ಮೈಸೂರು: ಅಕ್ಕ, ಅಕ್ಕ ಎಂದು ಮನೆಗೆ ಬರ್ತಿದ್ದ ಗಂಡನ ಫ್ರೆಂಡ್ ಮಾಡಿದ್ದು ಮಾತ್ರ ನೀಚ ಕೆಲಸ. ಮನೆಯಲ್ಲಿ ಮಹಿಳೆ (Women) ಸ್ನಾನ ಮಾಡುವ ವೇಳೆ ವಿಡಿಯೋ ಮಾಡಿದ್ದ ಯುವಕ ಬಳಿಕ ವಿಡಿಯೋ ತೋರಿಸಿ ಬ್ಲ್ಯಾಕ್ ಮೇಲ್ (Blackmail) ಮಾಡಿದ್ದಾನೆ. ನೊಂದ ಮಹಿಳೆ ತಾನು ಸ್ನಾನ ಮಾಡುವ ವಿಡಿಯೋ ತೆಗೆದು ಯುವಕನೋರ್ವ ಬ್ಲ್ಯಾಕ್ಮೇಲ್ ಮಾಡುತ್ತಿದ್ದು, ಈ ಯುವಕನನ್ನು ಬಂಧಿಸುವಂತೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಮಹಿಳೆ (Women) ದೂರು ಕೊಟ್ರು ಯಾವುದೇ ಪ್ರಯೋಜನವಾಗಿಲ್ಲ. ಪೊಲೀಸರು (Police) ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಿದ್ದಾರೆ.
ಮಹಿಳೆ ಸ್ನಾನ ಮಾಡುವ ವಿಡಿಯೋ ಮಾಡಿದ ಯುವಕ
ಮೈಸೂರು ನಗರದ ನಿವಾಸಿಯಾದ ಈ ಮಹಿಳೆಯ, ನಾನು ಸ್ನಾನ ಮಾಡುವ ವಿಡಿಯೋವನ್ನು ಪ್ರಮೋದ್ ಎಂಬ ಯುವಕ ತೆಗೆದಿದ್ದಾನೆ. ಕಳೆದ ಒಂದೂವರೆ ವರ್ಷದಿಂದ ನನ್ನನ್ನು ಎಲ್ಲ ರೀತಿಯಲ್ಲೂ ಬ್ಲ್ಯಾಕ್ಮೇಲ್ ಮಾಡಿದ್ದ. ಈ ವಿಚಾರ ನನ್ನ ಗಂಡನಿಗೆ ಗೊತ್ತಾದರೆ ತೊಂದರೆಯಾಗುತ್ತದೆ ಎಂದು ಸುಮ್ಮನಿದ್ದೆ. ಆದರೆ 1 ತಿಂಗಳ ಹಿಂದೆ ವಿಪರೀತ ಕಾಟ ಕೊಡಲು ಶುರು ಮಾಡಿದ್ದಾನೆ ಎಂದು ಮಹಿಳೆ ಅಳಲು ತೋಡಿಕೊಂಡಿದ್ದಾರೆ.
ಯುವಕನಿಂದ ಮಹಿಳೆಗೆ ಬ್ಲ್ಯಾಕ್ಮೇಲ್
ನಮ್ಮ ಮುಂದಿನ ಮನೆಯವನಾದ ಈ ಆರೋಪಿಯು ನನ್ನ ಗಂಡನ ಸ್ನೇಹಿತನಾಗಿದ್ದ, ಅಕ್ಕ ಎಂದು ಹೇಳಿಕೊಂಡು ಮನೆಗೆ ಬರುತ್ತಿದ್ದ. ಈ ಸಂದರ್ಭದಲ್ಲಿ ನಾನು ಸ್ನಾನ ಮಾಡುವುದನ್ನು ವಿಡಿಯೋ ಮಾಡಿದ್ದಾನೆ. ಅಲ್ಲದೇ, ಬ್ಲ್ಯಾಕ್ಮೇಲ್ ಮಾಡುತ್ತಿರುವ ಬಗ್ಗೆ ಮೈಸೂರಿನ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೆ. ಆದರೆ, ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮಹಿಳೆ ಆರೋಪಿಸಿದ್ದಾರೆ. ಕೂಡಲೇ ಆರೋಪಿಯನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: Crime News: ಪಾಗಲ್ ಪ್ರೇಮಿ, ಲವ್ ರಿಜೆಕ್ಟ್ ಮಾಡಿದ ವಿದ್ಯಾರ್ಥಿನಿಯ ಕೈ ಕತ್ತರಿಸಿ ಕೊಂದೇಬಿಟ್ಟ
ಹಣ ಎಲ್ಲಕ್ಕಿಂತ ಮೇಲೆ ಎಂದು ವ್ಯಂಗ್ಯವಾಗಿ ಹೇಳಿದರೂ ಇದೇನು ಸುಮ್ಮನೇ ಹೇಳೋದಲ್ಲ, ಇದಕ್ಕೆ ಸಾಕ್ಷಿಯಾಗುವಂತಹ ಬಹಳಷ್ಟು ಘಟನೆಗಳು ನಮ್ಮ ಸುತ್ತಮುತ್ತ ನಡೆಯುತ್ತಲೇ ಇರುತ್ತವೆ. ಹಣಕ್ಕೆ ಸಂಬಂಧ, ಬಡವ-ಶ್ರೀಮಂತ ಎಂಬ ಎಂಥಹಾ ವ್ಯತ್ಯಾಸವೂ ಇಲ್ಲ. ಸಂಬಂಧಗಳನ್ನು (Relationship) ಹಾಳು ಮಾಡುವಂತಹ ಪ್ರಸಂಗವೂ ಬರುತ್ತದೆ. ಮನಿ ಈಸ್ ಪವರ್ (Money is Power) ಎಂದು ಕೆಲವರು ಹೇಳುವ ಹಾಗೆ ಹಣ ಎಂಬ ಎರಡಕ್ಷರ ಎಂಥವರನ್ನೂ ಬದಲಾಯಿಸಿಬಿಡುತ್ತದೆ. ಇಲ್ಲೊಂದು ಕಡೆ ಹಣ ಎಂಬ ಮಾಯಾವಿ ಅಕ್ಕ ತಂಗಿಯರ (Sisters) ಮಧ್ಯೆ ಹೇಗೆ ವಿಲನ್ ಆಗಿದೆ ಎಂದು ನೋಡಿದರೆ ಶಾಕ್ ಆಗುತ್ತದೆ. ಸ್ವಂತ ತಂಗಿಯೇ ಅಕ್ಕನ ದಾಂಪತ್ಯ ಜೀವನಕ್ಕೆ ಕೊಳ್ಳಿ ಇಡೋಕೆ ಹಿಂದೆ ಮುಂದೆ ನೋಡುವುದಿಲ್ಲ. ಮಾನವೀಯತೆ, ಸಂಬಂಧ ಪ್ರೀತಿ ಎಲ್ಲವೂ ಇಲ್ಲಿ ನಗಣ್ಯ.
ಪುರುಷ ಸ್ನೇಹಿತನೊಂದಿಗಿನ ತನ್ನ ಆತ್ಮೀಯ ಫೋಟೋಗಳು (Photos) ಮತ್ತು ವೀಡಿಯೊಗಳನ್ನು ಬಳಸಿಕೊಂಡು ತನ್ನ ಸ್ವಂತ ಸಹೋದರಿಯನ್ನು ಬ್ಲಾಕ್‌ಮೇಲ್ (Blackmail) ಮಾಡಿ 3 ಲಕ್ಷ ರೂಪಾಯಿ ಹಣವನ್ನು ಪಡೆದ ಆರೋಪದ ಮೇಲೆ ನಯಾನಗರ ಪೊಲೀಸರು ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ: Crime News: ತಂಗಿಯನ್ನ ಗಂಡನ ಮನೆಯಿಂದ ಕರೆತಂದು ನಿರಂತರ ರೇಪ್ ಮಾಡಿದ ಅಣ್ಣ
ತಂಗಿಯಿಂದಲೇ ಬ್ಲೇಕ್ಮೇಲ್
ಮಿಡ್ ಡೇ ವರದಿಯ ಪ್ರಕಾರ, ಮೀರಾ ರೋಡ್‌ನಲ್ಲಿ ತನ್ನ ಪತಿ ಮತ್ತು ಮಕ್ಕಳೊಂದಿಗೆ ವಾಸಿಸುವ 32 ವರ್ಷದ ದೂರುದಾರರು ತನ್ನ ತಂಗಿಯೇ ತನಗೆ ಬ್ಲಾಕ್‌ಮೇಲ್ ಮಾಡಿದ್ದಾಗಿ ಹೇಳಿದ್ದಾರೆ. ಲಾಕ್‌ಡೌನ್ ಸಮಯದಲ್ಲಿ ತನ್ನ 27 ವರ್ಷದ ಸಹೋದರಿ ತನ್ನೊಂದಿಗೆ ಇದ್ದಳು. ಬಹುರಾಷ್ಟ್ರೀಯ ಐಟಿಗಾಗಿ ಮನೆಯಿಂದ ಕೆಲಸ ಮಾಡುತ್ತಿದ್ದಳು ಎಂದು ಅವರು ದೂರಿನಲ್ಲಿ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ