ಮಹಿಯರಿಗೆ ಅಸಭ್ಯವಾಗಿ ಮೆಸೇಜ್ (Vulgar Message) ಮಾಡಿದ ಹಿನ್ನೆಲೆ ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಡಾ.ವೆಂಕಟೇಶ್ ಮೌರ್ಯಗೆ (Venkatesh Mourya) ಮಹಿಳೆಯರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಹಲವು ದಿನಗಳಿಂದ ವೆಂಕಟೇಶ್ ಮೌರ್ಯ ಅಸಭ್ಯವಾಗಿ ಮಹಿಳೆಯರಿಗೆ (Women) ಮೆಸೇಜ್ ಮಾಡ್ತಿದ್ದನಂತೆ. ಮಾತುಕತೆಗೆ ಕರೆಸಿ, ಮಹಿಳೆಯರು ಹಿಗ್ಗಾಮುಗ್ಗಾ ಜಾಡಿಸಿದ್ದಾರೆ. ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ (Palace Ground, Bengaluru) ಬಳಿ ವೆಂಕಟೇಶ್ ಬರುತ್ತಿದ್ದಂತೆ ಸಂಘಟನೆಗಳ ಜೊತೆ ಬಂದಿದ್ದ ಮಹಿಳೆಯರು ತರಾಟೆ ತೆಗದುಕೊಂಡಿದ್ದಾರೆ. ಈ ವೇಳೆ ಅಸಹಾಯಕನಂತೆ ವೆಂಕಟೇಶ್ ಮೌರ್ಯ ನಿಂತಿದ್ದರು. ಬಳಿಕ ಸದಾಶಿವ ನಗರ ಪೊಲೀಸ್ ಠಾಣೆಯಲ್ಲಿ ವೆಂಕಟೇಶ್ ವೌರ್ಯ, ಚಂದ್ರಕಲಾ, ತುಳಸಿ, ಪದ್ಮ ನಯನ ಸೇರಿ ಹಲವರು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ.
ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದಾರೆ ಅಂತ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇತ್ತ ಮಹಿಳೆಯರು ಅಶ್ಲೀಲ ಮೆಸೇಜ್ ಮಾಡಿರುವ ಬಗ್ಗೆ ಸದಾಶಿವ ನಗರ ಪೊಲೀಸ್ ಠಾಣೆಯಲ್ಲಿ ಪ್ರತಿ ದೂರು ದಾಖಲಿಸಿದ್ದಾರೆ. ಎರಡೂ ಕಡೆಯಿಂದ ದೂರು ಸ್ವೀಕರಿಸಿರುವಮ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ವೆಂಕಟೇಶ್ ಮೌರ್ಯ ದೂರಿನಲ್ಲಿ ಏನಿದೆ?
ಡಿಸೆಂಬರ್ 17ರಂದು ಬೆಂಗಳೂರು ಪ್ಯಾಲೇಸ್ ಮೈದಾನದಲ್ಲಿ ಆಯೋಜನೆ ಮಾಡಲಾಗಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಕ್ಕಳ ಜೊತೆ ಮನೆಗೆ ಹಿಂದಿರುಗುತ್ತಿರುವ ನನ್ನ ಮೇಲೆ ಹಲ್ಲೆ ನಡೆಸಲಾಗಿದೆ.
ಮಕ್ಕಳು ಕಾರ್ ಹತ್ತುತ್ತಿದ್ದಂತೆ ಕೈಯಲ್ಲಿ ಕಲ್ಲು, ಕಟ್ಟಿಗೆ ಹಿಡಿದುಕೊಂಡ ಬಂದ ಮಹಿಳೆಯರು ಕಾರ್ ಗ್ಲಾಸ್ ಒಡೆದು ಹಾಕಿದ್ದಾರೆ. ಪೊಲೀಸ್ ಕಂಟ್ರೋಲ್ಗೆ ಕರೆ ಮಾಡಲು ಮುಂದಾದಗ ಮೊಬೈಲ್ ಕಿತ್ತುಕೊಂಡಿದ್ದಾರೆ. ತದನಂತರ ಮೊಬೈಲ್ ಸಹ ಒಡೆದು ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.
ಸುಳ್ಳು ಸುದ್ದಿಯಿಂದ ಮಾನ ಹಾನಿ
ಪೊಲೀಸರು ಬಂದ ಬಳಿಕ ಅವರ ರಕ್ಷಣೆಯಲ್ಲಿ ಠಾಣೆಗೆ ಬಂದಿದ್ದೇನೆ. ಆದ್ರೆ ನನ್ನನ್ನು ಬಂಧಿಸಲಾಗಿದೆ ಎಂದು ಫೇಸ್ಬುಕ್ ಲೈವ್ ಬಂದು ಸುಳ್ಳು ಸುದ್ದಿ ಹಬ್ಬಿಸುವ ಮೂಲಕ ಮಾನಹಾನಿ ಮಾಡಲಾಗಿದೆ. ಠಾಣೆಗೆ ಬಂದಾಗ ಮಹಿಳೆಯರು ಬಂದಿದ್ದರು.
ಸ್ವಾಮೀಜಿ ಬಗ್ಗೆ ಪೋಸ್ಟ್ ಹಾಕಿದ್ದಕ್ಕೆ ಹಲ್ಲೆ
ನಾನು ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಚಿತ್ರದುರ್ಗದವರ ಬಗ್ಗೆ ಫೇಸ್ಬುಕ್ನಲ್ಲಿ ಕೆಟ್ಟದಾಗಿ ಪೋಸ್ಟ್ ಹಾಕಿದ್ದೆ. ಇದೇ ಉದ್ದೇಶದಿಂದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಚಿತಾವಣೆ ಮೇರೆಗೆ ಇವರೆಲ್ಲರೂ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ.
ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದಾರೆ. ದೂರಿನಲ್ಲಿ ತಿಳಿಸಿರುವ ಮಹಿಳೆಯರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ವೆಂಕಟೇಶ್ ಮೌರ್ಯ ಮನವಿ ಮಾಡಿಕೊಂಡಿದ್ದಾರೆ.
ಸೌಭಾಗ್ಯಗೆ ನ್ಯಾಯಾಂಗ ಬಂಧನ
ಚಿತ್ರದುರ್ಗದ ಮುರುಘಾ ಸ್ವಾಮಿ ವಿರುದ್ಧದ ಪಿತೂರಿ ಪ್ರಕರಣದಲ್ಲಿ ಸೌಭಾಗ್ಯ ಬಸವರಾಜನ್ಗೆ ನ್ಯಾಯಾಂಗ ಬಂಧನವಾಗಿದೆ. ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ, ಮಾಜಿ ಶಾಸಕ ಎಸ್.ಕೆ.ಬಸವರಾಜನ್ ಪತ್ನಿ ಸೌಭಾಗ್ಯ ಅವರನ್ನು ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ಗುರುವಾರ ದಾವಣಗೆರೆಯಲ್ಲಿ ವಶಕ್ಕೆ ಪಡೆದಿದ್ರು.
ಸೌಭಾಗ್ಯರನ್ನು 1 ದಿನ ವಿಚಾರಣೆ ಬಳಿಕ ಪೊಲೀಸರು ಚಿತ್ರದುರ್ಗ 1ನೇ JMFC ಕೋರ್ಟ್ ಹಾಜರು ಪಡಿಸಿದ್ರು. ನ್ಯಾಯಾಲಯ ಡಿಸೆಂಬರ್ 26ರ ವರೆಗೆ ಸೌಭಾಗ್ಯ ಬಸವರಾಜನ್ಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಿದೆ.
ಹೊನ್ನಾಳಿ ಡಾನ್ ಹೋರಿ ಸಾವು
ಹೊನ್ನಾಳಿ ಸುತ್ತಮುತ್ತ ಖ್ಯಾತಿ ಗಳಿಸಿದ್ದ ಹೊನ್ನಾಳಿ ಡಾನ್ ಹೆಸರಿನ ಹೋರಿ ಸಾವನ್ನಪ್ಪಿದೆ. ಆದ್ದರಿಂದ ಹೋರಿ ಮಾಲೀಕರಾದ ಮಹೇಶ್ ಹಾಗೂ ಚಂದ್ರು ಸಹೋದರರ ಕುಟುಂಬ ಕಣ್ಣೀರಿಟ್ಟಿದೆ.
ದಾವಣಗೆರೆ, ಶಿವಮೊಗ್ಗ, ಹಾವೇರಿ ಸೇರಿದಂತೆ ಹತ್ತಾರು ಜಿಲ್ಲೆಯಲ್ಲಿ ಹೊನ್ನಾಳಿ ಡಾನ್ ಭಾರೀ ಫೇಮಸ್ ಆಗಿತ್ತು. ಹೋರಿ ಬೇದರಿಸುವ ಸ್ಪರ್ಧೆಯಲ್ಲಿ ಭಾಗಿಯಾಗಿ ಹಲವು ಪ್ರಶಸ್ತಿ ಗೆದ್ದಿತ್ತು. ಶಾಸಕ ಎಂಪಿ ರೇಣುಕಾಚಾರ್ಯ ಅಂತಿಮ ದರ್ಶನಕ್ಕೆ ಆಗಮಿಸಿದ್ರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ