ಸೆಲೆಬ್ರಿಟಿ ಮಕ್ಕಳಿಗೆ ಅತ್ಯಾಚಾರದ ಬೆದರಿಕೆ; ಸಮಾಜದ ಮನಸ್ಥಿತಿಗೆ ಕೈಗನ್ನಡಿಯಾ?

women safety: ತಣ್ಣನೆಯ ಕ್ರೌರ್ಯವೊಂದು ಪುರುಷ ಸಮಾಜದಲ್ಲಿ ಹೇಗೆ ಗಟ್ಟಿಗೊಳ್ಳುತ್ತಿದೆ ಎಂಬುದು ಈ ಎರಡು ಘಟನೆಗಳಿಗೆ ಸಾಕ್ಷಿಯಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮ್ಯಾಚ್​ ಸೋತ ಒಂದೇ ವಿಚಾರಕ್ಕೆ ಕೋಪಗೊಂಡಿದ್ದ ಸಿಎಸ್​ಕೆ ತಂಡದ ಅಭಿಮಾನಿ ಚೆನ್ನೈ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿಯ 6 ವರ್ಷದ ಮಗಳನ್ನು ಅತ್ಯಾಚಾರ ಎಸಗುವ ಬೆದರಿಕೆ ಒಡ್ಡಿದ್ದ. ಈ ಘಟನೆ ಮಾಸುವ ಮುನ್ನವೇ ಮುತ್ತಯ್ಯ ಮುರಳೀಧರನ್​ ಜೀವನಾಧಾರಿತ ಚಿತ್ರದಲ್ಲಿ ನಟಿಸಲು ಮುಂದಾಗಿದ್ದ ನಟ ವಿಜಯ್​ ಸೇತುಪತಿ ಮಗಳಿಗೆ ಈಗ ಅತ್ಯಾಚಾರದ ಬೆದರಿಕೆ ಬಂದಿದೆ. ಈ ಎರಡು ಘಟನೆಗಳನ್ನು ನೋಡಿದಾಗ ಅತ್ಯಾಚಾರ ಎಂಬುದು ಇಷ್ಟು ಸಾಮಾನ್ಯ ವಿಚಾರವಾ? ಹೆಣ್ಣು ಮಕ್ಕಳೆಂದರೆ, ಅತ್ಯಾಚಾರಕ್ಕೆ ಒಳಗಾಗುವವರಾ, ತಪ್ಪಿಲ್ಲದಿದ್ದರೂ ಅವರು ಬಲಿಪಶುಗಳ ಎಂಬ ಅನುಮಾನ ಕಾಡಲಾರಂಭಿಸಿದೆ.

ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಹೆದರಿಕೆ ಇಲ್ಲದೇ ಈ ರೀತಿ ಬಹಿರಂಗವಾಗಿ ಬೆದರಿಕೆಗಳು ಬರುತ್ತಿದೆ ಎಂದರೆ, ಹೆಣ್ಣು ದಮನಕ್ಕೆ ಒಳಗಾದವಳು ಎಂಬ ಮನಸ್ಥಿತಿಯೋ ಅಥವಾ ಕಾನೂನಿನ ಶಿಕ್ಷೆ ಕಠಿಣವಲ್ಲ ಎಂಬ ಮನಸ್ಥಿತಿಯೋ ಎಂಬ ಬಗ್ಗೆಯೇ ಅನುಮಾನ ಮೂಡುತ್ತಿದೆ.

ರಾಷ್ಟ್ರೀಯ ಅಪರಾಧ ದಾಖಲೆ ಸಂಸ್ಥೆ ಇತ್ತೀಚೆಗೆ ಬಿಡುಗಡೆ ಮಾಡಿದ 2019ರ ವರದಿ ಪ್ರಕಾರ, ದಿನವೊಂದಕ್ಕೆ 87 ಅತ್ಯಾಚಾರ ಪ್ರಕರಣಗಳು ನಡೆಯುತ್ತಿವೆ. ಈ ಅಂಕಿ ಅಂಶಗಳು ಮಹಿಳೆಯ ಸುರಕ್ಷತೆಯನ್ನು ತಿಳಿಸುತ್ತಿವೆ.

ಈಗ ಸಮಾಜದ ಪ್ರಮುಖವಾಹಿನಿಗಳ ನಟ, ಕ್ರಿಕೆಟರ್​ ಮಕ್ಕಳಿಗೆ ಈ ರೀತಿ ಬೆದರಿಕೆ ಬಂದರೆ, ಸಮಾಜ ಮಹಿಳೆಯರಿಗೆ ಎಷ್ಟು ಸುರಕ್ಷೆ ಎಂಬ ಪ್ರಶ್ನೆ ಮೂಡಿಸಿದೆ. ಅತ್ಯಾಚಾರ ಬೆದರಿಕೆಯನ್ನು ಈ ರೀತಿ ಧೈರ್ಯವಾಗಿ ಹಾಕುತ್ತಿರಬೇಕಾದರೆ, 21ನೇ ಶತಮಾನದ ಮಹಿಳೆ ಸಬಲೆಯಲ್ಲ ಅಬಲೆ ಎಂಬ ಸಂದೇಶ ಸಾರಲಾಗುತ್ತಿದೆ. ಯಾರದೇ ತಪ್ಪಿಗೂ ಅಲ್ಲಿ ಮಹಿಳೆಯೇ ಬಲಿಪಶು ಎಂಬುದು ಸಾಬೀತಾಗುತ್ತಿದೆ.

ಇದನ್ನು ಓದಿ: ಭಾರತದಲ್ಲಿ ದಿನವೊಂದಕ್ಕೆ 87 ಮಹಿಳೆಯರ ಮೇಲೆ ಅತ್ಯಾಚಾರ; ಎನ್​ಸಿಆರ್​ಬಿ

ನಿರ್ಭಯಾ ಪ್ರಕರಣದಲ್ಲಿ ಅತ್ಯಾಚಾರಿಗಳಿ ಶಿಕ್ಷೆಯಲ್ಲಿಯಾದ ವಿಳಂಬ. ಹೈದ್ರಾಬಾದ್​, ಉತ್ತರ ಪ್ರದೇಶದ ಘಟನೆಗಳು ಜನರನ್ನು ಬೆಚ್ಚಿ ಬೀಳುಸುವ ಜೊತೆಗೆ ಸಮಾಜಕ್ಕೆ ಬೇರೆಯದೇ ಸಂದೇಶ ಸಾರುತ್ತಿದೆಯಾ ಅನುಮಾನಗಳು ವ್ಯಕ್ತವಾಗುತ್ತಿದೆ. ಸಮಾಜದಲ್ಲಿ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳು ಸಾಮಾನ್ಯವಂತೆ ನೋಡುವ ಮನಸ್ಥಿತಿ ಮೂಡುತ್ತಿದೆ.  ಸಂತ್ರಸ್ತರ ಕುಟುಂಬ ಮಾತ್ರ ನೋವು ಅನುಭವಿಸುತ್ತಿದ್ದರೆ, ಪ್ರಜ್ಞಾವಂತ ಸಮಾಜ ಈ ಬಗ್ಗೆ ನಿರ್ಲಕ್ಷ್ಯ ತಾಳುತ್ತಿರುವುದು ಕೂಡ ಈ ಘಟನೆಗಳ ಮೂಲಕ ಸಾಬೀತಾಗಿದೆ.

ಸಮಾಜದ ಮನಸ್ಥಿತಿ ಯಾವ ಮಟ್ಟಿಗೆ ಅಪಾಯಕ್ಕೆ ಸಿಲುಕುತ್ತಿದೆ ಎಂಬುದರ ಸಂಕೇತ ಕೂಡ ಇದಾಗಿದೆ. ತಣ್ಣನೆಯ ಕ್ರೌರ್ಯವೊಂದು ಪುರುಷ ಸಮಾಜದಲ್ಲಿ ಹೇಗೆ ಗಟ್ಟಿಗೊಳ್ಳುತ್ತಿದೆ ಎಂಬುದು ಈ ಎರಡು ಘಟನೆಗಳಿಗೆ ಸಾಕ್ಷಿಯಾಗಿದೆ.
Published by:Seema R
First published: