ಸಾಕಷ್ಟು ಸಂಶೋಧನೆಗಳನ್ನು ಮಾಡಿಕೊಂಡು ಅವರಿಗೆಲ್ಲ ಸ್ವಚ್ಛತೆಯ ಅರಿವು ಮೂಡಿಸಲು ನಿರ್ಧರಿಸಿದೆ' ಎಂದು ಬೆಟರ್ ಇಂಡಿಯಾಗೆ ನೀಡಿರುವ ಸಂದರ್ಶನದಲ್ಲಿ ವೇಣುಗೋಪಾಲ್ ಹೇಳಿದ್ದಾರೆ.

ಕೆರೆಯ ಸ್ವಚ್ಛತೆಗೆ ಬೇಕಾದ ಸುಮಾರು 14 ಸಾವಿರ ರೂ. ಮೌಲ್ಯದ ಉಪಕರಣಗಳನ್ನು ಖರೀದಿಸಿ ಕೆಲಸ ಆರಂಭಿಸಿದ ವೇಣುಗೋಪಾಲ್ ಅದನ್ನು ಸವಾಲಾಗಿ ಸ್ವೀಕರಿಸಿದರು. ಕೆರೆಯ ಸಂರಕ್ಷಣೆ ಬಗ್ಗೆ ಆಸಕ್ತಿ ಇರುವವರನ್ನು ಸೇರಿಸಿಕೊಂಡು ಫೇಸ್ಬುಕ್ ಗ್ರೂಪ್ ಕ್ರಿಯೇಟ್ ಮಾಡಿ ಅದರಲ್ಲಿ ಜಾಗೃತಿ ಮೂಡಿಸಲಾರಂಭಿಸಿದರು. ನಂತರ ಇನ್ನೂ ಕೆಲವು ಆಸಕ್ತ ಯುವಕರು ವೇಣುಗೋಪಾಲ್ ಅವರಿಗೆ ಕೈಜೋಡಿಸಿದರು. ಕೆರೆಗಳಲ್ಲಿ ಬೆಳೆದಿದ್ದ ಕಾಡು ಗಿಡಗಳನ್ನು ಕತ್ತರಿಸಿ, ಹೂಳನ್ನು ತೆಗೆದು, ಅದರಲ್ಲಿದ್ದ ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯವನ್ನು ಹೊರತೆಗೆದ ವೇಣುಗೋಪಾಲ್ ಅವರ ಪರಿಶ್ರಮದಿಂದ 2 ವರ್ಷಗಳ ನಂತರ ಇದೀಗ ಕೆರೆ ಮಾಲಿನ್ಯಮುಕ್ತವಾಗಿದೆ.

ವೈರಲ್: ಭವಿಷ್ಯದ ಇ-ಪಾಸ್ಪೋರ್ಟ್ ಹೇಗಿದೆ ಗೊತ್ತಾ..?
ವೇಣುಗೋಪಾಲ್ ಅವರ ಕಾಳಜಿಯನ್ನು ಅರಿತ ಸುತ್ತಮುತ್ತಲಿನ ಮನೆಯವರು ವಾರಾಂತ್ಯದಲ್ಲಿ ತಮ್ಮ ಮಕ್ಕಳನ್ನೂ ಕರೆದುಕೊಂಡು ಕೆರೆಯ ಸ್ವಚ್ಛತೆಗೆ ಕೈಜೋಡಿಸಿದರು. ಕೆರೆಯ ಸುತ್ತಲೂ ಗಿಡಗಳನ್ನು ನೆಟ್ಟು ನೀರೆರೆಯತೊಡಗಿದರು. ಹೀಗೆ ಸುಮಾರು 17 ಎಕರೆಯಷ್ಟಿರುವ ಕೆರೆಯ 14 ಎಕರೆ ಜಾಗ ಸ್ವಚ್ಛವಾಯಿತು. ಇಲ್ಲಿ ಈಗ 200ಕ್ಕೂ ಹೆಚ್ಚು ಗಿಡಗಳು ಸಣ್ಣ ಮರಗಳಾಗಿ ಬೆಳೆದುನಿಂತಿವೆ. ಹೂಳು ತುಂಬಿದ್ದ ಜಾಗದಲ್ಲಿ ಈಗ ನೀರು ತುಂಬಿ ಕೆರೆಗೆ ಜೀವಕಳೆ ಬಂದಿದೆ ಎಂದು ಬೆಟರ್ ಇಂಡಿಯಾ ವರದಿ ಮಾಡಿದೆ.

ಕಲುಷಿತಗೊಂಡಿದ್ದ ಮಾರಗೊಂಡನಹಳ್ಳಿ ಕೆರೆ