HOME » NEWS » State » WOMEN DIED BODY FOUND IN LODGE AFTER SHE MISSING THREE DAYS RH GVTV

ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಮಹಿಳೆ ಲಾಡ್ಜ್ ನಲ್ಲಿ ಶವವಾಗಿ ಪತ್ತೆ!

ಓಬಳೇಶ್ ಮನೆಯ ಪಕ್ಕದಲ್ಲೇ ದಿಲೀಪ್ ಕೂಡ ಮನೆ ಮಾಡಿಕೊಂಡಿದ್ದರಿಂದ ಆನೈತಿಕ ಸಂಬಂಧದ ಅನುಮಾನ ಸಹ ವ್ಯಕ್ತವಾಗುತ್ತಿದೆ. ಸದ್ಯ ಓಬಳೇಶ್ ಹೇಳಿಕೆ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಕಲಾಸಿಪಾಳ್ಯ ಪೊಲೀಸರು  ಆರೋಪಿ ದಿಲೀಪ್ ಕುಮಾರ್ ಗಾಗಿ ಹುಡುಕಾಟ ನಡೆಸುತ್ತಿದ್ದಾರೆ

news18-kannada
Updated:November 27, 2020, 6:57 PM IST
ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಮಹಿಳೆ ಲಾಡ್ಜ್ ನಲ್ಲಿ ಶವವಾಗಿ ಪತ್ತೆ!
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು: ಆಕೆ ವೃತ್ತಿಯಲ್ಲಿ ಪಾಠ ಹೇಳುವ ಶಿಕ್ಷಕಿ. ಆದರೆ ನೆರೆಮನೆಯವನನ್ನು ಆಕೆ ಮನೆ ಬಿಟ್ಟು ಹೋಗಿದ್ದಾಳೇ. ಮನೆಯಿಂದ ನಾಪತ್ತೆಯಾದ ಮಗಳನ್ನು ಹುಡುಕುತ್ತಿದ್ದ ಪೋಷಕರಿಗೆ ಕೊನೆಗೆ ಆಕೆಯ ಮೃತದೇಹ ಸಿಕ್ಕಿದೆ.

ಹೌದು, ಬೆಂಗಳೂರಿನ ಅಂಗನವಾಡಿ ಶಿಕ್ಷಕಿ ಕಮಲ ನಾಪತ್ತೆಯಾಗಿ ಮೂರು ದಿನಗಳಾಗಿತ್ತು. ಈ ಬಗ್ಗೆ ಸಿದ್ದಾಪುರ ಠಾಣೆಯಲ್ಲಿ ದೂರು ಸಹ ದಾಖಲಾಗಿತ್ತು. ಆದರೆ ಇಂದು ಬೆಳಗಿನ ಜಾವ ಲಾಡ್ಜ್ ಒಳ ಹೊಕ್ಕ ಪೊಲೀಸರಿಗೆ ಆಕೆ ಸಿಕ್ಕಿದ್ದು ಕೊಳೆತ ಶವದ ಸ್ಥಿತಿಯಲ್ಲಿ. ಜೆ.ಸಿ ರಸ್ತೆಯ ಅರ್ಚನಾ ಕಾಂಪ್ಲೆಕ್ಸ್ ನಲ್ಲಿರುವ ಓಯೋ ರೂಂನಲ್ಲಿ ಇಂತಹದ್ದೊಂದು ಘಟನೆ ನಡೆದಿದ್ದು ಅಕ್ಕಪಕ್ಕದ ವ್ಯಾಪಾರಸ್ಥರನ್ನು ಬೆಚ್ಚಿ ಬೀಳುವಂತೆ ಮಾಡಿದೆ.

ಇದನ್ನು ಓದಿ: ಲಂಪಿಸ್ಕಿನ್ ರೋಗ ನಿಯಂತ್ರಣಕ್ಕೆ ಬರುವಷ್ಟರಲ್ಲೇ ಕತ್ತೆಗಳಲ್ಲಿ ‘ಸುರ್ರಾ’ ಎಂಬ ವಿಚಿತ್ರ ವೈರಸ್ ಪತ್ತೆ!

ಸಿದ್ದಾಪುರ ನಿವಾಸಿಯಾಗಿರುವ ಕಮಲ ಮೊನ್ನೆ 24ರಂದು ಮನೆಗೆ ಬಂದಿರಲಿಲ್ಲ. ಎರಡು ದಿನ ಕಾದ ಗಂಡ ಓಬಳೇಶ್ ಪತ್ನಿ‌ ನಾಪತ್ತೆಯಾಗಿರುವ ಬಗ್ಗೆ ಸಿದ್ಧಾಪುರ ಠಾಣೆಯಲ್ಲಿ ದೂರು ದಾಖಲಿಸಿದ್ದ. ಪ್ರಕರಣವನ್ನು ಕೈಗೆತ್ತಿಕೊಂಡ ಸಿದ್ಧಾಪುರ ಠಾಣಾ ಪೊಲೀಸರು ಹುಡುಕಾಟ ಕೂಡ ನಡೆಸಿದರು. ಆದರೆ ಕಮಲ ಕಾಣೆಯಾದ ಅದೇ ದಿನ ಪಕ್ಕದ ಮನೆಯವನೇ ಆದ ಟೈಲರ್ ದಿಲೀಪ್ ಕುಮಾರ್ ಜೊತೆ ಜೆ.ಸಿ ರಸ್ತೆಯಲ್ಲಿರುವ ಓಯೋ ಲಾಡ್ಜ್ ಗೆ ತೆರಳಿದ್ದರು. ಇದಾದ ಬಳಿಕ ಮೂರು ದಿನವಾದರೂ  ಕೊಠಡಿಯ ಬಾಗಿಲು ತೆರದಿರಲಿಲ್ಲ. ಡೋರ್ ಲಾಕ್ ಆದ ಕಾರಣ ಲಾಡ್ಜ್ ಸಿಬ್ಬಂದಿಗೆ ಅನುಮಾನ ಬಂದು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ನಂತರ ಪೊಲೀಸರು ಬಾಗಿಲು ಒಡೆದು ಒಳ ನೋಡಿದಾಗ ಸಿದ್ಧಾಪುರದಲ್ಲಿ ಕಾಣೆಯಾಗಿದ್ದ ಕಮಲಳ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಆನಂತರ ಪೊಲೀಸರು ಲಾಡ್ಜ್ ಸಿಸಿಟಿವಿ ಪರಿಶೀಲನೆ ನಡೆಸಿದಾಗ ಟೈಲರ್ ದಿಲೀಪ್ ಕುಮಾರ್ ಲಾಡ್ಜ್ ಬುಕ್ ಮಾಡಿದ್ದ ದಿನ ಸುಮಾರು 2 ಗಂಟೆಗೆ ಲಾಡ್ಜ್ ಸಿಬ್ಬಂದಿಯ ಕಣ್ಣು ತಪ್ಪಿಸಿ ಹೊರಹೋಗಿದ್ದು ಪತ್ತೆಯಾಗಿದೆ. ಓಬಳೇಶ್ ಮನೆಯ ಪಕ್ಕದಲ್ಲೇ ದಿಲೀಪ್ ಕೂಡ ಮನೆ ಮಾಡಿಕೊಂಡಿದ್ದರಿಂದ ಆನೈತಿಕ ಸಂಬಂಧದ ಅನುಮಾನ ಸಹ ವ್ಯಕ್ತವಾಗುತ್ತಿದೆ. ಸದ್ಯ ಓಬಳೇಶ್ ಹೇಳಿಕೆ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಕಲಾಸಿಪಾಳ್ಯ ಪೊಲೀಸರು  ಆರೋಪಿ ದಿಲೀಪ್ ಕುಮಾರ್ ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
Published by: HR Ramesh
First published: November 27, 2020, 6:57 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories