• Home
  • »
  • News
  • »
  • state
  • »
  • Missing Dog: ಕಳೆದು ಹೋದ ನಾಯಿಗಾಗಿ ಮಹಿಳೆ ಕಣ್ಣೀರು; 3 ತಿಂಗಳಿಂದ ಗುಂಡನಿಗಾಗಿ ಹುಡುಕಾಟ!

Missing Dog: ಕಳೆದು ಹೋದ ನಾಯಿಗಾಗಿ ಮಹಿಳೆ ಕಣ್ಣೀರು; 3 ತಿಂಗಳಿಂದ ಗುಂಡನಿಗಾಗಿ ಹುಡುಕಾಟ!

ಕಳೆದು ಹೋದ ಗುಂಡನಿಗಾಗಿ ಮಹಿಳೆ ಕಣ್ಣೀರು

ಕಳೆದು ಹೋದ ಗುಂಡನಿಗಾಗಿ ಮಹಿಳೆ ಕಣ್ಣೀರು

ಇತ್ತೀಚಿನ ದಿನಗಳಲ್ಲಿ ಮನಕುಲವೇ ಹಾಳಾಗುತ್ತಿದೆ. ಹೆತ್ತ ಮಕ್ಕಳನ್ನ ಕೆಲ ಪೋಷಕರು ಬೀದಿಯಲ್ಲಿ ಬಿಟ್ಟು ಹೋಗುವ ದೃಶ್ಯಗಳು ನಾವು ನೋಡಿದ್ದೇವೆ. ಆದ್ರೆ ನಿಮಗೆ ಒಂದು ಇಂಟರೆಸ್ಟಿಂಗ್ ಸ್ಟೋರಿ ಒಂದು ಹೇಳ್ತಿವೆ ಕೇಳಿ. ಈ ಸ್ಟೋರಿ ನೀವು ನೋಡಿದ್ರೆ ಚಾರ್ಲಿ ಮೂವಿ ನಿಮ್ಮ ಕಣ್ಣ ಮುಂದೆ ಬಂದು ನಿಲ್ಲುತ್ತೆ.

ಮುಂದೆ ಓದಿ ...
  • Share this:

ಶ್ವಾನ ಗುಂಡನನ್ನು (Gunda) ಕಳೆದುಕೊಂಡ ಮಹಿಳೆ, ನನ್ನ ಗುಂಡನನ್ನ ಹುಡುಕಿಕೊಡಿ ಎಂದು 3 ತಿಂಗಳಿನಿಂದ ರಸ್ತೆ, ರಸ್ತೆಗಳ ಬೀದಿ ಬೀದಿಯಲ್ಲಿ ಅಲೆದಾಟ ನಡೆಸುತ್ತಿದ್ದು, ಬಸವೇಶ್ವರ ನಗರದ ನಿವಾಸಿ ಗುರುಪ್ರಿಯಾರಿಂದ ಶ್ವಾನಕ್ಕಾಗಿ  ನಾಯಿ (Dog) ಹುಡುಕಿಕೊಡಲು 50 ಸಾವಿರ ಬಹುಮಾನ (50 Thousand Prize) ಘೋಷಣೆ ಮಾಡಿ ಏರಿಯಾ ತುಂಬೆಲ್ಲಾ ಪಾಂಪ್ಲೇಟ್ (ಪಾಂಪ್ಲೇಟ್) ಹಂಚುತ್ತಿದ್ದಾರೆ.  ಪ್ರಾಣಿಗಳ ಮೇಲಿನ ಪ್ರೀತಿಯೇ ಹಾಗೆ, ಕೆಲವೊಂದು ಸರಿ ಮನುಷ್ಯ ಮನುಷ್ಯರ ಸಂಬಂಧಕ್ಕಿಂತ, ಮನುಷ್ಯ ಹಾಗೂ ಪ್ರಾಣಿಯ ಪ್ರೀತಿ ತುಂಬಾ ಗಟ್ಟಿಯಾಗಿರುತ್ತೆ. ಅದೇ ರೀತಿ ಇಲ್ಲು ಕೂಡಾ ಶ್ವಾನದ ಮಾಲೀಕರಾದ (Dog Owner) ಗುರುಪ್ರಿಯಾರ ಕಣ್ಣೀರಿನ ಕಥೆ ಇದಾಗಿದೆ.


ಮೂರು ತಿಂಗಳ ಹಿಂದೆ ಮನೆ ಬಿಟ್ಟ ಗುಂಡ


ಮೂರು ತಿಂಗಳ ಹಿಂದೆ ತನ್ನ ಮುದ್ದಿನ ನಾಯಿ ಗುಂಡ ಸ್ಕೂಟಿ ಬೈಕ್, ಡಿಕ್ಕಿ ಹೊಡೆದ ಕಾರಣ ಮನೆಯ ರಸ್ತೆಯಿಂದ ಭಯದಲ್ಲಿ ಓಡಿಹೋಗಿದೆ. ಹೋಗಿರೋ‌ ಗುಂಡ ಮತ್ತೆ ಬರ್ತಾನೆ ಅಂತ ಮನೆಯಲ್ಲಿ ಗುರುಪ್ರಿಯಾ ಕಾದು ಕುಳಿತಿದ್ರು. ಆದ್ರೆ ಗುಂಡ ಮಾತ್ರ ಬಂದೆ ಇಲ್ಲ.
ನಾಯಿ ಹುಡುಕಿಕೊಟ್ಟವರಿಗೆ 50 ಸಾವಿರ 


ಹೀಗಾಗಿ ಆತಂಕಕ್ಕೊಳಗಾದ ಗುರುಪ್ರಿಯಾ ಇಡೀ ತಾವಿದ್ದ ಬಸವೇಶ್ವರ ನಗರದ ಸುತ್ತಮುತ್ತ ಹುಡುಕಿದ್ದಾರೆ. ಆದ್ರೆ ಗುಂಡ ಮಾತ್ರ ಸಿಕ್ಕಿಲ್ಲ‌. ಹೀಗಾಗಿ ಒಂದು ವಾರ ಸರಿಯಾಗಿ ಊಟ ನಿದ್ರೆ ಮಾಡದೆ ಗುಂಡನಿಗಾಗಿ ಕಾದು ಸುಸ್ತಾಗಿ ಕೊನೆಗೆ ನಾಯಿ ಹುಡುಕಿ ಕೊಟ್ಟವರಿಗೆ 50 ಸಾವಿರ ರೂ. ಕೊಡೋದಾಗಿ ಪಾಂಪ್ಲೆಟ್ ಹಂಚಿ, ಕಳೆದ 3 ತಿಂಗಳಿನಿಂದ ಇಡಿ ಬೆಂಗಳೂರು ಸುತ್ತಿ ಗುಂಡನಿಗಾಗಿ ಅಲೆಯುತ್ತಿದ್ದಾರೆ.


ನಾಯಿ ಹುಡುಕಿಕೊಡಲು ಸಹಾಯ ಮಾಡುವಂತೆ ಮನವಿ


ಈ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಕೂಡಾ ಭೇಟಿಯಾಗಿ ಗುಂಡನನ್ನು ಹುಡುಕಲು ಪಾಲಿಕೆಯಿಂದ ನಮಗೆ ಸಹಾಯ ಕೊಡಿಸಿ ಎಂದು ಕೋರಿದ್ದಾರೆ. ಇದಕ್ಕೆ ಸ್ಪಂದಿಸಿದ ಬೊಮ್ಮಾಯಿ, ಪಾಲಿಕೆಗೆ ನಾಯಿ ಹುಡುಕಿಕೊಡಲು ಸಹಾಯ ಮಾಡುವಂತೆ ಸೂಚಿಸಿದ್ದಾರೆ.‌ ಹೀಗಾಗಿ ಗುರುಪ್ರಿಯ ಈಗಲೂ ತಮ್ಮ ಗುಂಡನ ಹುಡುಕಾಟದಲ್ಲೇ ಇದ್ದಾರೆ.


ಇದನ್ನೂ ಓದಿ: PFI ಭಾಗ್ಯ ಕೂಡ ಸಿದ್ದರಾಮಯ್ಯ ಅವರದ್ದೇ; ಪೋಸ್ಟರ್ ಮೂಲಕ ಟಾಂಗ್ ಕೊಟ್ರು R ಅಶೋಕ್​


ಗುಂಡ ಸಿಕ್ಕರೆ ನಮಗೆ ಒಪ್ಪಿಸಿ


ಕಳೆದ ವರ್ಷ ತಮ್ಮ ಊರಿನಿಂದ ಗುಂಡ ಹಾಗೂ ಆತನ ಮಗಳು ರಾನಾರನ್ನು ತಂದಿದ್ದ ಗುರು ಪ್ರಿಯಾ, ಈಗ ಗುಂಡನ ನೆನಪಲ್ಲೇ ಮಗಳು ರಾನಾ ಕೂಡಾ ಕಾಯ್ತಾ ಇದ್ದಾಳೆ. ಕೂಡಲೇ ಗುಂಡನನ್ನು ಕಂಡರೆ ನಮಗೆ ಕೊಡಿ ನಾವು ಹೇಳಿರೋ 50 ಸಾವಿರ ಕೊಡ್ತಿವಿ ಅಂತಿದ್ದಾರೆ ಶ್ವಾನದ ಮಾಲಿಕರಾದ ಗುರು ಪ್ರಿಯಾ.
ಪ್ರೀತಿಯ ಗುಂಡನ ಹುಡುಕಾಟದಲ್ಲಿ  ಗುರುಪ್ರಿಯಾ 


ಪ್ರೀತಿಯ ನಾಯಿ ಗುಂಡನ ಹುಡುಕಾಟದಲ್ಲಿ ಕಳೆದ ಎರಡು ತಿಂಗಳಿಂದ ಯಜಮಾನತಿ ಸರಿಯಾಗಿ ಊಟ ತಿಂಡಿ ಮಾಡದೇ ಮನೆಯ ಕೆಲಸವನ್ನು ಮಾಡದೇ ನಿತ್ಯ ಏರಿಯಾ ಏರಿಯಾ ಕಳೆದ ಹೋದ ನಾಯಿಗಾಗಿ ಹುಡಕಾಟ ಮಾಡಿದ್ದಾಳೆ. ಇನ್ನೂ ಮಾತ್ರ ಗುಂಡಾ ಸಿಕ್ಕಿಲ್ಲ.


ಇದನ್ನೂ ಓದಿ: Bharat Jodo Yatra: ಒಂದೇ ದಿನ ಮಂದಿರ, ಮಸೀದಿ, ಚರ್ಚ್​ಗೆ ರಾಹುಲ್ ಗಾಂಧಿ ಭೇಟಿ; ರಾಜ್ಯದಲ್ಲಿ ರಾಗಾ ಸಖತ್ ಆ್ಯಕ್ಟೀವ್


ನೀವು ಏನಾದರೂ ಈ ಸ್ಟೋರಿ ಓದಿ ಫೋಟೋದಲ್ಲಿರೋ ಈ ನಾಯಿ ಸಿಕ್ಕಿದ್ರೆ ದಯವಿಟ್ಟು ಹುಡಕಾಟದಲ್ಲಿರುವ ಯಜಮಾನತಿಯ ಕೈಗೆ  ತಂದು ಕೊಡಿ ಎಂದಿದ್ದಾರೆ. ಹೀಗಾಗಿ ಯಾರಿಗಾದ್ರು ಗುಂಡನ ಸುಳಿವು ಸಿಕ್ಕರೆ ನೀವು ಕೂಡಾ ಬಸವೇಶ್ವರ ನಗರದಲ್ಲಿರುವ ಶ್ವಾನದ ಮಾಲೀಕರಾದ ಗುರುಪ್ರಿಯಾ ಅವರಿಗೆ ಶ್ವಾನವನ್ನು ಮರೆಯದೆ ತಲುಪಿಸೋ ಕಾರ್ಯ ಮಾಡಿ.

Published by:ಪಾವನ ಎಚ್ ಎಸ್
First published: