Bengaluru: ಮೆಟ್ರೋ ನಿಲ್ದಾಣದಲ್ಲಿ ಓಡಾಡುವಾಗ ಎಚ್ಚರ; ಕಾಲು ಜಾರಿ ಮೂಳೆ ಮುರಿದುಕೊಂಡ ಮಹಿಳೆ

ರಾಜರಾಜೇಶ್ವರಿ ನಗರದ ಮೆಟ್ರೋ ನಿಲ್ದಾಣದಿಂದ ತನ್ನ ಪೋಷಕರು ಕರೆದುಕೊಂಡು ಬರಲು ಹೋಗಿದ್ದಾಗ, ನನ್ನ ತಾಯಿ ಕಪ್ಪು ಗ್ರಾನೈಟ್ ನೆಲದ ಮೇಲೆ ನಡೆದಾಗ, ಜಾರಿಬಿದ್ದು ಪಾದದ ಮೂಳೆ ಮುರಿದಿತ್ತು. ಮರುದಿನ ಅವರನ್ನು ಆಸ್ಪತ್ರೆಗೆ ಕರೆದೊಯ್ದಾಗ 2 ಇಂಚು ಆಳದ ಮೂಳೆ ಮುರಿತವಾಗಿರುವುದು ಪತ್ತೆಯಾಯಿತು

ನಮ್ಮ ಮೆಟ್ರೋ

ನಮ್ಮ ಮೆಟ್ರೋ

  • Share this:
ಬೆಂಗಳೂರು (ಜೂ 14): ನಮ್ಮ ಮೆಟ್ರೋ (Metro) ಸಂಚಾರ  ಬೆಂಗಳೂರಿನ ಜನರನ್ನು ಟ್ರಾಫಿಕ್ (Traffic)​ ಕಿರಿಕಿರಿಯಿಂದ ತಪ್ಪಿಸಿದೆ. ಮೆಟ್ರೋ ಪ್ರಯಾಣ ಸುಖಕರ ಪ್ರಯಾಣ ಎಂದೇ ಹೆಸರಾಗಿದೆ. ಆದ್ರೆ ಮಹಿಳೆಯೊಬ್ಬರು ಮೆಟ್ರೋ ನಿಲ್ದಾಣದಲ್ಲಿ ಕಾಲು ಜಾರಿ ಬಿದ್ದು ಮೂಳೆ ಮುರಿದುಕೊಂಡಿದ್ದಾರೆ.  ರಾಜರಾಜೇಶ್ವರಿನಗರ ಮೆಟ್ರೋ ನಿಲ್ದಾಣದಲ್ಲಿ ಇತ್ತೀಚೆಗೆ 50 ವರ್ಷದ ಗೃಹಿಣಿಯೊಬ್ಬರು (House Wife) ಗ್ರಾನೈಟ್ ನೆಲದ ಮೇಲೆ ಜಾರಿ ಬಿದ್ದು ಎಡ ಪಾದದ ಮೂಳೆ (Bone)  ಮುರಿತಕ್ಕೊಳಗಾದ ಘಟನೆ ನಡೆದಿದೆ. ಆ ಮಹಿಳೆ ಈಗ ಸಂಪೂರ್ಣವಾಗಿ ಬ್ಯಾಂಡೇಜ್ ಮಾಡಿದ ಪಾದದೊಂದಿಗೆ ಮತ್ತು ಐದು ವಾರಗಳ ಬೆಡ್‌ರೆಸ್ಟ್‌ನಲ್ಲಿದ್ದಾರೆ. ಮೆಟ್ರೋ ನಿಲ್ದಾಣಗಳ (Metro Station) ಒಳಗೆ ಹೊಳೆಯುವ ಗ್ರಾನೈಟ್ ನೆಲದ ಮೇಲೆ ಬೀಳುವುದು ನಿತ್ಯದ ಘಟನೆಯಾಗಿದೆ ಎಂದು ಕೆಲವು ಪ್ರಯಾಣಿಕರು ದೂರುತ್ತಿದ್ದಾರೆ.

ಗ್ರಾನೈಟ್ ಮೇಲೆ ನಡೆಯುವಾಗ ಎಚ್ಚರ

ಕಳೆದ ಸೋಮವಾರ, ರಾಜರಾಜೇಶ್ವರಿ ನಗರದ ಮೆಟ್ರೋ ನಿಲ್ದಾಣದಿಂದ ತನ್ನ ಪೋಷಕರು ಕರೆದುಕೊಂಡು ಬರಲು ಹೋಗಿದ್ದಾಗ, ನನ್ನ ತಾಯಿ ಕಪ್ಪು ಗ್ರಾನೈಟ್ ನೆಲದ ಮೇಲೆ ನಡೆದಾಗ, ಜಾರಿಬಿದ್ದು ಪಾದದ ಮೂಳೆ ಮುರಿದಿತ್ತು. ಮರುದಿನ ಅವರನ್ನು ಆಸ್ಪತ್ರೆಗೆ ಕರೆದೊಯ್ದಾಗ 2 ಇಂಚು ಆಳದ ಮೂಳೆ ಮುರಿತವಾಗಿರುವುದು ಪತ್ತೆಯಾಯಿತು. ಇದೇ ರೀತಿ ಹಲವು ಪ್ರಯಾಣಿಕರು ಬೀಳುತ್ತಿರುವುದನ್ನು ಆಗಾಗ್ಗೆ ನೋಡುತ್ತಿರುವುದಾಗಿ ಓರ್ವ ಮೆಟ್ರೋ ಸಿಬ್ಬಂದಿ ಹೇಳಿರುವುದಾಗಿ ಕೌಶಿಕ್ ತಿಳಿಸಿದರು.

ಅಂಜುಮ್ ಪರ್ವೇಜ್​ರಿಂದ ಪರಿಶೀಲನೆ

ಇನ್ನು ರಾಜರಾಜೇಶ್ವರಿ ಮೆಟ್ರೋ ನಿಲ್ದಾಣದಲ್ಲಿ ಮಹಿಳೆ ಕಾಲು ಜಾರಿ ಬಿದ್ದು ಮೂಳೆ ಮುರಿದುಕೊಂಡ ಬಳಿಕ  ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ಆರ್ ಆರ್ ನಗರ ನಿಲ್ದಾಣವನ್ನು ಪರಿಶೀಲಿಸಲಾಯ್ತು.

ಮಹಿಳೆ ಕಾಲಿಗೆ ಪೆಟ್ಟು


ಮೆಟ್ರೋ ನಿಲ್ದಾಣ ಬಿದ್ದಿದ್ದಾರೆ ಅನೇಕರು

ಮೈಸೂರು ಮೆಟ್ರೋ ನಿಲ್ದಾಣದಲ್ಲಿ ನಾನು ಕೂಡಾ ಕೆಟ್ಟದಾಗಿ ಬಿದ್ದಿದ್ದೆ. ನೇರಳೆ ಮಾರ್ಗದಲ್ಲಿ ಇಂತಹ ಘಟನೆಗಳು ಹೆಚ್ಚಾಗಿ ನಡೆಯುತ್ತಲೇ ಇವೆ ಎಂದು ಪ್ರಯಾಣಿಕರಾದ ರಾಣಿ ಕಾರ್ತಿಕ್ ಹೇಳಿದರು. ಆದರೆ, ಇಂತಹ ಘಟನೆಗಳ ಬಗ್ಗೆ ಸಾರ್ವಜನಿಕರಿಂದ ಯಾವುದೇ ದೂರುಗಳನ್ನು ಸ್ವೀಕರಿಸಿಲ್ಲ ಎಂದು ಬಿಎಂಆರ್ ಸಿಎಲ್ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಬಿಎಲ್ ಯಶವಂತ ಚವಾಣ್ ತಿಳಿಸಿದ್ದಾರೆ.

ಇದನ್ನೂ ಓದಿ: BMRCL: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​, ಸೈಕಲ್​ ಕೊಂಡೊಯ್ಯಲು ಸಿಕ್ಕಿದೆ ಪರ್ಮಿಷನ್​

ಮೆಟ್ರೋ ನಿಲ್ದಾಣಗಳಲ್ಲಿ ಪ್ರವಾಸಿ ತಾಣಗಳ ಮಾಹಿತಿ

ಬೆಂಗಳೂರು (ಜೂ 13): ನಮ್ಮ ಮೆಟ್ರೋದಲ್ಲಿ  ಪ್ರಯಾಣಿಸುವವರಿಗೆ ಅದರಲ್ಲೂ ವಿಶೇಷವಾಗಿ ಪ್ರವಾಸಿಗರಿಗೆ ಅನುಕೂಲವಾಗುವ ಹಾಗೇ, ಮೆಟ್ರೋ ನಿಲ್ದಾಣಗಳ ಸಮೀಪವಿರುವ ಪ್ರಮುಖ ತಾಣಗಳು  ಸೇರಿದಂತೆ ಆಸ್ಪತ್ರೆ, ದೇವಾಲಯ, ಸರಕಾರಿ ಕಟ್ಟಡ, ಪೊಲೀಸ್ ಠಾಣೆ ಹಾಗೂ ಹೋಟೆಲ್, ಬ್ಯಾಂಕ್ ಮುಂತಾದವುಗಳ ಮಾಹಿತಿ ಸಿಗಲಿದೆ. ಕ್ಯೂಆರ್​ಕೋಡ್ (QR Code)​ ಸಹಿತ ಮಾಹಿತಿ ನೀಡುವ  ನಕ್ಷೆಗಳನ್ನು ಮೆಟ್ರೋ ನಿಲ್ದಾಣಗಳ ಪ್ರವೇಶ ಮತ್ತು ನಿರ್ಗಮನ ದ್ವಾರಗಳಲ್ಲಿ ಅಳವಡಿಸಲು ಬೆಂಗಳೂರು ಮೆಟ್ರೋ ನಗರ ಮುಂದಾಗಿದೆ.

ಮೆಟ್ರೋ ದ್ವಾರದಲ್ಲಿ ಸಿಗಲಿದೆ ಫುಲ್​ ಮಾಹಿತಿ














ಈ ಬಗ್ಗೆ ಮಾಹಿತಿ ನೀಡಿದ ಮೆಟ್ರೋ ನಿಗಮದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಯಶವಂತ್​ ಚೌವ್ಹಾಣ್​ ಸದ್ಯ ಕೆಲವು ನಿಲ್ದಾಣಗಳಲ್ಲಿ ಈ ಸೌಲಭ್ಯವನ್ನು ಪ್ರಾರಂಭಿಸೋದಾಗಿ ಹೇಳಿದ್ದಾರೆ. ನಿಲ್ದಾಣಗಳ ಎಲ್ಲಾ ದ್ವಾರಗಳ ಬಳಿ ಪ್ರಮುಖ ಸ್ಥಳಗಳ ಮಾಹಿತಿ ನೀಡುವ ನಕ್ಷೆಯನ್ನು ಹಾಕುತ್ತೇವೆ. ಇದರಲ್ಲಿ ಕೆಲ ವಿಶೇಷ  ಸ್ಥಳಗಳ ಬಗ್ಗೆ ವಿವರಣೆ ಕೂಡ ಇರಲಿದೆ ಎಂದು ಯಶವಂತ್​ ಚೌವ್ಹಾಣ್ ಹೇಳಿದ್ದಾರೆ.

Published by:Pavana HS
First published: