Electric Car: ವಿದ್ಯಾರ್ಥಿಗಳ ಆವಿಷ್ಕಾರ, ಹಳೆಯ ಪೆಟ್ರೋಲ್ ಕಾರ್​​ಗೆ ಹೊಸ ಟಚ್

ಸರ್ಕಾರ ಹಳೆಯ ಇಂಧನ ವಾಹನಗಳನ್ನು ಸ್ಥಗಿತಗೊಳಿಸಲು ಚಿಂತನೆ ನಡೆಸ್ತಿದೆ. ಹಾಗಾದರೆ ಈಗ ಇರೋ ಇಂಧನ ವಾಹನವನ್ನು ಏನು ಮಾಡೋದು? ಎಲೆಕ್ಟ್ರಿಕ್ ವಾಹನದಂತೆ ಪರಿವರ್ತನೆ ಮಾಡಿ ಓಡಿಸಲು ಸಾಧ್ಯವಿಲ್ಲವೇ? ಹೀಗೆ ಹತ್ತು ಹಲವು ಅನುಮಾನಗಳಿದ್ದರೆ ವಾಹನ ಸವಾರರು ಚಿಂತೆ ಮಾಡಬೇಕಾದ ಅಗತ್ಯವಿಲ್ಲ.

ಎಲೆಕ್ಟ್ರಿಕ್ ವಾಹನ ಆವಿಷ್ಕಾರ

ಎಲೆಕ್ಟ್ರಿಕ್ ವಾಹನ ಆವಿಷ್ಕಾರ

 • Share this:
  ವಾಹನ ಮಾರುಕಟ್ಟೆಯಲ್ಲಿ (Market) ಈಗ ಎಲೆಕ್ಟ್ರಿಕ್ ವಾಹನಗಳದ್ದೇ (Electric Vehicle) ಭರಾಟೆ. ಹಾಗಂತ ಎಲೆಕ್ಟ್ರಿಕ್ ವಾಹನ ಕೊಳ್ಳಲು ಹೋದರೆ ಕೈಸುಟ್ಟುಕೊಳ್ಳುವಂತ ದರ. ಹಾಗಾಗಿ ಭವಿಷ್ಯದಲ್ಲಿ ವಿದ್ಯುತ್ ಚಾಲಿತ ಕಾರುಗಳದ್ದೇ (Car) ಕಾರುಬಾರು. ಹಾಗಾದ್ರೆ ಈಗ ಚಾಲ್ತಿಯಲ್ಲಿರುವ ಇಂದಿನ ವಾಹನಗಳ ಗತಿ ಏನು ಎಂದು ವಾಹನ ಸವಾರರು ತಲೆಕೆಡಿಸಿಕೊಳ್ಳಬೇಕಾಗಿಲ್ಲ. ನಿಮ್ಮ ಇಂಧನ ವಾಹನವನ್ನೇ (Fuel Vehicle) ಎಲೆಕ್ಟ್ರಿಕ್ ವಾಹನವನ್ನಾಗಿ ಪರಿವರ್ತಿಸಿ, ಆಧುನಿಕ ತಂತ್ರಜ್ಞಾನದೊಂದಿಗೆ ಚಲಾಯಿಸಬಹುದು. ಈ ರೀತಿಯ ಇಂಧನ ವಾಹನಕ್ಕೆ ಎಲೆಕ್ಟ್ರಿಕ್ ಸ್ಪರ್ಶ ಕೊಟ್ಟು, ಹೊಸ ಸಾಧನೆ ಮಾಡಿದ್ದಾರೆ ಶಿವಮೊಗ್ಗದ ವಿದ್ಯಾರ್ಥಿಗಳು. ಇಲ್ಲಿನ ಜೆ ಎನ್ ಎಸ್ ಸಿ ಕಾಲೇಜಿನ ಮೆಕ್ಯಾನಿಕಲ್ ಇಂಜಿನಿಯರಿಂಗ್ (Engineering) ವಿದ್ಯಾರ್ಥಿಗಳ (Students) ಹೊಸ ಆವಿಷ್ಕಾರಕ್ಕೆ ಮೆಚ್ಚುಗೆ ಕೂಡ ವ್ಯಕ್ತವಾಗಿದೆ.

  ಸರ್ಕಾರ ಹಳೆಯ ಇಂಧನ ವಾಹನಗಳನ್ನು ಸ್ಥಗಿತಗೊಳಿಸಲು ಚಿಂತನೆ ನಡೆಸ್ತಿದೆ. ಹಾಗಾದರೆ ಇಂಧನ ವಾಹನವನ್ನು ಎಲೆಕ್ಟ್ರಿಕ್ ವಾಹನದಂತೆ ಪರಿವರ್ತನೆ ಮಾಡಿ ಓಡಿಸಲು ಸಾಧ್ಯವಿಲ್ಲವೇ? ಹೀಗೆ ಹತ್ತು ಹಲವು ಅನುಮಾನಗಳಿದ್ದರೆ ವಾಹನ ಸವಾರರು ಚಿಂತೆ ಮಾಡಬೇಕಾದ ಅಗತ್ಯವಿಲ್ಲ.

  ಶಿವಮೊಗ್ಗದ ವಿದ್ಯಾರ್ಥಿಗಳ ಸಾಧನೆ

  ಶಿವಮೊಗ್ಗದ ವಿದ್ಯಾರ್ಥಿಗಳು ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳನ್ನು ಎಲೆಕ್ಟ್ರಿಕ್ ವಾಹನವನ್ನಾಗಿ ಪರಿವರ್ತಿಸಿ ಸಾಧನೆಗೈದಿದ್ದಾರೆ. ಇಲ್ಲಿನ ಪ್ರತಿಷ್ಠಿತ ಜೆ.ಎನ್.ಎಸ್ ಕಾಲೇಜ್ ಆಫ್ ಇಂಜಿನಿಯರಿಂಗ್​ನ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳು ಈ ಸಾಧನೆ ಮಾಡಿದ್ದಾರೆ. ಸಹಾಯಕ ಪ್ರಾಧ್ಯಾಪಕ ಡಾ. ಎಸ್.ಜೆ.ಅಮಿತ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಸಾತ್ವಿಕ್ ಜಿ, ಅಭಿಷೇಕ್ ಜೆವಿನ್, ಕಾರ್ತಿಕ್ ಶೆಟ್ಟಿ, ಮನೋಹರ್ ವಿದ್ಯುತ್‌ ಚಾಲಿತ ಕಾರನ್ನು ಅಭಿವೃದ್ಧಿಪಡಿಸಿದ್ದಾರೆ.

  ಎಲೆಕ್ಟ್ರಿಕ್ ಕಾರು


  ಇದನ್ನೂ ಓದಿ: ಯುವಕರ ನಿದ್ದೆ ಕದ್ದ ಹೊಸ ಹಂಟರ್​ 350 ಬೈಕ್​! ಬಣ್ಣ ಮತ್ತು ವಿಶೇಷತೆಯ ಬಗ್ಗೆ ಮಾಹಿತಿ ಇಲ್ಲಿದೆ

  ಭಾರತ ಸರ್ಕಾರದಿಂದ ಅನುದಾನ

  ವಿದ್ಯಾರ್ಥಿಗಳ ತಂಡ ಹಳೆಯ ಇಂಧನ ಚಾಲಿತ ಕಾರನ್ನು ನವೀಕರಿಸಿದೆ. ಮೆಕಾನಿಕಲ್ ಇಂಜಿನಿಯರಿಂಗ್​​ನಲ್ಲಿ ಕಲಿತ ಜ್ಞಾನ ಹಾಗೂ ಕೌಶಲ್ಯಗಳನ್ನು ಬಳಸಿಕೊಂಡು ವಿದ್ಯುತ್ ಚಾಲಿತ ಕಾರನ್ನು ವಿನ್ಯಾಸಗೊಳಿಸಿದೆ. ಇದಕ್ಕಾಗಿ ಭಾರತ ಸರ್ಕಾರದಿಂದ ರೂ.2.50 ಲಕ್ಷ ಆರ್ಥಿಕ ಅನುದಾನ ನೀಡಲಾಗಿದೆ.

  Wonder car Engineering Students developing electric vehicle
  ಶಿವಮೊಗ್ಗ ವಿದ್ಯಾರ್ಥಿಗಳ ಸಾಧನೆ


  4-5 ಗಂಟೆ ಚಾರ್ಜ್​ ಮಾಡಿದ್ರೆ ಸಾಕು!

  ಈ ಎಲೆಕ್ಟ್ರಿಕ್‌ ಕಾರಿನಲ್ಲಿರುವ ಬ್ಯಾಟರಿಯನ್ನು 4-5 ಗಂಟೆ ತನಕ ಚಾರ್ಜ್ ಮಾಡಿದರೆ ಸಾಕು. ಸುಮಾರು 80 ರಿಂದ 90 ಕಿಲೋಮೀಟರ್ ಮೈಲೇಜ್‌ ನೀಡುತ್ತದೆ. ಮನೆಯಲ್ಲಿಯೇ ಬ್ಯಾಟರಿ ರೀಚಾರ್ಜ್ ಕೂಡ ಮಾಡಬಹುದಾಗಿದೆ.

  ಇದನ್ನೂ ಓದಿ: ಈ ಸ್ಮಾರ್ಟ್​ಫೋನ್​ ಮೇಲೆ 10 ಸಾವಿರ ರೂಪಾಯಿಯ ರಿಯಾಯಿತಿ! ಈ ಅವಕಾಶ ಮತ್ತೆ ಸಿಗಲ್ಲ

  ಚಾರ್ಜಿಂಗ್​​ಗೆ 30 ರೂಪಾಯಿ!

  ಈ ಎಲೆಕ್ಟ್ರಿಕ್ ಕಾರಿನ ಓಡಾಟಕ್ಕೆ ಹೆಚ್ಚು ಖರ್ಚು ಕೂಡ ಬೇಕಾಗಿಲ್ಲ. ಒಂದ್ಸಲ ಸಂಪೂರ್ಣ ಬ್ಯಾಟರಿ ರೀಚಾರ್ಜ್ ಮಾಡಲು 4 ರಿಂದ 5 ಯೂನಿಟ್ ವಿದ್ಯುತ್ ಅಗತ್ಯವಿದೆ. ಇದಕ್ಕಾಗಿ ಗರಿಷ್ಠ 20 ರಿಂದ 30 ರುಪಾಯಿಗಳಾಗುತ್ತದೆ.

  Wonder car Engineering Students developing electric vehicle
  ಪೆಟ್ರೋಲ್ ವಾಹನ ಎಲೆಕ್ಟ್ರಿಕ್ ವಾಹನವಾಗಿ ಬದಲಾವಣೆ


  ಎಲೆಕ್ಟ್ರಿಕ್ ಕಾರ್​​ಗೆ ಅಗತ್ಯವಿರುವ ಬಲ ಮತ್ತು ಶಕ್ತಿಯನ್ನು ಮೌಲ್ಯಮಾಪನ ಮಾಡಿ ಹಳೆಯ ಕಾರಿನ ಟ್ರಾನ್ಸಿಷನ್ ಡ್ರೈವ್ ಸಿಸ್ಟಮ್​​ನೊಂದಿಗೆ ವಿದ್ಯಾರ್ಥಿಗಳು ಹೊಸ ಕಾರನ್ನು ನವೀಕರಿಸಿದ್ದಾರೆ.

  ಹೇಗಿದೆ ಎಲೆಕ್ಟ್ರಿಕ್ ಕಾರು?

  ಈ ಎಲೆಕ್ನಿಕ್ ಕಾರ್ 4 ಫಾರ್ವರ್ಡ್​ ಪ್ರೊಪಲ್ಟನ್ ಗೇರ್ ಮೆಕ್ಯಾನಿಸಂನೊಂದಿಗೆ ಒಂದು ರಿವರ್ಸ್ ಪ್ರೊಪಲ್ಟನ್‌ ಗೇರ್​​ಗಳನ್ನು ಹೊಂದಿದೆ. ಈ ಕಾರು ಆರಾಮದಾಯಕ ಅನುಭವ ಕೂಡ ನೀಡುತ್ತೆ.

  ಈ ಹಿಂದೆಯೂ ಸ್ಟೂಡೆಂಟ್​ಗಳ ಸಾಧನೆ!

  ಈ ಹಿಂದೆ 2019-20 ಹಾಗೂ 2020-21ನೇ ಶೈಕ್ಷಣಿಕ ವರ್ಷಗಳಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಹಿರಿಯ ವಿದ್ಯಾರ್ಥಿಗಳು ಎಲೆಕ್ಟ್ರಿಕ್ ಕ್ವಾಡ್ ಬೈಕ್, ಎಲೆಕ್ಟ್ರಿಕ್ ಗೇರ್ಡ್ ಬೈಕ್ ಮತ್ತು ಎಲೆಕ್ಟ್ರಿಕ್ ಸ್ಕೂಟರ್​​ನ್ನೂ ಅಭಿವೃದ್ಧಿ ಪಡಿಸಿದ್ದಾರೆ.

  ಸಹಾಯಕ ಪ್ರಾಧ್ಯಾಪಕರಾದ ಡಾ.ಎಸ್.ಜಿ ಅಮಿತ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಇದು ಮೂರನೇ ಸಾಧನೆಯಾಗಿದೆ. ಇಂಧನ ಕಾರನ್ನು ಎಲೆಕ್ಟ್ರಿಕ್ ಕಾರ್​ ಆಗಿ ಪರಿವರ್ತಿಸಿದ್ದಕ್ಕೆ ಮೆಚ್ಚುಗೆ ಕೂಡ ವ್ಯಕ್ತವಾಗಿದೆ.

  ವರದಿ: ವಿನಯ್ ಪುರದಾಳು
  Published by:Thara Kemmara
  First published: