• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Bengaluru: ರೀಲ್ಸ್​ ಜೊತೆಗಾರನ ಜೊತೆ ರಿಯಲ್ ಲೈಫ್​​ನಲ್ಲಿ ಪತ್ನಿ ಜೂಟ್; ಪತಿಯಿಂದ ದೂರು ದಾಖಲು

Bengaluru: ರೀಲ್ಸ್​ ಜೊತೆಗಾರನ ಜೊತೆ ರಿಯಲ್ ಲೈಫ್​​ನಲ್ಲಿ ಪತ್ನಿ ಜೂಟ್; ಪತಿಯಿಂದ ದೂರು ದಾಖಲು

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಜನವರಿ 26ರಂದು ಸಂಜೆ ಸುಮಾರು 5 ಗಂಟೆ ವೇಳೆ ಸುಮಿತ್ರಾ ಕಿರಿಯ ಮಗನೊಂದಿಗೆ ಮನೆ ಬಿಟ್ಟು ಹೋಗಿದ್ದಾಳೆ. ದೀಪಕ್ ಮೆಹ್ರಾ ಜೊತೆಯಲ್ಲಿಯೇ ಪತ್ನಿ ಹೋಗಿರುವ ಶಂಕೆ ಉಂಟಾಗಿದೆ ಎಂದು ಜೋಸೆಫ್ ದೂರು ದಾಖಲಿಸಿದ್ದಾರೆ.

  • Share this:

ಬೆಂಗಳೂರು: ಇಂದು ಸೋಶಿಯಲ್ ಮೀಡಿಯಾದಲ್ಲಿ (Social Media) ಎಲ್ಲರೂ ರೀಲ್ಸ್ (Reels) ಮಾಡುತ್ತಾರೆ. ರೀಲ್ಸ್​ ಮಾಡುವ ವೇಳೆ ಅಪರಿಚಿತರ ಪರಿಚಯವಾಗಿರುತ್ತದೆ. ಆದರೆ ಮಹಿಳೆಯೊಬ್ಬಳ್ಳು (Woman) ಸೋಶಿಯಲ್ ಮೀಡಿಯಾದಲ್ಲಿ ಪರಿಚಯವಾದ ಗೆಳೆಯನ ಜೊತೆ ಹೋಗಿದ್ದಾಳೆ ಎಂದು ಅನುಮಾನಿಸಿ ದೂರು ದಾಖಲಾಗಿದೆ. ಪತ್ನಿ ಹಾಗೂ ಮಗುವನ್ನು ಹುಡುಕಿ ಕೊಡುವಂತೆ ಯಶವಂತಪುರ ಪೊಲೀಸ್ ಠಾಣೆಯಲ್ಲಿ (Yeshwanthpur Police Station) ದೂರು ದಾಖಲಿಸಿದ್ದಾರೆ. 39 ವರ್ಷದ ಜೋಸೆಫ್ ಆಂಥೋನಿ ದೂರು ದಾಖಲಿಸಿದ ವ್ಯಕ್ತಿ. ಜೋಸೆಫ್​ ಸಿಸಿಟಿವಿ ರಿಪೇರಿ ಕೆಲಸ ಮಾಡಿಕೊಂಡಿದ್ದು, ಕುಟುಂಬದ ಸಮೇತ ಯಶವಂತಪುರದ ಸುಬೇದಾರಪಾಳ್ಯದಲ್ಲಿ ವಾಸವಾಗಿದ್ದರು.


9 ವರ್ಷಗಳ ಹಿಂದೆ ಜೋಸೆಫ್ ಜಾರ್ಖಂಡ್ ಮೂಲದ ಸುಮಿತ್ರಾ ಕುಮಾರಿ ಎಂಬವರನ್ನು ಮದುವೆಯಾಗಿದ್ದರು. ದಂಪತಿಗೆ 7 ಮತ್ತು 4 ವರ್ಷದ ಇಬ್ಬರು ಗಂಡು ಮಕ್ಕಳಿದ್ದಾರೆ.


ದೆಹಲಿ ಮೂಲದ ವ್ಯಕ್ತಿಯ ಪರಿಚಯ


ಸುಮಿತ್ರಾ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್​ ಮಾಡುವ ಹವ್ಯಾಸ ಇತ್ತು. ರೀಲ್ಸ್​ ಮಾಡುವ ಸಂದರ್ಭದಲ್ಲಿ ಆರು ತಿಂಗಳ ಹಿಂದೆ ದೆಹಲಿ ಮೂಲದ ದೀಪಕ್ ಮೆಹ್ರಾ ಎಂಬಾತನ ಪರಿಚಯವಾಗಿದೆ. ಜನವರಿ 8ರಂದು ಬೆಂಗಳೂರಿಗೆ ಬಂದಿದ್ದ ದೀಪಕಾ ಮೆಹ್ರಾ ಮಹಿಳೆಯನ್ನು ಭೇಟಿಯಾಗಿದ್ದಾನೆ. ಈ ವಿಷಯ ತಿಳಿದು ಜೋಸೆಫ್ ಪತ್ನಿ ಜೊತೆ ಜಗಳ ಮಾಡಿದ್ದರು.


ಜನವರಿ 26ರಂದು ಸಂಜೆ ಸುಮಾರು 5 ಗಂಟೆ ವೇಳೆ ಸುಮಿತ್ರಾ ಕಿರಿಯ ಮಗನೊಂದಿಗೆ ಮನೆ ಬಿಟ್ಟು ಹೋಗಿದ್ದಾಳೆ. ದೀಪಕ್ ಮೆಹ್ರಾ ಜೊತೆಯಲ್ಲಿಯೇ ಪತ್ನಿ ಹೋಗಿರುವ ಶಂಕೆ ಉಂಟಾಗಿದೆ ಎಂದು ಜೋಸೆಫ್ ದೂರು ದಾಖಲಿಸಿದ್ದಾರೆ.
ವಿದ್ಯಾರ್ಥಿನಿ ಆತ್ಮಹತ್ಯೆ


ಪಿಯು ಕಾಲೇಜು ವಿದ್ಯಾರ್ಥಿನಿ ಹಾಸ್ಟೆಲ್ ನಲ್ಲಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಲೇಜಿನ ಪ್ರಾಚಾರ್ಯ ರಮೇಶ್ ತೆಗ್ಗಿನಮನಿ‌ ವಿರುದ್ಧ ದೂರು ದಾಖಲಾಗಿದೆ. ತಮ್ಮ ಮಗಳಿಗೆ‌ ಪ್ರಿನ್ಸಿಪಾಲ್ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ವಿದ್ಯಾರ್ಥಿನಿ ಪೋಷಕರು ಆರೋಪಿಸಿದ್ದಾರೆ.


ವಿದ್ಯಾರ್ಥಿನಿಯನ್ನು ಆಗಾಗ ರೂಮಿಗೆ ಕರೆಯುತ್ತಿದ್ದ. ಲೈಂಗಿಕ ಕಿರುಕುಳದ ಜೊತೆ ಅವ್ಯಾಚ್ಛ ಶಬ್ದಗಳಿಂದ‌ ನಿಂದನೆ ಮಾಡಲಾಗುತ್ತಿತ್ತು. ಈ‌ ಕಾರಣದಿಂದಲೇ ವಿದ್ಯಾರ್ಥಿನಿ ಐಶ್ವರ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೋಷಕರು ಆರೋಪಿಸಿದ್ದಾರೆ. ಈ ಸಂಬಂಧ ಲಿಂಗಸ್ಗೂರು ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.


ಕಾರ್ ಬಂಪರ್​​ನೊಳಗೆ ನಾಯಿ ಪ್ರತ್ಯಕ್ಷ


ಮಂಗಳೂರು: ಕಾರ್​ಗೆ (Car) ಡಿಕ್ಕಿಯಾದ ನಾಯಿಯೊಂದು (Dog) ಬಂಪರ್​ನೊಳಗೆ (Car bumper) ಪತ್ತೆಯಾದ ವಿಚಿತ್ರ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ (Puttur, Dakshina Kannada) ನಡೆದಿದೆ. ಡಿಕ್ಕಿಯಾದ ಬಳಿಕ ಬಂಪರ್​​ನೊಳಗೆ ಕುಳಿತ ನಾಯಿ ಸುಮಾರು 70 ಕಿಲೋ ಮೀಟರ್ ಪ್ರಯಾಣಿಸಿದೆ.


ಇದನ್ನೂ ಓದಿ: Dakshina Kannada: ಬೀದಿನಾಯಿಗಳ ಊಟಕ್ಕೆ ಸೀಮೆಎಣ್ಣೆ, ಇದು ಮಹಾತಾಯಿಯ ಸಂಕಷ್ಟ


ಆದ್ರೆ ಇದ್ಯಾವ ವಿಷಯ ಕಾರ್​ ಚಾಲಕನಿಗೆ (Car Driver) ಗೊತ್ತಾಗಿಲ್ಲ. ಪುತ್ತೂರಿನ ಕಬಕ (Kabaka, Puttur) ನಿವಾಸಿ ಸುಬ್ರಹ್ಮಣ್ಯ ಟಿ.ಎಸ್ ಅವರಿಗೆ ಸೇರಿದ ಕಾರ್​​ ಬಂಪರ್​ನೊಳಗೆ ನಾಯಿ ಸೇರಿಕೊಂಡಿತ್ತು. ಸುಬ್ರಹ್ಮಣ್ಯ ಟಿ.ಎಸ್. ಕುಟುಂಬ ಸುಬ್ರಹ್ಮಣ್ಯದಿಂದ ಪುತ್ತೂರಿಗೆ (Subramanya To Puttur) ಬರುವ ಮಾರ್ಗದಲ್ಲಿ ಈ ಘಟನೆ ನಡೆದಿದೆ.


ಮೆಕ್ಯಾನಿಕ್ ಸಹಾಯದಿಂದ ನಾಯಿ ರಕ್ಷಣೆ


ಸುಬ್ರಹ್ಮಣ್ಯ-ಪುತ್ತೂರು ರಸ್ತೆಯ ಬಳ್ಪ ಎಂಬಲ್ಲಿ ಕಾರ್​​ಗೆ ನಾಯಿ ಡಿಕ್ಕಿ ಹೊಡೆದಿತ್ತು. ಕೂಡಲೇ ಕಾರ್ ನಿಲ್ಲಿಸಿದ ಸುಬ್ರಹ್ಮಣ್ಯ ಕೆಳಗಿಳಿದು ನೋಡಿದ್ದಾರೆ. ಆದರೆ ನಾಯಿ ಎಲ್ಲಿಯೂ ಕಂಡಿಲ್ಲ. ನಾಯಿ ಹೋಗಿರಬಹುದು ಎಂದು ತಿಳಿದು ಕಾರ್ ಚಲಾಯಿಸಿಕೊಂಡು ಮನೆಗೆ ಹಿಂದಿರುಗಿದ್ದಾರೆ.


ಮನೆಗೆ ಬಂದ ಬಳಿಕ ಕಾರ್ ಪರಿಶೀಲಿಸಿದಾಗ ಬಂಪರ್​ನೊಳಗೆ ನಾಯಿ ಪತ್ತೆಯಾಗಿದೆ. ಕೂಡಲೇ ಸ್ಥಳೀಯ ಮೆಕ್ಯಾನಿಕ್​ ಅವರನ್ನು ಕರೆಸಿ ನಾಯಿಯನ್ನು ಹೊರಕ್ಕೆ ತೆಗೆಯಲಾಗಿದೆ.

Published by:Mahmadrafik K
First published: