ಚಾಮರಾಜನಗರ: ಪತಿಯ (Husband) ಅಕ್ರಮ ಸಂಬಂಧ (Illicit Relationship) ಪ್ರಶ್ನಿಸಿದ್ದಕ್ಕೆ ಮಹಿಳೆ ಕೊಲೆಯಾಗಿರುವ ಘಟನೆ ಚಾಮರಾಜನಗರದಲ್ಲಿ (Chamarajanagra) ನಡೆದಿದೆ. ಚಾಮರಾಜನಗರ ತಾಲೂಕು ಮೂಡ್ನಾಕೂಡು ಗ್ರಾಮದಲ್ಲಿ ಕೊಲೆ ನಡೆದಿದೆ. ಎಂ.ಸಿ.ಸೌಮ್ಯಾ (27) ಕೊಲೆಯಾದ ಮಹಿಳೆ. ಸೌಮ್ಯಾ ಪತಿ ಮಹೇಶ್ಚಂದ್ರ ಗುರು ಬೇರೆ ಮಹಿಳೆಯ ಜೊತೆ ಅಕ್ರಮ ಸಂಬಂಧ ಹೊಂದಿದ್ದನು. ಪತಿಯ ಅಕ್ರಮ ಸಂಬಂಧವನ್ನು ಸೌಮ್ಯ ಪ್ರಶ್ನೆ ಮಾಡಿದ್ದರು. ಇದರಿಂದ ಕೋಪಗೊಂಡ ಮಹೇಶ್ಚಂದ್ರಗುರು ಪತ್ನಿಯನ್ನು ಉಸಿರುಗಟ್ಟಿಸಿ ಕೊಲೆ (Wife Murder) ಮಾಡಿದ್ದಾನೆ. ಏಳು ವರ್ಷಗಳ ಹಿಂದೆ ಮಹೇಶ್ಚಂದ್ರ ಗುರು ಮತ್ತು ಸೌಮ್ಯಾ ಮದುವೆ ಆಗಿತ್ತು. ದಂಪತಿಗೆ ಐದು ವರ್ಷದ ಹೆಣ್ಣು ಮಗುವಿದೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು (Police) ಆರೋಪಿ ಮಹೇಶ್ಚಂದ್ರಗುರುನನ್ನು ಬಂಧಿಸಿದ್ದಾರೆ. ಚಾಮರಾಜನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮುದ್ದಾದ ಐದು ವರ್ಷದ ಹೆಣ್ಣು ಮಗು ಅನಾಥವಾಗಿದೆ.
ಹನಿಟ್ರ್ಯಾಪ್ ಗ್ಯಾಂಗ್ ಅರೆಸ್ಟ್
ಆನೇಕಲ್ನಲ್ಲಿ ಹನಿಟ್ರಾಪ್ ಮೂಲಕ ಸುಲಿಗೆ ಮಾಡುತ್ತಿದ್ದ ಆರೋಪಿಗಳು ಅಂದರ್ ಆಗಿದ್ದಾರೆ. ಬನ್ನೇರುಘಟ್ಟ ಪೊಲೀಸರ ಕಾರ್ಯಾಚರಣೆ ನಡೆಸಿದ್ದು, Instagramನಲ್ಲಿ ಯುವತಿ ಮೂಲಕ ಶಶಾಂಕ್ ಎಂಬವರಿಗೆ ಪದೇ ಪದೇ ಮೆಸೇಜ್ ಮಾಡಿಸುತ್ತಿದ್ದರು.
ಬನ್ನೇರುಘಟ್ಟ ಸಮೀಪದ ಬಂಡೆಯೊಂದರ ಬಳಿ ಯುವತಿ, ಶಶಾಂಕ್ ಎಂಬವರನ್ನು ಕರೆಸಿಕೊಂಡಿದ್ದಾಳೆ. ಈ ವೇಳೆ ಸ್ಥಳಕ್ಕೆ ಆರೋಪಿಗಳು ಎಂಟ್ರಿ ಕೊಟ್ಟು, ಒಬ್ಬಂಟಿ ಹುಡುಗಿ ಜೊತೆ ಏನು ಮಾಡುತ್ತಿದ್ದೀಯಾ ಎಂದು ಅವಾಜ್ ಹಾಕಿದ್ದಾರೆ.
ಇದನ್ನೂ ಓದಿ: Love: ಮದುವೆ ನಿಶ್ಚಯವಾಗಿದ್ದಕ್ಕೆ ಪ್ರಿಯತಮೆ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ, ತಾನೂ ಹಚ್ಕೊಂಡ!
ದೂರು ದಾಖಲಿಸಿದ್ದ ಯುವಕ
ದೊಣ್ಣೆಯಿಂದ ಹಲ್ಲೆ ನಡೆಸಿ ಐಪೋನ್ ಮತ್ತು ಚಿನ್ನಾಭರಣ ಕಳವು ಮಾಡಿದ್ದಾರೆ. ಯುವತಿಯಿಂದ ವಂಚನೆಗೊಳಗಾಗಿದ್ದ ಶಶಾಂಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ಆಧರಿಸಿ ರುತೀಕ್@ವಿಷ್ಣು, ಮಹಮದ್ ಅಸೀಪ್, ಯಾಸೀನ್ ಪಾಷಾ, ಸಮೀರ್ ಮತ್ತು ಶಾಹಿದ್ ಅಲಿ ಎಂಬುವವರನ್ನು ಬಂಧಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ