• Home
  • »
  • News
  • »
  • state
  • »
  • Bengaluru:  ಹೆಂಡ್ತಿ ದುಡ್ಡಲ್ಲಿ ಗಂಡನ ಪೋಲಿಯಾಟ; ಪತಿಯ ಮೊಬೈಲ್ ನೋಡಿದ ಪತ್ನಿ ಫುಲ್ ಶಾಕ್!

Bengaluru:  ಹೆಂಡ್ತಿ ದುಡ್ಡಲ್ಲಿ ಗಂಡನ ಪೋಲಿಯಾಟ; ಪತಿಯ ಮೊಬೈಲ್ ನೋಡಿದ ಪತ್ನಿ ಫುಲ್ ಶಾಕ್!

ಎಡ್ರಿಲ್ ತೈಮಲ್ ಡಿಕುನ್ಹ

ಎಡ್ರಿಲ್ ತೈಮಲ್ ಡಿಕುನ್ಹ

ಮೊಬೈಲ್ ನಲ್ಲಿರುವ ವಿಡಿಯೋಗಳನ್ನು ಕಂಡು ಪತ್ನಿ ಶಾಕ್ ಆಗಿದ್ದಾರೆ. ವಿಡಿಯೋ ನೋಡಿದಾಗ ಎಡ್ರಿಲ್ ಹಲವು ಮಹಿಳೆಯರ ಜೊತೆ ಅಕ್ರಮ ಸಂಬಂಧ ವಿಷಯ ಗೊತ್ತಾಗಿದೆ

  • Share this:

ಗಂಡ-ಹೆಂಡತಿ (Husband And Wife) ಸಂಬಂಧದಲ್ಲಿ (Relationship) ಮುಚ್ಚುಮರೆ ಇರಬಾರದು ಅಂತ ಹೇಳ್ತಾರೆ. ಹಾಗಿದ್ರೆ ಮಾತ್ರ ಬದುಕಿನ (Life) ಬಂಡಿ ಸಾಗಲು ಸಾಧ್ಯವಾಗುತ್ತದೆ. ಈಗಿನ ಕಾಲದಲ್ಲಿ ಮಹಿಳೆಯರು (Woman) ಸಹ ಪುರುಷನಿಗೆ (Man) ಸಮಾನವಾಗಿ ದುಡಿಯುತ್ತಿದ್ದಾರೆ. ಪತಿ ಸೋಮಾರಿಯಾಗಿ ಮನೆಯಲ್ಲಿ ಕಾಲ ಕಳೆಯುತ್ತಿದ್ದರೂ ಅದೆಷ್ಟೋ ಮಹಿಳೆಯರು ಹೊರಗೆ ದುಡಿದು (Job) ಬಂದು ಮನೆಯನ್ನು ನಿರ್ವಹಣೆ ಮಾಡಿಕೊಂಡು ಹೋಗುತ್ತಿರುತ್ತಾರೆ. ಇಲ್ಲೊಬ್ಬ ಪತ್ನಿಯ ಹಣದಲ್ಲಿ (Wife’s Money) ಪೋಲಿಯಾಟ ಮಾಡಿಕೊಂಡಿದ್ದವ ತಗ್ಲಾಕೊಂಡಿದ್ದಾನೆ. ಆತನ ಮೊಬೈಲ್ (Mobile) ಚೆಕ್ ಮಾಡಿದಾಗ ಮಹಿಳೆಯ ಗಂಡನ ಅಸಲಿ ಮುಖ ಗೊತ್ತಾಗಿದೆ. ಇದೀಗ ಮಹಿಳೆ ಪತಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು (Complaint) ದಾಖಲಿಸಿದ್ದಾರೆ.


ಎಡ್ರಿಲ್ ತೈಮಲ್ ಡಿಕುನ್ಹ ಪತ್ನಿಯ ಹಣದಲ್ಲಿ ಪೋಲಿಯಾಟ ಆಡುತ್ತಿದ್ದ ಪತಿ. ಒಮ್ಮೆ ಎಡ್ರಿಲ್ ಮೊಬೈಲ್ ಚೆಕ್ ಮಾಡಿದಾಗ ಮಹಿಳೆಗೆ ಪತಿಯ ರಾಸಲೀಲೆ ಗೊತ್ತಾಗಿದೆ. ಮೊಬೈಲ್ ನಲ್ಲಿರುವ ವಿಡಿಯೋಗಳನ್ನು ಕಂಡು ಪತ್ನಿ ಶಾಕ್ ಆಗಿದ್ದಾರೆ. ವಿಡಿಯೋ ನೋಡಿದಾಗ ಎಡ್ರಿಲ್ ಹಲವು ಮಹಿಳೆಯರ ಜೊತೆ ಅಕ್ರಮ ಸಂಬಂಧ ವಿಷಯ ಗೊತ್ತಾಗಿದೆ. ಈ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಪತ್ನಿಯಿಂದ ದೂರವಾಗಲು ಎಡ್ರಿಲ್ ಮುಂದಾಗಿದ್ದನು.


ಅನೈಸರ್ಗಿಕ ಲೈಂಗಿಕ ಕ್ರಿಯೆಗೆ ಒತ್ತಾಯ


ಇಷ್ಟು ಮಾತ್ರವಲ್ಲದೇ ಪತ್ನಿಯನ್ನೂ ಸ್ನೇಹಿತರೊಂದಿಗೆ ಮಲಗುವಂತೆ ಪ್ರಚೋದಿಸುತ್ತಿದ್ದ ಎಂಬ ಆರೋಪಗಳು ಈತನ ವಿರುದ್ಧ ಕೇಳಿ ಬಂದಿವೆ. ಪತ್ನಿಯೊಂದಿಗೂ ಅನೈಸರ್ಗಿಕ ಲೈಂಗಿಕ ಕ್ರಿಯೆ ನಡೆಸುವಂತೆ ಒತ್ತಾಯ ಮಾಡುತ್ತಿದ್ದ ಎಂದು ಮಹಿಳೆ ಆರೋಪಿಸಿದ್ದಾರೆ.


ಇದನ್ನೂ ಓದಿ:  Raichur: ಕಲುಷಿತ ನೀರು ಕುಡಿದು ಮೂವರು ಸಾವು, ರಾಯಚೂರು ಬಂದ್; 5 ಲಕ್ಷ ಪರಿಹಾರಕ್ಕೆ ಸಿಎಂ ಸೂಚನೆ


ಪತಿಯ ವಿರುದ್ಧ ದಾಖಲೆ ಸಮೇತ ದೂರು


ಸದ್ಯ ಪತಿಯ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಮಹಿಳೆ ಗಂಡನ ವಿಡಿಯೋ ಹಾಗೂ ಖಾಸಗಿ ಫೋಟೋಗಳ ಸಮೇತ ದೂರು ನೀಡಿದ್ದಾರೆ.  ಈ ಸಂಬಂಧ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.


ಹಾಸನ : ಕೆರೆಗೆ ವಿಷ ಹಾಕಿದ ದುಷ್ಕರ್ಮಿಗಳು


ಕೆಲ ದುಷ್ಕರ್ಮಿಗಳು ಕೆರೆಗೆ ವಿಷ ಹಾಕಿರುವ  ಘಟನೆ ಹಾಸನ ಜಿಲ್ಲೆ, ಅರಸೀಕೆರೆ ತಾಲ್ಲೂಕಿನ ಮುದುಡಿ ಗ್ರಾಮದಲ್ಲಿ  ನಡೆದಿದೆ. ವಿಷ ಹಾಕಿದ ಪರಿಣಾಮ ಕೆರೆಯಲ್ಲಿದ್ದ ಸಾವಿರಾರು ಮೀನುಗಳು ಸಾವನ್ನಪ್ಪಿವೆ.


ಗ್ರಾಮದ ಹಿರಿಕೆರೆಯಲ್ಲಿ ಮೂವತ್ತು ಸಾವಿರಕ್ಕೂ ಅಧಿಕ ಮೀನುಗಳ ಮಾರಣಹೋಮ ನಡೆದಿದೆ. ಕೆರೆ ಟೆಂಡರ್ ಪಡೆದು ಎರಡು ಲಕ್ಷ ಮೀನಿನ ಮರಿಗಳನ್ನು ಗುತ್ತಿಗೆದಾರ ಬಿಟ್ಟಿದ್ದರು. ಮುದುಡಿ ತಾಂಡ್ಯ ಮತ್ತು ಹಲಗನಹಳ್ಳಿ ಗ್ರಾಮಸ್ಥರು ಗುತ್ತಿಗೆ ಪಡೆದು ಮೀನು ಸಾಕಾಣಿಕೆ ಮಾಡಿದ್ದರು.


ರಾತ್ರಿ ಕೆರೆಗೆ ವಿಷ ಹಾಕಿದ ಕಿಡಿಗೇಡಿಗಳು


ಕಿಡಿಗೇಡಿಗಳು ರಾತ್ರಿ ವಿಷ ಹಾಕಿದ್ದರಿಂದ  ಕೆರೆ ದಡದಲ್ಲಿ ಸಾವಿರಾರು ಮೀನುಗಳು ಸತ್ತು ಬಿದ್ದಿವೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ. ಆರೋಪಿಗಳನ್ನು ಬಂಧಿಸುವಂತೆ ಗುತ್ತಿಗೆದಾರರ ಒತ್ತಾಯ ಮಾಡಿದ್ದಾರೆ. ಗಂಡಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


ರಾಯಚೂರು ಕಲುಷಿತ ನೀರು ಸೇವನೆ: ಜೆಇ ವಜಾ 


ರಾಯಚೂರು ನಗರಸಭೆ ಕಲುಷಿತ ನೀರು ಕುಡಿದು ಮೂವರು ಸಾವು ಪ್ರಕರಣಕ್ಕೆ ಸಂಬಂಧ  ನಗರಸಭೆ ಕಿರಿಯ ಅಭಿಯಂತರ ಕೃಷ್ಣಾ ಸೇವೆಯಿಂದ ವಜಾಗೊಳಿಸಿ ಆದೇಶ ಹೊರಡಿಸಲಾಗಿದೆ. ರಾಯಚೂರು ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ್ ಅವರು ಆದೇಶ ಹೊರಡಿಸಿದ್ದಾರೆ.


ಇದನ್ನೂ ಓದಿ:  Mangaluru Crime News: ಮಾರಕಾಸ್ತ್ರಗಳಿಂದ ಕೊಲೆಗೈದು, ಆವತ್ತಿನ ವಿಚಾರ ಗೊತ್ತಿದೆಯಲ್ಲ ಎಂದು ಹೇಳಿ ಪರಾರಿಯಾದ್ರು!


ರಾಂಪೂರ ಜಲ ಶುದ್ಧೀಕರಣ ಘಟಕದ ನಿರ್ವಹಣೆ ಜವಾಬ್ದಾರಿ ಹೊತ್ತಿದ್ದ ಜೆಇ ಕೃಷ್ಣಾ ಹೊತ್ತಿದ್ದರು. ಕರ್ತವ್ಯ ನಿರ್ಲಕ್ಷ್ಯ ಹಿನ್ನೆಲೆ ತಾತ್ಕಾಲಿಕ ನೌಕರನಾಗಿದ್ದ ಜೆಇ ಕೃಷ್ಣ ವಜಾಗೊಳಿಸಲಾಗಿದೆ. ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದರು ಸಮರ್ಪಕವಾಗಿ ಕರ್ತವ್ಯ ನಿರ್ವಹಿಸದ ಹಿನ್ನೆಲೆ ವಜಾ ಮಾಡಲಾಗಿದೆ.

Published by:Mahmadrafik K
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು