ಮೈಸೂರು: ಮದುವೆ ರಜೆ (Holiday) ಬಳಿಕ ಕೆಲಸಕ್ಕೆ ಬಂದಿದ್ದ ಮಹಿಳಾ ಗ್ರಾಮ ಲೆಕ್ಕಾಧಿಕಾರಿಯ (Village Accountant) ನಿಗೂಢ ಸಾವು ಆಗಿದೆ. ಮಹಿಳೆಯ (Woman) ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಘಟನೆ ಮೈಸೂರು ಜಿಲ್ಲೆಯ ಹಣಸೂರು (Hanasuru, Mysuru) ತಾಲೂಕಿನ ಬಿಳಿಕೆರೆ ಗ್ರಾಮದಲ್ಲಿ (Bilikere Village) ನಡೆದಿದೆ. 25 ವರ್ಷದ ಕೃಷ್ಣಾಬಾಯಿ ತುಕಾರಾಂ ಪಡ್ಕೆ ಮೃತ ಮಹಿಳೆ. ಮೃತ ಕೃಷ್ಣಾಬಾಯಿ ಮೂಲತಃ ಬೆಳಗಾವಿ ಜಿಲ್ಲೆಯ ಅಥಣಿ (Athani, Belagavi) ತಾಲೂಕಿನ ಎಸ್ಗಳ್ಳಿ ಗ್ರಾಮದವರು. ಒಂದು ತಿಂಗಳ ಹಿಂದಷ್ಟೇ ಕೃಷ್ಣಾಬಾಯಿ ಅವರ ಮದುವೆ (Marriage) ನಡೆದಿತ್ತು. ದೀರ್ಘ ರಜೆಯಲ್ಲಿದ್ದ ಕೃಷ್ಣಾಬಾಯಿ ನಾಲ್ಕು ದಿನಗಳ ಹಿಂದಷ್ಟೇ ಸೇವೆಗೆ ಹಿಂದಿರುಗಿದ್ದರು. ಇದೀಗ ಕೃಷ್ಣಾಬಾಯಿ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಇನ್ನು ಕೃಷ್ಣಾಬಾಯಿ ಅವರ ಪತಿ ಸುಬಾಸ್ ಬೋಸ್ಲೆ ಹನೂರಿನ ಅರಣ್ಯ ಇಲಾಖೆಯ (Forest Department) ಫಾರೆಸ್ಟ್ ಗಾರ್ಡ್ (Forest Guard) ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಬಿಳಿಕೆರೆಯಲ್ಲಿ ವಾಸವಾಗಿದ್ದ ಕೃಷ್ಣಾಬಾಯಿ
ಕೃಷ್ಣಾಬಾಯಿ ಸಹೋದ್ಯೋಗಿ ಗ್ರಾಮ ಲೆಕ್ಕಾಧಿಕಾರಿ ಚೈತ್ರ ಮತ್ತು ಅವರ ತಾಯಿಯೊಂದಿಗೆ ಬಿಳಿಕೆರೆಯ ಎಸ್ಬಿಐ ಹಿಂಬಾಗದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು.
ಕೃಷ್ಣಾಬಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಆದ್ರೆ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಬಿಳಿಕೆರೆ ಠಾಣೆಯಲ್ಲಿ ಪ್ರಕರಣ ದಾಖಲು
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಹೋದ್ಯೋಗಿಗಳಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಮೃತದೇಹವನ್ನು ಮರಣೋತ್ತರ ಶವ ಪರೀಕ್ಷೆಗಾಗಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಪೊಲೀಸರು ಕೃಷ್ಣಾಬಾಯಿ ಕುಟುಂಬಸ್ಥರಿಗೆ ವಿಷಯ ತಿಳಿಸಿದ್ದಾರೆ. ಘಟನೆ ಸಂಬಂಧ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೆಳತಿಯ ಕೊಲೆ, ಆರೋಪಿ ಅರೆಸ್ಟ್
ತನ್ನೊಂದಿಗೆ ಗೆಳತಿಯಂತೆ (Girlfriend) ಇರಲು ನಿರಾಕರಿಸಿದಳು ಎಂಬ ಕಾರಣಕ್ಕೆ ಕೋಪಗೊಂಡ ಕ್ಯಾಬ್ ಚಾಲಕನೋರ್ವ ಮಹಿಳೆಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ರಾಜ್ಯ ರಾಜಧಾನಿಯಲ್ಲಿ ಬೆಳಕಿಗೆ ಬಂದಿದೆ.
ಇಂದಿರಾ ನಗರದಲ್ಲಿ (Indiranagar) ಕೊಲೆ ಮಾಡಿ ಮಹಿಳೆಯ ಮೃತದೇಹವನ್ನು ನಗರದ ಹೊರ ವಲಯದಲ್ಲಿ ಬಿಸಾಡಿದ್ದ ಆರೋಪಿಯನ್ನು ಪೊಲೀಸರು (Police) ಬಂಧನ ಮಾಡಿದ್ದಾರೆ. ನಗರದ ಬಾಗಲೂರು ಪೊಲೀಸರು (Bagaluru Police) ಆರೋಪಿ ಭೀಮರಾವ್ ಎಂಬಾತನನ್ನು ಬಂಧನ ಮಾಡಿದ್ದಾರೆ.
ಇದನ್ನೂ ಓದಿ: Crime News: ಭೂಮಿ ಅಗೆಯುವಾಗ ಚಿನ್ನದ ಗಟ್ಟಿ ಸಿಕ್ತು ಅಂತ ಉದ್ಯಮಿಗೆ 13 ಲಕ್ಷ ವಂಚನೆ! ಆರೋಪಿ ಅರೆಸ್ಟ್
ಆರೋಪಿ ಭೀಮರಾವ್, ದೀಪಾ ಎಂಬ ಮಹಿಳೆಯನ್ನು (Women) ಕೊಲೆ ಮಾಡಿ ಮೃತದೇಹವನ್ನು ನಗರದ ಹೊರವಲಯದಲ್ಲಿ ಎಸೆದು ಹೋಗಿದ್ದ. ಅಪರಿಚಿತ ಮಹಿಳೆ ಮೃತದೇಹ ಪತ್ತೆಯಾಗುತ್ತಿದ್ದಂತೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಪ್ರಕರಣವನ್ನು ಬೇಧಿಸಿ ಆರೋಪಿಯನ್ನು ಬಲೆಗೆ ಕೆಡವಿದ್ದಾರೆ.
ಪತ್ನಿಯನ್ನ ಕೊಂದ ಗಂಡ?
ಚಿತ್ರದುರ್ಗದ ಬೊಗಳೇರಹಟ್ಟಿಯಲ್ಲಿ ಪತಿಯೇ ಪತ್ನಿಯನ್ನು ಹತ್ಯೆ ಮಾಡಿರೋ ಆರೋಪ ಕೇಳಿಬಂದಿದೆ. ಪತಿ ಚಂದ್ರಶೇಖರ್, ತನ್ನ ಪತ್ನಿ ಗೌತಮಿಯನ್ನು ಹತ್ಯೆಗೈದು, ನೇಣಿ ಬಿಗಿದು ಆತ್ಮಹತ್ಯೆ ಎಂದು ಬಿಂಬಿಸುವ ಯತ್ನ ಮಾಡಿದ್ದ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಇನ್ನೊಂದೆಡೆ ಪೊಲೀಸರು ದೂರು ದಾಖಲಿಸಿಕೊಳ್ಳಲು ನಿರ್ಲಕ್ಷ ತೋರಿದ್ದಾರಂತೆ. ಆದ್ರಿಂದ ಚಿತ್ರದುರ್ಗ ಎಸ್ಪಿ ಕಚೇರಿ ಎದುರು ಸಂಬಂಧಿಕರ ಧರಣಿ ಮಾಡಿದ್ದಾರೆ.
ಬಾಲಕಿಗೆ ಡಿಕ್ಕಿ ಹೊಡೆದ ಬಸ್
ಖಾಸಗಿ ಎಕ್ಸ್‌ಪ್ರೆಸ್ ಬಸ್ ಡಿಕ್ಕಿ ಹೊಡೆದು ಬಾಲಕಿ ಗಂಭೀರಗೊಂಡಿರೋ ಘಟನೆ ಉಡುಪಿ ಜಿಲ್ಲೆಯ ಕಾಪು ಮಂದಾರ ಹೋಟೆಲ್ ಮುಂಭಾಗ ನಡೆದಿದೆ.
13 ವರ್ಷದ ವರ್ಷಿತಾ ಶೇರ್ವೆಗಾರ ಗಾಯಾಳು. ಉಡುಪಿಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಎಕ್ಸ್‌ಪ್ರೆಸ್ ಬಸ್ ಬಾಲಕಿಗೆ ಡಿಕ್ಕಿ ಹೊಡೆದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ