ಹಾಸನ: ಹೆಣ್ಣಿನ ಬದುಕು ಕನ್ನಡಿ ಇದ್ದಂತೆ. ಒಮ್ಮೆ ಒಡೆದು ಹೋದರೆ ಸರಿಪಡಿಸಲು ಕಷ್ಟ ಆಗುತ್ತದೆ. ಸಾಮಾನ್ಯವಾಗಿ ಹೆಣ್ಣಿನ ಮನಸ್ಸು ಚಂಚಲ. ನೀರಿನಲ್ಲಿ ಮೀನಿನ ಹೆಜ್ಜೆಯನ್ನು ಕಂಡು ಹಿಡಿಯಬಹುದು ಆದರೆ ಹೆಣ್ಣಿನ (Women) ಮನಸ್ಸಿನಲ್ಲಿ ಏನಿದೆ ಎಂದು ತಿಳಿಯಲು ಯಾರಿಗೂ ಸಾಧ್ಯವಿಲ್ಲ ಎಂಬ ಮಾತಿದೆ. ಒಬ್ಬ ಮಹಿಳೆ ಸರಿಯಾದ ಮಾರ್ಗದಲ್ಲಿ ಸಾಗಿದರೆ ಜೀವನ ಅದ್ಭುತವಾಗಿರುತ್ತದೆ. ಆದರೆ ಒಮ್ಮೆ ಜೀವನದಲ್ಲಿ ಎಡವಿದರೆ ಮತ್ತೆ ಸರಿಪಡಿಸಿಕೊಳ್ಳಲು ನಾನಾ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ. ಅಂತಹದರಲ್ಲಿ ಅದೆಷ್ಟೋ ಮಹಿಳೆಯರು ಅಕ್ರಮ ಸಂಬಂಧಕ್ಕೆ ಸಿಲುಕಿ ತಮ್ಮ ಸುಂದರವಾದ ಬದುಕನ್ನು ನಾಶ ಮಾಡಿಕೊಳ್ಳುತ್ತಿದ್ದಾರೆ. ಇದೀಗ ಹಾಸನದಲ್ಲಿ (Hassan) ಮಹಿಳೆಯೊಬ್ಬಳು ಅಕ್ರಮ ಸಂಬಂಧಕ್ಕೆ (Illigal Relationship) ಸಿಲುಕಿ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ. ಅಷ್ಟೇ ಅಲ್ಲದೇ ಆಕೆಯ ಶವವನ್ನು ಪ್ರಿಯಕರನೇ (Lover) ಹೂತಿಟ್ಟಿದ್ದಾನೆ.
ಅಕ್ರಮ ಸಂಬಂಧಗಳು ಹೆಚ್ಚು ಕಾಲ ಉಳಿಯುವುದಿಲ್ಲ. ಗುರು ಹಿರಿಯರು ನೋಡಿ ಮಾಡಿದ ಸಂಬಂಧಗಳೇ ಈಗ ಉಳಿಯುವುದು ಕಷ್ಟವಾಗಿದೆ. ಅಂತಹದರಲ್ಲಿ ಇಂದಿನ ಪೀಳಿಗೆಯವರು ಲಿವಿಂಗ್ ಟೂ ಗೆದರ್ ಎಂಬ ಪದ್ಧತಿ ಒಳಗಾಗಿ ಅನೇಕ ಮಂದಿ ಜೀವನವನ್ನೇ ನಾಶ ಮಾಡಿಕೊಳ್ಳುತ್ತಿದ್ದರೆ, ಇದಕ್ಕೆ ಸಾಕ್ಷಿ ಎಂಬಂತೆ ಗಂಡನನ್ನು ಬಿಟ್ಟು ಸ್ನೇಹಿತನ ಜೊತೆಗೆ ವಾಸವಾಗಿದ್ದ ಮಹಿಳೆ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ಹೊಳೆನರಸೀಪುರ ತಾ. ಪರಸನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ಕಾವ್ಯ (೨೩) ಎಂದು ಗುರುತಿಸಲಾಗಿದ್ದು, ಮಹಿಳೆ ದೇಹವನ್ನು ಪ್ರಿಯಕರನೇ ಕಬ್ಬಿನ ಗದ್ದೆಯಲ್ಲಿ ಹೂತಿಟ್ಟಿದ್ದಾನೆ.
ಮಹಿಳೆ ಶವವನ್ನು ಕಬ್ಬಿನ ಗದ್ದೆಯಲ್ಲಿ ಹೂತಿಟ್ಟ ಸ್ನೇಹಿತ
ಕಳೆದ ಒಂದು ವರ್ಷದಿಂದ ಪ್ರಿಯಕರ ಅವಿನಾಶ್ ಜೊತೆಗೆ ಕಾವ್ಯ ಮದುವೆಯಾಗದೇ ವಾಸವಾಗಿದ್ದಳು. ಆದರೆ ಈಗ ಮಗಳು ಶವವಾಗಿ ಪತ್ತೆಯಾಗಿದ್ದು, ಆಕೆಯ ಶವವನ್ನು ಕಬ್ಬಿನ ಗದ್ದೆಯಲ್ಲಿ ಹೂತಿಟ್ಟಿರುವುದು ಅವಿನಾಶ್ ಎಂದು ಪೋಷಕರು ಆರೋಪಿಸುತ್ತಿದ್ದಾರೆ.
ಅಲ್ಲದೇ ಮಹಿಳೆಯನ್ನು ಹೂತಿಟ್ಟ ಸ್ಥಳದಲ್ಲಿಯೇ ನಿಂತು ಆರೋಪಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಸದ್ಯ ಇಂದು ಹೊಳೆನರಸೀಪುರ ತಹಶೀಲ್ದಾರ್ ಕೃಷ್ಣಮೂರ್ತಿ ನೇತೃತ್ವದಲ್ಲಿ ಮೃತ ದೇಹವನ್ನು ಹೊರ ತೆಗೆಯುವ ಕಾರ್ಯಾಚರಣೆ ನಡೆಸಲಾಗುತ್ತಿದೆ. ಮೃತ ದೇಹವನ್ನು ಹೊರ ತೆಗೆದ ಬಳಿಕ ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಲಿದ್ದಾರೆ.
ಅವಿನಾಶ್ ಜೊತೆ ಕಾವ್ಯ ಲಿವಿಂಗ್ ಟುಗೆದರ್ ನಲ್ಲಿದ್ದ ಕಾವ್ಯ
ಪರಸನಹಳ್ಳಿ ಗ್ರಾಮದಲ್ಲಿ ಅವಿನಾಶ್ ಜೊತೆ ಕಾವ್ಯ ಲಿವಿಂಗ್ ಟುಗೆದರ್ ನಲ್ಲಿದ್ದಳು. ಈಗ ನಮ್ಮ ಮಗಳನ್ನು ಆತನೇ ಕೊಂದು, ಶವವನ್ನು ಹೂತು ಹಾಕಿದ್ದಾನೆ ಎಂದು ಹೆತ್ತವರು ಕಣ್ಣೀರು ಹಾಕುತ್ತಿದ್ದಾರೆ. ಕಾವ್ಯ ಸಾವಿನ ಸುತ್ತ ಅನುಮಾನಗಳು ಹುಟ್ಟುಕೊಂಡಿದ್ದು, ಪೊಲೀಸ್ ತನಿಖೆ ನಂತರ ಸಾವಿನ ಖಚಿತ ಮಾಹಿತಿ ಹೊರ ಬೀಳುವ ಸಾಧ್ಯತೆಯಿದೆ.
ಹಾಸನ ಮೂಲದ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದ ಕಾವ್ಯ
ಒಂದೂವರೆ ವರ್ಷದ ಹಿಂದೆ ಹಾಸನ ಮೂಲದ ಯುವಕನನ್ನು ಪ್ರೀತಿಸಿ ಕಾವ್ಯ ಮದುವೆಯಾಗಿದ್ದಳು. ಆದರೆ ಮೂರು ನಾಲ್ಕು ತಿಂಗಳಲ್ಲೇ ಕಾವ್ಯ ಗಂಡನನ್ನು ಬಿಟ್ಟು ಬಂದಿದ್ದಳು. ಮೊದಲ ಮದುವೆಯ ನಂತರ ತನ್ನ ಪೋಷಕರ ಸಂಪರ್ಕ ಕಡಿದುಕೊಂಡಿದ್ದಳು.
ಆದರೆ ಸುಮಾರು ಎರಡೂವರೆ ತಿಂಗಳ ಹಿಂದೆ ಅಷ್ಟೇ ಪೋಷಕರ ಸಂಪರ್ಕಕ್ಕೆ ಕಾವ್ಯ ಸಿಕ್ಕಿದ್ದಳು. ಈ ವೇಳೆ ತಾನು ಬೆಂಗಳೂರಿನಲ್ಲಿ ಒಂಟಿಯಾಗಿ ಪಿಜಿಯಲ್ಲಿ ಇರುವುದಾಗಿ ಪೋಷಕರ ಬಳಿ ಹೇಳಿಕೊಂಡಿದ್ದಳು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ