Video | ಸಾಲ ಹಿಂದಿರುಗಿಸಲಿಲ್ಲ ಎಂದು ಮಹಿಳೆಯನ್ನು ಕಂಬಕ್ಕೆ ಕಟ್ಟಿ ವಿಕೃತಿ ಮೆರೆದ ಸಾರ್ವಜನಿಕರು

ಬಳಿಕ ಸಾಲಗಾರರ ಕಾಟದಿಂದ ಬೇಸತ್ತ ರಾಜಮ್ಮ, ಕಳೆದ ಒಂದು ತಿಂಗಳ ಹಿಂದೆ ಮನೆ ಖಾಲಿ ಮಾಡಿ ಊರನ್ನೇ ಬಿಟ್ಟಿದ್ದರು ಎಂದು ತಿಳಿದು ಬಂದಿದೆ.

news18
Updated:June 13, 2019, 4:08 PM IST
Video | ಸಾಲ ಹಿಂದಿರುಗಿಸಲಿಲ್ಲ ಎಂದು ಮಹಿಳೆಯನ್ನು ಕಂಬಕ್ಕೆ ಕಟ್ಟಿ ವಿಕೃತಿ ಮೆರೆದ ಸಾರ್ವಜನಿಕರು
ಮಹಿಳೆಯನ್ನು ಕಂಬಕ್ಕೆ ಕಟ್ಟಿರುವ ದೃಶ್ಯ
news18
Updated: June 13, 2019, 4:08 PM IST
ಬೆಂಗಳೂರು,(ಜೂ.13): ದಲಿತ ಯುವಕ ದೇವಾಲಯ ಪ್ರವೇಶಿಸಿದ ಎಂದು ಬಟ್ಟೆ ಬಿಚ್ಚಿ ರಸ್ತೆಯಲ್ಲಿ ಬೆತ್ತಲೆ ಮೆರವಣಿಗೆ ಮಾಡಿದ ಹೇಯ ಘಟನೆ ಬೆನ್ನಲ್ಲೇ ಮಹಿಳೆಯೊಬ್ಬರು ಸಾಲ ಹಿಂದಿರುಗಿಸಲಿಲ್ಲ ಎಂದು ಕಂಬಕ್ಕೆ ಕಟ್ಟಿ ಥಳಿಸಿರುವ ಅಮಾನವೀಯ ಘಟನೆ ರಾಜಧಾನಿ ಹೊರವಲಯದಲ್ಲಿ ನಡೆದಿದೆ. 

ತೆಗೆದುಕೊಂಡ ಸಾಲದ ಹಣವನ್ನು ವಾಪಸ್​ ಕೊಟ್ಟಿಲ್ಲ ಎಂದು ಸಾಲಗಾರರು  ಮಹಿಳೆಯನ್ನು ಕಂಬಕ್ಕೆ ಕಟ್ಟಿ ವಿಕೃತಿ ಮೆರೆದ ಅಮಾನವೀಯ ಘಟನೆ ನಗರದ ಹೊರವಲಯದ ಕೊಡಿಗೆಹಳ್ಳಿಯಲ್ಲಿ ನಡೆದಿದೆ.

ಹಲ್ಲೆಗೊಳಗಾದ ಮಹಿಳೆಯನ್ನು ರಾಜಮ್ಮ ಎನ್ನಲಾಗಿದ್ದು, ಮೂಲತಃ ಕೊಳ್ಳೇಗಾಲದವರು ಎಂದು ತಿಳಿದುಬಂದಿದೆ. ರಾಜಮ್ಮ ತನ್ನ ಮಗಳೊಂದಿಗೆ ಕೊಡಿಗೆಹಳ್ಳಿಯಲ್ಲಿ ವಾಸವಿದ್ದು, ಅದೇ ಏರಿಯಾದಲ್ಲಿ ಸಣ್ಣ ಹೋಟೆಲ್​ ನಡೆಸುತ್ತಿದ್ದರು ಎನ್ನಲಾಗಿದೆ.

ಇದನ್ನೂಓದಿ: ಪ್ರಜ್ವಲ್​ ರೇವಣ್ಣ ಈಗ ಸಸ್ಯ ವಿಜ್ಞಾನಿ; ಇಂಗಾಲದ ಡೈಆಕ್ಸೈಡ್​ ವಿಚಾರದಲ್ಲಿ ಟ್ರೋಲ್​ ಆದ ಹಾಸನ ಸಂಸದ

ಹೋಟೆಲ್​ ವ್ಯವಹಾರದಿಂದ ಅಷ್ಟಾಗಿ ಲಾಭ ಬರದ ಹಿನ್ನೆಲೆಯಲ್ಲಿ ರಾಜಮ್ಮ ಕೆಲವರ ಬಳಿ ಕೈ ಸಾಲ ಪಡೆದಿದ್ದರು. ಸಾಲ ಕೊಟ್ಟ ಸಾಲಗಾರರು ಆಗಾಗ್ಗೆ ಮನೆ ಬಳಿ ಬಂದು ಹಣ ವಾಪಸ್​ ಕೊಡುವಂತೆ ಕೇಳುತ್ತಿದ್ದರು. ಬಳಿಕ ಸಾಲಗಾರರ ಕಾಟದಿಂದ ಬೇಸತ್ತ ರಾಜಮ್ಮ, ಕಳೆದ ಒಂದು ತಿಂಗಳ ಹಿಂದೆ ಮನೆ ಖಾಲಿ ಮಾಡಿ ಊರನ್ನೇ ಬಿಟ್ಟಿದ್ದರು ಎಂದು ತಿಳಿದು ಬಂದಿದೆ.

ಇಂದು ಬೆಳಗ್ಗೆ ರಾಜಮ್ಮ ಕೊಡಿಗೆಹಳ್ಳಿಗೆ ಬಂದಿದ್ದು, ಮನೆ ಬಳಿ ಹೋದಾಗ ಸಾಲಗಾರರ ಕಣ್ಣಿಗೆ ಬಿದ್ದಿದ್ದಾರೆ. ಇದೇ ವೇಳೆ ಸಾಲ ಕೊಟ್ಟವರು ರಾಜಮ್ಮನನ್ನು ಕಂಡು ಆಕ್ರೋಶಗೊಂಡು ಹಿಡಿದು ಕಂಬಕ್ಕೆ ಕಟ್ಟಿದ್ದಾರೆ. ಬೆಳಗ್ಗೆಯಿಂದಲೂ ಆಕೆಗೆ ಹಿಂಸೆ ನೀಡಿ,  ವಿಕೃತಿ ಮೆರೆದಿದ್ದಾರೆ. ಮಹಿಳೆಯನ್ನು ಕಂಬಕ್ಕೆ ಕಟ್ಟಿರುವ ದೃಶ್ಯ ನ್ಯೂಸ್ 18 ಗೆ ಲಭ್ಯವಾಗಿದೆ. ತಾವರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

First published:June 13, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...