• Home
  • »
  • News
  • »
  • state
  • »
  • Crime News: ಮಕ್ಕಳಿಗೆ ಪೆಟ್ರೋಲ್ ಸುರಿದ ಆತ್ಮಹತ್ಯೆಗೆ ಯತ್ನಿಸಿದ ತಾಯಿ; ಇತ್ತ ಹಾವಿನಿಂದ ಸರಣಿ ಅಪಘಾತ

Crime News: ಮಕ್ಕಳಿಗೆ ಪೆಟ್ರೋಲ್ ಸುರಿದ ಆತ್ಮಹತ್ಯೆಗೆ ಯತ್ನಿಸಿದ ತಾಯಿ; ಇತ್ತ ಹಾವಿನಿಂದ ಸರಣಿ ಅಪಘಾತ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸ್ಥಳಕ್ಕೆ ಮುಳಬಾಗಿಲು ಪೊಲೀಸರು ಭೇಟಿ ನೀಡಿದ್ದು, ಗಾಯಾಳು ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

  • Share this:

ಕೆಟ್ಟ ಮಕ್ಕಳು (Children) ಹುಟ್ಟಬಹುದೇ ವಿನಃ ಕೆಟ್ಟ ತಾಯಿ (Mother) ಇರಲ್ಲ ಎಂಬ ಮಾತಿದೆ. ತನಗೆ ಎಂತಹ ಕಷ್ಟಗಳು ಬಂದರೂ ತಾಯಿ ಮಕ್ಕಳನ್ನು ರಕ್ಷಣೆ ಮಾಡುತ್ತಾರೆ. ಮಕ್ಕಳಿಗಾಗಿ ತನ್ನ ಜೀವನವನ್ನ ಮುಡಿಪು ಇಡುತ್ತಾಳೆ. ಆದ್ರೆ ಈ ಮಾತುಗಳಿಗೆ ವಿರುದ್ಧವಾದ ಘಟನೆಯೊಂದು ಬೆಳಕಿಗೆ ಬಂದಿದೆ. ಕೋಲಾರದ ಮುಳಬಾಗಿಲಿನಲ್ಲಿ (Mulabagilu, Kolar) ಹೃದಯವಿದ್ರಾವಕ ಘಟನೆ ನಡೆದಿದೆ. ತಾಯಿಯೊಬ್ಬಳು ತನ್ನ ಇಬ್ಬರು ಮಕ್ಕಳಿಗೆ ಪೆಟ್ರೋಲ್ (Petrol) ಸುರಿದು ಸುಟ್ಟು ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಒಂದು ಮಗು ಸತ್ತಿದ್ದರೆ, ಇನ್ನೊಂದು ಮಗು ಸ್ಥಿತಿ ಗಂಭೀರವಾಗಿದೆ. ಪತಿ ಕಿರುಕುಳಕ್ಕೆ ಬೇಸತ್ತಿದ್ದ ಆಂಧ್ರ ಪ್ರದೇಶ ಮೂಲದ ಜ್ಯೋತಿ ಎಂಬಾಕೆ ಅಂಜನಾದ್ರಿ ಬೆಟ್ಟಕ್ಕೆ (Anjanadri Betta) ಬಂದಿದ್ದು, ಅಲ್ಲೇ ಆತ್ಮಹತ್ಯೆಗೆ ನಿರ್ಧರಿಸಿ ತನ್ನಿಬ್ಬರು ಮಕ್ಕಳ ಮೇಲೆ ಪೆಟ್ರೋಲ್ ಸುರಿದು ಸುಟ್ಟಿದ್ದಾಳೆ. ಇದರಲ್ಲಿ ಒಂದು ಮಗು ಸಾವನ್ನಪ್ಪಿದ್ದು, ಮತ್ತೊಂದು ಮಗುವಿನ ಸ್ಥಿತಿ ಗಂಭೀರವಾಗಿದೆ.


ತನ್ನನ್ನು ಸುಟ್ಟುಕೊಳ್ಳಲು ಧೈರ್ಯವಾಗದೇ ಕುಳಿತಿದ್ದ ಈಕೆಯನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಸ್ಥಳಕ್ಕೆ ಮುಳಬಾಗಿಲು ಪೊಲೀಸರು ಭೇಟಿ ನೀಡಿದ್ದು, ಗಾಯಾಳು ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.


ಪ್ಲಾಸ್ಟಿಕ್​ ಕವರ್​ನಲ್ಲಿ ಪತ್ನಿ ಶವ


ಗಡಿಜಿಲ್ಲೆ ಚಾಮರಾಜನಗರದಲ್ಲಿ ಮನಕಲಕುವ ಘಟನೆಯೊಂದು ನಡೆದಿದೆ. ಯಳಂದೂರಿನಲ್ಲಿ ಶವ ಸಂಸ್ಕಾರಕ್ಕೂ ಹಣವಿಲ್ಲದ ಪತಿಯೋರ್ವ ಪತ್ನಿಯ ಶವವನ್ನು ಪ್ಲಾಸ್ಟಿಕ್ ಮೂಟೆಯಲ್ಲಿ ಸಾಗಿಸಿದ್ದಾನೆ.


ಮಂಡ್ಯ ಜಿಲ್ಲೆ ಕಾಗೆಪುರ ಗ್ರಾಮದ ಕಾಳಮ್ಮ ಅನಾರೋಗ್ಯದಿಂದ ಮೃತಪಟ್ಟಿದ್ದರು. ಶವಸಂಸ್ಕಾರಕ್ಕೆ ಹಣವಿಲ್ಲದಿದ್ದಕ್ಕೆ ಪತಿ ರವಿ, ಹೆಂಡತಿ ಶವವನ್ನು ಪ್ಲಾಸ್ಟಿಕ್ ಮೂಟೆಯಲ್ಲಿಟ್ಟು ಸಾಗಿಸಿದ್ದಾರೆ. ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.


ಮಗನ ಕೊಲೆಗೆ ತಂದೆ ಸುಪಾರಿ


ಹುಬ್ಬಳ್ಳಿಯಲ್ಲಿ ಮಗನ ಕೊಲೆಗೆ ತಂದೆ ಸುಪಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಪೊಲೀಸರು ಘಟನಾ ಸ್ಥಳಕ್ಕೆ ಕರೆತಂದಿದ್ದಾರೆ. ಕಲಘಟಗಿ ತಾಲೂಕಿನ ದೇವಿಕೊಪ್ಪ ಬಳಿ ಆರೋಪಿಗಳೂ ಶವ ಹೂತಿಟ್ಟಿದ್ದಾರೆ.


ಕೊಲೆಯಾದ ಅಖಿಲ್​ನ ತಂದೆ ಭರತ್ ಜೈನ‌್​ ಚೆಚ್ಚಿ ಬೀಳಿಸುವಂತ ಮಾಹಿತಿ ಬಾಯ್ಬಿಟ್ಟಿದ್ದಾರೆ. ಮಗನ ದಶ್ಚಟಗಳಿಂದ ಬೇಸತ್ತಿದ್ದ ತಂದೆ ಭರತ್, ಕೆಲಸದ ನೆಪ ಹೇಳಿ ತನ್ನ ಕಾರಿನಲ್ಲಿ ಮಗನನ್ನೇ ಕರೆದುಕೊಂಡು ಬಂದಿದ್ದ.


ಮಗನನ್ನ ಸುಪಾರಿ ಹಂತಕರ ಕೈಗೆ ಒಪ್ಪಿಸಿದ್ದ. ಎರಡು ದಿನಗಳ ಬಳಿಕ  ಕೇಶವಾಪೂರ ಠಾಣೆಯಲ್ಲಿ ದೂರು ಕೊಟ್ಟು ನಾಟಕ ಮಾಡಿದ್ದನು.


ಇದನ್ನೂ ಓದಿ: Maharashtra Villages: ನಮ್ಮ ಗ್ರಾಮಗಳನ್ನು ಕರ್ನಾಟಕಕ್ಕೆ ಸೇರಿಸಿ; ಜಿಲ್ಲಾಧಿಕಾರಿ ಪತ್ರ ಬರೆದ ಗ್ರಾಮಸ್ಥರು


ಹಾವಿನಿಂದ ಸರಣಿ ಅಪಘಾತ


ಹಾವು ಹೆದ್ದಾರಿಯಲ್ಲಿ ಅಡ್ಡ ಬಂದಿದ್ದಕ್ಕೆ ಚಿಕ್ಕಬಳ್ಳಾಪುರ ಬಳಿ ಬೆಳಗ್ಗೆ 6 ಗಂಟೆ ವೇಳೆಗೆ ಸರಣಿ ಅಪಘಾತಗಳು ಸಂಭವಿಸಿವೆ. ಹೆದ್ದಾರಿಯಲ್ಲಿ ಹಾವು ಅಡ್ಡ ಬಂತು ಅಂತಾ ಕಂಟೇನರ್ ಲಾರಿ ಚಾಲಕ ಬ್ರೇಕ್ ಹಾಕಿದ್ದಾನೆ.


ಲಾರಿ ಹಿಂದೆ ಇದ್ದ ಎರಡು ಕಂಟೈನರ್ ಲಾರಿ, ಒಂದು ಟಾಟಾ ಏಸ್, ಒಂದು ಕಾರು, ಒಂದು ಟಿಪ್ಪರ್ ಮಧ್ಯೆ ಸರಣಿ ಅಪಘಾತ ಸಂಭವಿಸಿದೆ.


ಪ್ರಾಣ ಉಳಿಸಿಕೊಂಡ ತಾಯಿ, ಮಗ


ಕಲಬುರಗಿಯಲ್ಲಿ ಗೂಡ್ಸ್ ರೈಲಿನಿಂದ ಅದೃಷ್ಟವಶಾತ್ ತಾಯಿ ಹಾಗೂ ಮಗ ಪಾರಾಗಿದ್ದಾರೆ . ಕಲಬುರಗಿ ನಗರದ ರೈಲ್ವೆ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಅಂದಹಾಗೇ ಪ್ಲಾಟ್‌ಫಾರಂನಿಂದ ನಡೆದುಕೊಂಡು ಹಳಿ ದಾಟಲು ತಾಯಿ, ಮಗ ಮುಂದಾಗಿದ್ದಾರೆ. ಈ ವೇಳೆ ಗೂಡ್ಸ್ ರೈಲು ಬಂದಿದೆ.


ಇದನ್ನೂ ಓದಿ:  Munirathna: ಹೋಗಿ ನಿಮ್ಮಣ್ಣನ ಬಳಿ ಕೇಳಿ; ಡಿಕೆ ಸುರೇಶ್​ ವಿರುದ್ಧ ಮುನಿರತ್ನ ಗುಡುಗು


ಈ ವೇಳೆ ದಿಕ್ಕು ತೋಚದ ಇಬ್ಬರು ಹಳಿ ಪಕ್ಕದ ಸ್ವಲ್ಪ‌ ಜಾಗದಲ್ಲಿ ತಾಯಿ ಮತ್ತು ಮಗ ಮಲಗಿದ್ದರು. ಅದೃಷ್ಟವಶಾತ್​ ಗೂಡ್ಸ್ ರೈಲಿನಿಂದ ಇಬ್ಬರು ಪ್ರಾಣ ರಕ್ಷಿಸಿಕೊಂಡಿದ್ದಾರೆ. ಈ ಭಯಾನಕ ದೃಶ್ಯ ಮೊಬೈಲ್​ನಲ್ಲಿ ಸೆರೆ ಆಗಿದೆ.

Published by:Mahmadrafik K
First published: