Donor Transplants: ಜೀವಂತ ಅಂಗಾಂಗ ದಾನ: ಪುರುಷರಿಗಿಂತ ಮಹಿಳೆಯರದ್ದೇ ಸಿಂಹಪಾಲು

ಬದುಕಿದ್ದಾಗಲೇ ಅಂಗಾಂಗ ದಾನ ಮಾಡುವವರ ಸಂಖ್ಯೆಯಲ್ಲಿ ಮಹಿಳೆಯರದ್ದೇ ದೊಡ್ಡಪಾಲು ಎಂದು ಕೆಲವು ಅಂಕಿ ಅಂಶಳು ಹೇಳುತ್ತಿವೆ. ಕುಟುಂಬ ಮತ್ತು ಸಾಮಾಜಿಕ ಒತ್ತಡವು ಹೆಚ್ಚಾಗಿ ಮಹಿಳೆಯರನ್ನು ತಮ್ಮ ಅಂಗಗಳನ್ನು ದಾನ ಮಾಡಲು ಒತ್ತಾಯಿಸುತ್ತದೆ ಎಂದು ವೈದ್ಯರು ಹೇಳುತ್ತಿದ್ದಾರೆ. ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರು ತಮ್ಮ ಕುಟುಂಬದ ಸದಸ್ಯರ ಜೀವ ಉಳಿಸಲು ತಮ್ಮ ಅಂಗಾಂಗಗಳನ್ನು ದಾನ ಮಾಡುತ್ತಿದ್ದಾರೆ ಎಂಬುದು ನಗರದ ಆಸ್ಪತ್ರೆಗಳ ಅಂಕಿ ಅಂಶ ಹೇಳುತ್ತಿವೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಬೆಂಗಳೂರು: ವ್ಯಕ್ತಿಯ ಸಾವಿನ (Death) ನಂತರದ ಅಂಗಾಂಗ ದಾನವು (Donor) ಬೇರೆ ದಾನಗಳಷ್ಟೇ ಶ್ರೇಷ್ಠವಾಗಿದೆ. ಒಬ್ಬರ ಜೀವ ಉಳಿಸುವ, ಹೊಸ ಬದುಕು ಕಟ್ಟುವ ಈ ಅಂಗಾಗ ದಾನ (Organ donation) ಸತ್ತ ಮೇಲೂ ಸಾರ್ಥಕತೆ ನೀಡುವಂತದ್ದು. ಮರಣದ ನಂತರ ಅಂಗಾಂಗ ದಾನ ಮಾಡುವುದು ಒಂದು ಕಡೆಯಾದರೆ ಬದುಕಿನಲ್ಲೂ ತಮ್ಮ ಅಂಗಾಂಗಳನ್ನು ದಾನ ಮಾಡುವವರು ಸಹ ಇದ್ದಾರೆ. ಪ್ರೀತಿ ಪಾತ್ರರ ಜೀವ ಉಳಿಸಲು, ಹಣದ (Money) ಅನಿವಾರ್ಯತೆಯೋ ಹೀಗೆ ಹಲವಾರು ಕಾರಣಕ್ಕೆ ತಮ್ಮ ಅಂಗಗಳನ್ನು ಇನ್ನೊಂದು ಜೀವ ಉಳಿವಿಗಾಗಿ ದಾನ ಮಾಡುತ್ತಾರೆ. ಹೀಗೆ ಬದುಕಿದ್ದಾಗಲೇ ಅಂಗಾಂಗ ದಾನ ಮಾಡುವವರ ಸಂಖ್ಯೆಯಲ್ಲಿ ಮಹಿಳೆಯರದ್ದೇ (Women) ದೊಡ್ಡಪಾಲು ಎಂದು ಕೆಲವು ಅಂಕಿ ಅಂಶಳು ಹೇಳುತ್ತಿವೆ.

ಅಂಗಾಂಗ ದಾನದಲ್ಲೂ ಮಹಿಳೆಯರದ್ದೇ ದೊಡ್ಡಪಾಲು 
ಕುಟುಂಬ ಮತ್ತು ಸಾಮಾಜಿಕ ಒತ್ತಡವು ಹೆಚ್ಚಾಗಿ ಮಹಿಳೆಯರನ್ನು ತಮ್ಮ ಅಂಗಗಳನ್ನು ದಾನ ಮಾಡಲು ಒತ್ತಾಯಿಸುತ್ತದೆ ಎಂದು ವೈದ್ಯರು ಹೇಳುತ್ತಿದ್ದಾರೆ. ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರು ತಮ್ಮ ಕುಟುಂಬದ ಸದಸ್ಯರ ಜೀವ ಉಳಿಸಲು ತಮ್ಮ ಅಂಗಾಂಗಗಳನ್ನು ದಾನ ಮಾಡುತ್ತಿದ್ದಾರೆ ಎಂಬುದು ನಗರದ ಆಸ್ಪತ್ರೆಗಳ ಅಂಕಿ ಅಂಶ ಹೇಳುತ್ತಿವೆ.

ಬಿಜಿಎಸ್ ಜನರಲ್ ಗ್ಲೋಬಲ್ ಆಸ್ಪತ್ರೆಯ ಅಂಕಿಅಂಶ ಪ್ರಕಾರ ಏನಿದೆ?
ಬಿಜಿಎಸ್ ಜನರಲ್ ಗ್ಲೋಬಲ್ ಆಸ್ಪತ್ರೆಯ ಅಂಕಿಅಂಶಗಳು ಹೇಳುವ ಪ್ರಕಾರ ಜೀವಂತ ಮೂತ್ರಪಿಂಡ ದಾನಿಗಳ ಕಸಿ ಪ್ರಕರಣಗಳಲ್ಲಿ, 90% ರಷ್ಟು ಮಹಿಳೆಯರು ಪತಿಗೆ ತಮ್ಮ ಅಂಗಾಂಗವನ್ನು ದಾನ ಮಾಡುತ್ತಿದ್ದಾರೆ ಮತ್ತು ಕೇವಲ 10% ರಷ್ಟು ಪುರುಷರು ಪತ್ನಿಗೋಸ್ಕರ ಕಿಡ್ನಿಯಂತಹ ಅಂಗಾಂಗ ದಾನ ಮಾಡುತ್ತಿರುವುದಾಗಿ ಹೇಳಿದೆ.

ಇನ್ನೂ ಮಕ್ಕಳ ವಿಚಾರದಲ್ಲೂ ಸಹ ತಾಯಿಯೇ ಅಂಗಗಳನ್ನು ದಾನ ಮಾಡುವ ಸಾಧ್ಯತೆ ಹೆಚ್ಚಿದೆ. ಪೀಡಿತ ಮಗುವಿನ ಪೋಷಕರ ದಾನದ ಸಂದರ್ಭಗಳಲ್ಲಿ, 70% ರಷ್ಟು ದಾನಿಗಳು ತಾಯಂದಿರಾದರೆ, ಕೇವಲ 30% ದಾನಿಗಳು ಮಕ್ಕಳ ತಂದೆಯಾಗಿರುತ್ತಾರೆ ಎಂದು ಡೆಟಾವು ಬಹಿರಂಗಪಡಿಸಿದೆ.

ಮೂತ್ರಪಿಂಡದ ಕಸಿ
ಬೆಂಗಳೂರಿನ ಬಿಜಿಎಸ್ ಜನರಲ್ ಗ್ಲೋಬಲ್ ಆಸ್ಪತ್ರೆಯು 2021ರಲ್ಲಿ ಮಾಡಿರುವ ಮೂತ್ರಪಿಂಡದ ಕಸಿ ಬಗ್ಗೆ ಅಂಕಿಅಂಶಗಳ ಬಗ್ಗೆ ನೋಡುವುದಾದರೆ, ಈ ಆಸ್ಪತ್ರೆಯಲ್ಲಿ 2021ರಲ್ಲಿ 61 ಜೀವಂತ ದಾನಿಗಳ ಮೂತ್ರಪಿಂಡ ಕಸಿ ಮಾಡಲಾಗಿತ್ತು. ಅಲ್ಲಿ ಮೂತ್ರಪಿಂಡ ದಾನ ಮಾಡಿದ ದಾನಿಗಳಲ್ಲಿ 45 ಮಹಿಳಾ ದಾನಿಗಳೇ ಇದ್ದದ್ದು ಈ ವರದಿಗೆ ಮತ್ತಷ್ಟು ಪುಷ್ಠಿ ನೀಡಿರುವಂತದ್ದು. ಮತ್ತು 2022ರಲ್ಲಿ ಇಲ್ಲಿಯವರೆಗೆ ಆಸ್ಪತ್ರೆಯು 28 ಜೀವಂತ ದಾನಿಗಳ ಮೂತ್ರಪಿಂಡ ಕಸಿಗಳನ್ನು ಮಾಡಿದ್ದು, ಇಲ್ಲೂ ಸಹ 20 ಮಂದಿ ಮಹಿಳಾ ದಾನಿಗಳೇ ಇದ್ದಾರೆ.

ಯಕೃತ್ತಿನ ಕಸಿ
ಬಿಜಿಎಸ್ ಜನರಲ್ ಗ್ಲೋಬಲ್ ಹಾಸ್ಪಿಟಲ್ಸ್ ನ ಎಚ್‌ಪಿಬಿ ಮತ್ತು ಮಲ್ಟಿ-ಆರ್ಗನ್ ಟ್ರಾನ್ಸ್‌ಪ್ಲಾಂಟೇಶನ್‌ನ ಎಚ್‌ಒಡಿ ಮತ್ತು ಹಿರಿಯ ಸಲಹೆಗಾರ ಡಾ.ಮಹೇಶ್ ಗೋಪಸೆಟ್ಟಿ, ಹೇಳುವ ಪ್ರಕಾರ “ಯಕೃತ್ತಿನ ಕಸಿ ವಿಷಯಕ್ಕೆ ಬಂದಾಗಲೂ ಇದೇ ನಡೆದಿದೆ. ಆದಾಗ್ಯೂ, ಹೆಚ್ಚಿನ ಜೀವಂತ ದಾನಿಗಳು ಮಹಿಳೆಯರಾಗಿದ್ದರೆ, ಮತ್ತು ಸತ್ತ ನಂತರದ ದಾನಿಗಳು ಪುರುಷರು ಎಂದು ಅವರು ತಿಳಿಸಿದರು. ಜೀವಂತ ದಾನಿಗಳಲ್ಲಿ ಎಪ್ಪತ್ತು ಪ್ರತಿಶತ ಮಹಿಳೆಯರು ಆಗಿರುತ್ತಾರೆ. 70% ರಷ್ಟು ಮಹಿಳೆಯರಿದ್ದಾರೆ ಮತ್ತು 30% ರಷ್ಟು ಪುರುಷರಿದ್ದಾರೆ ” ಎಂದು ಅವರು ಹೇಳಿದರು.

ಇತರೆ ಆಸ್ಪತ್ರೆಗಳ ಅಂಕಿಅಂಶಗಳು ಹೀಗಿವೆ
ನಗರದ ಇತರೆ ಆಸ್ಪತ್ರೆಗಳಲ್ಲೂ ಇದೇ ರೀತಿಯ ಅಂಕಿಅಂಶಗಳನ್ನು ಕಾಣಬಹುದಾಗಿದೆ. ಯಶವಂತಪುರದ ಮಣಿಪಾಲ್ ಆಸ್ಪತ್ರೆಗಳ ಹಿರಿಯ ಸಲಹೆಗಾರ, ಮೂತ್ರಪಿಂಡ ಶಾಸ್ತ್ರಜ್ಞ ಮತ್ತು ಕಸಿ ವೈದ್ಯ ಡಾ.ದೀಪಕ್ ಕುಮಾರ್ ಚಿತ್ರಳ್ಳಿ ಮಾತನಾಡಿ, ಕಳೆದ 10 ವರ್ಷಗಳಲ್ಲಿ ತಮ್ಮ ಆಸ್ಪತ್ರೆಯಲ್ಲಿ 434 ಜೀವಂತ-ಕಿಡ್ನಿ ದಾನಿಗಳ ಕಸಿ ಮಾಡಲಾಗಿದ್ದು, 100 ಪುರುಷರಿಗೆ ಹೋಲಿಸಿದರೆ 334 ದಾನಿಗಳು (77%) ಮಹಿಳೆಯರೇ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Buffalo: ಕಿತ್ತೋದ ಬಸ್ ನಿಲ್ದಾಣದ ಅದ್ಧೂರಿ ಉದ್ಘಾಟನೆ; ಚೀಫ್ ಗೆಸ್ಟ್ ಆಗಿ ಬಂದಿದ್ದು ಎಂಎಲ್ಎ ಅಲ್ಲ, ಎಮ್ಮೆ!

ಹೆಬ್ಬಾಳದ ಮಣಿಪಾಲ್ ಆಸ್ಪತ್ರೆಯ ನೆಫ್ರಾಲಜಿಯ ಸಲಹೆಗಾರ ಡಾ.ಗಿರೀಶ್ ಎನ್.ಎಸ್ ಅವರು ತಮ್ಮ ಆಸ್ಪತ್ರೆಯ ಅಂಕಿಅಂಶಗಳನ್ನು ಹಂಚಿಕೊಂಡಿದ್ದಾರೆ. "2021 ರಲ್ಲಿ, 13 ಜೀವಂತ ಮೂತ್ರಪಿಂಡ ದಾನಿಗಳ ಕಸಿಗಳಲ್ಲಿ, ಆರು ದಾನಿಗಳು ಮಹಿಳೆಯರು ಮತ್ತು ಈ ವರ್ಷ, ಇದುವರೆಗಿನ ಒಂಬತ್ತು ಕಸಿಗಳಲ್ಲಿ, ಆರು ದಾನಿಗಳು ಮಹಿಳೆಯರಾಗಿದ್ದಾರೆ" ಎಂದು ಅವರು ಹೇಳಿದರು, ಆಶ್ಚರ್ಯ ಎಂದರೆ ಹೆಚ್ಚಿನ ದಾನಿಗಳು 29 ರಿಂದ 72 ರ ವಯಸ್ಸಿನವರಾಗಿದ್ದಾರೆ ಎಂದು ಅವರು ವಿವರಿಸಿದರು.

ಮಹಿಳೆಯರು ತಮ್ಮ ಅಂಗಗಳನ್ನು ದಾನ ಮಾಡಲು ಕಾರಣವೇನು?  
ಕುಟುಂಬ ಮತ್ತು ಸಾಮಾಜಿಕ ಒತ್ತಡವು ಹೆಚ್ಚಾಗಿ ಹೆಚ್ಚಿನ ಮಹಿಳೆಯರನ್ನು ತಮ್ಮ ಅಂಗಗಳನ್ನು ದಾನ ಮಾಡಲು ಒತ್ತಾಯಿಸುತ್ತದೆ ಎಂದು ವೈದ್ಯರು ಇದಕ್ಕಿರುವ ಹಿಂದಿನ ಕಾರಣದ ಬಗ್ಗೆ ಹೇಳಿದ್ದಾರೆ. ಪುರುಷ ಅಂಗವನ್ನು ಹೊಂದಿದ್ದರೂ ಸಹ, ಮಹಿಳೆಯನ್ನು ಮೊದಲ ಆಯ್ಕೆಯಾಗಿ ನೋಡಲಾಗುತ್ತದೆ. ಕೆಲವು ಪುರುಷರು ಇಂತಹ ಸಂದರ್ಭದಲ್ಲಿ ವಿಚ್ಛೇದನದ ಬೆದರಿಕೆ ಹಾಕಿ ಅಂಗಗಳನ್ನು ಪಡೆಯುತ್ತಾರೆ ಎಂದು ವೈದ್ಯರು ವಿವರಿಸಿದ್ದಾರೆ.

ಪುರುಷರು ಏಕೆ ಅಂಗಾಂಗ ದಾನ ಮಾಡುವುದಿಲ್ಲ  
ಪುರುಷರು ತಮ್ಮ ಅಂಗಗಳನ್ನು ಏಕೆ ದಾನ ಮಾಡುವುದಿಲ್ಲ ಎಂದು ವೈದ್ಯರನ್ನು ಪ್ರಶ್ನಿಸಿದಾಗ, ಕುಟುಂಬಕ್ಕೆ ಮುಖ್ಯ ಜೀವನಾಧಾರ ಮತ್ತು ಅಂಗಾಂಗ ದಾನ ಮಾಡುವುದರಿಂದ ಅವನ ಆರೋಗ್ಯಕ್ಕೆ ಧಕ್ಕೆಯಾಗುತ್ತದೆ ಎಂದು ಪುರುಷರು ಜೀವಂತ ಅಂಗಾಂಗ ದಾನಕ್ಕೆ ಹೆದರುತ್ತಾರೆ ಎಂದು ವೈದ್ಯರು ಹೇಳುತ್ತಾರೆ.

ಇದನ್ನೂ ಓದಿ: Mysore: ಮೈಸೂರಿನ ಪ್ರವಾಸಿ ತಾಣಗಳಲ್ಲಿ ಟಿಕೆಟ್ ಪಡೆಯಲು ಇನ್ಮುಂದೆ ಸಾಲಿನಲ್ಲಿ ನಿಲ್ಲಬೇಕಿಲ್ಲ; ಮತ್ತೇನು? ಇದನ್ನೊಮ್ಮೆ ಓದಿ

“ಒಂದು ವೇಳೆ ಮಹಿಳೆ ಅಂಗಾಂಗ ದಾನ ಬೇಡ ಎಂದು ಹೇಳಿದರೆ ಆಕೆಯನ್ನು ಸಾಮಾಜಿಕ ಬಹಿಷ್ಕಾರಕ್ಕೆ ಒಳಪಡಿಸಲಾಗುತ್ತದೆ. ಕುಟುಂಬದ ಇತರ ಸದಸ್ಯರೊಂದಿಗೆ ಒಂದೇ ಮನೆಯಲ್ಲಿ ವಾಸಿಸಲು ಅವಳು ಕಷ್ಟಪಡುವ ಸಂದರ್ಭ ಬಂದೊದಗಬಹುದು” ಎಂದು ಬಿಜಿಎಸ್ ಜನರಲ್ ಗ್ಲೋಬಲ್ ಆಸ್ಪತ್ರೆಯ ನೆಫ್ರಾಲಜಿಸ್ಟ್ ಮತ್ತು ಕಸಿ ವೈದ್ಯ ಹಿರಿಯ ಸಲಹೆಗಾರ ಡಾ.ಅನಿಲ್ ಕುಮಾರ್ ಬಿಟಿ ಹೇಳಿದರು.
Published by:Ashwini Prabhu
First published: