• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಪರಸಂಗಕ್ಕಾಗಿ ಪ್ರಿಯಕರನಿಗೆ ದಾರೆ ಎರೆದಳು ಧನ ಕನಕ; ಪ್ರಿಯಕರನಿಂದ ಪಲ್ಲಂಗದ ವಿಡಿಯೋ ರೆಕಾರ್ಡ್?!

ಪರಸಂಗಕ್ಕಾಗಿ ಪ್ರಿಯಕರನಿಗೆ ದಾರೆ ಎರೆದಳು ಧನ ಕನಕ; ಪ್ರಿಯಕರನಿಂದ ಪಲ್ಲಂಗದ ವಿಡಿಯೋ ರೆಕಾರ್ಡ್?!

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

ಸದ್ಯ ಘಟನೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿದ್ದ ಮಾದನಾಯಕನಹಳ್ಳಿ ಪೊಲೀಸರು ಆರೋಪಿ ತಿಲಕ್ ಹಾಗೂ ಆತನ ತಮ್ಮ ವಿನೋದ್‌ನನ್ನ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಪೊಲೀಸರ ತನಿಖೆಯಿಂದಷ್ಟೆ ಘಟನೆಯ ಸತ್ಯಾಸತ್ಯತೆ ಬೆಳಕಿಗೆ ಬರಬೇಕಿದೆ.

  • Share this:

ಬೆಂಗಳೂರು; ಈಗೆ ಬಟಾ ಬಯಲು, ಬಯಲಿನ ನಡುವೆ ಇರೋದೆ ಈ ಒಂದು ಒಂಟಿ ಮನೆ. ಸದ್ಯ ಈ ಮನೆಯ ಒಂದೊಂದು ಗೋಡೆಗಳು ಒಂದೊಂದು ಕಥೆ ಹೇಳ್ತಾ ಇದ್ರೆ ಈ ಮನೆಯಲ್ಲಿ ವಾಸಿಸುವವರು ಮತ್ತೊಂದು ಕಥೆ ಹೇಳ್ತಾರೆ. ಹೌದು ಬೆಂಗಳೂರು ಉತ್ತರ ತಾಲೂಕಿನ ಕೆಂಗನಹಳ್ಳಿ ನಿವಾಸಿ ಸಂತ್ರಸ್ತ ಮಹಿಳೆ ಹಾಗೂ ಕೊಡಗು ಜಿಲ್ಲೆ ಸೋಮವಾರ ಪೇಟೆಯ ಇಬ್ಬರು ಯುವಕರ ನಡುವಿನ ಸಂಬಂಧವನ್ನು ಬಿಚ್ಚಿಡುತ್ತೆ ಈ ಮನೆ. ಹೌದು ಸುಮಾರು 32 ವರ್ಷ ಪ್ರಾಯದ ಮಹಿಳೆ ನನಗೆ ತಿಲಕ್ ಅನ್ನೋ ಯುವಕ ನನ್ನ ಬಳಿ ಇದ್ದ ಹಣ ವಡವೆ ಕಾರು ಲಪಟಾಯಿಸಿ ಕೊನೆಗೆ ಕೋನ್ ಐಸ್ ತಿನ್ನಿಸಿ ನನ್ನ ನಗ್ನ ಮಾಡಿ ಅತ್ಯಾಚಾರಗೈದು ವಿಡಿಯೋ ತೆಗೆದು, ತಿಲಕ್ ಹಾಗೂ ಆತನ ತಮ್ಮ ವಿನೋದ್ ಹಾಗೂ ಸೋಮಯ್ಯ ಎನ್ನುವವರು ಹಣಕ್ಕಾಗಿ ಬ್ಲಾಕ್‌ಮೆಲ್ ಮಾಡುತ್ತಿದ್ದಾನೆ ಎಂದು ಮಾದನಾಯಕನಹಳ್ಳಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.‌


ಒಂದು ವರ್ಷದ ಹಿಂದೆ ಸಂತ್ರಸ್ತ ಮಹಿಳೆ ಸೋಮವಾರಪೇಟೆಯ ತಮ್ಮ ಗಂಡನ ಊರಿಗೆ ಹೋಗಿದ್ದಾಗ ಆರೋಗ್ಯ ತಪ್ಪಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗುತ್ತಾಳೆ. ಅಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ತಿಲಕ್‌ನೊಂದಿಗೆ ಸ್ನೇಹವಾಯಿತಂತೆ. ಸ್ನೇಹ ಹೀಗೆ ಬೆಳೆದು ತಿಲಕ್ ನೆಲಮಂಗಲದಲ್ಲಿ ಒಂದು ಸ್ಕ್ಯಾನಿಂಗ್ ಸೆಂಟರ್ ತೆರೆಯಬೇಕು 25 ಲಕ್ಷ ಹಣ ಬೇಕಾಗುತ್ತದೆ, ನೀವು ಅರ್ಧ ಹಣ ನೀಡಿ ನಿಮ್ಮನ್ನ ಬ್ಯುಸಿನೆಸ್ ಪಾಟ್ನರ್ ಮಾಡ್ಕೊತ್ತಿನಿ ಅಂತ ಹೇಳಿದ್ನಂತೆ. ಸೀರೆ ವ್ಯಾಪಾರ ಮಾಡುತ್ತಿದ್ದ ಈಕೆ ಒಂದಷ್ಟು ಹಣ ಕೂಡಿಟ್ಟುಕೊಂಡಿದ್ದಳು. ಬ್ಯುಸಿನೆಲ್ ಮಾಡಿ ಹಣ ಮಾಡಬಹುದು ಅನ್ನೋ ಆಸೆಯಿಂದ ಮನೆಯಲ್ಲಿರುವ ಬಂಗಾರವನ್ನೆಲ್ಲಾ ಅಡ ಇಟ್ಟು ತಿಲಕ್‌ನಿಗೆ ಒಟ್ಟು ಐದು ಲಕ್ಷದಷ್ಟು ಹಣ ಕೊಟ್ಟಿದ್ದಾರೆ. ಹಾಗೂ ತಿಲಕ್ ಸೋಮವಾರ ಪೇಟೆ ಹಾಗೂ ನೆಲಮಂಗಲಕ್ಕೆ ಓಡಾಡಲು ಈಕೆಯ ಬಳಿ ಇದ್ದ ಸ್ವಿಫ್ಟ್ ಕಾರನ್ನು ಕೊಟ್ಟಿದ್ದಾಳೆ. ಈ ವೇಳೆ ಒಂದು ದಿನ ಹಣ ಪಡೆಯಲು ಬಂದಾಗ ಹಣ ತೆಗೆದುಕೊಂಡು ಆತನ ತಮ್ಮನೊಂದಿಗೆ ಕಳುಹಿಸಿ ಮತ್ತೆ ಸಂತ್ರಸ್ತೆಯ ಮನೆಗೆ ಮಧ್ಯಾಹ್ನ‌ ಮೂರು ಗಂಟೆ ವೇಳೆಗೆ ಹೋದನಂತೆ‌. ತಾನು ತಂದಿದ್ದ ಕೋನ್ ಐಸ್‌ ಸಂತ್ರಸ್ತೆಗೆ ತಿನ್ನಲು ನೀಡಿ ಆಕೆ ಪ್ರಜ್ಞೆ ತಪ್ಪಿದ ನಂತರ ಆಕೆಯನ್ನ ಮಂಚದ ಮೇಲೆ ಎಳೆದುಕೊಂಡು ಹೋಗಿ ವಿವಸ್ತ್ರಗೊಳಿಸಿ ಅತ್ಯಾಚಾರ ಮಾಡಿದನಂತೆ. ಐದು ಗಂಟೆ ಸುಮಾರಿಗೆ ಎಚ್ಚರವಾದಾಗ ಗೊತ್ತಾಗದೆ ಏನೋ ಮಾಡಿಬಿಟ್ಟೆ, ಯಾರಿಗೂ ಹೇಳಬೇಡ ಹೇಳಿದರೆ ನಿನ್ನ ಸಂಸಾರ ಹಾಳಾಗುತ್ತದೆ ಎಂದು ಅಲ್ಲಿಂದ ತಿಲಕ್ ಹೊರಟುಹೋದನಂತೆ.


ಈ ನಡುವೆ ಏನಾಯ್ತೋ ಏನು ಇದ್ದಕ್ಕಿದ್ದ ಹಾಗೆ ಸಂತ್ರಸ್ತೆ ತಿಲಕ್ ಬಳಿ ಹಣ ಕೇಳಿದ್ದಾಳೆ. ಆಗ ತಿಲಕ್ ಸಮಯ ತೆಗೆದುಕೊಂಡು ಆಕೆ ಕೊಟ್ಟಿದ್ದ ಕಾರು ಹಾಗೂ ಸ್ವಲ್ಪ ಹಣ ಹಿಂದಿರುಗಿಸಿದನಂತೆ‌. ಸೋಮವಾರಪೇಟೆಗೆ ಬಂದರೆ ಇನ್ನುಳಿದ ಹಣ ಕೊಡುತ್ತೇನೆ ಎಂದು ಕರೆಸಿಕೊಂಡು ದಿನವೆಲ್ಲ ಸುತ್ತಾಡಿಸಿ ಖಾಲಿ ಕೈನಲ್ಲಿ ವಾಪಸ್ ಕಳುಹಿಸಿದನಂತೆ. ಈ ನಡುವೆ ತಿಲಕ್ ತಮ್ಮ ವಿನೋದ್ ಪರಿಚಯವಾಗಿ ಆಕೆಯ ಬಳಿ ಹಣದ ವಿಷಯವನ್ನ ಸಂತ್ರಸ್ತ ಮಹಿಳೆ ಹಂಚಿಕೊಂಡಿದ್ದು, ವಿನೋದ್ ಹಣ ಕೊಡಿಸುವುದಾಗಿ ಹೇಳಿದನಂತೆ. ಒಂದು ದಿನ ವಿನೋದ್ ಹಾಗೂ ಆತನ‌ ಸಂಬಂಧಿ ಸೋಮಯ್ಯ ಸಂತ್ರಸ್ತೆ ಮನೆಗೆ ಬಂದು ವಿನೋದ್‌ನ ಮೊಬೈಲ್‌ನಲ್ಲಿದ್ದ ವಿಡಿಯೋವನ್ನ ತೋರಿಸ್ದಿದ್ದು, ವೀಡಿಯೋ ನೋಡಿ ಸಂತ್ರಸ್ತ ಮಹಿಳೆಗೆ ಶಾಕ್‌ ಆಗಿದೆ.


ಸಂತ್ರಸ್ತೆಗೆ ತಿಲಕ್ ಕೋನ್ ಐಸ್ ತಿನ್ನಿಸಿ ಅತ್ಯಾಚಾರ ಮಾಡಿದ್ದಾಗ ಆ ವಿಡಿಯೋ ತೆಗೆದಿದ್ದಾರೆ, ಅಲ್ಲದೆ ಇದೇ ವಿಡಿಯೋ ಇಟ್ಟುಕ್ಕೊಂಡು ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದಾರಂತೆ ಹಾಗೂ ಒಂದು ವೇಳೆ ಹಣ ಕೊಡಲಿಲ್ಲವಾದರೆ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗುವುದು ಎಂದು ಬೆದರಿಕೆ ಹಾಕಿದ್ದಾರೆ. ನಮಗೆ ನ್ಯಾಯ ಕೊಡಿಸಿ ಎಂದು ಸಂತ್ರಸ್ತ ಮಹಿಳೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.


ಇದನ್ನು ಓದಿ: ಸಂಚಾರಿ ನಿಯಮ ಉಲ್ಲಂಘನೆ; ಬಾಕಿ ಇರುವ ದಂಡದ ಮೊತ್ತ ಬರೋಬ್ಬರಿ 329 ಕೋಟಿ ರೂ.!


ಇನ್ನೂ ಈ ವಿಷಯಕ್ಕೆ ಸಂಬಂಧಿಸಿದಂತೆ ಯುವಕರು ಹಣ ಕಾರು ಪಡೆದಿರುವುದಾಗಿ ಒಪ್ಪಿಕೊಂಡಿದ್ದಾರೆ. ಆರೋಪಿ ತಿಲಕ್‌ಗೆ ಕಳೆದ ಆರು ತಿಂಗಳಹಿಂದೆಯಷ್ಟೆ ಮದುವೆಯಾಗಿದ್ದು ಈ ಸಂಬಂಧಗಳಿಂದ ವೈಯಕ್ತಿಕ ಜೀವನಕ್ಕೆ ತೊಡಕಾಗುವುದು ಎಂದು ಸಂತ್ರಸ್ತೆಯೊಂದಿಗೆನ ಸಂಪರ್ಕ ಕಡಿದುಕೊಳ್ಳಲು ಈಕೆಯನ್ನ ಅವೈಡ್ ಮಾಡಿದನಂತೆ. ತಿಲಕ್ ಅವೈಡ್ ಮಾಡುತ್ತಿದ್ದಂತೆ ಆತನ ತಮ್ಮ ವಿನೋದ್ ಈಕೆಯ ಜೊತೆ ಸಂಬಂಧ ಬೆಳೆಸಿದನಂತೆ. ಇದ್ಯಾವುದು ಬೇಡಪ್ಪ ನಮ್ಮ‌ಪಾಡಿಗೆ ನಾವಿರೋಣ ಅಂತ ಒಂದಷ್ಟ ಹಣ ಕಾರು ವಾಪಸ್ ನೀಡಿ ಉಳಿಕೆ‌ ಹಣಕ್ಕೆ ಸಮಯಾವಕಾಶ ಕೇಳಿದ್ದೆ. ಅಷ್ಟರಲ್ಲಿ ಈ ರೀತಿ ಮಾಡಿದ್ದಾರೆ ಅಂತ ಪೊಲೀಸರ ಬಳಿ ಹೇಳಿಕೊಂಡಿದ್ದಾರಂತೆ ಸಹೋದರರು. ಅಷ್ಟೇ ಅಲ್ಲದೇ ನಮ್ಮ ಹುಡುಗರು ಅಂತಹವರಲ್ಲ ದುಡ್ಡು ಇಸ್ಕೊಂಡಿದ್ರು. ಆದ್ರೆ ವಾಪಸ್ ಕೊಡುತ್ತಾರೆ. ಅವರು ಯಾವ ವಿಡಿಯೋನು ಮಾಡಿಲ್ಲ ಅಂತಾರೆ ಆರೋಪಿ ಸಹೋದರರ ಸಂಬಂಧಿಗಳು.


ಸದ್ಯ ಘಟನೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿದ್ದ ಮಾದನಾಯಕನಹಳ್ಳಿ ಪೊಲೀಸರು ಆರೋಪಿ ತಿಲಕ್ ಹಾಗೂ ಆತನ ತಮ್ಮ ವಿನೋದ್‌ನನ್ನ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಪೊಲೀಸರ ತನಿಖೆಯಿಂದಷ್ಟೆ ಘಟನೆಯ ಸತ್ಯಾಸತ್ಯತೆ ಬೆಳಕಿಗೆ ಬರಬೇಕಿದೆ.

Published by:HR Ramesh
First published: