HOME » NEWS » State » WOMEN RAPED AND MURDERED IN HASAN GNR

ಹಾಸನದಲ್ಲಿ ನಿರ್ಗತಿಕ ಮಹಿಳೆ ಮೇಲೆ ಅತ್ಯಾಚಾರ; ಆರೋಪಿಯ ಕೃತ್ಯ ಸಿಸಿ ಕ್ಯಾಮರಾದಲ್ಲಿ ಸೆರೆ

ನಗರದ ಜನರಿಗೆ ಬೆಳ್ಳಬೆಳ್ಳಂಗೆ ಶಾಕ್ ಕಾದಿತ್ತು. ಯಾಕಂದ್ರೆ ಹಗಲು ಹೊತ್ತಿನಲ್ಲಿ ಯಾವಾಗಲೂ ಜನರಿಂದ ಗಿಜಿಗುಡುತ್ತಿದ್ದ ಬಿಎಂ ರಸ್ತೆಯಲ್ಲಿ ತಡರಾತ್ರಿ ಕೊಲೆಯೊಂದು ನಡೆದು ಹೋಗಿತ್ತು. ಸುಮಾರು 45 ವರ್ಷದ ಮಹಿಳೆಯ ಮೇಲೆ ಕಲ್ಲು ಎತ್ತಿಹಾಕಿ ಯಾರೋ ದುಷ್ಕರ್ಮಿಗಳು ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿದ್ರು.

news18-kannada
Updated:August 26, 2020, 8:45 AM IST
ಹಾಸನದಲ್ಲಿ ನಿರ್ಗತಿಕ ಮಹಿಳೆ ಮೇಲೆ ಅತ್ಯಾಚಾರ; ಆರೋಪಿಯ ಕೃತ್ಯ ಸಿಸಿ ಕ್ಯಾಮರಾದಲ್ಲಿ ಸೆರೆ
ಸಾಂದರ್ಭಿಕ ಚಿತ್ರ
  • Share this:
ಹಾಸನ(ಆ.26): ಆಶ್ರಯವಿಲ್ಲದ ಆಕೆ ಹಾಸನದ ಬಿಎಂ ರಸ್ತೆಯ ಪಕ್ಕದಲ್ಲೇ ಇದ್ದ ಅಂಗಡಿಯೊಂದರ ಮುಂದೆ ಅನಾಥವಾಗಿ ಮಲಗಿದ್ದಳು. ಹೀಗೆ ಅನಾಥವಾಗಿ ಮಲಗಿದ್ದವಳ ಮೇಲೆ ಕಾಮುಕನ ಕಣ್ಣು ಬಿದ್ದಿತ್ತು. ಮೊದಲು ಆಕೆಯನ್ನು ಅತ್ಯಾಚಾರ ಮಾಡಲು ಯತ್ನಿಸಿದ ಕಾಮುಕ ಆಕೆ ಒಪ್ಪದಿದ್ದಾಗ ಆಕೆಯ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಸಾಯಿಸಿ ಸತ್ತವಳ ದೇಹದ ಮೇಲೆ ಮೃಗದ ರೀತಿ ಅತ್ಯಾಚಾರ ಎಸಗಿದ್ದಾನೆ. ಇಡೀ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಹಾಸನ ನಗರದ ಜನ ಬೆಚ್ಚಿಬಿದ್ದಿದ್ದಾರೆ.

ನಗರದ ಜನರಿಗೆ ಬೆಳ್ಳಬೆಳ್ಳಂಗೆ ಶಾಕ್ ಕಾದಿತ್ತು. ಯಾಕಂದ್ರೆ ಹಗಲು ಹೊತ್ತಿನಲ್ಲಿ ಯಾವಾಗಲೂ ಜನರಿಂದ ಗಿಜಿಗುಡುತ್ತಿದ್ದ ಬಿಎಂ ರಸ್ತೆಯಲ್ಲಿ ತಡರಾತ್ರಿ ಕೊಲೆಯೊಂದು ನಡೆದು ಹೋಗಿತ್ತು. ಸುಮಾರು 45 ವರ್ಷದ ಮಹಿಳೆಯ ಮೇಲೆ ಕಲ್ಲು ಎತ್ತಿಹಾಕಿ ಯಾರೋ ದುಷ್ಕರ್ಮಿಗಳು ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿದ್ರು. ಆದ್ರೆ ತನಿಖೆಯ ಬೆನ್ನತ್ತಿಹೋದ ಪೊಲೀಸರಿಗೆ ಕೊಲೆಗಿಂತಲೂ ಭೀಕರವಾದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಹೌದು, ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಬಿಎಂ ರಸ್ತೆ ಪಕ್ಕ ಅಂಗಡಿಯೊಂದರ ಮುಂದೆ ಮಲಗಿದ್ದ ಮಹಿಳೆಯ ಬಳಿ ಬಂದ ವ್ಯಕ್ತಿಯೊಬ್ಬ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಆಕೆ ಇದಕ್ಕೆ ವಿರೋಧಿಸಿದಾಗ ಮೆಲ್ಲಗೆ ಅಲ್ಲಿಂದ ಜಾಗ ಖಾಲಿ ಮಾಡಿದ ಆತ ಮಹಿಳೆ ಮಲಗುವುದನ್ನೇ ಕಾದಿದ್ದಾನೆ. ಇರಲು ಬೇರೆ ಜಾಗವಿಲ್ಲದ ಮಹಿಳೆ ಅನಿವಾರ್ಯವಾಗಿ ಅಲ್ಲೇ ಅಂಗಡಿ ಮುಂದೆ ಮಲಗಿದ್ದಾಳೆ. ಆಕೆ ಮಲಗಿದ್ದೇ ತಡ ನಿಧಾನವಾಗಿ ಬಂದ ಕಿರಾತಕ ಸಿಮೆಂಟ್ ಇಟ್ಟಿಗೆಯೊಂದನ್ನು ನಿರ್ಗತಿಕ ಮಹಿಳೆಯ ತಲೆ ಮೇಲೆ ಎತ್ತಿಹಾಕಿ ಅಮಾನುಷವಾಗಿ ಕೊಂದು ಹಾಕಿದ್ದಾನೆ. ಅಷ್ಟೇ ಅಲ್ಲದೆ ಸತ್ತ ಮಹಿಳೆಯ ಮೇಲೆ ಮೃಗದ ರೀತಿ ಅತ್ಯಾಚಾರ ಎಸಗಿ ಪರಾರಿಯಾಗಿದ್ದಾನೆ.

ಇದನ್ನೂ ಓದಿ: ಕೊಡಗಿನಲ್ಲಿ ಕೊರೋನಾಗೆ ಮತ್ತೊಂದು ಬಲಿ - ಸಾವಿನ ಸಂಖ್ಯೆ 17ಕ್ಕೆ ಏರಿಕೆ

ಮೊದಲೇ ಮಹಿಳೆಯ ಕೊಲೆಯಿಂದ ಬೆಚ್ಚಿಬಿದ್ದಿದ್ದ ಹಾಸನ ಜನ, ಇದೀಗ ಕೊಲೆ ಮಾಡಿ ನಂತರ ಅತ್ಯಾಚಾರ ಎಸಗಿದ ವಿಷ್ಯ ಕೇಳಿ ದಂಗುಬಡಿದು ಹೋಗಿದ್ದಾರೆ. ಇಷ್ಟು ವಿಕೃತವಾಗಿ ನಡೆದುಕೊಂಡಿರುವ ಆತ ಯಾರೋ ಸೈಕೋ ಇರಬೇಕು.‌ ಆದಷ್ಟು ಬೇಗ ಆತನನ್ನು ಬಂಧಿಸಿ ಹೆಚ್ಚಿನ ಅನಾಹುತ ಆಗುವುದನ್ನು ತಪ್ಪಿಸಬೇಕು ಅಂತಿದ್ದಾರೆ ಹಾಸನ ಜನತೆ.
Published by: Ganesh Nachikethu
First published: August 26, 2020, 8:42 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories