ಲೋಕಾಯುಕ್ತದಿಂದಾಗುವ ಕೆಲಸಗಳು ಎಸಿಬಿಯಿಂದ ಆಗುವುದಿಲ್ಲ- ಎಸ್​.ಆರ್.ಹಿರೇಮಠ

news18
Updated:July 25, 2018, 5:23 PM IST
ಲೋಕಾಯುಕ್ತದಿಂದಾಗುವ ಕೆಲಸಗಳು ಎಸಿಬಿಯಿಂದ ಆಗುವುದಿಲ್ಲ- ಎಸ್​.ಆರ್.ಹಿರೇಮಠ
ಎಸ್​ಆರ್ ಹಿರೇಮಠ
news18
Updated: July 25, 2018, 5:23 PM IST
ನ್ಯೂಸ್ 18 ಕನ್ನಡ 

ಧಾರವಾಡ( ಜುಲೈ 25) :  ಲೋಕಾಯುಕ್ತ ದಿಂದಾಗುವ ಕೆಲಸಗಳು ಎಸಿಬಿಯಿಂದ ಆಗುವುದಿಲ್ಲ. ಇದಕ್ಕೆ ಕಾರಣ ಎಸಿಬಿಯು ಮುಖ್ಯಮಂತ್ರಿಗಳ ನಿಯಂತ್ರಣದಲ್ಲಿರುತ್ತದೆ ಎಂದು ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ  ಹೇಳಿದ್ದಾರೆ.

ನ್ಯೂಸ್ 18 ಕನ್ನಡದೊಂದಿಗೆ ಮಾತನಾಡಿದ ಅವರು, ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿಯವರು ಲೋಕಾಯುಕ್ತವನ್ನ ಸಬಲೀಕರಣ ಮಾಡುತ್ತಿಲ್ಲ.   ಭ್ರಷ್ಟಾಚಾರದ ವಿರುದ್ಧ ಹಾಗೂ ದುರಾಡಳಿತದ ವಿರುದ್ಧ ನಿಯಂತ್ರಿಸಬೇಕಾದ ಲೋಕಾಯುಕ್ತ ಸಂಸ್ಥೆ ಇಂದು ತನ್ನ ನಿಯಂತ್ರಣವನ್ನ ಕಳೆದುಕೊಂಡಿದೆ ಎಂದರು.

ಲೊಕಾಯುಕ್ತ ವಿಶ್ವನಾಥ್ ಶೆಟ್ಟಿಅವರ ಪತ್ನಿ ಗೋಮಾಳ ಜಮೀನನ್ನ ಖರೀದಿಸಿದ್ದಾರೆ. ಆದರೆ ಶಿವರಾಜ ಪಾಟೀಲರ ಮೇಲೆ ಸೈಟ್ ಪಡೆದ ಆರೋಪ ಬಂದಾಗ ಅವರು ತಮ್ಮ ಸ್ಥಾನದಿಂದ ಕೆಳಗಿಳಿದಿದ್ದರು.  ಸಂತೋಷ ಹೆಗ್ಡೆ ಅವರು ಲೋಕಾಯುಕ್ತರಾಗಿದ್ದಾಗ ಉತ್ತಮ ಕೆಲಸಗಳು ನಡೆಯುತ್ತಿದ್ದವು.  ಈ ಲೋಕಾಯುಕ್ತವನ್ನ ನಿಶಕ್ತಿ ಮಾಡುವ ಸಲುವಾಗಿ ವಿಶ್ವನಾಥ ಶಟ್ಟಿ ಅವರನ್ನ ನೇಮಕ ಮಾಡಲಾಗಿದೆ ಎಂದು ಹಿರೇಮಠ ಆರೋಪ ಮಾಡಿದ್ದಾರೆ. 

ಹಲವಾರು ಮಹತ್ವದ ಕೇಸ್ ಗಳನ್ನ ಬಿಡುತ್ತಿದ್ದಾರೆ. ಸರ್ಕಾರದ ಜತೆಗೆ ಹೊಂದುವಂತಹ  ಭ್ರಷ್ಠಚಾರದ ವಿರುದ್ಧ ಹೊರಾಟ ಮಾಡುವಂತ ಪ್ರವೃತ್ತಿ ಇಲ್ಲದಂತವರು ಲೋಕಾಯುಕ್ತ ಆಗಿದ್ದು ದುರುಷ್ಟಕರ.

 

 
First published:July 25, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...