ಹೊಲದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಮೇಲೆ ಅತ್ಯಾಚಾರವೆಸಗಿ ಕೊಲೆ

ಕುಡಿದ ಅಮಲಿನಲ್ಲಿ ದಾರಿ ತಪ್ಪಿದ ಶಂಕರಪ್ಪ ಅಂಕಾಲಮೊಡಗು ಗ್ರಾಮದ ಹೊಲದ ಬಳಿ ಹೋದಾಗ ಇಬ್ಬರು ಹೆಂಸರು ಮತ್ತು ಒಂದು ಮಗು ಕಡಲೆ ಕಾಯಿ ಕೀಳುತಿದ್ದುದ್ದನ್ನು ನೋಡಿದ್ದಾನೆ.

news18-kannada
Updated:November 21, 2020, 3:53 PM IST
ಹೊಲದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಮೇಲೆ ಅತ್ಯಾಚಾರವೆಸಗಿ ಕೊಲೆ
ಪ್ರಾತಿನಿಧಿಕ ಚಿತ್ರ.
  • Share this:
ಚಿಕ್ಕಬಳ್ಳಾಪುರ(ನ.21): ದುಷ್ಕರ್ಮಿಯೊಬ್ಬ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಮೇಲೆ ಅತ್ಯಾಚಾರ ಎಸಗಿ ಬಳಿಕ ಕೊಲೆ ಮಾಡಿರುವ ಘಟನೆ ಗಡಿ ಜಿಲ್ಲೆ ಚಿಕ್ಕಬಳ್ಳಾಪುರದ ಚಿಂತಾಮಣಿ ತಾಲೂಕಿನ ಅಂಕಾಲ ಮೊಡಗು ಗ್ರಾಮದಲ್ಲಿ ನಡೆದಿದೆ. ಈ ಘಟನೆ ಕಳೆದ ತಿಂಗಳು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮಹಿಳೆ ಒಬ್ಬಳೇ ಹೊಲದಲ್ಲಿ ಕಡಲೆಕಾಯಿ ಕೀಳುತ್ತಿರುವ ಸಂದರ್ಭದಲ್ಲಿ ಒಂಟಿಯಾಗಿರುವ ಸಮಯ ನೋಡಿಕೊಂಡ ಕೀಚಕನೊಬ್ಬ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಬಳಿಕ ಈ ವಿಷಯ ಬೇರೆಯವರಿಗೆ ತಿಳಿಯುತ್ತೆ ಎಂಬ ಭಯದಿಂದ ಕಾಮುಕ ತನ್ನ ಶರ್ಟ್​​ನಿಂದ ಮಹಿಳೆಯ ಕುತ್ತಿಗೆಯನ್ನು ಬಿಗಿದು ಕೊಲೆ ಮಾಡಿದ್ದಾನೆ. ಆರೋಪಿ  ಪಕ್ಕದ ರಾಜ್ಯದ ಆಂಧ್ರ ಪ್ರದೇಶದ ಮೂಲದವನು ಎಂದು ತಿಳಿದು ಬಂದಿದೆ.

ಆರೋಪಿ ಎದ್ದೋಳಪಲ್ಲಿ ಗ್ರಾಮದ ಶಂಕರಪ್ಪ (29)  ಬಿನ್ ಲೇಟ್ ರವಣಪ್ಪ  ಮತ್ತು ತನ್ನ ಸ್ನೇಹಿತ ನರಸಿಂಹಪ್ಪ ಶಂಕರನಾಯ್ಡು ಜೊತೆ ಬಟ್ಲಹಳ್ಳಿ ಗ್ರಾಮದ ಬಾರ್ ನಲ್ಲಿ ಕಂಠಪೂರ್ತಿ ಕುಡಿದಿದ್ದ.  ಕುಡಿದ ಅಮಲಿನಲ್ಲಿ ದಾರಿ ತಪ್ಪಿದ ಶಂಕರಪ್ಪ ಅಂಕಾಲಮೊಡಗು ಗ್ರಾಮದ ಹೊಲದ ಬಳಿ ಹೋದಾಗ ಇಬ್ಬರು ಹೆಂಸರು ಮತ್ತು ಒಂದು ಮಗು ಕಡಲೆ ಕಾಯಿ ಕೀಳುತಿದ್ದುದ್ದನ್ನು ನೋಡಿದ್ದಾನೆ.

ಮಸ್ಕಿ ಉಪಚುನಾವಣೆ; ಕುತೂಹಲ ಮೂಡಿಸಿದ ಬಿ.ವೈ. ವಿಜಯೇಂದ್ರ-ವಿರುಪಾಕ್ಷಪ್ಪ ಭೇಟಿ

ಅದೇ ಸಮಯದಲ್ಲಿ ಮಳೆ ಬಂದಾಗ ಒಬ್ಬ ಮಹಿಳೆ ಮತ್ತು ಮಗು ಗ್ರಾಮದ ಕಡೆಗೆ ಹೋಗಿದ್ದು, ಉಳಿದ ಒಂಟಿ ಮಹಿಳೆ  ಛತ್ರಿ ಹಿಡಿದು ನಿಂತುಕೊಂಡಿದ್ದ ಸಂದರ್ಭದಲ್ಲಿ ಸಲಿಗೆಯಿಂದ ಮಾತನಾಡುವ ನೆಪದಲ್ಲಿ ಶರ್ಟ್ ನಿಂದ ಕುತ್ತಿಗೆಗೆ ಬಲವಾಗಿ ಬಿಗಿದು ಬಲವಂತದಿಂದ ತೊಗರಿ ಗಿಡಗಳ ಮಧ್ಯೆ ಎಳೆದುಕೊಂಡು ಹೋಗಿ ಆಕೆಯನ್ನು ಮೇಲೆ‌ ಅತ್ಯಾಚಾರ ಎಸಗಲು ಯತ್ನಿಸಿದ್ದಾನೆ. ಆಗ ಮಹಿಳೆ ಪ್ರತಿರೋಧ ವ್ಯಕ್ತಪಡಿಸಿ ಕಿರುಚಿಕೊಂಡಾಗ ಆಕೆಯ ಬಳಿ ಇದ್ದ ಮತ್ತೊಂದು ಶರ್ಟ್ ನಿಂದ ಕುತ್ತಿಗೆಗೆ ಬಿಗಿದು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

ಇನ್ನು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಚಿಂತಾಮಣಿ ಪೊಲೀಸರು , ಎಸ್ಪಿ ಜಿ.ಹೆಚ್​. ಮಿಥುನ್ ಕುಮಾರ್ ಮತ್ತು  ಡಿ ವೈ ಎಸ್ ಪಿ ಲಕ್ಷ್ಮಯ್ಯ ಮಾರ್ಗದರ್ಶನದಲ್ಲಿ ಬಟ್ಲಹಳ್ಳಿ ಠಾಣಾಧಿಕಾರಿ ಪಾಪಣ್ಣ  ಮತ್ತು ಅವರ ಸಂಗಡಿಗರು ಪ್ರಕರಣ ಭೇದಿಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Published by: Latha CG
First published: November 21, 2020, 3:53 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading