• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Karnataka Election: ಮತದಾನಕ್ಕೆ ಬಂದ ಗರ್ಭಿಣಿಗೆ ಹೆರಿಗೆ, ಮತಗಟ್ಟೆಯಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ!

Karnataka Election: ಮತದಾನಕ್ಕೆ ಬಂದ ಗರ್ಭಿಣಿಗೆ ಹೆರಿಗೆ, ಮತಗಟ್ಟೆಯಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ!

ಮತಗಟ್ಟೆಯಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ

ಮತಗಟ್ಟೆಯಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ

ಮತದಾನ ಮಾಡಲು ಆಗಮಿಸಿದ್ದ ವೇಳೆ ತುಂಬು ಗರ್ಭಿಣಿಗೆ ಕೇಂದ್ರದಲ್ಲಿಯೇ ಸಹಜ ಹೆರಿಗೆಯಾದ ಅಪರೂಪದ ಘಟನೆ ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲ್ಲೂಕಿನ ಕೊರ್ಲಗುಂದಿ ಗ್ರಾಮದ ಮತಗಟ್ಟೆ ಸಂಖ್ಯೆ 228ರಲ್ಲಿ ನಡೆದಿದೆ

  • Share this:

ಬಳ್ಳಾರಿ: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ (Karnataka Assembly Election)ನಡೆಯುತ್ತಿದ್ದು, ರಾಜ್ಯಾದ್ಯಂತ ಮತದಾರರು ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡಿದ್ದಾರೆ. ಇಂದು ಬೆಳಗ್ಗೆಯಿಂದ ಮತದಾರು (Voters) ತಮ್ಮ ಹಕ್ಕು (Voting) ಚಲಾವಣೆ ಮಾಡುತ್ತಿದ್ದಾರೆ. ಹೀಗೆ ಮತದಾನ ಮಾಡಲು ಆಗಮಿಸಿದ್ದ ವೇಳೆ ತುಂಬು ಗರ್ಭಿಣಿಗೆ ಕೇಂದ್ರದಲ್ಲಿಯೇ ಸಹಜ ಹೆರಿಗೆಯಾದ ಅಪರೂಪದ ಘಟನೆ ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲ್ಲೂಕಿನ ಕೊರ್ಲಗುಂದಿ ಗ್ರಾಮದ ಮತಗಟ್ಟೆ ಸಂಖ್ಯೆ 228ರಲ್ಲಿ ನಡೆದಿದೆ. ತಾಯಿ ಮಗು ಆರೋಗ್ಯದಿಂದಿದ್ದಾರೆ ಎಂದು ತಿಳಿದುಬಂದಿದೆ.


ಕೊರ್ಲಗುಂಪಿ ಗ್ರಾಮದ ಮಣಿಲಾ ಎಂಬ 9 ತಿಂಗಳ ಗರ್ಭಿಣಿ ಬೆಳಿಗ್ಗೆ 10 ಗಂಟೆಗೆ ಮತದಾನ ಮಾಡುವುದಕ್ಕಾಗಿ ಸರದಿ ಸಾಲಿನಲ್ಲಿ ನಿಂತಿದ್ದರು. ಈ ವೇಳೆ ಮಣಿಲಾ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ತಕ್ಷಣ ಆಕೆಗೆ ಸ್ಥಳೀಯರ ನೆರವಿನಿಂದ ಮತ ಕೇಂದ್ರದಲ್ಲಿಯೇ ಸಹಜ ಹೆರಿಗೆ ಮಾಡಿಸಲಾಗಿದೆ. ಮಣಿಲಾ ಗಂಡು ಮಗುವಿಗೆ ಜನ್ಮ ನೀಡಿದ್ದು, ಕೂಡಲೇ ತಾಯಿ ಮತ್ತು ನವಜಾತ ಶಿಶುವನ್ನು ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿದೆ. ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ತಿಳಿದುಬಂದಿದೆ.




ತಾಯಿ-ಮಗು ಆರೋಗ್ಯವಾಗಿದ್ದಾರೆ


ಈ ಘಟನೆ ಕುರಿತು ಸೆಕ್ಟರ್ ಅಧಿಕಾರಿ ವೆಂಕಟೇಶ್ ರಾಮಚಂದ್ರಪ್ಪ ಮಾತನಾಡಿ, ಮಹಿಳೆಗೆ ಮತದಾನ ಕೇಂದ್ರದಲ್ಲಿಯೇ ಸಹಜ ಹೆರಿಗೆಯಾಗಿದೆ. ಚುನಾವಣಾ ಸಿಬ್ಬಂದಿ ಮತ್ತು ಮತದಾನಕ್ಕೆ ಬಂದಿದ್ದ ಮಹಿಳೆಯರು ಹೆರಿಗೆ ಮಾಡಿಸಲು ಸಹಕರಿಸಿದರು. ಹೆರಿಗೆಯಾದ ಕೂಡಲೇ ತಾಯಿ ಮಗುವನ್ನು ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಯಿತು. ತಾಯಿ, ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ.


ಇದನ್ನೂ ಓದಿ: Karnataka Election: ಆ್ಯಂಬುಲೆನ್ಸ್​ನಲ್ಲಿ ಬಂದು ಮತ ಚಲಾಯಿಸಿದ ವ್ಯಕ್ತಿ


ಆ್ಯಂಬುಲೆನ್ಸ್​ನಲ್ಲಿ ಬಂದು ಮತ ಚಲಾವಣೆ

top videos


    ತುಮಕೂರಿನಲ್ಲಿ ಆಂಬ್ಯುಲೆನ್ಸ್ ನಲ್ಲಿ ಬಂದು ಮತ ಚಲಾವಣೆ ಮಾಡಿದ ಸಂಗತಿ ನಡೆದಿದೆ. ಸಂಪಗಿರಾಮು ಎಂಬುದವವರಿಗೆ ಅಪಘಾತವಾಗಿತ್ತು. ಆಗಿನಿಂದ ಇವರು ಹಾಸಿಗೆಯಲ್ಲೇ ಮಲಗುವ ಪರಿಸ್ಥಿತಿ ಎದುರಾಗಿತ್ತು.ಆದರೂ ಸಹ ತಾನು ತನ್ನ ಹಕ್ಕನ್ನು ಚಲಾಯಿಸಲೇ ಬೇಕು ಎಂಬ ಉದ್ದೇಶದಿಂದ ಇವರು ಮತ ಚಲಾವಣೆ ಮಾಡಿದ್ದಾರೆ. ನಾಲ್ಕು ತಿಂಗಳಿನಿಂದ ಹಾಸಿಗೆಯಲ್ಲೇ ಮಲಗಿದ್ದ ಸಂಪಗಿರಾಮು ಇದೀಗ ಆ್ಯಂಬುಲೆನ್ಸ್​ ಮೂಲಕ ಬಂದು ತಮ್ಮ ಹಕ್ಕನ್ನು ಚಲಾಯಿಸಿ ಇತರರಿಗೆ ಮಾದರಿಯಾಗಿದ್ದಾರೆ.

    First published: