Crime News: ಕೊಲೆಯಲ್ಲಿ ಅಂತ್ಯವಾದ ಜಗಳ: ಸೊಸೆಯಿಂದಲೇ ಹತ್ಯೆಯಾದ ಅತ್ತೆ

Chitradurga Murder Case: ಮನೆ ಅಂದ್ರೆ ಸಣ್ಣಪುಟ್ಟ ಜಗಳ – ತಕರಾರುಗಳು ಇದ್ದೇ ಇರುತ್ತೆ. ಇನ್ನು ಅತ್ತೆ ಸೊಸೆ ಒಂದೇ ಮನೆಯಲ್ಲಿದ್ರೆ ಸಣ್ಣ ಸಣ್ಣ ಕಾರಣಗಳು ಸಹ ಮನಸ್ತಾಪಕ್ಕೆ ಕಾರಣ ಆಗುತ್ತವೆ. ಆದ್ರೆ ಚಿತ್ರದುರ್ಗ ಜಿಲ್ಲೆಯಲ್ಲಿ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.

ಸೊಸೆ ಮುದ್ದಕ್ಕೆ ಮತ್ತು ಅತ್ತೆ ರಂಗಮ್ನ

ಸೊಸೆ ಮುದ್ದಕ್ಕೆ ಮತ್ತು ಅತ್ತೆ ರಂಗಮ್ನ

  • Share this:
Chitradurga Murder Case: ಮನೆ ಅಂದ್ರೆ ಸಣ್ಣಪುಟ್ಟ ಜಗಳ – ತಕರಾರುಗಳು ಇದ್ದೇ ಇರುತ್ತೆ. ಇನ್ನು ಅತ್ತೆ ಸೊಸೆ ಒಂದೇ ಮನೆಯಲ್ಲಿದ್ರೆ ಸಣ್ಣ ಸಣ್ಣ ಕಾರಣಗಳು ಸಹ ಮನಸ್ತಾಪಕ್ಕೆ ಕಾರಣ ಆಗುತ್ತವೆ. ಆದ್ರೆ ಚಿತ್ರದುರ್ಗ ಜಿಲ್ಲೆಯಲ್ಲಿ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಅತ್ತೆ(Mother in Law)ಯನ್ನು ಕೊಲೆಗೈದ ಸೊಸೆ (Daughter in law) ಜೈಲು ಸೇರಿದ್ದಾಳೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ರಾಮಜೋಗಿಹಳ್ಳಿ(Ramajogihalli, Chalakere)ಯಲ್ಲಿ ಈ ಕೊಲೆ ನಡೆದಿದೆ. 60 ವರ್ಷದ ರುದ್ರಮ್ಮ ಕೊಲೆಯಾದ ಅತ್ತೆ. 38 ವರ್ಷ ಮುದ್ದಕ್ಕ ಕೊಲೆಗೈದ ಸೊಸೆ. ಈಗಾಗಲೇ ಪೊಲೀಸರು ಸೊಸೆಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಅತ್ತೆ ರುದ್ರಮ್ಮ ಮತ್ತು ಸೊಸೆ ಮುದ್ದಕ್ಕ ನಡುವೆ ಮನಸ್ತಾಪ  ಇತ್ತು. ಮನೆಯಲ್ಲಿ ಇಬ್ಬರ ಮಧ್ಯೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಭಾನುವಾರ ರಾತ್ರಿ ಮಲಗಿದ್ದ ವೇಳೆ ಸುತ್ತಿಗೆಯಿಂದ ಅತ್ತೆಯ ತಲೆಯನ್ನು ಜಜ್ಜಿ ಕೊಲೆ ಮಾಡಿದ್ದಾಳೆ.

ಘಟನಾ ಸ್ಥಳಕ್ಕೆ ಚಳ್ಳಕೆರೆ ಪೊಲೀಸರು ಭೇಟಿ ನೀಡಿ, ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಾದಿನಿಯನ್ನು ಅಪಹರಿಸಿ ಜೈಲುಪಾಲಾದ ಬಾವ

ಬೆಂಗಳೂರಿನ ಕೋಡಿಗೆಹಳ್ಳಿಯ ದೇವರಾಜ್ ಎಂಬಾತನಿಗೆ ಮದುವೆ ಆಗಿತ್ತು. ಕಟ್ಟಿಕೊಂಡ ಪತ್ನಿ ಜೊತೆ ಚೆನ್ನಾಗಿ ಸಂಸಾರ ಮಾಡಿದ್ರೆ ಮನೆಯಲ್ಲಿ ಆರಾಮಾಗಿ ಇರಬಹುದಿತ್ತು. ಆದ್ರೆ ಹೆಂಡ್ತಿ ಇರಲಿ, ಆಕೆಯ ತಂಗಿಯು ಬೇಕೆಂದು ಹೇಳಿ ಸೆರೆಮನೆ ಸೇರಿದ್ದಾನೆ. ದೇವರಾಜ್, ನಾದಿನಿಯನ್ನು ಪ್ರೀತಿಸುತ್ತಿದ್ದನು. ಹಾಗಾಗಿ ಆಕೆಯ ಮುಂದೆ ಮದುವೆ ಪ್ರಸ್ತಾಪ ಸಹ ಇರಿಸಿದ್ದನು. ಆದ್ರೆ ನಾದಿನಿ ಬಾವನ ಮದುವೆ ಪ್ರಸ್ತಾಪವನ್ನ ತಿರಸ್ಕರಿಸಿದ್ದಳು.

ಇದನ್ನೂ ಓದಿ:  Crime News: ದೃಶ್ಯಂ ಸಿನಿಮಾ ಸ್ಟೈಲ್​​ನಲ್ಲಿ ಕಳ್ಳತನದ ನಾಟಕ ಆಡಲು ಹೋಗಿ ಸಿಕ್ಕಿಬಿದ್ದ ಖತರ್ನಾಕ್ ಕುಟುಂಬ

ನಾದಿನಿ ಮದುವೆಯಾಗಲು ಒಪ್ಪದಿದ್ದಾಗ, ಆಕೆಯನ್ನು ಕಿಡ್ನಾಪ್ ಮಾಡಲು ದೇವರಾಜ್ ಪ್ಲಾನ್ ಮಾಡಿದ್ದನು. ಇದಕ್ಕೆ ಗೆಳೆಯರಾದ ನಿತಿನ್ ಮತ್ತು ಕುಮಾರ್ ಎಂಬವರ ಸಹಾಯ ಪಡೆದುಕೊಂಡಿದ್ದನು. ಸದ್ಯ ಯುವತಿಯನ್ನು ರಕ್ಷಿಷಿಸಿರುವ ಕೋಡಿಗೆಹಳ್ಳಿ ಪೊಲೀಸರು ದೇವರಾಜ್, ನಿತಿನ್ ಮತ್ತು ಕುಮಾರ್ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಮಂಡ್ಯ: ಸಾವಿನಲ್ಲಿ ಒಂದಾದ ತಾಯಿ-ಮಗ

ಮಗನ ಸಾವಿನ ಸುದ್ದಿ ಕೇಳಿ ತಾಯಿ‌ಗೆ ಹೃದಯಾಘಾತದಿಂದ ಮೃತಟ್ಟಿರುವ ಘಟನೆ ಮಂಡ್ಯದ ನಾಗಮಂಗಲದ ಗಿಡುವಿನ ಹೊಸಹಳ್ಳಿ ಕೊಪ್ಪಲಿನಲ್ಲಿ ನಡೆದಿದೆ. ಕುಶಾಲ್ (45) ಕಡಿಮೆ ರಕ್ತದೊತ್ತಡದಿಂದ ಮೃತಪಟ್ಟಿದ್ದರು. ಮಗನ ಸಾವಿನ ಸುದ್ದಿ ಕೇಳಿದ ಲಕ್ಷಮ್ಮ (60) ಅವರಿಗೆ ಹೃದಯಾಘಾತವಾಗಿದೆ.

ಭಾನುವಾರ ಕುಶಾಲ್ ಅವರಿಗೆ ಲೋ ಬಿಪಿಯಿಂದ ಕುಸಿದಿದ್ದರು. ಸ್ಥಳೀಯರು ಆಸ್ಪತ್ರೆಗೆ ದಾಖಲಿಸಲು ಮುಂದಾಗಿದ್ದರು. ಆದ್ರೆ ಮನೆಯಿಂದ ಹೊರಗೆ ಕರೆ ತರುತ್ತಿದ್ದಂತೆ ಕುಶಾಲ್ ಸಾವನ್ನಪ್ಪಿದ್ದರು. ಇನ್ನು ಹೊರಗಡೆಯಿಂದ ಬಂದ ತಾಯಿ ಲಕ್ಷಮ್ಮ ಅವರು ಮಗನ ಶವ ನೋಡುತ್ತಿದ್ದಂತೆ ಹೃದಯಾಘಾತದಿಂದ ಮೃತರಾಗಿದ್ದಾರೆ.

ಒಂಟಿ ಮಹಿಳೆಯ ಬರ್ಬರ ಹತ್ಯೆ

ಹಾಸನ ಜಿಲ್ಲೆ, ಸಕಲೇಶಪುರ ತಾಲ್ಲೂಕಿನ ಹಾರಳ್ಳಿ ಗ್ರಾಮದಲ್ಲಿ  ತಲೆ ಮೇಲೆ ಕಲ್ಲು ಎತ್ತಿ ಹಾಕಿ ಮಹಿಳೆಯನ್ನು ಕೊಂದು ಚಿನ್ನದ ಸರ ಕದ್ದು ಹಂತಕರು ಎಸ್ಕೇಪ್ ಆಗಿದ್ದಾರೆ. ಹಾರಳ್ಳಿ ಗ್ರಾಮದ ಮಲ್ಲಮ್ಮ (85) ಕೊಲೆಯಾದ ಮಹಿಳೆ. ಮಗ ಮೈಸೂರಿನಲ್ಲಿ ನೆಲೆಸಿದ್ದ ಕಾರಣ ಮನೆಯಲ್ಲಿ ಏಕಾಂಗಿಯಾಗಿ ಮಲ್ಲಮ್ಮ ವಾಸವಾಗಿದ್ದರು.

ಇದನ್ನೂ ಓದಿ:  Kolar: ಸರ್ಕಾರಿ ಶಾಲೆಯಲ್ಲಿ Namazಗೆ ಅವಕಾಶ: ಶಾಲಾ ಶಿಕ್ಷಕಿ ಅಮಾನತು; ತನಿಖೆಗೆ ಆದೇಶ

ಭಾನುವಾರ ಸಂಜೆ ಈ ಕೊಲೆ ನಡೆದಿದೆ. ಇಂದು ಬೆಳಗ್ಗೆ ಮಲ್ಲಮ್ಮ ಅವರು ಮನೆಯಿಂದ ಹೊರ ಬರಿದ್ದಾಗ ಸ್ಥಳೀಯರು ಹೋಗಿ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ಚಲಿಸುತ್ತಿದ್ದ ಕ್ಯಾಂಟರ್ ಗೆ ಹಿಂಬದಿಯಿಂದ ಸ್ಕೂಟರ್ ಡಿಕ್ಕಿ

ಚಲಿಸುತ್ತಿದ್ದ ಕ್ಯಾಂಟರ್ ಗೆ ಹಿಂಬದಿಯಿಂದ ಸ್ಕೂಟರ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸವಾರರು ಸಾವನ್ನಪ್ಪಿದ್ದಾರೆ. ಬೆಂಗಳೂರಿನ ರಾಜಾಜಿನಗರದ ಪೊಲೀಸ್ ಠಾಣಾ ವ್ಯಾಪ್ತಿಯ ರಾಜಕುಮಾರ್ ಸಮಾಧಿ ಬಳಿ ಅಪಘಾತ ನಡೆದಿದೆ. ಮೃತರನ್ನು ಅಸ್ಸಾಂ ಮೂಲದ ಲಿಂಬು ಮತ್ತು ಸುನಿಲ್ ಎಂದು ಗುರುತಿಸಲಾಗಿದೆ.
Published by:Mahmadrafik K
First published: