• Home
  • »
  • News
  • »
  • state
  • »
  • Crime News: ಮಾರಕಾಸ್ತ್ರದಿಂದ ಗಂಡನನ್ನೇ ಕೊಂದು ತಗ್ಲಾಕೊಂಡ್ಲು ಹೆಂಡ್ತಿ; ಮಹಿಳೆಗೆ ಇನಿಯನ ಸಾಥ್

Crime News: ಮಾರಕಾಸ್ತ್ರದಿಂದ ಗಂಡನನ್ನೇ ಕೊಂದು ತಗ್ಲಾಕೊಂಡ್ಲು ಹೆಂಡ್ತಿ; ಮಹಿಳೆಗೆ ಇನಿಯನ ಸಾಥ್

ಹುಬ್ಬಳ್ಳಿ ಕ್ರೈಂ ನ್ಯೂಸ್

ಹುಬ್ಬಳ್ಳಿ ಕ್ರೈಂ ನ್ಯೂಸ್

ಪೊಲೀಸರು ಆಳವಾದ ತನಿಖೆಯ ನಂತರ ಅಸಲಿ ಸತ್ಯ ಬಹಿರಂಗಗೊಂಡಿದೆ. ಲತಾ ಮತ್ತು ಆಕೆಯ ಪ್ರಿಯತಮ ಹಾಗೂ ಇನ್ನೊಬ್ಬ ಸೇರಿ ಕೊಲೆ ಕೃತ್ಯ ಎಸಗಿರೋ ಅಂಶ ಇದೀಗ ಬೆಳಕಿಗೆ ಬಂದಿದೆ.

  • Share this:

ಹಣಕ್ಕಾಗಿ (Money) ಹೆಣವೂ ಬಾಯಿ ಬಿಡುತ್ತೆ ಅನ್ನೋ ಮಾತಿದೆ. ಇಲ್ಲೊಬ್ಬ ಅದೇ ಹಣಕ್ಕಾಗಿ ಪ್ರೇಯಸಿಯ ಗಂಡನನ್ನೇ ಕೊಲೆ (Husband Murder) ಮಾಡಿ, ಅದನ್ನು ಅಪಘಾತ (Accident) ಅಂತ ಬಿಂಬಿಸೋ ಹೈಡ್ರಾಮಾ ಮಾಡಿ, ಕೊನೆಗೆ ಪೊಲೀಸರ (Dharwad Police) ಬಲೆಗೆ ಬಿದ್ದಿದ್ದಾರೆ. ತನ್ನ ಗಂಡನದ್ದು ಅಪಘಾತ ಅಂತ ದೂರು ನೀಡಿದ್ದ ಪತ್ನಿ ಸೇರಿ ಮೂವರು ಖದೀಮರನ್ನು ಪೊಲೀಸರು ಬಂಧಿಸಿ ತನಿಖೆಗೆ ಒಳಪಡಿಸಿರೋ ಘಟನೆ ಧಾರವಾಡ ಜಿಲ್ಲೆ ಕುಂದಗೋಳ (Kundagol) ತಾಲೂಕಿನಲ್ಲಿ ನಡೆದಿದೆ. ಹಣಕ್ಕಾಗಿ ಪ್ರೇಯಸಿಯ ಗಂಡನನ್ನು ಕೊಲೆ ಮಾಡಿ, ಅಪಘಾತ ಎಂಬಂತೆ ಬಿಂಬಿಸಲು ಯತ್ನಿಸಿದ ಆರೋಪಿಗಳನ್ನು ಬಂಧಿಸುವಲ್ಲಿ ಧಾರವಾಡ ಜಿಲ್ಲೆ ಕುಂದಗೋಳ ಪೊಲೀಸರು ಯಶಸ್ವಿಯಾಗಿದ್ದಾರೆ.


ಧಾರವಾಡ ಜಿಲ್ಲೆ ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ಟೋಬರ್ 4 ರಂದು ಪ್ರಕರಣ ನಡೆದಿತ್ತು. ಕುಂದಗೋಳ ತಾಲೂಕಿನ ಕಮಡೊಳ್ಳಿ - ಹಿರೇಹರಕುಣಿ ರಸ್ತೆಯ ಮಾರ್ಗ ಮದ್ಯೆದಲ್ಲಿ ನಡೆದ ಘಟನೆಯಲ್ಲಿ ಶಿವಪ್ಪ @ ಸಿದ್ದು ತಂದೆ ಕಲ್ಲಪ್ಪ ಈಟಿ @ ಕೋಳವಾಡ(38) ಮೃತಪಟ್ಟಿದ್ದರು.


ಅನುಮಾನ ವ್ಯಕ್ತಪಡಿಸಿದ್ದ ಸಂಬಂಧಿಕರು


ಶಿವಪ್ಪ ಈಟಿ ಕಮಡೊಳ್ಳಿ ನಿವಾಸಿಯಾಗಿದ್ದ. ಬೈಕ್ ಮೇಲೆ ಹೋಗುವಾಗ ರಸ್ತೆಯ ಬದಿಯಲ್ಲಿ ಬಿದ್ದು ಅಪಘಾತದಿಂದ ಮೃತಪಟ್ಟಿರುತ್ತಾನೆಂದು ಆರೋಪಿಗಳು ಬಿಂಬಿಸಿದ್ದರು. ಶಿವಪ್ಪ ಈಟಿ ಪತ್ನಿ ಲತಾ ನೀಡಿದ ದೂರಿನ ಮೇರೆಗೆ ಕುಂದಗೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಮೃತನ ಸಾವಿನ ಬಗ್ಗೆ ಸಂಬಂಧಿಕರು ಸಂಶಯ ವ್ಯಕ್ತಪಡಿಸಿದ್ದರು.


ಪೊಲೀಸರು ಆಳವಾದ ತನಿಖೆಯ ನಂತರ ಅಸಲಿ ಸತ್ಯ ಬಹಿರಂಗಗೊಂಡಿದೆ. ಲತಾ ಮತ್ತು ಆಕೆಯ ಪ್ರಿಯತಮ ಹಾಗೂ ಇನ್ನೊಬ್ಬ ಸೇರಿ ಕೊಲೆ ಕೃತ್ಯ ಎಸಗಿರೋ ಅಂಶ ಇದೀಗ ಬೆಳಕಿಗೆ ಬಂದಿದೆ.


woman kills husband got arrested saklb mrq
ಹುಬ್ಬಳ್ಳಿ ಕ್ರೈಂ ನ್ಯೂಸ್(ಸಾಂದರ್ಭಿಕ ಚಿತ್ರ)


ರಸ್ತೆಯ ಬದಿಯಲ್ಲಿ ಶವ ಎಸೆದ್ರು


ಮಾರಕಾಸ್ತ್ರದಿಂದ ತಲೆಗೆ ಬಲವಾಗಿ ಹೊಡೆದು ಕೊಲೆ ಮಾಡಿದ್ದ ಆರೋಪಿಗಳು, ಶವವನ್ನು ರಸ್ತೆಯ ಬದಿಯ ತೆಗ್ಗಿನಲ್ಲಿ ಬಿಸಾಡಿದ್ದರು. ನಂತರ ಮೃತನ ದ್ವಿಚಕ್ರ ವಾಹನವನ್ನು ಕಲ್ಲಿನಿಂದ ಜಖಂಗೊಳಿಸಿದ್ದರು. ಶಿವಪ್ಪನ ಶವದ ಪಕ್ಕದಲ್ಲಿ ವಾಹನವನ್ನು ತಳ್ಳಿ ಅಪಘಾತ ಎಂಬಂತೆ ಬಿಂಬಿಸೋ ಯತ್ನ ಮಾಡಿದ್ದರು.


ನ್ಯಾಯಾಂಗ ಬಂಧನಕ್ಕೆ ಆರೋಪಿಗಳು


ರಸ್ತೆ ಅಪಘಾತ ಎನ್ನುವ ರೀತಿಯಲ್ಲಿ ದೃಶ್ಯವನ್ನು ಸೃಷ್ಠಿಸಿ ಸಾಕ್ಷಿ ನಾಶಪಡಿಸಲು ಯತ್ನಿಸಿದ್ದರು. ಆದರೆ ಕೊನೆಗೂ ಖದೀಮರು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಶಿವಪ್ಪನ ಪತ್ನಿ ಲತಾ ಸೇರಿ ಮೂವರನ್ನು ಬಂಧಿಸಿರೋ ಪೊಲೀಸರು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.


ಧಾರವಾಡ ಜಿಲ್ಲೆಯ ಪೊಲೀಸ್ ಅಧೀಕ್ಷರಾದ ಲೋಕೇಶ್​ ಜಗಲಾಸರ ಮಾರ್ಗದರ್ಶನದಲ್ಲಿ ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.


ಇದನ್ನೂ ಓದಿ:  Rahul Gandhi Letter: ಕರ್ನಾಟಕ ಕೋಮು ಸಂಘರ್ಷದ ಕಾರ್ಖಾನೆ; ರಾಗಾ ಹೇಳಿಕೆಗೆ ಸಿಎಂ ತಿರುಗೇಟು


ಪೊಲೀಸ್ ಉಪಾಧೀಕ್ಷಕರಾದ ಎಂ.ಬಿ.ಸಂಕದ, ಕುಂದಗೋಳ ಪೊಲೀಸ್​ ಠಾಣೆಯ ಇನ್​ಸ್ಪೆಕ್ಟರ್ ಮಾರುತಿ ಗುಳ್ಳಾರಿ ಮತ್ತು ಸಿಬ್ಬಂದಿಗಳಾದ ಪಿಎಸ್‌ಐ ನರಸಿಂಹರಾಜು ಜೆ.ಡಿ., ಮಡಿವಾಳ ಜೋಡಗೇರಿ, ಬಸವರಾಜ್ ಶಿರಕೋಳ, ನಾಗರಾಜ್ ಹೊಸಕೇರಿ, ಪರಮೇಶ್​ ಗೊಂದಿ, ಅಮರೇಶ್​ ಬಳಗಾರ, ಚಂದ್ರು ಬಡಿಗೇರ ಯಶಸ್ವಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಪೊಲೀಸ್ ಇನ್​ಸ್ಪೆಕ್ಟರ್ ಮಾರುತಿ ಗುಳಾರಿ ತಂಡಕ್ಕೆ ಎಸ್.ಪಿ. ಲೋಕೇಶ್ ಜಗಲಾಸರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


woman kills husband got arrested saklb mrq
ಸಾಂದರ್ಭಿಕ ಚಿತ್ರ


ಚಾಕು ಇರಿತ, ಆರೋಪಿ ಅರೆಸ್ಟ್‌


ವೈಯುಕ್ತಿಕ ಕಾರಣಕ್ಕೆ ಯುವಕನಿಗೆ ಚಾಕುವಿನಿಂದ ಇರಿಯಲಾಗಿದೆ. ಈ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದ ಬಿ.ಹೆಚ್. ರಸ್ತೆಯಲ್ಲಿ ನಡೆದಿದೆ. 23 ವರ್ಷದ ಶಕೀಲ್‌ಗೆ ಇರ್ಫಾನ್ ಎಂಬಾತ ಚಾಕುವಿನಿಂದ ಇರಿದಿದ್ದಾರೆ. ಶಕೀಲ್‌ಗೆ ಸಾಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಸದ್ಯ ಆರೋಪಿ ಇರ್ಫಾನ್‌ನನ್ನು ಪೊಲೀಸರು ಬಂಧಿಸಿದ್ದಾರೆ.


ಇದನ್ನೂ ಓದಿ:  Hubballi News: ಹುಬ್ಬಳ್ಳಿ ಜನರಿಗೆ ಹಬ್ಬಕ್ಕೆ ಕೊಂಚ ಕಹಿಸುದ್ದಿ


ನೀರಿನಲ್ಲಿ ಮುಳುಗಿ ಬಾಲಕ ನಾಪತ್ತೆ


ಚೆಕ್ ಡ್ಯಾಂನಲ್ಲಿ ಈಜಲು ತೆರಳಿದ್ದ ಬಾಲಕ ನೀರಲ್ಲಿ ಮುಳುಗಿ ನಾಪತ್ತೆಯಾಗಿದ್ದಾನೆ. ಚಿತ್ರದುರ್ಗ ಜಿಲ್ಲೆಯ  ಹಿರಿಯೂರು ತಾಲ್ಲೂಕಿನ ಕಸವನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ವೇದಾವತಿ ನದಿಗೆ ಅಡ್ಡಲಾಗಿ ಕಟ್ಟಿರುವ ಬ್ಯಾರೆಜ್‌ನಲ್ಲಿ ಇಬ್ಬರು ಗೆಳೆಯರ ಜೊತೆ ಈಜಲು ತೆರಳಿದ್ದ ಬಾಲಕ ಕಣ್ಮರೆಯಾಗಿದ್ದಾನೆ. NDRF, ಅಗ್ನಿಶಾಮಕ ದಳ ಸಿಬ್ಬಂದಿ ಬಾಲಕನಿಗಾಗಿ ಹುಡುಕಾಡ್ತಿದ್ದಾರೆ.

Published by:Mahmadrafik K
First published: