ಹಿರಿಯ ಸಾಹಿತಿ ವಿಜಯಾ ದಬ್ಬೆ ನಿಧನ

news18
Updated:February 24, 2018, 1:20 PM IST
ಹಿರಿಯ ಸಾಹಿತಿ ವಿಜಯಾ ದಬ್ಬೆ ನಿಧನ
news18
Updated: February 24, 2018, 1:20 PM IST
ನ್ಯೂಸ್ 18 ಕನ್ನಡ
ಹಾಸನ (ಫೆ.24) : ನಾಡಿನ ಹಿರಿಯ ಸಾಹಿತಿ ವಿಜಯಾ ದಬ್ಬೆ ಹೃದಯಾಘಾತದಿಂದ ಶುಕ್ರವಾರ ಸಂಜೆ ಮೈಸೂರಿನ ವಿಜಯನಗರದ ಮನೆಯಲ್ಲಿ ನಿಧನರಾದರು.

ಇವರು ಮೂಲತಹ ಹಾಸನ ಜಿಲ್ಲೆಯ ಬೇಲೂರು ಸಮೀಪದ ದಬ್ಬೆ ಗ್ರಾಮದ ಡಿ.ವಿಜಯಾ ಅವರು ವಿಜಯಾ ದಬ್ಬೆ ಎಂದೇ ಖ್ಯಾತರಾಗಿದ್ದರು. ಮೈಸೂರು ವಿ.ವಿಯ ಕುವೆಂಪು ಕನ್ನಡ ಅಧ್ಯಯನ ಕೇಂದ್ರದಲ್ಲಿ ಪ್ರಾಧ್ಯಾಪಕಿಯಾಗಿದ್ದರು.

ಕವನ ಸಂಕಲನ, ಪ್ರವಾಸ ಕಥನ, ವಿಮರ್ಶೆ ಹಾಗೂ ಸಂಶೋಧನಾ ಕೃತಿಗಳನ್ನು ರಚಿಸಿದ್ದಾರೆ. ಇರುತ್ತವೆ ನೀರು ಲೋಹದ ಚಿಂತೆ ಪ್ರಮುಖ ಕವನ ಸಂಕಲನಗಳು. ನಾರಿ ದಾರಿ ದಿಗಂತ, ರಾಜ್ಯೋತ್ಸವ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ, ಅನುಪಮಾ ಪ್ರಶಸ್ತಿ, ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು. ಮಹಿಳಾ ಚಳವಳಿ ಕಟ್ಟಲು ಅವಿರತವಾಗಿ ಶ್ರಮಿಸಿದ್ದರು.

ಎರಡು ದಶಕಗಳ ಹಿಂದೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ತಲೆಗೆ ಬಿದ್ದ ಬಲವಾದ ಪೆಟ್ಟಿನಿಂದ ನೆನಪಿನ ಶಕ್ತಿಯನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದರು. 6 ಸಹೋದರಿಯರು, ಇಬ್ಬರು ಸಹೋದರರು ಅಗಲಿದ್ದಾರೆ.
First published:February 24, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...